LIC IPO: ಮೆಗಾ-ಐಪಿಒದಲ್ಲಿ ಹೂಡಿಕೆ ಮಾಡುವ ಮೊದಲು ನೀವು ತಿಳಿದುಕೊಳ್ಳಬೇಕಾದ 10 ಪ್ರಮುಖ ವಿಷಯಗಳು ಇಲ್ಲಿದೆ

ಭಾರತೀಯ ಜೀವ ವಿಮಾ ನಿಗಮದ (LIC) ಬಹು ನಿರೀಕ್ಷಿತ ಐಪಿಒ (IPO)ಮಾರ್ಚ್ 11ರಿಂದ ಆರಂಭವಾಗುವ ನಿರೀಕ್ಷೆ ಇದೆ. ಇದರ ಕುರಿತಂತೆ ಹೆಚ್ಚಿನ ಮಾಹಿತಿ ಇಲ್ಲಿದೆ ಓದಿ...

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಸರ್ಕಾರಿ ಸ್ವಾಮ್ಯದ ವಿಮಾ ಗುಂಪು ಮತ್ತು ಹೂಡಿಕೆ ಕಂಪನಿ, ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LIC), ಕಳೆದ ವಾರ, ಆರಂಭಿಕ ಸಾರ್ವಜನಿಕ ಕೊಡುಗೆಯ IPO ಮೂಲಕ ಹಣವನ್ನು ಸಂಗ್ರಹಿಸಲು ಸೆಬಿ (Sebi) ಗೆ ಡ್ರಾಫ್ಟ್ ರೆಡ್ ಹೆರ್ರಿಂಗ್ ಪ್ರಾಸ್ಪೆಕ್ಟಸ್ (DRHP) ಅನ್ನು ಸಲ್ಲಿಸಿತು. IPO ಭಾರತ ಸರ್ಕಾರದಿಂದ 316.25 ಮಿಲಿಯನ್ ಷೇರುಗಳ ಮಾರಾಟದ ಪ್ರಸ್ತಾಪವನ್ನು ಒಳಗೊಂಡಿದೆ. LIC IPO ಇಲ್ಲಿಯವರೆಗೆ ಭಾರತದಲ್ಲಿನ ಅತಿದೊಡ್ಡ IPO ಆಗುವ ಸಾಧ್ಯತೆಯಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ…

  1) LIC IPO: ಅದು ಯಾವಾಗ ಸಂಭವಿಸುತ್ತದೆ..?

  31.6 ಕೋಟಿಗೂ ಹೆಚ್ಚು ಷೇರುಗಳು ಅಥವಾ ಸರ್ಕಾರದ ಶೇಕಡ 5 ರಷ್ಟು ಷೇರುಗಳ ಆರಂಭಿಕ ಸಾರ್ವಜನಿಕ ಕೊಡುಗೆಯು ಮಾರ್ಚ್‌ನಲ್ಲಿ ಡಿ-ಸ್ಟ್ರೀಟ್‌ಗೆ ಕಾಲಿಡುವ ಸಾಧ್ಯತೆಯಿದೆ ಮತ್ತು ವಿಮಾ ಕಂಪನಿಯ ನೌಕರರು ಮತ್ತು ಪಾಲಿಸಿದಾರರು ಫ್ಲೋರ್‌ ಬೆಲೆಗಿಂತ ರಿಯಾಯಿತಿಯನ್ನು ಪಡೆಯುತ್ತಾರೆ ಎಂದು ತಿಳಿದುಬಂದಿದೆ.

  2) LIC IPO: ಪಾಲಿಸಿದಾರರಿಗೆ ಇದರಲ್ಲಿ ಏನಿದೆ..?

  ಪ್ರಾಸ್ಪೆಕ್ಟಸ್ ಪ್ರಕಾರ, ದೇಶದ ಅತಿದೊಡ್ಡ ವಿಮಾದಾರರ ಉದ್ಯೋಗಿಗಳು ಮತ್ತು ಪಾಲಿಸಿದಾರರು ಫ್ಲೋರ್‌ ಬೆಲೆಯ ಮೇಲೆ ರಿಯಾಯಿತಿಯನ್ನು ಪಡೆಯುತ್ತಾರೆ. ಪಾಲಿಸಿದಾರರಿಗೆ ಕಾಯ್ದಿರಿಸಲು ಯೋಜಿಸಲಾದ ಭಾಗವು ಗರಿಷ್ಠ 10 ಪ್ರತಿಶತದವರೆಗೆ ಹೋಗಬಹುದು.

  "ಅರ್ಹ ಪಾಲಿಸಿದಾರರಿಗೆ ಮೀಸಲಾತಿಗಳ ಒಟ್ಟು ಮೊತ್ತವು ಆಫರ್ ಗಾತ್ರದ 10 ಪ್ರತಿಶತವನ್ನು ಮೀರಬಾರದು" ಎಂದು DRHP ಹೇಳಿದೆ. ಈ ಪೈಕಿ ಉದ್ಯೋಗಿಗಳ ಕೋಟಾವನ್ನು ಶೇಕಡಾ 5ಕ್ಕೆ ಮಿತಿಗೊಳಿಸಲಾಗುತ್ತದೆ.

  ಇದನ್ನೂ ಓದಿ: Olympics: 2023ರಲ್ಲಿ IOC Session ನಿರ್ವಹಿಸುವ ಹೊಣೆ ಭಾರತದ ಹೆಗಲಿಗೆ! ಇಲ್ಲಿದೆ ಸಂಪೂರ್ಣ ಮಾಹಿತಿ

  3) LIC IPO: ಯಾವ ಪಾಲಿಸಿದಾರರು ಅರ್ಹರು..?

  ಬಹು ನಿರೀಕ್ಷಿತ LIC IPO ನಲ್ಲಿ ಹೂಡಿಕೆ ಮಾಡಲು, ಪಾಲಿಸಿದಾರರು i) ತಮ್ಮ PAN ಅನ್ನು LIC ಪೋರ್ಟಲ್‌ನಲ್ಲಿ ಅಪ್‌ಡೇಟ್‌ ಮಾಡಬೇಕು ಹಾಗೂ ii) ಪಾಲಿಸಿದಾರರು ಡಿಮ್ಯಾಟ್ ಖಾತೆಯನ್ನು ಹೊಂದಿರಬೇಕು.

  4) LIC IPO: ಪಾಲಿಸಿದಾರರಿಗೆ ರಿಯಾಯಿತಿ

  ಸಂಭಾವ್ಯ ರಿಯಾಯಿತಿಯ ಪ್ರಮಾಣವನ್ನು ಬಿಡ್ ತೆರೆಯುವ ದಿನಾಂಕದ ಸಮೀಪದಲ್ಲಿ, ಕನಿಷ್ಠ 2 ಕೆಲಸದ ದಿನಗಳ ಮೊದಲು ನಿರ್ದಿಷ್ಟಪಡಿಸಲಾಗುತ್ತದೆ.

  LIC ಕಾಯಿದೆ, 1956 ಗೆ ಕಳೆದ ವರ್ಷ ಮಾಡಿದ ತಿದ್ದುಪಡಿಯ ಪ್ರಕಾರ, IPO ದಲ್ಲಿ ಇದೇ ಮೊದಲನೆ ಬಾರಿಗೆ ಪಾಲಿಸಿದಾರರ ಕೋಟಾ ಆರಂಭಿಸಿದ್ದು, ಕೇಂದ್ರ ಸರ್ಕಾರವು LIC ಅನ್ನು ಕಾಯ್ದಿರಿಸಿದ ವರ್ಗಗಳಲ್ಲಿ ಒಂದಾಗಿ ನೇಮಿಸಲು LIC ಗೆ ಅನುಮತಿ ನೀಡಿದ ನಂತರ ರಚಿಸಲಾಗಿದೆ.

  5) LIC IPO: ಪಾಲಿಸಿದಾರರು PAN-LIC ಸ್ಥಿತಿಯನ್ನು ಹೇಗೆ ಚೆಕ್‌ ಮಾಡಬಹುದು..?

  https://linkpan.licindia.in/UIDSeedingWebApp/getPolicyPANStatus ಗೆ ಭೇಟಿ ನೀಡಿ.

  ಪಾಲಿಸಿ ಸಂಖ್ಯೆ, ಹುಟ್ಟಿದ ದಿನಾಂಕ ಮತ್ತು ಪ್ಯಾನ್ ಮಾಹಿತಿ. ಹಾಗೆಯೇ ಕ್ಯಾಪ್ಚಾವನ್ನು ನಮೂದಿಸಿ. ನಂತರ ಸಬ್ಮಿಟ್‌ (Submit) ಬಟನ್ ಒತ್ತಿರಿ.

  6) LIC IPO: ಪಾಲಿಸಿ ಸಂಖ್ಯೆಯನ್ನು ಪ್ಯಾನ್‌ಗೆ ಲಿಂಕ್ ಮಾಡುವುದು ಹೇಗೆ..?

  ಪಾಲಿಸಿದಾರರು ತಮ್ಮ ಪಾಲಿಸಿಗಳನ್ನು ಆನ್‌ಲೈನ್ ವಿಧಾನದ ಮೂಲಕ ತಮ್ಮ ಪ್ಯಾನ್‌ನೊಂದಿಗೆ ಲಿಂಕ್ ಮಾಡಬಹುದು. ಆದರೂ, ತಂತ್ರಜ್ಞಾನದ ಬಗ್ಗೆ ಚೆನ್ನಾಗಿ ತಿಳಿದಿರದ ಪಾಲಿಸಿದಾರರು ತಮ್ಮ ಏಜೆಂಟರಿಗೆ ಅದನ್ನು ಮಾಡಲು ಕೇಳಬಹುದು.

  7) ಎಲ್ಐಸಿ ಐಪಿಒ: ಮಾರುಕಟ್ಟೆ ಪಾಲು

  ಭಾರತದಲ್ಲಿನ ಜೀವ ವಿಮಾ ಮಾರುಕಟ್ಟೆಯಲ್ಲಿ LIC ಬಹುಪಾಲು ಪಾಲನ್ನು ಹೊಂದಿದೆ. IPO ನಲ್ಲಿನ ಪಾಲನ್ನು ಮಾರಾಟ ಮಾಡುವುದರಿಂದ 12 ಬಿಲಿಯನ್‌ ಡಾಲರ್‌ನಷ್ಟು ಹಣವನ್ನು ಸಂಗ್ರಹಿಸಲು ಮೋದಿ ಸರ್ಕಾರ ಆಶಿಸಿದೆ. ಈ ಮೂಲಕ ಈ ಹಣಕಾಸಿನ ವರ್ಷದಲ್ಲಿ ಕೊರತೆಯ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸುತ್ತದೆ.

  2020ರ ಹೊತ್ತಿಗೆ ಒಟ್ಟು ಲಿಖಿತ ಪ್ರೀಮಿಯಂನ ಶೇಕಡಾ 64.1ಕ್ಕಿಂತ ಹೆಚ್ಚು ಗೃಹ-ಮಾರುಕಟ್ಟೆ ಷೇರಿಗೆ ಬಂದಾಗ LIC ಪ್ರಪಂಚದಲ್ಲೇ ಅತಿ ದೊಡ್ಡದಾಗಿದೆ. ಅಲ್ಲದೆ, ಈಕ್ವಿಟಿಯಲ್ಲಿ ಶೇಕಡಾ 82 ರಷ್ಟು ಹೆಚ್ಚಿನ ಲಾಭವನ್ನು ನೀಡುತ್ತದೆ. ಇದರೊಂದಿಗೆ ಜೀವ ವಿಮಾ ಪ್ರೀಮಿಯಂ ವಿಷಯದಲ್ಲಿ ಮೂರನೇ ಅತಿ ದೊಡ್ಡದು ಎಂದು ಕ್ರಿಸಿಲ್ ವರದಿ ಹೇಳುತ್ತದೆ.

  8) LIC IPO: ಹಣಕಾಸು

  LIC 2021-22 ರ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ 1,437 ಕೋಟಿ ರೂಪಾಯಿಗಳ ತೆರಿಗೆಯ ನಂತರದ ಲಾಭವನ್ನು ವರದಿ ಮಾಡಿದೆ. ಇದಕ್ಕೆ ಹೋಲಿಸಿದರೆ, ಹಿಂದಿನ ವರ್ಷದ ಅವಧಿಯಲ್ಲಿ 6.14 ಕೋಟಿ ರೂಪಾಯಿಗಳಷ್ಟು ಮಾತ್ರ ಲಾಭ ಗಳಿಸಿತ್ತು. ಅದರ ಹೊಸ ವ್ಯಾಪಾರ ಪ್ರೀಮಿಯಂ ಬೆಳವಣಿಗೆಯ ದರವು H1FY22 ನಲ್ಲಿ 554.1% ರಷ್ಟಿದೆ. ಇದು ಹಿಂದಿನ ಹಣಕಾಸು ವರ್ಷದ ಅನುಗುಣವಾದ ಅವಧಿಯಲ್ಲಿ 394.76% ರಷ್ಟಿತ್ತು ಎಂದು ತಿಳಿದುಬಂದಿದೆ.

  9) LIC IPO: ಎಂಬೆಡೆಡ್ ಮೌಲ್ಯ

  ಎಂಬೆಡೆಡ್ ಮೌಲ್ಯವನ್ನು 5.39 ಟ್ರಿಲಿಯನ್‌ ರೂ.ಗೆ ನಿಗದಿಪಡಿಸಲಾಗಿದೆ ಎಂದು DRHP ಮಾಹಿತಿ ನೀಡಿದೆ. ಸಾಮಾನ್ಯವಾಗಿ, ಕಂಪನಿಗಳು ಎಂಬೆಡೆಡ್‌ ಮೌಲ್ಯಕ್ಕಿಂತ (EV) ಸುಮಾರು 3-4 ಪಟ್ಟು ವ್ಯಾಪಾರ ಮಾಡುತ್ತವೆ.

  ಇದನ್ನೂ ಓದಿ: Paytm: ಯಾರಿಗೆ ಸಿಗುತ್ತೆ 5 ಲಕ್ಷ ಸಾಲ? ಹೀಗೆ ಮಾಡಿದ್ರೆ ನೀವೂ ಪಡೆಯಬಹುದು ಲೋನ್

  10) ಎಲ್ಐಸಿ ಐಪಿಒ: ಸರ್ಕಾರ ಎಷ್ಟು ಪಾಲನ್ನು ಮಾರಾಟ ಮಾಡುತ್ತಿದೆ..?

  ಒಟ್ಟು ಬಂಡವಾಳದ ಶೇ.5ರಷ್ಟನ್ನು ಷೇರು ರೂಪದಲ್ಲಿ ಮಾರಾಟ ಮಾಡುವುದಾಗಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಹಾಗಾಗಿ ಕಂಪನಿಯಲ್ಲಿ ಶೇ.95ರಷ್ಟು ಪಾಲನ್ನು ಉಳಿಸಿಕೊಳ್ಳಲಿದೆ.

  ಭಾರತದಲ್ಲಿ 245 ಜೀವ ವಿಮಾ ಕಂಪನಿಗಳನ್ನು ವಿಲೀನಗೊಳಿಸಿ ರಾಷ್ಟ್ರೀಕರಣಗೊಳಿಸುವ ಮೂಲಕ ಎಲ್ಐಸಿಯನ್ನು 5 ಕೋಟಿ ರೂ.ಗಳ ಆರಂಭಿಕ ಬಂಡವಾಳದೊಂದಿಗೆ ಸೆಪ್ಟೆಂಬರ್ 1, 1956 ರಂದು ರಚಿಸಲಾಯಿತು. ಬಹಳಷ್ಟು ಖಾಸಗಿ ಜೀವ ವಿಮಾದಾರರು ಈ ಸ್ಪರ್ಧೆಯಲ್ಲಿದ್ದರೂ ಸಹ, LIC ಪ್ರಬಲ ಜೀವ ವಿಮಾದಾರ ಕಂಪನಿಯಾಗೇ ಮುಂದುವರೆದಿದೆ.
  First published: