Indian Tea Return: ಅತಿಯಾದ ಕೀಟನಾಶಕ ಬಳಕೆ; ಹಲವು ದೇಶಗಳಿಂದ ಭಾರತದ ಚಹಾ ವಾಪಸ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಶ್ರೀಲಂಕಾದಲ್ಲಿನ ಆರ್ಥಿಕ ಬಿಕ್ಕಟ್ಟಿನಿಂದಾಗಿ, ಭಾರತೀಯ ಚಹಾ ಉದ್ಯಮವು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತನ್ನ ವ್ಯಾಪಾರವನ್ನು ಹೆಚ್ಚಿಸಲು ದೊಡ್ಡ ಅವಕಾಶವನ್ನು ಹೊಂದಿತ್ತು. ಆದರೆ ಮಿತಿ ಮೀರಿದ ಕೀಟನಾಶಕಗಳು ಮತ್ತು ರಾಸಾಯನಿಕಗಳ ಬಳಕೆಯು ದೊಡ್ಡ ಹೊಡೆತವನ್ನು ನೀಡಿದೆ ಎಂದು ವರದಿಯಾಗಿದೆ.

ಮುಂದೆ ಓದಿ ...
  • Share this:

ಭಾರತದ ಚಹಾಗೆ (Indian Tea) ಇಡೀ ವಿಶ್ವದಲ್ಲಿಯೇ ಉತ್ತಮ ಮಾರುಕಟ್ಟೆ (Market) ಹೊಂದಿದೆ. ಆದ್ರೆ ಅತ್ಯುನ್ನತ ಮತ್ತು ಉತ್ಕೃಷ್ಟ ಚಹಾಗೆ ಈಗ ಕೆಟ್ಟ ಹೆಸರು ಬಂದಿದೆ. ಹೌದು, ಭಾರತದ ಚಹಾದಲ್ಲಿ ಕೀಟನಾಶಕ ಬಳಕೆ (Pesticide use) ಮತ್ತು ರಾಸಾಯನಿಕ ಪ್ರಮಾಣ (Chemical Use) ಅಧಿಕವಾಗಿರೋದು ಕಂಡು ಬಂದಿದ ಎಂದು ವರದಿಯಾಗಿದೆ. ಈ ಕಾರಣದಿಂದ ಅಂತರಾಷ್ಟ್ರೀಯ ಮತ್ತು ದೇಶಿಯ ಮಾರುಕಟ್ಟೆಯು ಭಾರತಕ್ಕೆ ಚಹಾವನ್ನು ಹಿಂದಿರುಗಿಸಿದೆ. ಈ ಮಾಹಿತಿಯನ್ನು ಭಾರತೀಯ ಚಹಾ ರಫ್ತುದಾರರ ಸಂಘದ (ಐಟಿಇಎ) ಅಧ್ಯಕ್ಷ ಅಂಶುಮಾನ್ ಕನೋರಿಯಾ (Indian Tea Exporters Association (ITEA) chairman Anshuman Kanoria) ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ.


ಶ್ರೀಲಂಕಾದಲ್ಲಿನ ಆರ್ಥಿಕ ಬಿಕ್ಕಟ್ಟಿನಿಂದಾಗಿ, ಭಾರತೀಯ ಚಹಾ ಉದ್ಯಮವು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತನ್ನ ವ್ಯಾಪಾರವನ್ನು ಹೆಚ್ಚಿಸಲು ದೊಡ್ಡ ಅವಕಾಶವನ್ನು ಹೊಂದಿತ್ತು. ಆದರೆ ಮಿತಿ ಮೀರಿದ ಕೀಟನಾಶಕಗಳು ಮತ್ತು ರಾಸಾಯನಿಕಗಳ ಬಳಕೆಯು ದೊಡ್ಡ ಹೊಡೆತವನ್ನು ನೀಡಿದೆ ಎಂದು ವರದಿಯಾಗಿದೆ.


ಸಾಗಣೆಯಲ್ಲಿ ಸ್ಥಿರವಾದ ಇಳಿಕೆ


ಚಹಾ ಸಾಗಣೆಯಲ್ಲಿ ಸ್ಥಿರ ಕುಸಿತ ಟೀ ಬೋರ್ಡ್ ರಫ್ತು ವೇಗಗೊಳಿಸಲು ಪರಿಗಣಿಸುತ್ತಿದೆ. ಆದರೆ ಸರಕುಗಳ ಮರಳುವಿಕೆಯಿಂದಾಗಿ, ಸಾಗಣೆಯಲ್ಲಿ ಸ್ಥಿರವಾದ ಇಳಿಕೆ ಕಂಡುಬರುತ್ತದೆ. ದೇಶದಲ್ಲಿ ಮಾರಾಟವಾಗುವ ಎಲ್ಲಾ ಚಹಾಗಳು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಮಾನದಂಡಗಳಿಗೆ ಅನುಗುಣವಾಗಿರಬೇಕು. ಹೆಚ್ಚಿನ ಖರೀದಿದಾರರು ಅದೇ ಚಹಾವನ್ನು ಖರೀದಿಸುತ್ತಿದ್ದಾರೆ ಎಂದು ಕನೋರಿಯಾ ಪಿಟಿಐಗೆ ತಿಳಿಸಿದ್ದಾರೆ. ಇದು ಸಾಮಾನ್ಯವಾಗಿ ಹೆಚ್ಚಿನ ರಾಸಾಯನಿಕ ಅಂಶವನ್ನು ಹೊಂದಿದೆ ಎಂಬುವುದು ತಿಳಿದು ಬಂದಿದೆ.


ಇದನ್ನೂ ಓದಿ:  Cement Price: ಮನೆ ಕಟ್ಟುವವರಿಗೆ ಬಿಗ್ ಶಾಕ್; ಭಾರೀ ಪ್ರಮಾಣದಲ್ಲಿ ಏರಿಕೆಯಾದ ಸಿಮೆಂಟ್ ಬೆಲೆ


ಯುರೋಪಿಯನ್ ಮಾನದಂಡಗಳು ಕಠಿಣ


2021 ರಲ್ಲಿ ಭಾರತವು 195.90 ಮಿಲಿಯನ್ ಕೆಜಿ ಚಹಾವನ್ನು ರಫ್ತು ಮಾಡಿದೆ. ಭಾರತೀಯ ಚಹಾದ ಪ್ರಮುಖ ಖರೀದಿದಾರರು ಕಾಮನ್‌ ವೆಲ್ತ್ ಸ್ವತಂತ್ರ ರಾಜ್ಯಗಳು (ಸಿಐಎಸ್) ರಾಷ್ಟ್ರ ಮತ್ತು ಇರಾನ್. ಈ ವರ್ಷ 300 ಮಿಲಿಯನ್ ಕೆಜಿ ಚಹಾ ರಫ್ತು ಮಾಡುವ ಗುರಿಯನ್ನು ಮಂಡಳಿ ಹೊಂದಿದೆ.


ಅನೇಕ ದೇಶಗಳು ಚಹಾಕ್ಕೆ ಕಟ್ಟುನಿಟ್ಟಾದ ಆಮದು ನಿಯಂತ್ರಣ ನಿಯಮಗಳನ್ನು ಅನುಸರಿಸುತ್ತಿವೆ ಎಂದು ಕನೋರಿಯಾ ಹೇಳುತ್ಥಾರೆ. ಹೆಚ್ಚಿನ ದೇಶಗಳು ಯುರೋಪಿಯನ್ ಯೂನಿಯನ್ (EU) ಮಾನದಂಡಗಳನ್ನು ಅನುಸರಿಸುತ್ತಿವೆ. ಈ ರೂಲ್ಸ್ ಗಳು  FSSAI ನಿಯಮಗಳಿಗಿಂತ ಹೆಚ್ಚು ಕಠಿಣವಾಗಿದೆ.


ನಿಯಮಗಳ ಸಡಿಲಿಕೆಗೆ ಆಗ್ರಹ


ಸರ್ಕಾರವು ಎಫ್‌ಎಸ್‌ಎಸ್‌ಎಐ ಮಾನದಂಡಗಳನ್ನು ಮತ್ತಷ್ಟು ಸಡಿಲಿಸಬೇಕೆಂದು ವ್ಯಾಪಾರಸ್ಥರು ಮತ್ತು ಜನರು ಒತ್ತಾಯಿಸುತ್ತಿದ್ದಾರೆ. ಚಹಾವನ್ನು ಆರೋಗ್ಯ ಪಾನೀಯವೆಂದು ಪರಿಗಣಿಸುವುದರಿಂದ ಇದು ತಪ್ಪು ಸಂಕೇತವನ್ನು ನೀಡುತ್ತದೆ ಎಂದು ಕನೋರಿಯಾ ಹೇಳಿದರು.


ಈ ಕುರಿತು ಟೀ ಪ್ಯಾಕರ್‌ಗಳು ಮತ್ತು ರಫ್ತುದಾರರಿಂದ ದೂರುಗಳು ಬಂದಿವೆ ಎಂದು ಟೀ ಬೋರ್ಡ್‌ನ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ. ಭಾರತವು 2021 ರಲ್ಲಿ 5,246.89 ಕೋಟಿ ಮೌಲ್ಯದ ಚಹಾವನ್ನು ರಫ್ತು ಮಾಡಿದೆ


ಹವಾಮಾನ ಬದಲಾವಣೆ ಪರಿಣಾಮ


ಕಳೆದ ಕೆಲವು ವರ್ಷಗಳಲ್ಲಿ ಹವಾಮಾನ ಬದಲಾವಣೆಯಿಂದಾಗಿ ಚಹಾ ತೋಟಗಳು ಸಾಕಷ್ಟು ಬದಲಾವಣೆಗಳಿಗೆ ಒಳಗಾಗಿವೆ. ಅತಿವೃಷ್ಟಿ ಅಥವಾ ದೀರ್ಘಕಾಲದ ಬರಗಾಲದಿಂದಾಗಿ ಕೀಟಗಳ ಅಪಾಯ ಹೆಚ್ಚಾಗಿದೆ.


ಇದನ್ನೂ ಓದಿ:  LPG Cylinder Subsidy: ಕೇಂದ್ರದ ಸ್ಪಷ್ಟನೆ, ಇವರಿಗೆ ಮಾತ್ರ ಸಬ್ಸಿಡಿ; ಇನ್ನುಳಿದವರು ಎಷ್ಟು ಪಾವತಿಸಬೇಕು?


ಎಲೆಗಳ ಮೇಲೆ ರಾಸಾಯನಿಕ


ವರದಿಗಳ ಪ್ರಕಾರ, ಕೀಟನಾಶಕ ಬಳಕೆ ಮುಗಿದ ನಂತರ ಅಂದ್ರೆ ಕೆಲವೇ ದಿನಗಳಲ್ಲಿ ಎಲೆಗಳನ್ನು ಹೆಚ್ಚಾಗಿ ಕೀಳಲಾಗುತ್ತದೆ. ಇದಕ್ಕೆ ಕಾರಣ ಚಹಾ ಎಲೆಗಳ ಮೇಲೆ ಕೀಟನಾಶಕದ ಕುರುಹುಗಳು ಉಳಿದಿವೆ. ಕೀಟನಾಶಕವನ್ನು ಸಿಂಪಡಿಸಿದ ಸುಮಾರು 10 ರಿಂದ 20 ದಿನಗಳ ನಂತರ ಎಲೆಗಳನ್ನು ಸಾಮಾನ್ಯವಾಗಿ ಕೀಳಲಾಗುತ್ತದೆ. ಇದನ್ನು ಅನುಸರಿಸದಿದ್ದರೆ ಹೆಚ್ಚಿನ ಕೀಟನಾಶಕದ ಪ್ರಮಾಣ ಎಲೆಗಳ ಮೇಲೆ ಹಾಗೇ ಉಳಿದಿರುವ ಸಾಧ್ಯತೆ ಇರುತ್ತದೆ.

Published by:Mahmadrafik K
First published: