Apple CEO: ಕಳೆದ ವರ್ಷ ಆ್ಯಪಲ್ ಸಿಇಒ ಟಿಮ್ ಕುಕ್ ಗಳಿಸಿದ ಆದಾಯ ಎಷ್ಟು ಗೊತ್ತಾ? ಕೇಳಿದ್ರೆ ಶಾಕ್‌ ಆಗ್ತೀರಾ..!

ಆ್ಯಪಲ್ ಕಂಪನಿಯಲ್ಲಿ ಸಿಇಒ ಆಗಿರುವಂತಹ ಟಿಮ್ ಕುಕ್ ಆಗಸ್ಟ್ 2011ರಲ್ಲಿ ಅಧಿಕಾರ ವಹಿಸಿಕೊಂಡಿದ್ದರು ಮತ್ತು ಅಂದಿನಿಂದ ಆ್ಯಪಲ್ ನ ಸ್ಟಾಕ್ 1,000 ಪ್ರತಿಶತಕ್ಕಿಂತಲೂ ಹೆಚ್ಚಾಗಿದೆ

ಆ್ಯಪಲ್ ಸಿಇಒ ಟಿಮ್ ಕುಕ್

ಆ್ಯಪಲ್ ಸಿಇಒ ಟಿಮ್ ಕುಕ್

  • Share this:
ಸಾಮಾನ್ಯವಾಗಿ ನಮಗೆಲ್ಲಾ ಮೈಕ್ರೋಸಾಫ್ಟ್, (Microsoft) ಆ್ಯಪಲ್, ಗೂಗಲ್‌ನಂತಹ ದೊಡ್ಡ ದೂಡ್ಡ ಕಂಪನಿಗಳಲ್ಲಿ(Big Companies) ದೊಡ್ಡ ಹುದ್ದೆಯಲ್ಲಿರುವವರು ಎಷ್ಟು ಸಂಬಳ ಪಡೆಯುತ್ತಾರೆ ಮತ್ತು ಅವರ ವಾರ್ಷಿಕ ಆದಾಯ (Annual Income) ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಬನ್ನಿ ಹಾಗಾದರೆ, ಜಗತ್ತಿನ ಅತಿದೊಡ್ಡ ತಂತ್ರಜ್ಞಾನ ಕಂಪನಿಯಾಗಿರುವ ಆ್ಯಪಲ್ ಕಂಪನಿಯಲ್ಲಿ (Apple Company) ಸಿಇಒ ಆಗಿರುವಂತಹ ಟಿಮ್ ಕುಕ್ (Tim Cook) ಕಳೆದ ವರ್ಷದಲ್ಲಿ ಎಂದರೆ 2021ರಲ್ಲಿ ಗಳಿಸಿದ ಆದಾಯದ ಬಗ್ಗೆ ತಿಳಿದು ಕೊಳ್ಳೋಣ.

ಸಾಮಾನ್ಯ ಟೆಕ್ ಉದ್ಯೋಗಿಂತ ಹೆಚ್ಚು

ಆ್ಯಪಲ್ ಕಂಪನಿಯ ಸಿಇಒ ಟಿಮ್ ಕುಕ್ ಅವರ ವೇತನವು ಒಬ್ಬ ಸಾಮಾನ್ಯ ಟೆಕ್ ಉದ್ಯೋಗಿ ಪಡೆಯುವ ವೇತನದ 1,447 ಪಟ್ಟು ಹೆಚ್ಚಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅದರಲ್ಲೂ ಗುರುವಾರ ಲಭಿಸಿದ ಕೆಲವು ಷೇರು ಲಾಭಗಳಿಂದಾಗಿ ಅವರ ಆದಾಯ 2021ರಲ್ಲಿ ಒಟ್ಟು 100 ಮಿಲಿಯನ್ ಡಾಲರ್ ಸಮೀಪ ತಲುಪಿದೆ ಎಂದು ಹೇಳಲಾಗುತ್ತಿದೆ.

2021ರಲ್ಲಿ ಉದ್ಯೋಗಿಗಳ ಮಧ್ಯಮ ವೇತನವು 68,254 ಡಾಲರ್ ಆಗಿತ್ತು ಎಂದು ಆ್ಯಪಲ್ ಕಂಪನಿಯು ತಿಳಿಸಿದೆ ಮತ್ತು ಹೊಸ ಉದ್ಯೋಗಿಗಳ ನೇಮಕಾತಿ ಮತ್ತು ವೇತನದಲ್ಲಿ ಆದ ಬದಲಾವಣೆಗಳಿಂದಾಗಿ ಹೋಲಿಕೆಗಾಗಿ ಹೊಸ ಮಧ್ಯಮ ಉದ್ಯೋಗಿಯ ವೇತನವನ್ನು ಆಯ್ಕೆ ಮಾಡಿದೆ ಎಂದು ಹೇಳಿದೆ. 2020ರಲ್ಲಿ ಮಧ್ಯಮ ವೇತನವು 57,783 ಡಾಲರ್ ಆಗಿತ್ತು ಮತ್ತು ವೇತನ ಅನುಪಾತವು ಕುಕ್ ಅವರ ಸಂಬಳದ 256 ಪಟ್ಟು ಇತ್ತು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಹಳೆಯ iPhone ಖರೀದಿಸಲು ಬಯಸುತ್ತಿದ್ದೀರಾ..? ಹಾಗಾದ್ರೆ ತಪ್ಪದೇ ಹೀಗೆ ಮಾಡಿ..

3 ಟ್ರಿಲಿಯನ್ ಡಾಲರ್

ಕಳೆದ 2 ವರ್ಷಗಳಲ್ಲಿ ತನ್ನ ಉತ್ಪನ್ನಗಳು ಮತ್ತು ಸೇವೆಗಳಿಗೆ ಬಲವಾದ ಬೇಡಿಕೆಯಿಂದ ಐಫೋನ್ ತಯಾರಕರು ತುಂಬಾನೇ ಲಾಭವನ್ನು ಪಡೆದಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆ್ಯಪಲ್ ಕಂಪನಿಯ ಆದಾಯವು ತನ್ನ 2021ರ ಹಣಕಾಸು ವರ್ಷದಲ್ಲಿ 30 ಪ್ರತಿಶತಕ್ಕಿಂತ ಹೆಚ್ಚಾಗಿದ್ದು 365.82 ಬಿಲಿಯನ್ ಡಾಲರ್‌ಗೆ ಏರಿದೆ. ಇದು ಕಂಪನಿಯ ಷೇರುಗಳನ್ನು ಈ ವರ್ಷದ ಮಾರುಕಟ್ಟೆ ಬಂಡವಾಳೀಕರಣದಲ್ಲಿ ಸಂಕ್ಷಿಪ್ತವಾಗಿ 3 ಟ್ರಿಲಿಯನ್ ಡಾಲರ್ ದಾಟಲು ಸಹಾಯ ಮಾಡಿತು ಎಂದು ಹೇಳಲಾಗುತ್ತಿದೆ.

98.7 ಮಿಲಿಯನ್ ಡಾಲರ್ ಆದಾಯ

ಆ್ಯಪಲ್ ಸಿಇಒ ಟಿಮ್ ಕುಕ್ ಸಂಬಳವು 3 ಮಿಲಿಯನ್ ಡಾಲರ್ ಆಗಿದ್ದು, ಷೇರುಗಳಿಂದ ಲಭಿಸಿದ ಲಾಭವು 82.3 ಮಿಲಿಯನ್ ಡಾಲರ್, ಆ್ಯಪಲ್ ಕಂಪನಿಯಲ್ಲಿ ಟಾರ್ಗೆಟ್ ತಲುಪಿದ್ದಕ್ಕಾಗಿ 12 ಮಿಲಿಯನ್ ಡಾಲರ್ ಮತ್ತು ವಿಮಾನ ಪ್ರಯಾಣಕ್ಕಾಗಿ 1.4 ಮಿಲಿಯನ್ ಡಾಲರ್ ಮತ್ತು ಇತರೆ ವಿಮಾ ಪ್ರೀಮಿಯಂಗಳನ್ನು ಪಡೆದಿದ್ದಾರೆ. ಒಟ್ಟಾರೆಯಾಗಿ, ಅವರು 2020ರಲ್ಲಿ ಪಡೆದಂತಹ 14.8 ಮಿಲಿಯನ್ ಡಾಲರ್ (104 ಕೋಟಿ ರೂಪಾಯಿ) ಗೆ ಹೋಲಿಸಿದರೆ 2021ರಲ್ಲಿ 98.7 ಮಿಲಿಯನ್ ಡಾಲರ್ (733 ಕೋಟಿ ರೂಪಾಯಿ) ಆದಾಯ ಗಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಆ್ಯಪಲ್ ನ ಸ್ಟಾಕ್ ಹೆಚ್ಚಳ

ಆ್ಯಪಲ್ ಕಂಪನಿಯಲ್ಲಿ ಸಿಇಒ ಆಗಿರುವಂತಹ ಟಿಮ್ ಕುಕ್ ಆಗಸ್ಟ್ 2011ರಲ್ಲಿ ಅಧಿಕಾರ ವಹಿಸಿಕೊಂಡಿದ್ದರು ಮತ್ತು ಅಂದಿನಿಂದ ಆ್ಯಪಲ್ ನ ಸ್ಟಾಕ್ 1,000 ಪ್ರತಿಶತಕ್ಕಿಂತಲೂ ಹೆಚ್ಚಾಗಿದೆ. ಸೆಪ್ಟೆಂಬರ್‌ನಲ್ಲಿ, ಕುಕ್ 333,987 ನಿರ್ಬಂಧಿತ ಷೇರು ಯೂನಿಟ್‌ಗಳನ್ನು ಪಡೆದರು, ಹೊಸ ದೀರ್ಘಕಾಲೀನ ಈಕ್ವಿಟಿ ಯೋಜನೆಯ ಭಾಗವಾಗಿ 2011ರ ನಂತರ ಮೊದಲ ಷೇರು ಅನುದಾನದಲ್ಲಿ, ಅವರು 2023ರಲ್ಲಿ ಕಾರ್ಯಕ್ಷಮತೆಯ ಆಧಾರದ ಮೇಲೆ ಹೆಚ್ಚುವರಿ ಯೂನಿಟ್‌ಗಳನ್ನು ಪಡೆಯಲು ಅರ್ಹರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: iPhone screen: ಐಫೋನ್ ಡಿಸ್​ಪ್ಲೇಯಿಂದ ಆ್ಯಪಲ್ ವಾಚ್ ಚಾರ್ಜ್ ಮಾಡಬಹುದು!

ಅಮೆರಿಕದ ಕಂಪನಿಗಳ ಸಿಇಒಗಳಿಗೆ 2020ರಲ್ಲಿ ಒಬ್ಬ ಸಾಮಾನ್ಯ ಉದ್ಯೋಗಿ ಪಡೆಯುವ ವೇತನಕ್ಕಿಂತಲೂ 351 ಪಟ್ಟು ಹೆಚ್ಚು ವೇತನ ನೀಡಲಾಯಿತು ಎಂದು ಆರ್ಥಿಕ ನೀತಿ ಸಂಸ್ಥೆಯೊಂದು ತನ್ನ ವರದಿಯಲ್ಲಿ ತಿಳಿಸಿದೆ.
Published by:vanithasanjevani vanithasanjevani
First published: