ಬರವಣಿಗೆ ಅನ್ನೋದೊಂದು ಕಲೆ. ಈ ಕಲೆಯನ್ನು ಸರಿಯಾಗಿ ಬಳಸಿಕೊಂಡರೆ ಜೀವನದ ದಾರಿಯನ್ನು ಕಂಡುಕೊಳ್ಳಬಹುದು. ಒಳ್ಳೆಯ ಆದಾಯವನ್ನೂ ಗಳಿಸಬಹುದು. ಸಿನೆಮ್ ಗುನೆಲ್ ಅವರು ಆನ್‌ಲೈನ್ ಪಬ್ಲಿಷಿಂಗ್ (Blogger) ವೇದಿಕೆ ಮೂಲಕ ಅವರು ಒಂದು ತಿಂಗಳಿಗೆ 9 ಲಕ್ಷಕ್ಕೂ ಹೆಚ್ಚು ಆದಾಯ ಗಳಿಸುತ್ತಾರೆ. ಅಂದಹಾಗೆ ಗುನೆಲ್ ಅವರು ಬರೆಯಲು ಆರಂಭಿಸಿದ್ದು 2018ರ ಆಗಸ್ಟ್‌ನಲ್ಲಿ. ಅವರು ಆ ಸಮಯದಲ್ಲಿ ವಿದ್ಯಾರ್ಥಿಗಳಿಗಾಗಿ ವೈಯಕ್ತಿಕ-ಅಭಿವೃದ್ಧಿ ಬಗ್ಗೆ ಕಾರ್ಯಾಗಾರವನ್ನು ನಡೆಸುತ್ತಿದ್ದರು. ನಂತರದಲ್ಲಿ ಕಾರ್ಯಾಗಾರದ ವಿಷಯವನ್ನು ತೆಗೆದುಕೊಂಡು ಲೇಖನಗಳಾಗಿ ಪರಿವರ್ತಿಸಿ ಪೋಸ್ಟ್ (Post) ಮಾಡಿದರು. ಅಷ್ಟಕ್ಕೂ ಗೇಟೆಡ್ ವಿಷಯವನ್ನು ಓದಲು, ಓದುಗರು ಪಾವತಿಸುವ ಶುಲ್ಕದ ಆಧಾರದ ಮೇಲೆ ಬರಹಗಾರರು ಆದಾಯ ಗಳಿಸುತ್ತಾರೆ. ಗುನೆಲ್ ಅವರು ಮೊದಲ ಒಂದೂವರೆ ವರ್ಷದಲ್ಲಿ ಸುಮಾರು 150 ಲೇಖನಗಳನ್ನು ಪ್ರಕಟಿಸಿದ್ದರು.
ಉತ್ತಮ ಆದಾಯ ಗಳಿಕೆ:
55,000 ವೀಕ್ಷಣೆಗಳನ್ನು ಪಡೆದ ಒಂದು ಲೇಖನದಲ್ಲಿ $223.89 ಪಡೆದಿದ್ದು ನಾನು ಗಳಿಸಿದ ಅತ್ಯಧಿಕ ಮೊತ್ತವಾಗಿದೆ. ಆ ಸಮಯದಲ್ಲಿ ಇದು ನಿಜವಾಗಿಯೂ ರೋಮಾಂಚನಕಾರಿಯಾಗಿತ್ತು. ಏಕೆಂದರೆ ನಾನು ಇನ್ನೂ ವಿದ್ಯಾರ್ಥಿಯಾಗಿದ್ದೆ ಎಂಬುದಾಗಿ ಗುನೆಲ್ ಹೇಳುತ್ತಾರೆ.
ನಾನು 2019 ರಲ್ಲಿ ಪದವಿ ಪಡೆದ ನಂತರ ಮಾದ್ಯಮದಲ್ಲಿ ಬರೆಯುವುದನ್ನು ಆರಂಭಿಸಿದೆ. ಈ ಫ್ಲಾಟ್‌ಫಾರ್ಮ್ ಗಳಲ್ಲಿ ಪೂರ್ಣ ಸಮಯದ ಆದಾಯವನ್ನು ಗಳಿಸಲು ಸಾಧ್ಯವಿದೆ ಎಂದು ನನಗೆ ತಿಳಿದಿತ್ತು ಎಂಬುದಾಗಿ ಗುನೆಲ್ ಹೇಳುತ್ತಾರೆ. ಅಲ್ಲದೇ ನಾನು 2020 ರಲ್ಲಿ ಪ್ರತಿದಿನ ಬರೆಯುವ ಗುರಿಯನ್ನು ಹೊಂದಿದ್ದೆ. ನಾನು ಹೆಚ್ಚಾಗಿ ವೈಯಕ್ತಿಕ ಅಭಿವೃದ್ಧಿಯ ಕುರಿತು ಲೇಖನಗಳ ಬರೆಯುವುದನ್ನು ಆರಂಭಿಸಿದೆ.
ಇದನ್ನೂ ಓದಿ: Aadhaar Update: ಆಧಾರ್ ಕಾರ್ಡ್ ಕುರಿತು ಮಹತ್ವದ ಮಾಹಿತಿ, ಆದಷ್ಟು ಬೇಗ ಈ ಕೆಲಸ ಮಾಡಿ
ನಂತರ ಆಗಸ್ಟ್ 2020 ರಲ್ಲಿ, ನಾನು $11,000 ಕ್ಕಿಂತ ಹೆಚ್ಚು ಗಳಿಸಿದ್ದೇನೆ. ಮಾದ್ಯಮ ನನ್ನ ಪೂರ್ಣ ಸಮಯದ ಆದಾಯದ ಮೂಲವಾಗಿದೆ. ನಾನು ಈಗ ವೇದಿಕೆಯಲ್ಲಿ 60,000 ಫಾಲೋವರ್ಸ್ ಹೊಂದಿದ್ದೇನೆ ಎಂಬುದಾಗಿ ಗುನೆಲ್ ಹೇಳುತ್ತಾರೆ. ಅಲ್ಲದೇ ಮಾದ್ಯಮದಲ್ಲಿ ಯಶಸ್ವಿಯಾಗಲು ಬಯಸುವವರಿಗೆ ಒಂದಿಷ್ಟು ಸಲಹೆಗಳನ್ನು ನೀಡುತ್ತಾರೆ.
1. ಓದುಗರು ಇಷ್ಟಪಡುವಂಥ ವಿಷಯವನ್ನು ಆರಿಸಿ: ಹೆಚ್ಚಿನ ಓದುಗರು ನಿಮ್ಮ ಬರಹವನ್ನು ಇಷ್ಟಪಡಬೇಕು ಎಂದಾದರೆ ವಿಷಯದ ಆಯ್ಕೆಯಲ್ಲಿ ಜಾಗರೂಕರಾಗಿರಬೇಕು. ವಿಷಯಗಳು ಹೆಚ್ಚು ಕುತೂಹಲಕಾರಿಯಾಗಿದ್ದರೆ ಓದುಗರು ಇಷ್ಟ ಪಡುತ್ತಾರೆ. ಈ ವಿಷಯಗಳನ್ನು ಹಿಡನ್ ಚಾಂಪಿಯನ್ ಎಂದು ಕರೆಯಬಹುದು. ಏಕೆಂದರೆ ಕೆಲವೊಮ್ಮೆ ಅವುಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಆದರೆ ಸ್ಪಷ್ಟವಾಗಿರುವುದಿಲ್ಲ.
ಇದಕ್ಕೆ ಇತಿಹಾಸ ಅಥವಾ ನಿಜವಾದ ಅಪರಾಧದ ಕಥೆಗಳು ಉತ್ತಮ ಉದಾಹರಣೆಗಳಾಗಿವೆ. ಇಂಥ ವಿಷಯ ವಸ್ತು ಹೆಚ್ಚಿನ ಪ್ರತಿಕ್ರಿಯೆಗಳು ಅಥವಾ ಕಾಮೆಂಟ್‌ಗಳನ್ನು ಹೊಂದಿರದೇ ಇರಬಹುದು. ಆದರೆ ಲೇಖನವು ಉತ್ತಮವಾಗಿದ್ದರೆ, ಬರಹಗಾರರು ಬಹಳಷ್ಟು ಗಳಿಸಬಹುದು.
2. ನಿಮ್ಮ ಪ್ರೇಕ್ಷಕರನ್ನು ಅರ್ಥಮಾಡಿಕೊಳ್ಳಿ: ನಾನು ಪೂರ್ಣಾವಧಿಯಾಗಿ ಇದನ್ನು ಮುಂದುವರಿಸಲು ನಿರ್ಧರಿಸಿದಾಗ, ನಾನು ಬರೆಯಲು ಬಯಸಿದ ವೈಯಕ್ತಿಕ ಕಥೆಗಳನ್ನು ಬಿಟ್ಟುಬಿಟ್ಟೆ. ಟ್ರೈಯಲ್ ಆಂಡ್ ಎರರ್ ಮೇಲೆ ಗಮನವನ್ನು ಕೇಂದ್ರೀಕರಿಸಿದೆ ಎಂಬುದಾಗಿ ಗುನೆಲ್ ಹೇಳುತ್ತಾರೆ.
ಕೆಲವು ಜನರು ಮಾಧ್ಯಮದಲ್ಲಿ ಸೃಜನಶೀಲ ಬರವಣಿಗೆಯಲ್ಲಿ ತೊಡಗಿದ್ದರೂ ಇದು ಹೆಚ್ಚು ಲಾಭದಾಯಕ ಮಾರ್ಗವಲ್ಲ. ಹಾಗಾಗಿ ನಿಮ್ಮ ಪ್ರೇಕ್ಷಕರನ್ನು ಅರ್ಥ ಮಾಡಿಕೊಳ್ಳಿ. ಅವರು ಯಾವ ಶೈಲಿಯನ್ನು, ವಿಷಯವನ್ನು ಇಷ್ಟಪಡುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಿ ಎಂಬುದಾಗಿ ಗುನೆಲ್ ಹೇಳುತ್ತಾರೆ.
3. ಓದುಗರ ಪ್ರತಿಕ್ರಿಯೆ : ಇನ್ನು ನೀವು ಬರೆದಂತಹ ಪ್ರತಿ ಬರಹಕ್ಕೂ ನೀವು ಓದುಗರ ಪ್ರತಿಕ್ರಿಯೆ ಪಡೆಯುವುದು ಬಹಳ ಮುಖ್ಯ ಎನ್ನುತ್ತಾರೆ ಗುನೆಲ್. ಅದನ್ನು ಕಾಮೆಂಟ್‌ನಲ್ಲಾಗಲಿ ಅಥವಾ ಇಮೇಲ್ ಮೂಲಕವಾಗಿ ಓದುಗರು ಪ್ರತಿಕ್ರಿಯಿಸಲು ಅವಕಾಶ ಮಾಡಿಕೊಡಿ. ಇದರಿಂದ ಓದುಗರು ನಿಮ್ಮ ಬರಹಗಳ ಕುರಿತು ಅಭಿಪ್ರಾಯಗಳನ್ನು ಹಂಚಿಕೊಂಡಲ್ಲಿ ಅವರು ನಿಮಗೆ ಹೆಚ್ಚು ಕನೆಕ್ಟ್ ಆಗಲೂ ಸಾಧ್ಯವಾಗುತ್ತದೆ.
ಅಂದಹಾಗೆ ಗುನೆಲ್ ಅವರು ಎರಡು ಸುದ್ದಿ ಪತ್ರಗಳನ್ನು ನಡೆಸುತ್ತಿದ್ದು ಒಂದು, 25,000 ಚಂದಾದಾರನ್ನು ಹೊಂದಿದ್ದರೆ, ಆನ್‌ಲೈನ್‌ನಲ್ಲಿ ಬರೆಯಲು ಮೀಸಲಾಗಿರುವ ಸುದ್ದಿಪತ್ರವು 10,000 ಚಂದಾದಾರರನ್ನು ಹೊಂದಿದೆ. ಒಟ್ಟಾರೆಯಾಗಿ ಬರವಣಿಗೆ ಮೂಲಕವೂ ಸಾಕಷ್ಟು ಆದಾಯ ಹೊಂದಬಹುದು ಎಂಬುದಾಗಿ ಗುನೆಲ್ ಹೇಳುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ