• Home
  • »
  • News
  • »
  • business
  • »
  • Melbourne: ದೂರದ ಆಸ್ಟ್ರೇಲಿಯಾದಲ್ಲಿ ಚಹಾ ಉದ್ಯಮ ಆರಂಭಿಸಿದ ಆಂಧ್ರದ ಯುವಕ, ಈಗ ಮಿಲಿಯನ್ ಡಾಲರ್ ಸಂಸ್ಥೆಯ ಮಾಲೀಕ

Melbourne: ದೂರದ ಆಸ್ಟ್ರೇಲಿಯಾದಲ್ಲಿ ಚಹಾ ಉದ್ಯಮ ಆರಂಭಿಸಿದ ಆಂಧ್ರದ ಯುವಕ, ಈಗ ಮಿಲಿಯನ್ ಡಾಲರ್ ಸಂಸ್ಥೆಯ ಮಾಲೀಕ

Business: ತನ್ನನ್ನು ತಾನು ಚಾಯ್‌ವಾಲಾ ಎಂದೇ ಕರೆಯಿಸಿಕೊಳ್ಳಲು ಇಷ್ಟಪಡುವ ಸಂಜಿತ್, ಚಹಾದ ವ್ಯವಹಾರವನ್ನು ಆರಂಭಿಸುವ ನಿರ್ಧಾರ ತಾಳಿದ್ದರು.

Business: ತನ್ನನ್ನು ತಾನು ಚಾಯ್‌ವಾಲಾ ಎಂದೇ ಕರೆಯಿಸಿಕೊಳ್ಳಲು ಇಷ್ಟಪಡುವ ಸಂಜಿತ್, ಚಹಾದ ವ್ಯವಹಾರವನ್ನು ಆರಂಭಿಸುವ ನಿರ್ಧಾರ ತಾಳಿದ್ದರು.

Business: ತನ್ನನ್ನು ತಾನು ಚಾಯ್‌ವಾಲಾ ಎಂದೇ ಕರೆಯಿಸಿಕೊಳ್ಳಲು ಇಷ್ಟಪಡುವ ಸಂಜಿತ್, ಚಹಾದ ವ್ಯವಹಾರವನ್ನು ಆರಂಭಿಸುವ ನಿರ್ಧಾರ ತಾಳಿದ್ದರು.

  • Share this:

ಕಾಫಿಯ ಸುವಾಸನೆಗೆ ಹೆಸರುವಾಸಿಯಾಗಿರುವ ಮೆಲ್ಬೋರ್ನ್  (Melbourne) ಇದೀಗ ಚಹಾ ಹಾಗೂ ಸಮೋಸಾದ ರುಚಿಗೆ ಮನಸೋತಿದೆ. ನೆಲ್ಲೂರಿನ ಸಂಜಿತ್ ಎಂಬ ಯುವಕ ಡ್ರಾಪ್‌ಔಟ್ (Dropout) ಚಾಯ್‌ವಾಲಾ ಹೆಸರಿನಲ್ಲಿ ಆರಂಭಿಸಿದ ಸಂಸ್ಥೆ ಒಂದು ವರ್ಷದಲ್ಲೇ ಮಿಲಿಯನ್ ಡಾಲರ್ ಕಂಪನಿಯಾಗಿ ರೂಪುಗೊಂಡಿದೆ. ಸಂಜಿತ್ ನಡೆಸಿದ ಈ ಉದ್ಯಮ ಹಾಗೂ ಇದು ಲಾಭದಾಯಕ ಸಂಸ್ಥೆಯಾಗಿ ರೂಪುಗೊಂಡಿದ್ದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಆಸ್ಟ್ರೇಲಿಯಾದ ಪ್ರತಿಷ್ಟಿತ ವಿಶ್ವವಿದ್ಯಾಲಯದಲ್ಲಿ ಬ್ಯುಸಿನೆಸ್ ಅಡ್ಮಿನಿಸ್ಟ್ರೇಶನ್ (BBA) ಪದವಿಯನ್ನು ಪೂರ್ಣಗೊಳಿಸುತ್ತಿದ್ದ ಸಂಜಿತ್ ಕೊಂಡಾ ಮುಂದಿನ ವಿದ್ಯಾಭ್ಯಾಸಕ್ಕಾಗಿ ಇಂಟರ್ನ್‌ಶಿಪ್‌ಗೆ ಅರ್ಜಿಸಲ್ಲಿಸುವ ಯೋಜನೆಯಲ್ಲಿದ್ದರು. ಆದರೆ ತನ್ನದೇ ವ್ಯವಹಾರವನ್ನು ಆರಂಭಿಸಬೇಕೆಂಬ ನಿರ್ಧಾರ ತಾಳಿದಾಗ ಕಾರ್ಪೋರೇಟ್ ಜಗತ್ತಿನಲ್ಲಿ ಕೈತುಂಬಾ ಸಂಬಳದ ಉದ್ಯೋಗವನ್ನು ಹೊಂದಬೇಕೆಂಬ ಇಚ್ಛೆ ಮರೆಯಾಗುತ್ತಾ ಹೋಯಿತು. ತನ್ನನ್ನು ತಾನು ಚಾಯ್‌ವಾಲಾ ಎಂದೇ ಕರೆಯಿಸಿಕೊಳ್ಳಲು ಇಷ್ಟಪಡುವ ಸಂಜಿತ್, ಚಹಾದ ವ್ಯವಹಾರವನ್ನು ಆರಂಭಿಸುವ ನಿರ್ಧಾರ ತಾಳಿದ್ದರು.


ಹೇಳಿಕೇಳಿ ವಿದೇಶ ಅದರಲ್ಲೂ ಸಂಜಿತ್ ವ್ಯವಹಾರ ಆರಂಭಿಸಲು ಹೊರಟ ಸ್ಥಳ ಮೇಲ್ಬೋರ್ನ್. ಈ ಸ್ಥಳ ಸುವಾಸಿತ ಕಾಫಿ ಹಾಗೂ ಕಾಫಿ ಪ್ರಿಯರ ಮೆಚ್ಚಿನ ತಾಣ. ಆದರೆ ತನ್ನ ನಿರ್ಧಾರದಲ್ಲಿ ಅಚಲನಾಗಿದ್ದ ಯುವಕ ಮೆಲ್ಬೋರ್ನ್ ನಿವಾಸಿಗಳಿಗೆ ತನ್ನ ಚಹಾ ಹಾಗೂ ರುಚಿಕರ ಸಮೋಸಾದ ಘಮವನ್ನು ಹರಡಿಸಿಯೇಬಿಟ್ಟಿದ್ದ. ಇದೀಗ ಮೆಲ್ಬೋರ್ನ್‌ವಾಸಿಗಳು ಕಾಫಿ ಬಿಟ್ಟು ಸಂಜಿತ್‌ರ ಚಹಾ ಹಾಗೂ ಸಮೋಸಾ ಸವಿಯಲು ಧಾವಿಸಿ ಬರುತ್ತಿದ್ದಾರೆ ಎಂದು ಹೇಳಿದರೂ ತಪ್ಪಾಗಲಾರದು. ಮಿಲಿಯನ್ (ಆಸ್ಟ್ರೇಲಿಯನ್) ಡಾಲರ್‌ ವ್ಯವಹಾರ ಮಾಡುವ ಸಂಜಿತ್‌ರ ಡ್ರಾಪ್‌ಔಟ್ ಚಾಯ್‌ವಾಲಾ ಕಂಪನಿ ವಿದೇಶದಲ್ಲಿ ಸಖತ್ತಾಗಿಯೇ ಧ್ವನಿ ಮಾಡುತ್ತಿದೆ.


ಮೆಲ್ಬೋರ್ನ್ ವಾಸಿಗಳಿಗೆ ಬಿಸಿ ಚಹಾ ಹಾಗೂ ಸಮೋಸ ಇಷ್ಟ


ಮೆಲ್ಬೋರ್ನ್‌ನ ಅತ್ಯಂತ ಜನಜಂಗುಳಿಯಿಂದ ಕೂಡಿದ ಪ್ರದೇಶವಾಗಿರುವ CBD (ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್) ಎಲಿಜಬೆತ್ ಸ್ಟ್ರೀಟ್‌ನಲ್ಲಿ ಭಾನುವಾರ ಕೂಡ ಗದ್ದಲವನ್ನು ಕಾಣಬಹುದು. ಇಲ್ಲಿ ಆಸ್ಟ್ರೇಲಿಯನ್ನರು ಮಾತ್ರವಲ್ಲದೆ ಭಾರತೀಯರು, ಹಿಸ್ಪಾನಿಕ್‌ಗಳ ದಂಡೇ ನೆರೆದಿರುತ್ತದೆ ಹಾಗೂ ಬೆಳಗ್ಗಿನ ಆಹ್ಲಾದಕರ ಬಿಸಿ ಬಿಸಿ ಚಹಾವನ್ನು ಸವಿಯುವುದನ್ನು ಕಾಣಬಹುದು.


ಇದನ್ನೂ ಓದಿ: ಮತ್ತಷ್ಟು ಕುಸಿದ ಚಿನ್ನದ ದರ, ಬೆಳ್ಳಿ ಕೊಂಚ ಏರಿಕೆ: ಹೀಗಿದೆ ಇಂದಿನ ರೇಟ್!


ಸಂಜಿತ್‌ಗೆ ಚಹಾ ಉದ್ಯಮದಲ್ಲಿ ಅದೃಷ್ಟ ಪರೀಕ್ಷಿಸುವ ಮನಸ್ಸು ಹೇಗೆ ಮೂಡಿತು ಎಂಬ ಪ್ರಶ್ನೆಗೆ ಖುಷಿಖುಷಿಯಾಗಿಯೇ ಉತ್ತರಿಸುವ ಸಂಜಿತ್, ಆಸ್ಟ್ರೇಲಿಯಾದ ಲಾ ಟ್ರೋಬ್ ವಿದ್ಯಾಲಯದಲ್ಲಿ ಬಿಬಿಎ ಪದವಿ ಪಡೆಯಲು ಬಂದಿದ್ದೆ ಆದರೆ ಕೋರ್ಸ್ ವಿಫಲಗೊಳಿಸಲು ನನ್ನಿಂದ ಸಾಧ್ಯವಾಗಲಿಲ್ಲ. ಹೀಗಾಗಿ ಕಾಲೇಜು ಡ್ರಾಪ್‌ಔಟ್ ಆದ ನಾನು ನನ್ನದೇ ಆದ ಸ್ವಂತ ಸ್ಟಾರ್ಟಪ್ ಆರಂಭಿಸುವ ಇರಾದೆ ಹೊಂದಿದೆ.


ತಂದೆ ತಾಯಿ ಮೊದಲು ಗಾಬರಿಗೊಂಡಿದ್ದರು


ಬಾಲ್ಯದಿಂದಲೂ ಚಹಾ ಎಂದರೆ ನನಗೆ ತುಂಬಾ ಇಷ್ಟ ಹಾಗೂ ಈ ಪೇಯದತ್ತ ನಾನು ಆಕರ್ಷಿತಗೊಂಡಿದ್ದೆ. ಹೀಗಾಗಿಯೇ ಡ್ರಾಪ್‌ಔಟ್ ಚಾಯ್‌ವಾಲಾ ಕಲ್ಪನೆ ನನ್ನ ಮನಸ್ಸಿನಲ್ಲಿ ಮೂಡಿತು ಎಂಬುದು ಸಂಜಿತ್ ಮಾತಾಗಿದೆ. ಶಿಕ್ಷಣವನ್ನು ಕೈಬಿಟ್ಟು ಸ್ಟಾರ್ಟಪ್ ಉದ್ಯಮದಲ್ಲಿ ಅದೃಷ್ಟ ಪರೀಕ್ಷೆಮಾಡಲು ಹೊರಟಿದ್ದ ನಿರ್ಧಾರದಿಂದ ನನ್ನ ತಂದೆ ತಾಯಿ ಗಾಬರಿಯಾಗಿದ್ದರು ಹಾಗೂ ಆಘಾತಕ್ಕೊಳಗಾಗಿದ್ದರು ಎಂದು ಸಂಜಿತ್ ತಿಳಿಸುತ್ತಾರೆ. ಮೆಲ್ಬೋರ್ನ್ ಕಾಫಿ ನಗರಿ ಹಾಗೂ ಕಾಫಿಗೆ ಹೆಸರುವಾಸಿಯಾಗಿದೆ. ಇಲ್ಲಿ ನಾನು ಚಹಾ ಉದ್ಯಮವನ್ನು ಆರಂಭಿಸಲು ಹೊರಟಿದ್ದೆ ಎಂದು ನಗುತ್ತಾ ನುಡಿಯುತ್ತಾರೆ ಸಂಜಿತ್.


ಇದನ್ನೂ ಓದಿ: ಗ್ರಹಣ ಆಯ್ತಲ್ಲಾ ಅಂತ ಈ ರಾಶಿಯವರು ಕೇರ್​ಲೆಸ್​ ಮಾಡ್ಬೇಡಿ! ದೊಡ್ಡ ಸಮಸ್ಯೆ ಆಗೋ ಮುನ್ನ ಎಚ್ಚೆತ್ತುಕೊಳ್ಳಿ!


ಎನ್‌ಆರ್‌ಐ ಯಾಗಿದ್ದ ಅಸ್ರಾರ್, ಸಂಜಿತ್ ಅವರ ಯೋಜನೆಯಲ್ಲಿ ನಂಬಿಕೆ ಹೊಂದಿದ್ದರು ಹಾಗೂ ಹೂಡಿಕೆದಾರರಾಗಲು ನಿರ್ಧರಿಸಿದರು. ಮುಂದಿನ ತಿಂಗಳು ತೆರಿಗೆ ವಿನಾಯಿತಿ ಹಾಗೂ ಎಲ್ಲಾ ಬಾಧ್ಯತೆಗಳನ್ನು ಪಾವತಿಸಿದ ನಂತರ ಸಂಸ್ಥೆಯ ಆದಾಯ 1 ಮಿಲಿಯನ್ AUD (ಅಂದಾಜು ರೂ 5.2 ಕೋಟಿ) ತಲುಪಲಿದೆ ಎಂಬುದು ನನ್ನ ಅನಿಸಿಕೆಯಾಗಿದೆ ಎಂದು ಸಂಜಿತ್ ಹೇಳುತ್ತಾರೆ. ಲಾಭವು 20% ವಾಗಿರಬೇಕು ಎಂದು ಹೇಳುವ ಸಂಜಿತ್, ನಿಮ್ಮ ಆಲೋಚನೆಗಳು ಕಾರ್ಯಪ್ರವೃತ್ತವಾಗುವ ಹಾದಿಯಲ್ಲಿದ್ದರೆ ಆಸ್ಟ್ರೇಲಿಯಾದಲ್ಲಿ ವ್ಯವಹಾರ ಸುಲಭ ಎಂದು ಸಂಜಿತ್ ಸಲಹೆ ನೀಡುತ್ತಾರೆ.


ವಿದ್ಯಾರ್ಥಿಗಳಿಗೆ ಉದ್ಯೋಗದ ದಾರಿ


ಭಾರತೀಯ ಸಮುದಾಯದಲ್ಲಿ ಬಾಂಬೆ ಕಟಿಂಗ್ ಚಹಾ ಹೆಚ್ಚು ಹೆಸರುವಾಸಿಯಾದುದು. ಆಸ್ಟ್ರೇಲಿಯನ್ನರಿಗೆ ಭಾರತದ ಮಸಾಲಾ ಚಹಾ ಹಾಗೂ ಸಮೋಸ ಎಂದರೆ ಬಲು ಪ್ರೀತಿ ಎಂದು ಹೇಳುವ ಸಂಜಿತ್ ಆಸ್ಟ್ರೇಲಿಯಾದಲ್ಲಿ ಸಂಸ್ಥೆಯ ಎರಡನೇ ಶಾಪ್ ಅನ್ನು ತೆರೆಯಲಿರುವುದಾಗಿ ಹೇಳಿಕೊಂಡಿದ್ದಾರೆ. ತಮ್ಮ ಶಾಪ್‌ಗಳಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ನೇಮಿಸಿಕೊಂಡಿರುವ ಸಂಜಿತ್, ಶಿಕ್ಷಣದೊಂದಿಗೆ ಆದಾಯ ಗಳಿಸುವ ದಾರಿಯನ್ನು ವಿದ್ಯಾರ್ಥಿಗಳಿಗೆ ನಿರ್ಮಿಸಿದ್ದಾರೆ.


ಡ್ರಾಪ್‌ಔಟ್ ಚಾಯ್‌ವಾಲಾದಲ್ಲಿ ಉದ್ಯೋಗ ಅರಸಿಕೊಂಡು ಬರುವವರ ಪದವಿ ಹಾಗೂ ಶಿಕ್ಷಣ ಅರ್ಹತೆಯನ್ನು ನಾವು ಗಮನಿಸುವುದಿಲ್ಲ ಎಂದು ಹೇಳುವ ಸಂಜಿತ್, ಉತ್ಸಾಹ ಹಾಗೂ ಕಠಿಣ ಶ್ರಮಕ್ಕೆ ನಾವು ಆದ್ಯತೆ ನೀಡುತ್ತೇವೆ ಎಂದು ಹೇಳುತ್ತಾರೆ. ಆಸ್ಟ್ರೇಲಿಯಾದ ಎಲ್ಲಾ ನಗರಗಳಲ್ಲಿ ಸಂಸ್ಥೆಯ ಒಂದೊಂದು ಮಳಿಗೆ ಇರಬೇಕು ಎಂಬುದು ಆಂಧ್ರದ ಸಂಜಿತ್ ಇಚ್ಛೆಯಾಗಿದೆ.

First published: