Income Tax: ಹೊಸ ತೆರಿಗೆ ಪದ್ಧತಿ ಅನುಮತಿಸುವ ಆರು ಆದಾಯ ತೆರಿಗೆ ವಿನಾಯಿತಿಗಳು ಹೀಗಿವೆ ನೋಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಹೊಸ ತೆರಿಗೆ ಪದ್ಧತಿ ತೆರಿಗೆದಾರರಿಗೆ ಹೆಚ್ಚು ಇಷ್ಟವಾಗಬೇಕು ಎಂಬ ನಿಟ್ಟಿನಲ್ಲಿ 2023 ರ ಬಜೆಟ್‌ನಲ್ಲಿ ಇದನ್ನು ಪ್ರಸ್ತುತಪಡಿಸಲಾಗಿದೆ. ಈ ವ್ಯವಸ್ಥೆಯಡಿಯಲ್ಲಿ ಬರುವ ಪ್ರಸಿದ್ಧ ತೆರಿಗೆ ಪ್ರಯೋಜನವೂ ಇದಾಗಿದೆ. ಆದರೆ ಇದರ ಬಗ್ಗೆ ಕೊನೆಯ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಹೊಸ ತೆರಿಗೆ ವ್ಯವಸ್ಥೆ ನೀಡುವ ವಿನಾಯಿತಿಗಳ ಬಗ್ಗೆಯೂ ಅರಿವನ್ನು ಹೊಂದಿರಬೇಕು. ಹಾಗಿದ್ದರೆ ಹೊಸ ತೆರಿಗೆ ಪದ್ಧತಿಯಲ್ಲಿರುವ ಆರು ತೆರಿಗೆ ವಿನಾಯಿತಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.

ಮುಂದೆ ಓದಿ ...
  • Trending Desk
  • 2-MIN READ
  • Last Updated :
  • Share this:

    ಹೊಸ ತೆರಿಗೆ ಪದ್ಧತಿಯು ತೆರಿಗೆ (Tax) ಪಾವತಿದಾರರಿಗೆ ಸರಳವಾದ ತೊಡಕಿಲ್ಲದ ವಿಧಾನವಾಗಿ ಪರಿಚಯಗೊಂಡಿದ್ದರೂ ತೆರಿಗೆ ವಿನಾಯಿತಿಯಿಂದ ಹೊರಗುಳಿದಿಲ್ಲ ಎಂಬ ಅಂಶ ಇಲ್ಲಿ ಮುಖ್ಯವಾದುದು. ಹಣಕಾಸು ವರ್ಷ 2023-24 (Financial Year) ರಿಂದ, ಹೊಸ ತೆರಿಗೆ ಪದ್ಧತಿಯನ್ನು ಡೀಫಾಲ್ಟ್ (ಮೊದಲೇ ಆಯ್ಕೆಮಾಡಿದ) ತೆರಿಗೆ ವ್ಯವಸ್ಥೆಯಾಗಿ ಹೊಂದಿಸಲಾಗಿದೆ. ವಿವಿಧ ವಿನಾಯಿತಿಗಳನ್ನು ನೀಡುವ ಹಳೆಯ ತೆರಿಗೆ ವಿಧಾನವನ್ನು ಸ್ಪಷ್ಟವಾಗಿ ಆಯ್ಕೆಮಾಡದ ಹೊರತು ಈ ವ್ಯವಸ್ಥೆಯಡಿಯಲ್ಲಿ ಸಂಬಂಧಿತ ದರಗಳು ಹಾಗೂ ನಿಯಮಗಳು ತೆರಿಗೆದಾರರಿಗೆ ಅನ್ವಯವಾಗುತ್ತವೆ. ಆದಾಯ ತೆರಿಗೆ ಇಲಾಖೆಯು ಇತ್ತೀಚೆಗೆ ಬಿಡುಗಡೆ ಮಾಡಿದ ಅಧಿಕೃತ ತೆರಿಗೆ ಕ್ಯಾಲ್ಕುಲೇಟರ್ (Tax Calculator) ಕಡಿಮೆ ತೆರಿಗೆ ಹೊಣೆಗಾರಿಕೆಯೊಂದಿಗೆ ಆಡಳಿತವನ್ನು ಆಯ್ಕೆ ಮಾಡಲು ವ್ಯಕ್ತಿಗಳಿಗೆ ಸೂಕ್ತ ಮಾರ್ಗದರ್ಶಿಯಾಗಿದೆ ಎಂಬುದಾಗಿ ವರದಿಗಳು ತಿಳಿಸಿವೆ.


    ಆದರೆ ಇದರ ಬಗ್ಗೆ ಕೊನೆಯ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಹೊಸ ತೆರಿಗೆ ವ್ಯವಸ್ಥೆ ನೀಡುವ ವಿನಾಯಿತಿಗಳ ಬಗ್ಗೆಯೂ ಅರಿವನ್ನು ಹೊಂದಿರಬೇಕು. ಹಾಗಿದ್ದರೆ ಹೊಸ ತೆರಿಗೆ ಪದ್ಧತಿಯಲ್ಲಿರುವ ಆರು ತೆರಿಗೆ ವಿನಾಯಿತಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.


    ರೂ 50,000 ದ ಸ್ಟ್ಯಾಂಡರ್ಡ್ ಡಿಡಕ್ಶನ್


    ಹೊಸ ತೆರಿಗೆ ಪದ್ಧತಿ ತೆರಿಗೆದಾರರಿಗೆ ಹೆಚ್ಚು ಇಷ್ಟವಾಗಬೇಕು ಎಂಬ ನಿಟ್ಟಿನಲ್ಲಿ 2023 ರ ಬಜೆಟ್‌ನಲ್ಲಿ ಇದನ್ನು ಪ್ರಸ್ತುತಪಡಿಸಲಾಗಿದೆ. ಈ ವ್ಯವಸ್ಥೆಯಡಿಯಲ್ಲಿ ಬರುವ ಪ್ರಸಿದ್ಧ ತೆರಿಗೆ ಪ್ರಯೋಜನವೂ ಇದಾಗಿದೆ. ಇದನ್ನು ಪೂರ್ವನಿಯೋಜಿತವಾಗಿ ನೀಡಲಾಗುತ್ತದೆ; ಈ ಕಡಿತವನ್ನು ಕ್ಲೈಮ್ ಮಾಡಲು ನೀವು ಯಾವುದೇ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಇಲ್ಲ.


    ಇದನ್ನೂ ಓದಿ: ನೌಕರರ ಭವಿಷ್ಯ ನಿಧಿ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ, ಹೆಚ್ಚಿನ ಪಿಂಚಣಿ ಬೇಕಾದ್ರೆ ಹೀಗೆ ಮಾಡಿ


    ಇನ್ನು ಎಲ್ಲಾ ತೆರಿಗೆ ಪಾವತಿದಾರರು ಈ ವ್ಯವಸ್ಥೆಯಡಿಯಲ್ಲಿ ಬರುವುದಿಲ್ಲ ಎಂಬುದು ಗಮನಿಸಬೇಕಾದ ಅಂಶವಾಗಿದೆ. ಹಳೆಯ ಪದ್ಧತಿಯಲ್ಲಿ ನೌಕರರು ಹಾಗೂ ಪಿಂಚಣಿದಾರರಿಗೆ ಈ ವ್ಯವಸ್ಥೆ ಸೀಮಿತವಾಗಿದೆ. ವ್ಯಾಪಾರಸ್ಥರು ಅಥವಾ ಸ್ವಯಂ ಉದ್ಯೋಗಿ ವೃತ್ತಿಪರರು ತೆರಿಗೆ ಕಡಿತ ಪ್ರಯೋಜವನ್ನು ಪಡೆದುಕೊಳ್ಳಲಾಗುವುದಿಲ್ಲ. ಕುಟುಂಬ ಪಿಂಚಣಿದಾರರು (ಪಿಂಚಣಿಗೆ ಅರ್ಹರಾಗಿರುವ ನಿವೃತ್ತಿಯ ಮರಣದ ನಂತರ ಪಿಂಚಣಿಗಳನ್ನು ಪಡೆಯುವವರು) ಸಹ ಈ ಕಡಿತವನ್ನು ಪಡೆಯಬಹುದು.


    ಉದ್ಯೋಗಿಗಳ NPS ಗೆ ಉದ್ಯೋಗದಾತರ ಕೊಡುಗೆ


    ಇದು ಹೊಸ ಹಾಗೂ ಹಳೆಯ ತೆರಿಗೆ ಪದ್ಧತಿಯಲ್ಲಿ ಬರುತ್ತದೆ. ಇತರ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ-ಸಂಯೋಜಿತ ತೆರಿಗೆ ವಿನಾಯಿತಿಗಳು - ಸೆಕ್ಷನ್ 80C ಅಡಿಯಲ್ಲಿ ರೂ 1.5 ಲಕ್ಷ ಮತ್ತು 80CCD (1B) ಅಡಿಯಲ್ಲಿ ಈ ತೆರಿಗೆ ವಿಧವನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಗೆ (NPS) ಉದ್ಯೋಗಿಗಳ ಮೂಲ ವೇತನದ 10 ಪ್ರತಿಶತದಷ್ಟು (ಸರ್ಕಾರಿ ಉದ್ಯೋಗಿಗಳಲ್ಲಿ 14 ಪ್ರತಿಶತ) ಮತ್ತು ತುಟ್ಟಿ ಭತ್ಯೆಯನ್ನು ಸೆಕ್ಷನ್ 80CCD(2) ಅಡಿಯಲ್ಲಿ ಕಡಿತವಾಗಿ ಅನುಮತಿಸಲಾಗಿದೆ.


    ಆದಾಗ್ಯೂ, ಉದ್ಯೋಗದಾತರಿಂದ ಪಡೆಯುವ ಪ್ರಯೋಜನಗಳ ಮೇಲಿನ ತೆರಿಗೆ-ಮುಕ್ತ ಮಿತಿಯನ್ನು ವರ್ಷಕ್ಕೆ 7.5 ಲಕ್ಷ ರೂ ಗೆ ಸೀಮಿತಗೊಳಿಸಲಾಗಿದೆ. ಒಟ್ಟು ಪ್ರಯೋಜನಗಳು ಈ ಮಿತಿಯನ್ನು ಉಲ್ಲಂಘಿಸಿದರೆ, ಹೆಚ್ಚುವರಿ ಮೊತ್ತವನ್ನು ಉದ್ಯೋಗಿಗಳ ತೆರಿಗೆ ವಿಧಿಸಬಹುದಾದ ಮೇಲು ಸಂಪಾದನೆ ಎಂದು ಪರಿಗಣಿಸಲಾಗುತ್ತದೆ.


    ಸಾಂಕೇತಿಕ ಚಿತ್ರ


    ಮೂಲ ವೇತನದ 12% ದವರೆಗೆ ಉದ್ಯೋಗದಾತರ EPF ಕೊಡುಗೆ


    ಉದ್ಯೋಗದಾತರು ನಿಮ್ಮ ಮೂಲ ವೇತನದ 12 ಪ್ರತಿಶತವನ್ನು ನಿಮ್ಮ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಖಾತೆಗೆ ಕೊಡುಗೆ ನೀಡುತ್ತಾರೆ. ಉದ್ಯೋಗದಾತರಿಂದ ನೀವು ಪಡೆಯುವ ಒಟ್ಟು ನಿವೃತ್ತಿ ಪ್ರಯೋಜನಗಳು ಒಂದು ವರ್ಷದಲ್ಲಿ ರೂ 7.5-ಲಕ್ಷದ ಮಿತಿಯನ್ನು ದಾಟದಿರುವವರೆಗೆ ಈ ಮೊತ್ತವು ತೆರಿಗೆಯಿಂದ ವಿನಾಯಿತಿ ಪಡೆದಿರುತ್ತದೆ.


    ಜೀವ ವಿಮೆ ಮೆಚ್ಯೂರಿಟಿ ಆದಾಯದ ಮೇಲೆ ತೆರಿಗೆ ವಿನಾಯಿತಿ


    ಹೂಡಿಕೆ ಆಧಾರಿತ ಜೀವ ವಿಮಾ ಪಾಲಿಸಿಗಳಿಗೆ ನಿವ್ವಳ ಆದಾಯವಿರುವ ವ್ಯಕ್ತಿಗಳು ಆದ್ಯತೆ ನೀಡುತ್ತಾರೆ. ತೆರಿಗೆ-ಮುಕ್ತ ಮೆಚುರಿಟಿ ಆದಾಯವನ್ನು ಲಾಭಕರ ಎಂದೇ ಪರಿಗಣಿಸುತ್ತಾರೆ ಹಾಗಾಗಿ ಈ ಪ್ರಯೋಜನವು ಎರಡೂ ತೆರಿಗೆ ಪದ್ಧತಿಗಳಲ್ಲಿ ಲಭ್ಯವಿದೆ.


    ಬಾಡಿಗೆ ಆದಾಯದ ಮೇಲೆ ಪ್ರಮಾಣಿತ ಕಡಿತ


    ನೀವು ಬಾಡಿಗೆಗೆ ನೀಡಿದ ಆಸ್ತಿಯನ್ನು ಹೊಂದಿದ್ದರೆ, ಈ ಆಸ್ತಿಯ ವಾರ್ಷಿಕ ಮೌಲ್ಯದ ವಿರುದ್ಧ 30% ದಷ್ಟು ಪ್ರಮಾಣಿತ ಕಡಿತವನ್ನು ನೀವು ಕ್ಲೈಮ್ ಮಾಡಬಹುದು.




    PPF ಅಥವಾ ಸುಕನ್ಯಾ ಸಮೃದ್ಧಿ ಯೋಜನಾ ಮೆಚ್ಯೂರಿಟಿ ಆದಾಯದ ಮೇಲೆ ತೆರಿಗೆ ಪಾವತಿ ಇಲ್ಲ


    ಸಾರ್ವಜನಿಕ ಭವಿಷ್ಯ ನಿಧಿ (PPF) ಮತ್ತು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಮಾಡಿದ ಹೂಡಿಕೆಯಿಂದ ಮೆಚುರಿಟಿ ಆದಾಯದ ಮೇಲೆ ನೀವು ತೆರಿಗೆ ಪಾವತಿಸಬೇಕಾಗಿಲ್ಲ.


    ಹೊಸ ತೆರಿಗೆ ಪದ್ಧತಿ ಅಡಿಯಲ್ಲಿ, ಈ ಖಾತೆಗಳಲ್ಲಿ ಮಾಡಿದ ಹೂಡಿಕೆಗಳು ಹಳೆಯ ತೆರಿಗೆ ಪದ್ಧತಿ ಒದಗಿಸುವ 1.5 ಲಕ್ಷ ರೂ.ವರೆಗಿನ ಸೆಕ್ಷನ್ 80C ಕಡಿತಗಳಿಗೆ ಅರ್ಹವಾಗಿರುವುದಿಲ್ಲ.

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು