• Home
  • »
  • News
  • »
  • business
  • »
  • Vegetables Price: ಈ ಪಾಟಿ ಏರುತ್ತಿರೋ ತರಕಾರಿ ಬೆಲೆಗೆ ಇದೇ ಕಾರಣವಂತೆ!

Vegetables Price: ಈ ಪಾಟಿ ಏರುತ್ತಿರೋ ತರಕಾರಿ ಬೆಲೆಗೆ ಇದೇ ಕಾರಣವಂತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಲೆ ಏರಿಕೆಗೆ ಇಂಧನ (Fuel) ಮತ್ತು ಸಾಗಣೆ ವೆಚ್ಚ (Shipping cost) ಏರಿಕೆಯೇ ಕಾರಣ ಎಂದು ಕೆಲವು ವ್ಯಾಪಾರಿಗಳು ಆರೋಪಿಸಿದ್ದಾರೆ.

  • Share this:

ವಿಪರೀತ ಮಳೆ (Rain) ಮತ್ತು ಬೆಳೆ ಹಾನಿ (Crop Damage)  ಯಿಂದಾಗಿ, ಸಾಮಾನ್ಯವಾಗಿ ತೋಟದಲ್ಲಿ ಬೆಳೆಯಲಾಗುವ ತರಕಾರಿಗಳ ಬೆಲೆ (Vegetables Price) ಗಳು ಈಗ ಮುಂಬೈ (Mumbai) ಸೇರಿದಂತೆ ಮಹಾನಗರಗಳಲ್ಲಿ ರೂ 60-80 ರೂ.ಗಳಿಂದ ಕೆಜಿಗೆ 120-140 ರೂ ಗೆ ಏರಿಕೆಯಾಗಿದೆ. ಬೆಲೆ ಏರಿಕೆಗೆ ಇಂಧನ (Fuel) ಮತ್ತು ಸಾಗಣೆ ವೆಚ್ಚ (Shipping cost) ಏರಿಕೆಯೇ ಕಾರಣ ಎಂದು ಕೆಲವು ವ್ಯಾಪಾರಿಗಳು ಆರೋಪಿಸಿದ್ದಾರೆ. ಭಾರತ (India) ದಲ್ಲಿ ಹೆಚ್ಚುತ್ತಿರುವ ಆಹಾರ ಹಣದುಬ್ಬರವು (Food Inflation) ಗ್ರಾಹಕರು ಮತ್ತು ವರ್ತಕರಿಗೆ ತೊಂದರೆಯನ್ನುಂಟು ಮಾಡಿದೆ. ತೈಲ ಮತ್ತು ಅನಿಲ ಬೆಲೆಗಳು ಏರುಗತಿಯಲ್ಲಿವೆ ಮತ್ತು ಅಕಾಲಿಕ ಮಳೆಯು ಭಾರತದ ರೈತರು ಮತ್ತು ಗ್ರಾಹಕರಿಗೆ ತೊಂದರೆಗಳನ್ನು ಹೆಚ್ಚಿಸಿದೆ.


ತರಕಾರಿಗಳ ಬೆಲೆ ಏರಿಕೆಗೆ ಕಾರಣವಾದ ಹವಾಮಾನ ವೈಪರೀತ್ಯ


ವ್ಯಾಪಾರಿಗಳು ತಿಳಿಸಿರುವಂತೆ ಹವಾಮಾನ ವೈಪರೀತ್ಯವು ತರಕಾರಿಗಳ ಬೆಲೆ ಏರಿಕೆಗೆ ಕಾರಣವಾಗಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹೊಲದಲ್ಲಿ ಬಿದ್ದಿರುವ ತರಕಾರಿಗಳು ಕೊಳೆತು ಹೋಗಿವೆ ಎಂದು ತರಕಾರಿ ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ.ಮಾರುಕಟ್ಟೆಗೆ ಹಾಗೂ ಸಾರ್ವಜನಿಕರನ್ನು ಕೆಲವು ತರಕಾರಿಗಳು ತಲುಪದೇ ಇರುವ ಕಾರಣ ಹಾಗೂ ಕೆಲವೊಂದು ತರಕಾರಿಗಳ ಕೊರತೆಯಿಂದ ಮಾರುಕಟ್ಟೆಗೆ ಈ ಸ್ಥಿತಿ ಬಂದೊದಗಿದೆ ಎಂದು ವರ್ತಕರು ತಿಳಿಸಿದ್ದಾರೆ.


ಭಾರೀ ಮಳೆ ಸುರಿದ ಕಾರಣ ಎಲ್ಲಾ ಪ್ರದೇಶಗಳಲ್ಲಿ (ಮಹಾರಾಷ್ಟ್ರ, ಕರ್ನಾಟಕ, ಗುಜರಾತ್) ಬೆಳೆಯುವ ಟೊಮೇಟೋ ಬಾಡಿ ಹೋಗಿವೆ. ಒಳ್ಳೆಯ ಕೆಂಪು ಹಣ್ಣಿನ ಸಗಟು ಬೆಲೆ ರೂ 40-50 ಆಗಿರುವುದರಿಂದ ನೈಸರ್ಗಿಕವಾಗಿ ಚಿಲ್ಲರೆ ದರಗಳು ರೂ 60-80 ಆಗಿರುತ್ತದೆ.


ಹೊಸ ಬೆಳೆ ಬಂದ ನಂತರ ಸುಧಾರಿಸುತ್ತೆ ಪರಿಸ್ಥಿತಿ!


ನವೆಂಬರ್ ಮಧ್ಯದಲ್ಲಿ ಹೊಸ ಬೆಳೆ ಬಂದ ನಂತರವೇ ಪರಿಸ್ಥಿತಿ ಸುಧಾರಿಸುತ್ತದೆ. ಇತರ ತರಕಾರಿಗಳ ವಿಷಯವೂ ಇದೇ ಆಗಿದೆ. ಪ್ರಸ್ತುತ ಬೆಳೆಯುವ ಬೆಳೆಯಲ್ಲಿ ಶೇ.20-30ರಷ್ಟು ಮಾತ್ರ ಉತ್ತಮ ಗುಣಮಟ್ಟದ ಬೆಳೆಯಾಗಿದೆ. ಉಳಿದವು ಸರಾಸರಿ ಅಥವಾ ಕಳಪೆ ಗುಣಮಟ್ಟದ್ದಾಗಿದೆ ಎಂದು ಎಪಿಎಂಸಿ ವಾಶಿಯ ನಿರ್ದೇಶಕ ಶಂಕರ ಪಿಂಗಳೆ ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ. ಅತಿವೃಷ್ಟಿ ಮತ್ತು ಅಕಾಲಿಕ ಮಳೆಯಿಂದಾಗಿ ಬೆಳೆ ಹಾನಿ ಮತ್ತು ಅದರ ಪರಿಣಾಮವಾಗಿ ಕೊರತೆ ಉಂಟಾಗಿದೆ ಎಂದು ಪಿಂಗಳೆ ಆರೋಪಿಸಿದ್ದಾರೆ.


ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ತರಕಾರಿ ಬೆಲೆ


ಅಂಧೇರಿ ಲೋಖಂಡವಾಲಾದಲ್ಲಿ ಮಂಗಳವಾರ ಟೊಮ್ಯಾಟೊ ಕೆಜಿಗೆ ರೂ 60 ರಂತೆ ಮಾರಾಟವಾಗಿದೆ ಎಂದು ವರದಿಯಿಂದ ತಿಳಿದುಬಂದಿದೆ. ಪಾಲಕ್ ಸೊಪ್ಪು ಪ್ರತಿ ಗೊಂಚಲಿಗೆ ರೂ 50 ರಂತೆ ಲಭ್ಯವಿದ್ದರೆ, ಬೆಂಡೆಕಾಯಿ ಕೆಜಿಗೆ ರೂ 120 ಮತ್ತು ಕ್ಲಸ್ಟರ್ ಬೀನ್ಸ್ ಬೆಲೆ ರೂ 160 ಆಗಿದೆ.


ನಗರದಲ್ಲಿ ಅತ್ಯಂತ ದುಬಾರಿ ಚಿಲ್ಲರೆ ಮಾರುಕಟ್ಟೆಯಾಗಿರುವ ಮಾತುಂಗಾದಲ್ಲಿ ಸೋರೆಕಾಯಿ ಅಥವಾ ಪರ್ವಾಲ್ ಅನ್ನು ಪ್ರತಿ ಕಿಲೋಗೆ ರೂ 120 ರ ಹಾಗೆ ಮಾರಾಟ ಮಾಡಲಾಗುತ್ತಿದೆ ಎಂಬುದಾಗಿ ವರದಿ ತಿಳಿಸಿದೆ.


ಇದನ್ನೂ ಓದಿ: ನಿಮ್ಮ ವ್ಯಾಪಾರ ಸಕ್ಸಸ್​​ ಆಗ್ಬೇಕು ಅಂದ್ರೆ, ಈ 13 ಟಿಪ್ಸ್​​ ಫಾಲೋ ಮಾಡಿ! ಆಮೇಲೆ ಮ್ಯಾಜಿಕ್​ ನೋಡಿ


ಸಾಮಾನ್ಯವಾಗಿ ರೂ 16-18 ಕ್ಕೆ ಮಾರಾಟವಾಗುತ್ತಿದ್ದ ಹೂಕೋಸು ಈಗ ಸಗಟು ಮಾರುಕಟ್ಟೆಯಲ್ಲಿ ರೂ 60 ಕ್ಕೆ ಮಾರಾಟವಾಗುತ್ತಿದೆ. ಈ ಹಿಂದೆ 50 ಪೈಸೆ- 1 ರೂ.ಗೆ ಒಂದು ನಿಂಬೆಹಣ್ಣು ಖರೀದಿಸುತ್ತಿದ್ದ ವ್ಯಾಪಾರಿಗಳು ಈಗ ಪ್ರತಿ ಹಣ್ಣಿಗೆ ರೂ 4-5 ಪಾವತಿಸುವ ಪರಿಸ್ಥಿತಿ ಉಂಟಾಗಿದೆ.


ಮಳೆಯಿಂದ ಬೆಳೆಗಳಿಗೆ ಉಂಟಾಗುತ್ತಿರುವ ಹಾನಿ


ಭಾರತದಾದ್ಯಂತ ಹಲವಾರು ರೈತರು ಬೆಳೆ ನಷ್ಟವನ್ನು ಎದುರಿಸಿದ್ದಾರೆ ಎಂದು ವರದಿಯಾಗಿದ್ದು, ಆಹಾರದ ಬೆಲೆಗಳು, ಎರಡು ವರ್ಷಗಳಲ್ಲಿ ಈಗಾಗಲೇ ಅತ್ಯಧಿಕವಾಗಿದ್ದು, ಸುಗ್ಗಿಯ ನಂತರ ಸಾಮಾನ್ಯವಾಗಿ ಕುಗ್ಗುವ ಬದಲು ಅತ್ಯಧಿಕ ಸ್ಥಾನದಲ್ಲಿಯೇ ಉಳಿಯಬಹುದು ಎಂದು ಅಂದಾಜಿಸಲಾಗಿದೆ. ಇದರಿಂದ ಭಾರತದ ಲಕ್ಷಾಂತರ ಗ್ರಾಮೀಣ ಬಡವರಿಗೆ ತೊಂದರೆಯಾಗುವುದು ಖಚಿತವಾಗಿದೆ.


ಇದನ್ನೂ ಓದಿ: ಕೆಲಸದ ಜೊತೆ ಕೃಷಿ ಆರಂಭಿಸಿ ಗೆದ್ದ ರೈತ, ದುಡ್ಡು ಮಾಡೋದು ಹೇಗೆ ಅಂತ ಇವ್ರನ್ನು ನೋಡಿ ಕಲಿತುಕೊಳ್ಳಿ!


ಧಾನ್ಯಗಳ ಜೊತೆಗೆ, ಒಟ್ಟಾರೆ ಗ್ರಾಹಕ ಬೆಲೆ ಸೂಚ್ಯಂಕದ ಕಾಲು ಭಾಗದಷ್ಟು ಪಾಲನ್ನು ಹೊಂದಿರುವ ತರಕಾರಿಗಳು, ಹಾಲು, ಬೇಳೆಕಾಳುಗಳು ಮತ್ತು ಖಾದ್ಯ ತೈಲಗಳ ಬೆಲೆಗಳು ಏರುತ್ತಿವೆ ಮತ್ತು ಮುಂಬರುವ ತಿಂಗಳುಗಳಲ್ಲಿ ಅತ್ಯಧಿಕವಾಗಿ ಉಳಿಯುವ ಸಾಧ್ಯತೆಯಿದೆ.

Published by:ವಾಸುದೇವ್ ಎಂ
First published: