Saving Account: ಉಳಿತಾಯ ಖಾತೆಗಳ ಮೇಲಿನ ಬಡ್ಡಿದರ ಹೆಚ್ಚಿಸಿವೆ ಈ ಬ್ಯಾಂಕ್ ಗಳು

ಇದೀಗ ಕೆಲ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ (Govt And Private Banks) ಗಳು ಈಗ ಉಳಿತಾಯ ಖಾತೆಯ ಮೇಲಿನ ಬಡ್ಡಿ ದರವನ್ನ ಬದಲಾಯಿಸಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬ್ಯಾಂಕುಗಳು ಉಳಿತಾಯ ಖಾತೆ (Saving Accounts)ಗಳ ಮೇಲೆ ಬಡ್ಡಿ (Interest)ಯನ್ನು ನೀಡುತ್ತಿವೆ. ಕೆಲ ದಿನಗಳ ಹಿಂದೆ ಸ್ಥಿರ ಠೇವಣಿ (Fixed Deposit)ಗಳ ಮೇಲಿನ ಬಡ್ಡಿ ದರವನ್ನು ಬದಲಾಯಿಸಿದ್ದವು. ಈ ಬಡ್ಡಿ ದರಗಳು ಆಗಾಗ ಬದಲಾಗುತ್ತಿರುತ್ತವೆ. ಇದೀಗ ಕೆಲ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ (Govt And Private Banks) ಗಳು ಈಗ ಉಳಿತಾಯ ಖಾತೆಯ ಮೇಲಿನ ಬಡ್ಡಿ ದರವನ್ನ ಬದಲಾಯಿಸಿವೆ. ನೀವು ಈ ಬ್ಯಾಂಕ್ (Banks)ಗಳಲ್ಲಿ ಉಳಿತಾಯ ಖಾತೆ ಹೊಂದಿದ್ರೆ ಇವುಗಳ ಲಾಭ ನಿಮಗೆ ಸಿಗಲಿದೆ.  ಸದ್ಯ ನೀವು ಯಾವುದಾದ್ರು ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ತೆರೆಯಲು (Saving A/c Open) ಬಯಸುತ್ತಿದ್ರೆ, ಅವುಗಳ ವಿಧಿಸುವ ಹೊಸ ಬಡ್ಡಿ ದರವನ್ನು ಒಮ್ಮೆ ಚೆಕ್ ಮಾಡಿಕೊಳ್ಳಿ.

ಸಾರ್ವಜನಿಕ ವಲಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB), ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ಮತ್ತು ಖಾಸಗಿ ವಲಯದ HDFC ಬ್ಯಾಂಕ್ ಈ ತಿಂಗಳು ಉಳಿತಾಯ ಖಾತೆಗಳ ಬಡ್ಡಿದರಗಳನ್ನು ಬದಲಾಯಿಸಿವೆ. ಈ ಹಿಂದೆ ಕೆಲವು ಬ್ಯಾಂಕ್‌ಗಳು ಸ್ಥಿರ ಠೇವಣಿ (ಎಫ್‌ಡಿ) ಮತ್ತು ಮರುಕಳಿಸುವ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ಬದಲಾಯಿಸಿವೆ.

ಇದನ್ನೂ ಓದಿ:  Crypto Currency: ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದ್ದೀರಾ? ಈ ಹೊಸ ನಿಯಮಗಳನ್ನು ತಿಳಿದುಕೊಳ್ಳಿ

ಎಚ್‌ಡಿಎಫ್‌ಸಿ ಬ್ಯಾಂಕ್ ನೀಡಲಿದೆ ಹೆಚ್ಚು ಬಡ್ಡಿ - HDFC Bank

ಎಚ್‌ಡಿಎಫ್‌ಸಿ ಬ್ಯಾಂಕ್(HDFC Bank)‌ನ ಗ್ರಾಹಕರಿಗೆ ಸಂತಸದ ಸುದ್ದಿ ಇದಾಗಿದೆ. ಬ್ಯಾಂಕ್ ಉಳಿತಾಯ ಖಾತೆಗಳ ಬಡ್ಡಿದರವನ್ನು ಹೆಚ್ಚಿಸಿದೆ. ಖಾತೆದಾರರ ಖಾತೆಯಲ್ಲಿನ ದೈನಂದಿನ ಬಾಕಿಯ ಮೇಲೆ ಬಡ್ಡಿಯನ್ನು ಲೆಕ್ಕ ಹಾಕಲಾಗುತ್ತದೆ.

ಬ್ಯಾಂಕ್ ನೀಡುವ ಬಡ್ಡಿಯನ್ನು ತ್ರೈಮಾಸಿಕ ಆಧಾರದ ಮೇಲೆ ಪಾವತಿಸಲಾಗುತ್ತದೆ. 50 ಲಕ್ಷಕ್ಕಿಂತ ಕಡಿಮೆ ಮೊತ್ತದ ಉಳಿತಾಯ ಖಾತೆಗಳಿಗೆ ಬ್ಯಾಂಕ್ 3% ಬಡ್ಡಿಯನ್ನು ನೀಡುತ್ತದೆ. ರೂ 50 ಲಕ್ಷಕ್ಕಿಂತ ಹೆಚ್ಚಿನ ಮತ್ತು ರೂ 1,000 ಕೋಟಿಗಿಂತ ಕಡಿಮೆ ಮೊತ್ತದ ಮೇಲೆ 3.50 ಪ್ರತಿಶತ ಬಡ್ಡಿಯನ್ನು ಪಾವತಿಸುತ್ತದೆ.

ಗ್ರಾಹಕರು 1,000 ಕೋಟಿ ರೂ.ಗಿಂತ ಹೆಚ್ಚಿನ ಬ್ಯಾಲೆನ್ಸ್‌ ಗೆ ಶೇಕಡಾ 4.50 ಬಡ್ಡಿಯನ್ನು ಪಡೆಯುತ್ತಾರೆ. ಹೊಸ ದರಗಳು 2 ಫೆಬ್ರವರಿ 2022 ರಿಂದ ಅನ್ವಯವಾಗುತ್ತವೆ.

ಇದನ್ನೂ ಓದಿ:  GOOD NEWS: LIC ಗ್ರಾಹಕರು ಓದಲೇಬೇಕಾದ ಸುದ್ದಿ

ಪಂಜಾಬ್ ನ್ಯಾಷನಲ್ ಬ್ಯಾಂಕ್ ಕಡಿತ -Punjab National Bank

ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank) ದೇಶೀಯ ಮತ್ತು ಎನ್‌ಆರ್‌ಐ (NRI- Non Resident Indian) ಉಳಿತಾಯ ಖಾತೆಗಳ ಮೇಲಿನ ಬಡ್ಡಿದರವನ್ನು ಶೇಕಡಾ 0.05 ರಷ್ಟು ಕಡಿತಗೊಳಿಸಿದೆ. ಈ ಹಿಂದೆ, ಬ್ಯಾಂಕ್ ಉಳಿತಾಯ ಖಾತೆಗಳಲ್ಲಿ ರೂ 10 ಲಕ್ಷದ ಬಾಕಿ ಮೇಲೆ ಶೇ 2.80 ರ ಬಡ್ಡಿ ದರವನ್ನು ನೀಡಿತ್ತು. ಈಗ 0.5% ರಷ್ಟು ಇಳಿಕೆಯಾಗಿ ಅದು ಈಗ 2.75% ಆಗಲಿದೆ.

2.85 ರಷ್ಟು ಬಡ್ಡಿಯು 10 ಲಕ್ಷ ಮತ್ತು 500 ಕೋಟಿ ರೂ.ಗಿಂತ ಕಡಿಮೆ ಬಾಕಿಯ ಮೇಲೆ ಲಭ್ಯವಿರುತ್ತದೆ. 500 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಬಾಕಿಗೆ ಶೇಕಡಾ 3.25 ಬಡ್ಡಿ ಸಿಗುತ್ತದೆ. ಹೊಸ ದರಗಳು 3 ಫೆಬ್ರವರಿ 2022 ರಿಂದ ಅನ್ವಯವಾಗುತ್ತವೆ.

ಪಂಜಾಬ್ ಮತ್ತು ಸಿಂಧ್ ಬ್ಯಾಂಕಿನ ಬಡ್ಡಿ ದರದಲ್ಲಿ ಬದಲಾವಣೆ Punjab And Sind Bank

ಫೆಬ್ರವರಿ 1, 2022 ರಿಂದ ಜಾರಿಗೆ ಬರುವಂತೆ ಬ್ಯಾಂಕ್ ಉಳಿತಾಯ ಖಾತೆಗಳ ಮೇಲಿನ ಬಡ್ಡಿ ದರಗಳನ್ನು ಬದಲಾಯಿಸಿದೆ. ಇದರ ಅಡಿಯಲ್ಲಿ, 10 ಕೋಟಿಗಿಂತ ಕಡಿಮೆ ಮೊತ್ತದ ಮೇಲೆ 3% ಬಡ್ಡಿ ಲಭ್ಯವಿರುತ್ತದೆ.

10 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಬ್ಯಾಲೆನ್ಸ್‌ ಗಳ ಮೇಲಿನ ದರವನ್ನು ಶೇ.3.20ಕ್ಕೆ ಪರಿಷ್ಕರಿಸಲಾಗಿದೆ. ಈ ದರಗಳು ದೇಶೀಯ ಉಳಿತಾಯ ಬ್ಯಾಂಕ್ ಠೇವಣಿಗಳಿಗೆ ಹಾಗೂ NRE(Non-Residential External)/NRO ( Non- Resident Ordinary ) ಠೇವಣಿಗಳಿಗೆ ಅನ್ವಯಿಸುತ್ತವೆ.
Published by:Mahmadrafik K
First published: