• Home
  • »
  • News
  • »
  • business
  • »
  • Union Budget: ಹೊಸ ತೆರಿಗೆ ಪದ್ಧತಿ ಹೇಗಿರಲಿದೆ? ಆದಾಯ ತೆರಿಗೆ ಕುರಿತು ನೀವು ತಿಳಿಯಬೇಕಾದ ಪ್ರಮುಖ ಮಾಹಿತಿಗಳಿವು

Union Budget: ಹೊಸ ತೆರಿಗೆ ಪದ್ಧತಿ ಹೇಗಿರಲಿದೆ? ಆದಾಯ ತೆರಿಗೆ ಕುರಿತು ನೀವು ತಿಳಿಯಬೇಕಾದ ಪ್ರಮುಖ ಮಾಹಿತಿಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Union Budget: 2020ರ ಬಜೆಟ್‌ನಲ್ಲಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಹೊಸ ತೆರಿಗೆ ಪದ್ಧತಿಯನ್ನು ಘೋಷಿಸಿದ್ದರು. ಹೊಸ ತೆರಿಗೆ ಪದ್ಧತಿಯು ತೆರಿಗೆದಾರರಿಗೆ ಒಂದು ಆಯ್ಕೆ ಆಗಿದ್ದು, ಇಲ್ಲಿ ಕಡಿಮೆ ತೆರಿಗೆ ದರವನ್ನು ಪಾವತಿಸಲಾಗುತ್ತದೆ.

  • Trending Desk
  • Last Updated :
  • New Delhi, India
  • Share this:

ಬಜೆಟ್​ಗೆ ಸಂಬಂಧಿಸಿದಂತೆ ಕಳೆದ ಕೆಲವು ವರ್ಷಗಳಲ್ಲಿ ಪ್ರಧಾನಿ ಮೋದಿ (Narendra Modi ) ನೇತೃತ್ವದ ಸರ್ಕಾರವು ಹಲವಾರು ಬದಲಾವಣೆಗಳನ್ನು ಮಾಡಿದೆ. ಅಂತೆಯೇ ಈ ಬಾರಿ ಘೋಷಣೆಯಾಗಲಿರುವ ಬಜೆಟ್‌ನಲ್ಲಿ (Union budget) ಜನ ತೆರಿಗೆಗೆ ಸಂಬಂಧ ಪಟ್ಟ ಕೆಲ ದೊಡ್ಡ ಬದಲಾವಣೆಗಳನ್ನು ಎದುರು ನೋಡುತ್ತಿದ್ದಾರೆ ಎನ್ನಬಹುದು. 2020ರ ಬಜೆಟ್‌ನಲ್ಲಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಹೊಸ ತೆರಿಗೆ ಪದ್ಧತಿಯನ್ನು ಘೋಷಿಸಿದ್ದರು. ಹೊಸ ತೆರಿಗೆ ಪದ್ಧತಿಯು ತೆರಿಗೆದಾರರಿಗೆ ಒಂದು ಆಯ್ಕೆ ಆಗಿದ್ದು, ಇಲ್ಲಿ ಕಡಿಮೆ ತೆರಿಗೆ ದರವನ್ನು ಪಾವತಿಸಲಾಗುತ್ತದೆ. ಆದರೆ, ಇದರಲ್ಲಿ ಬೇರೆ ಯಾವುದೇ ವಿನಾಯಿತಿ ನೀಡಲಾಗಿಲ್ಲ. ಹಳೆ ತೆರಿಗೆ ಪದ್ಧತಿಯ ಜೊತೆಗೆ ಹೊಸ ತೆರಿಗೆ ಪದ್ಧತಿಯನ್ನು ಕೂಡಾ ಸರ್ಕಾರ ಜಾರಿಗೆ ತಂದಿದ್ದು, ಇದರಲ್ಲಿ ತೆರಿಗೆಯಿಂದ ವಿನಾಯಿತಿ ಸಿಗುವುದಿಲ್ಲ. ಆದರೆ ಇದರಲ್ಲಿ ತೆರಿಗೆ ಪ್ರಮಾಣ ಕಡಿಮೆ ಇರಲಿದೆ.


ತೆರಿಗೆ ಕಟ್‌ ಆಫ್:


ಈ ಯೋಜನೆಯು 5%, 10%, 15%, 20%, 25% ಮತ್ತು 30% ರ ಕಡಿಮೆ ತೆರಿಗೆ ದರಗಳನ್ನು ನೀಡುತ್ತದೆ. ಅಂದರೆ ಹೊಸ ತೆರಿಗೆ ಕ್ರಮದಲ್ಲಿ 2.5 ಲಕ್ಷದವರೆಗೆ ವಾರ್ಷಿಕ ಆದಾಯ ಹೊಂದಿರುವವರಿಗೆ ಯಾವುದೇ ತೆರಿಗೆ ಇಲ್ಲ.


ತದನಂತರ 2.5-5 ಲಕ್ಷದವರೆಗೆ ಆದಾಯ ಹೊಂದಿರುವವರು 5 ಪ್ರತಿಶತ ತೆರಿಗೆ ಪಾವತಿಸಬೇಕಾಗಿರುತ್ತದೆ. ಅದರಂತೆ 5-7.5 ಲಕ್ಷ ಆದಾಯದವರು 10%, 7.5-10 ಲಕ್ಷ ಆದಾಯದವರು 15%, 10-12.5 ಲಕ್ಷ ಆದಾಯದವರು 20%, 12.5-15 ಲಕ್ಷ ಆದಾಯದವರು 25% ಹಾಗೂ 15 ಲಕ್ಷಕ್ಕೂ ಹೆಚ್ಚು ಆದಾಯ ಇರುವವರು 30% ತೆರಿಗೆ ಪಾವತಿಸಬೇಕು.


ಇದನ್ನೂ ಓದಿ: Agriculture: ಕಡಿಮೆ ಖರ್ಚಿನಲ್ಲಿ ಈ ಬೆಳೆಗಳನ್ನು ಬೆಳೆದರೆ ದುಪ್ಪಟ್ಟು ಲಾಭ ಸಿಗೋದು ಗ್ಯಾರಂಟಿ


ಹಳೆಯ ತೆರಿಗೆ ಕ್ರಮ:


ಹಳೆಯ ತೆರಿಗೆ ಪದ್ಧತಿಯಲ್ಲಿ 2.5 ಲಕ್ಷದವರೆಗೆ ವಾರ್ಷಿಕ ಆದಾಯ ಹೊಂದಿರುವವರಿಗೆ ಯಾವುದೇ ತೆರಿಗೆ ಇಲ್ಲ. ತದನಂತರ 2.5-5 ಲಕ್ಷದವರೆಗೆ ಆದಾಯ ಹೊಂದಿರುವವರು 5 ಪ್ರತಿಶತ ತೆರಿಗೆ ಪಾವತಿಸಬೇಕಾಗಿರುತ್ತದೆ. 5-10 ಲಕ್ಷ ಆದಾಯದವರು 20%, 10 ಲಕ್ಷಕ್ಕೂ ಹೆಚ್ಚು ಆದಾಯ ಇರುವವರು 30% ತೆರಿಗೆ ಪಾವತಿಸಬೇಕು.


ವಿನಾಯಿತಿಗಳಿಲ್ಲದೆ, ವೈಯಕ್ತಿಕ ಆದಾಯ ತೆರಿಗೆ ಪದ್ಧತಿಗೆ ಸರಳವಾದ ಬದಲಾವಣೆಯನ್ನು ಪ್ರಚೋದಿಸಲು ಏನು ಮಾಡಬಹುದೆಂಬ ಲೆಕ್ಕಾಚಾರ ನೀತಿಯು ಜೋರಾದ ಚರ್ಚೆಯಾಗಿದೆ. ಇದಕ್ಕಾಗಿ ತೆರಿಗೆಗೆ ಒಳಪಡುವ ಆದಾಯದ ಮಿತಿಯನ್ನು ₹2.5 ಲಕ್ಷದಿಂದ ಹೆಚ್ಚಿಸುವುದು ಅಥವಾ ತೆರಿಗೆಯನ್ನು ಕಡಿಮೆ ಮಾಡಲು ತೆರಿಗೆ ಸ್ಲ್ಯಾಬ್‌ಗಳನ್ನು ವಿಸ್ತರಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ. ಹಾಗೆಯೇ ಆರೋಗ್ಯ ವಿಮೆ ಅಥವಾ ವಸತಿಗಳಂತಹ ಕೆಲವು ಸೀಮಿತ ಕಡಿತಗಳನ್ನು ಅನುಮತಿಸಲು ಸಹ ಸಲಹೆ ನೀಡಲಾಗಿದೆ.
ಹೊಸ ತೆರೆಗೆ ನೀತಿ ವಿಚಾರ:


ಹಣಕಾಸು ಸಚಿವಾಲಯದ ಅಧಿಕಾರಿಗಳು ಈ ಹಿಂದೆ, ಹೊಸ ಪದ್ಧತಿಯನ್ನು ಅದರ ಹೆಚ್ಚಿನ ಸ್ವೀಕಾರಕ್ಕಾಗಿ ಪುನಃ ವಿಮರ್ಶೆ ಮಾಡುವ ಅಗತ್ಯವನ್ನು ಹೇಳಿದ್ದರು. ಇದೇ ರೀತಿಯ ಅಭಿಪ್ರಾಯವನ್ನು ಪ್ರಧಾನ ಮಂತ್ರಿಯ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಬಿಬೆಕ್ ಡೆಬ್ರಾಯ್ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ವ್ಯಕ್ತಪಡಿಸಿದ್ದಾರೆ. ಅವರ ಪ್ರಕಾರ, ‘ವಿನಾಯಿತಿ-ಕಡಿಮೆ ವ್ಯವಸ್ಥೆಗೆ ಜನರು ಹೆಚ್ಚು ಸ್ವಯಂಪ್ರೇರಿತರಾಗಿಲ್ಲ, ಇದನ್ನು ಪ್ರೋತ್ಸಾಹಿಸಲು ಕೆಲವು ಮಾರ್ಗಗಳನ್ನು ಕಂಡುಹಿಡಿಯಬೇಕು‘ ಎಂದು ಡೆಬ್ರಾಯ್ ಹೇಳಿದರು.


ಹಳೆಯ ತೆರಿಗೆ ಪದ್ಧತಿಯ ಅಡಿಯಲ್ಲಿ ಎಲ್ಲಾ ಕಡಿತಗಳನ್ನು ಕ್ಲೈಮ್ ಮಾಡಿದ ನಂತರ ಪರಿಣಾಮಕಾರಿಯಾದ ತೆರಿಗೆ ಅನೇಕ ತೆರಿಗೆದಾರರಿಗೆ ಕಡಿಮೆಯಾಗಿದೆ ಎಂದು ತೆರಿಗೆ ತಜ್ಞರು ಹೇಳುತ್ತಾರೆ. ಹೊಸ ತೆರಿಗೆ ಪದ್ಧತಿಯನ್ನು ಹೆಚ್ಚು ಆಕರ್ಷಕವಾಗಿಸಲು, ಸರಳೀಕೃತ ಪದ್ಧತಿಯನ್ನು ಆಯ್ಕೆ ಮಾಡಲು ಜನರನ್ನು ಉತ್ತೇಜಿಸಲು ಸ್ಲ್ಯಾಬ್ ದರಗಳನ್ನು ಮೇಲ್ಮುಖವಾಗಿ ಪರಿಷ್ಕರಿಸಬೇಕು ಮತ್ತು ಅಂತಿಮವಾಗಿ ತೆರಿಗೆ ವಿನಾಯಿತಿಗಳನ್ನು ತೆಗೆದುಹಾಕಬೇಕು, ಇದು ಒಟ್ಟಾರೆ ತೆರಿಗೆ ಶಾಸನವನ್ನು ಸಂಕೀರ್ಣಗೊಳಿಸುತ್ತದೆ" ಎಂದು ತೆರಿಗೆ ತಜ್ಞವಿಕಾಸ್ ವಾಸಲ್ ಹೇಳಿದ್ದಾರೆ.

Published by:shrikrishna bhat
First published: