• Home
 • »
 • News
 • »
 • business
 • »
 • Business: ನಿಮ್ಮ ಸಣ್ಣ ವ್ಯಾಪಾರವನ್ನು ಪ್ರಮೋಟ್‌ ಮಾಡಲು ಇಲ್ಲಿದೆ ಐಡಿಯಾ!

Business: ನಿಮ್ಮ ಸಣ್ಣ ವ್ಯಾಪಾರವನ್ನು ಪ್ರಮೋಟ್‌ ಮಾಡಲು ಇಲ್ಲಿದೆ ಐಡಿಯಾ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ನಿಮ್ಮ ಸಣ್ಣ ಬ್ಯುಸಿನೆಸ್‌ ಅನ್ನು ವಿಸ್ತರಿಸಲು, ಪರಿಣಾಮಕಾರಿಯಾದ ಗ್ರಾಹಕರನ್ನು ಪಡೆಯಲು ನೀವು ಕೆಲವಷ್ಟು ತಂತ್ರಗಳನ್ನು ಅನುಸರಿಸಬಹುದು. ಇದಕ್ಕಾಗಿ ಕೆಲವು ಪರಿಣಾಮಕಾರಿ ಮಾರ್ಗಗಳು ಹೀಗಿವೆ ನೋಡಿ.

 • Share this:

  ಸಣ್ಣದಾದರೂ ಸರಿ, ಸ್ವಂತ ವ್ಯಾಪಾರ (Business) ಆರಂಭಿಸಲು ಒಂದಷ್ಟು, ಧೈರ್ಯ, ಪರಿಶ್ರಮ ಹಾಗೂ ನಿರಂತರತೆಯ ಅಗತ್ಯ ಇರುತ್ತದೆ. ಕೆಲವೊಮ್ಮೆ ದಾರಿಯುದ್ದಕ್ಕೂ ಹಲವಾರು ಅಡೆತಡೆಗಳು ಎದುರಾಗಬಹುದು. ಒಮ್ಮೆ ನಿಮ್ಮ ಉದ್ಯಮವು (Job) ಮೇಲೆದ್ದರೆ, ನಿಮ್ಮ ವ್ಯಾಪಾರವನ್ನು ಸಾಧ್ಯವಾದಷ್ಟು ಪ್ರಚಾರ ಮಾಡುವ ಮೂಲಕ ನೀವು ಯಶಸ್ಸನ್ನು ಸಾಧಿಸಬಹುದು. ಅಂದಹಾಗೆ ನಿಮ್ಮ ಉದ್ಯಮದ ಪ್ರಚಾರಕ್ಕಾಗಿ ನೀವು ಪ್ರಸ್ತುತ ಹೆಚ್ಚು ಖರ್ಚು ಮಾಡುವಂಥ ಸ್ಥಿತಿಯಲ್ಲಿ ಇಲ್ಲದೇ ಹೋದರೂ ತಂತ್ರಜ್ಞಾನವನ್ನು (Technology) ಬಳಸಿಕೊಂಡು ನೀವು ಮುನ್ನಡೆಯಬಹುದು. ಉಚಿತವಾಗಿಯೂ ಸಿಗುವ ಸಾಕಷ್ಟು ವೇದಿಕೆಗಳನ್ನು ನೀವು ಬಳಸಿಕೊಳ್ಳಬಹುದು.


  ನಿಮ್ಮ ಸಣ್ಣ ಬ್ಯುಸಿನೆಸ್‌ ಅನ್ನು ವಿಸ್ತರಿಸಲು, ಪರಿಣಾಮಕಾರಿಯಾದ ಗ್ರಾಹಕರನ್ನು ಪಡೆಯಲು ನೀವು ಕೆಲವಷ್ಟು ತಂತ್ರಗಳನ್ನು ಅನುಸರಿಸಬಹುದು. ಇದಕ್ಕಾಗಿ ಕೆಲವು ಪರಿಣಾಮಕಾರಿ ಮಾರ್ಗಗಳು ಹೀಗಿವೆ ನೋಡಿ.


  1.SEO ನೊಂದಿಗೆ ನಿಮ್ಮ ವ್ಯಾಪಾರ ವೆಬ್‌ಸೈಟ್ ಅನ್ನು ಆಪ್ಟಿಮೈಜ್ ಮಾಡಿ:


  ನಿಮ್ಮ ವ್ಯಾಪಾರವನ್ನು ಹೊಂದಿಸುವಾಗ ನೀವು ಮಾಡಬೇಕಾದ ಪ್ರಮುಖ ಕೆಲಸವೆಂದರೆ ವೆಬ್‌ಸೈಟ್ ಮತ್ತು ಬ್ಲಾಗ್ಅನ್ನು ರಚಿಸುವುದು. ನಿಮ್ಮ ವ್ಯಾಪಾರದ ಸಾಲಿಗೆ ಸಂಬಂಧಿಸಿದ ಕೀವರ್ಡ್‌ಗಳ ಸಹಾಯವನ್ನು ಪಡೆದುಕೊಂಡು ನಿಮ್ಮ ಸೈಟ್ ಹುಡುಕಾಟ ಹೆಚ್ಚಾಗುವಂತೆ ಮಾಡಬಹುದು.


  ಇದನ್ನೂ ಓದಿ: ನಿಮ್ಮ ಆಧಾರ್​ ಕಾರ್ಡ್​ನಲ್ಲಿ ಸಮಸ್ಯೆಯಿದ್ಯಾ? ಹೀಗೆ ದೂರು ನೀಡಿ!


  ಎಸ್‌ಇಒ (ಸರ್ಚ್‌ ಎಂಜಿನ್‌ ಆಪ್ಟಿಮೈಸೇಶನ್)ತಂತ್ರಗಳನ್ನು ಪರಿಣಾಮಕಾರಿಯಾಗಿ ಬಳಸಲು ನಿಮಗೆ ಬರುವುದಿಲ್ಲ ಎಂದಾದಲ್ಲಿ ನೀವು ವೃತ್ತಿಪರ ಏಜೆನ್ಸಿ ಸಹಾಯ ಪಡೆಯಬಹುದು. ನಿಮ್ಮ ವ್ಯಾಪಾರವು ಅದರ ಪ್ರಮುಖ ಗುರಿಗಳನ್ನು ತಲುಪಲು, ದೀರ್ಘಕಾಲೀನ ಕಾರ್ಯತಂತ್ರವನ್ನು ರೂಪಿಸಲು ಅವರು ನಿಮಗೆ ಸಹಾಯ ಮಾಡುತ್ತಾರೆ.


  2.ವರ್ಚುವಲ್ ಜಾಹೀರಾತು ಬಳಸಿ:


  ಭೌತಿಕ ಜಾಹೀರಾತು ಇಂದಿಗೂ ಪ್ರಾಮುಖ್ಯತೆ ಪಡೆದಿವೆ ಎಂದಾದರೂ ಆನ್‌ಲೈನ್ ಜಾಹೀರಾತುಗಳನ್ನು ರಚಿಸುವುದು ಸಹ ಅತ್ಯಗತ್ಯ. ಏಕೆಂದರೆ ಅವುಗಳು ನಿಮಗೆ ಹೆಚ್ಚಿನ ಗ್ರಾಹಕರನ್ನು ತಲುಪಲು ಸಹಾಯ ಮಾಡುತ್ತದೆ. ಆನ್‌ಲೈನ್ ಜಾಹೀರಾತುಗಳನ್ನು ಇರಿಸಲು ಹಣ ವೆಚ್ಚ ಆಗಬಹುದಾದರೂ, ಜಾಹೀರಾತುಗಳು ನಿಮ್ಮ ವೆಬ್‌ಸೈಟ್‌ಗೆ ದಟ್ಟಣೆಯನ್ನು ಹೆಚ್ಚಿಸುವುದರಿಂದ ಅದು ಹೂಡಿಕೆಗೆ ಯೋಗ್ಯವಾಗಿದೆ ಎನ್ನಬಹುದು. ಪರಿಣಾಮವಾಗಿ ನೀವು ಆಶಾದಾಯಕವಾಗಿ ಹೊಸ ಗ್ರಾಹಕರನ್ನು ಪಡೆಯುತ್ತೀರಿ.


  3. ಸಾಮಾಜಿಕ ಮಾಧ್ಯಮ:


  ನಿಮ್ಮ ಬ್ರಾಂಡ್‌ ಬಗ್ಗೆ ಜನರ ಗಮನ ಸೆಳೆಯಲು ಸಾಮಾಜಿಕ ಮಾಧ್ಯಮವು ಉತ್ತಮ ಸಾಧನವಾಗಿದೆ. ಅಲ್ದೇ ಮತ್ತೊಂದು ವಿಶೇಷತೆಯೆಂದರೆ ಇದನ್ನು ಉಚಿತವಾಗಿ ಬಳಸಬಹುದು. ನೀವು ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ಹಲವಾರು ಖಾತೆಗಳನ್ನು ತೆರೆಯಬಹುದು. Facebook ಮತ್ತು Twitter ಹೆಚ್ಚು ಪ್ರಯೋಜನಕಾರಿಯಾಗಿದೆ. ಅಲ್ದೇ ನೀವು ಹೆಚ್ಚಿನ ಪ್ರೇಕ್ಷಕರನ್ನು ತಲುಪಲು ಇನ್‌ಸ್ಟಾಗ್ರಾಂ ಹಾಗೂ ಲಿಂಕ್ಡ್‌ ಇನ್‌ ಖಾತೆಗಳನ್ನು ಸಹ ಮಾಡಬಹುದು. ಬರೀ ಖಾತೆಗಳನ್ನು ತೆರೆಯುವುದಲ್ಲ. ಬದಲಾಗಿ ನೀವು ಅಲ್ಲಿರುವ ಗ್ರಾಹಕರೊಂದಿಗೆ ಸಂವಹನ ನಡೆಸುತ್ತೀರಿ. ನಿಮ್ಮ ಉತ್ಪನ್ನಗಳು ಅಥವಾ ಸೇವೆಗಳನ್ನು ಹೈಲೈಟ್ ಮಾಡುವುದು, ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸುವುದುಇಂಥಹ ಅಂಶಗಳು ನಿಮ್s ಸಣ್ಣ ಉದ್ಯಮ ಅಭಿವೃದ್ಧಿಗೆ ಸಹಾಯಕವಾಗುತ್ತವೆ.


  4. ಕ್ರಾಫ್ಟ್ ಇಮೇಲ್ ಮಾರ್ಕೆಟಿಂಗ್ ಅಭಿಯಾನಗಳು:


  ಸಂಶೋಧನೆಯ ಪ್ರಕಾರ, ಇಮೇಲ್ ಮಾರ್ಕೆಟಿಂಗ್ ಹೊಸ ವ್ಯಾಪಾರವನ್ನು ಉತ್ತೇಜಿಸುವ ಸಾಧನವಾಗಿದೆ. ಆದ್ದರಿಂದ ನಿಮ್ಮ ಪ್ರಚಾರದ ತಂತ್ರಗಳಲ್ಲಿ ಇಮೇಲ್ ಪ್ರಚಾರಗಳನ್ನು ಸೇರಿಸಲು ನೀವು ಮರೆಯಬಾರದು. ನಿಮ್ಮ ಇತ್ತೀಚಿನ ಉತ್ಪನ್ನಗಳು ಮತ್ತು ಪ್ರಚಾರಗಳ ಬಗ್ಗೆ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ತಿಳಿಸಲು ನೀವು ಇಮೇಲ್ ಮಾರ್ಕೆಟಿಂಗ್ ಅನ್ನು ಮಾಡಬಹುದಲ್ಲದೇ ನಿಮ್ಮ ಇಮೇಲ್‌ಗಳನ್ನು ಫಾರ್ವರ್ಡ್ ಮಾಡುವುದರಿಂದ ನೀವು ಹೊಸ ಗ್ರಾಹಕರನ್ನು ಪಡೆಯುವುದೂ ಸಾಧ್ಯವಾಗುತ್ತದೆ.


  ಒಟ್ಟಾರೆ, ಸಣ್ಣ ವ್ಯಾಪಾರವನ್ನು ನಡೆಸುವುದು ಸವಾಲಿನ ಕೆಲಸವೂ ಹೌದು. ಆದರೆ ತಂತ್ರಜ್ಞಾನವನ್ನು ನಿಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ಮೂಲಕ ನೀವು ಅನೇಕ ಸವಾಲುಗಳನ್ನು ಗೆಲ್ಲಬಹುದಾಗಿದೆ. ಅದಕ್ಕಾಗಿ ನೀವು ಸ್ವಲ್ಪ ಅಪ್‌ಡೇಟ್‌ ಆಗಬೇಕಷ್ಟೇ.

  Published by:Prajwal B
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು