2022 Upcoming Bikes: ಹೊಸ ಬೈಕ್​ ಖರೀದಿಸ್ತಿದ್ದೀರಾ? ಸದ್ಯದಲ್ಲೇ ಬಿಡುಗಡೆಯಾಗಲಿರುವ ಈ ಬೈಕ್‌ಗಳನ್ನು ಒಮ್ಮೆ ನೋಡಿ!

ಪ್ರಸ್ತುತ ರಾಯಲ್ ಎನ್‌ಫೀಲ್ಡ್(Royal Enfield) , ಹೀರೋ (Hero) , ಬಜಾಜ್ (Bajaj) ಮತ್ತು ಇತರ ಬ್ರಾಂಡ್‌ (Brand) ಗಳು ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭಾರತೀಯ ಆಟೋ ಮಾರುಕಟ್ಟೆ (Auto Market) ಯಲ್ಲಿ ದ್ವಿಚಕ್ರ ವಾಹನಗಳಿಗೆ (Two Wheeler Vehicals) ಬೇಡಿಕೆ ಹೆಚ್ಚಿದೆ. ಬಳಕೆದಾರರಿಗೆ ವಿವಿಧ ಆಯ್ಕೆಗಳು ಲಭ್ಯವಿದೆ. ಇಷ್ಟು ಆಯ್ಕೆಗಳ ನಡುವೆ ಖರೀದಿಸಲು ಒಂದನ್ನು ಆಯ್ಕೆ ಮಾಡುವುದು ಸ್ವಲ್ಪ ಕಷ್ಟವೆಂದೇ ಹೇಳಬೇಕು. ಭಾರತದಲ್ಲಿ ಬೈಕ್‌ (Bike) ಗಳಿಗೆ ಹೆಚ್ಚುತ್ತಿರುವ ಬೇಡಿಕೆಯೊಂದಿಗೆ ಬೈಕ್ ತಯಾರಿಕೆ ಕಂಪನಿಗಳು ಹೊಸ ಹೊಸ ಮಾದರಿಗಳನ್ನು ಬಿಡುಗಡೆ ಮಾಡಲು ಪೈಪೋಟಿ ನಡೆಸುತ್ತವೆ. ಬಳಕೆದಾರರನ್ನು ಆಕರ್ಷಿಸಲು ಹೊಸ ವೈಶಿಷ್ಟ್ಯಗಳನ್ನು ನೀಡಲಾಗುತ್ತದೆ. ಅನೇಕ ಕಂಪನಿಗಳು ಈಗಾಗಲೇ 2022 ರಲ್ಲಿ ತಮ್ಮ ಬೈಕುಗಳನ್ನು ಬಿಡುಗಡೆ ಮಾಡಿವೆ. ಪ್ರಸ್ತುತ ರಾಯಲ್ ಎನ್‌ಫೀಲ್ಡ್(Royal Enfield) , ಹೀರೋ (Hero) , ಬಜಾಜ್ (Bajaj) ಮತ್ತು ಇತರ ಬ್ರಾಂಡ್‌ (Brand) ಗಳು ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿವೆ.

ಸದ್ಯ ಹೊಸ ಬೈಕ್ ಖರೀದಿಸುವ ಯೋಚನೆಯಲ್ಲಿರುವವರಿಗೆ ಇದೊಂದು ಸಂತಸದ ಸುದ್ದಿಯಾಗಲಿದೆ. ಯಾವ ಬೈಕ್‌ಗಳು ಶೀಘ್ರದಲ್ಲೇ ಬಿಡುಗಡೆಯಾಗಲಿವೆ? ಈ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

1) ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ 650

ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ 650 ಬಗ್ಗೆ ಸ್ವಲ್ಪ ಸಮಯದಿಂದ ವದಂತಿಗಳಿವೆ. ಸದ್ಯದಲ್ಲೇ ಬಿಡುಗಡೆಯಾಗಲಿರುವ ಈ ಬೈಕ್ ಮೇಲೆ ನಿರೀಕ್ಷೆ ಹೆಚ್ಚಿದೆ. ಹೊಸ ಶಾಟ್‌ಗನ್ ಬೈಕ್ ಕಂಪನಿಯ ಅತ್ಯಂತ ಶಕ್ತಿಶಾಲಿ ಬೈಕ್‌ಗಳಲ್ಲಿ ಒಂದಾಗಿದೆ ಎಂದು ನಿರೀಕ್ಷಿಸಲಾಗಿದೆ. ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ 650 ಸಂಪೂರ್ಣವಾಗಿ ಹೊಸ ವಿನ್ಯಾಸದೊಂದಿಗೆ ಗ್ರಾಹಕರನ್ನು ಆಕರ್ಷಿಸಲು ಸಿದ್ಧವಾಗುತ್ತಿದೆ.

2) ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಕುರಿತಾದ ಸುದ್ದಿಗಳು ಕೆಲವು ಸಮಯದಿಂದ ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ. ಇತ್ತೀಚೆಗೆ, ಕಂಪನಿಯ ಎಂಡಿ ಸಿದ್ ಲಾಲ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಬೈಕ್ ಅನ್ನು ಬಿಡುಗಡೆ ಮಾಡಲು ಹೊರಟಿರುವುದು ತಿಳಿದಿದೆ. ಈ ಹೊಸ ಬೈಕ್ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಹಿಂದಿನ ಆವೃತ್ತಿಗೆ ಹೋಲಿಸಿದರೆ ದೊಡ್ಡದಾಗಿರುತ್ತದೆ. ಮೆಕ್ಯಾನಿಕ್ಸ್ ಮತ್ತು ನೋಟದಲ್ಲೂ ಬದಲಾವಣೆಗಳಾಗಿವೆ ಎಂದು ವರದಿಯಾಗಿದೆ.








View this post on Instagram






A post shared by Sid Lal (@sidlal)





ಇದನ್ನೂ ಓದಿ: ಕಾರ್ ಲೋನ್‌ಗಳ ಮೇಲೆ ಕಡಿಮೆ ಬಡ್ಡಿಯನ್ನು ವಿಧಿಸುವ ಬ್ಯಾಂಕ್‌ಗಳಿವು!

3)  Hero XPulse 400, Xtreme 400S

ವಿವಿಧ ಬ್ರಾಂಡ್‌ಗಳು ತಮ್ಮ ಬೈಕ್‌ಗಳನ್ನು ಬಿಡುಗಡೆ ಮಾಡುವುದರೊಂದಿಗೆ 400 ಸಿಸಿ ಬೈಕ್ ವಿಭಾಗದಲ್ಲಿ ಪೈಪೋಟಿ ಹೆಚ್ಚಿದೆ. ಹೀರೋ ಕಂಪನಿ ಸ್ಪರ್ಧಿಸಲು ಸಿದ್ಧವಾಗಿದೆ. XPulse 2004V ರ್ಯಾಲಿ ಆವೃತ್ತಿಯ ಬಿಡುಗಡೆಯ ನಂತರ, ಹೀರೋ XPulse 400 ಮತ್ತು Xtreme 400S ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ.

4) 2022 ಬಜಾಜ್ N150

ಬಜಾಜ್ 2022 ಬಜಾಜ್ N150 ಅನ್ನು ಪಲ್ಸರ್ ಶ್ರೇಣಿಯ ನವೀಕರಿಸಿದ ಆವೃತ್ತಿಯಾಗಿ ತರುತ್ತಿದೆ. ಇತ್ತೀಚೆಗೆ ಸೋರಿಕೆಯಾಗಿರುವ ಬೈಕಿನ ಸ್ಪೈ ಶಾಟ್‌ಗಳು ಹೊಸ ಬಜಾಜ್ N150 ಬಿಡುಗಡೆಯ ನಿರೀಕ್ಷೆಗಳನ್ನು ಹೆಚ್ಚಿಸಿವೆ. ಬೈಕ್ 150 ಸಿಸಿ ಎಂಜಿನ್ ಹೊಂದಿರುವ ನಿರೀಕ್ಷೆಯಿದೆ. ಸದ್ಯ ಈ ಬೈಕ್‌ಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಇದು ಖಂಡಿತವಾಗಿಯೂ ಗ್ರಾಹಕರನ್ನು ಆಕರ್ಷಿಸುತ್ತದೆ ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: 7ನೇ ಜನರೇಷನ್​ನ ಮಸ್ಟಾಂಗ್​ ಕಾರಿನ ಲುಕ್​ ರಿವೀಲ್​, ಅಬ್ಬಬ್ಬಾ ಏನಿದೆ ಗುರೂ!

ಇದರ ಜೊತೆಗೆ ಮತ್ತಷ್ಟು ಎಲೆಕ್ಟ್ರಿಕ್​ ಬೈಕ್​ ಹಾಗೂ ಸ್ಕೂಟರ್​ಗಳು ಕೂಡ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈಗಿನ ಕಾಲದ ಜನರು ಹೆಚ್ಚಾಗಿ ಪೆಟ್ರೋಲ್​ ಬೈಕ್​ಗಳು ಹಾಗೂ ಸ್ಕೂಟರ್​ಗಿಂತ ಹೆಚ್ಚಾಗಿ ಎಲೆಕ್ಟ್ರಿಕ್​ ವಾಹನಗಳನ್ನು ಹೆಚ್ಚಾಗಿ ಖರೀದಿ ಮಾಡುತ್ತಿದ್ದಾರೆ. ಹೀಗಾಗಿ ಮಾರುಕಟ್ಟೆಗೆ ಮತ್ತಷ್ಟು ಹೊಸ ಹೊಸ ಎಲೆಕ್ಟ್ರಿಕ್​ ವಾಹನಗಳು ಬರುವುದರಲ್ಲಿ ಸಂಶಯವಿಲ್ಲ.
Published by:ವಾಸುದೇವ್ ಎಂ
First published: