• Home
  • »
  • News
  • »
  • business
  • »
  • Retirement Plan: ನಿವೃತ್ತಿ ಜೀವನಕ್ಕೆ ಸ್ಕೀಮ್, ಸಿಸ್ಟಮ್ಯಾಟಿಕ್ ರಿಟೈರ್ಮೆಂಟ್ ಪ್ಲಾನ್

Retirement Plan: ನಿವೃತ್ತಿ ಜೀವನಕ್ಕೆ ಸ್ಕೀಮ್, ಸಿಸ್ಟಮ್ಯಾಟಿಕ್ ರಿಟೈರ್ಮೆಂಟ್ ಪ್ಲಾನ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

HDFC Life Systematic Retirement Plan: ಐದು ವರ್ಷದಿಂದ 15 ವರ್ಷದವರೆಗೆ ಪ್ರೀಮಿಯಮ್ ಕಟ್ಟುವ ಈ ಯೋಜನೆಯಲ್ಲಿ ನಿಮಗೆ ಬೇಕಾದ ರೀತಿಯಲ್ಲಿ ಪಿಂಚಣಿ ಪಡೆಯುವ ಅವಕಾಶ ಇದೆ.

  • News18
  • Last Updated :
  • Share this:

    ನಮ್ಮ ಅಗತ್ಯ, ಉದ್ದೇಶಗಳಿಗೆ ತಕ್ಕಂತೆ ಹಲವು ಜೀವ ವಿಮಾನ ಪಾಲಿಸಿಗಳಿವೆ. ಇವುಗಳಲ್ಲಿ ಯಾವುದನ್ನ ಆಯ್ದುಕೊಳ್ಳುವುದು ಎಂಬ ಗೊಂದಲ ಇರುವುದು ಸಹಜ. ಹೆಚ್​ಡಿಎಫ್​ಸಿ ಲೈಫ್ (HDFC Life) ಇತ್ತೀಚೆಗೆ ಹೊಸ ಪಾಲಿಸಿಯೊಂದನ್ನು ಅನಾವರಣಗೊಳಿಸಿದೆ. ನಮ್ಮಿಷ್ಟದ ರೀತಿಯಲ್ಲಿ ನಿವೃತ್ತಿ ಪಿಂಚಣಿ ಒದಗಿಸುವ ಸಿಸ್ಟಮ್ಯಾಟಿಕ್ ರಿಟೈರ್ಮೆಂಟ್ ಪ್ಲಾನ್ (HDFC Life Systematic Retirment Plan) ಅನ್ನು ಎಚ್​ಡಿಎಫ್​ಸಿ ಲೈಫ್ ಹೊರತಂದಿದೆ.


    ಈ ಪಾಲಿಸಿ ಮಾಡಿಸಲು ನೀವು ದಿನಗಳನ್ನ ಕಳೆಯುವ ಅಗತ್ಯ ಇಲ್ಲ. ಸರಿಯಾದ ದಾಖಲೆ ಮತ್ತು ಪ್ರೀ-ಕನ್ವರ್ಷನ್ ನೆರಿಫಿಕೇಶನ್ ಅನ್ನು ಚಾಟ್ ಮೂಲಕವೇ ನೀವು ಮಾಡಿಮುಗಿಸಬಹುದು. ವೈದ್ಯಕೀಯ ಪ್ರಮಾಣಪತ್ರವಾಗಲಿ, ಘೊಷಣೆ ಪತ್ರವಾಗಲೀ ಅಗತ್ಯ ಬೀಳುವುದಿಲ್ಲ. 24 ಗಂಟೆಯೊಳಗೆ ನಿಮ್ಮ ಪಾಲಿಸಿ ಆರಂಭ ಆಗುತ್ತದೆ.


    ಈ ಸ್ಕೀಮ್​ನಲ್ಲಿ ಪಾಲಿಸಿದಾರ ಪ್ರೀಮಿಯಮ್ ಕಟ್ಟುವ ಅವಧಿ 5 ವರ್ಷದಿಂದ ಆರಂವಾಗಿ 15ವರ್ಷದವರೆಗೂ ಇದೆ. ಎಷ್ಟು ಮೊತ್ತದ ಪ್ರೀಮಿಯಮ್ ಮತ್ತು ಎಷ್ಟು ಅವಧಿಯವರೆಗೆ ಪ್ರೀಮಿಮಯ್ ಕಟ್ಟಲಾಗುತ್ತದೆ ಎಂಬುದರ ಮೇಲೆ ಪಿಂಚಣಿ ಮೊತ್ತ ನಿಗದಿಯಾಗುತ್ತದೆ.


    ಇದನ್ನೂ ಓದಿ: ಜನವರಿ 1ರಿಂದ GST ನಿಯಮಗಳಲ್ಲಿ ಬದಲಾವಣೆ: ಯಾವುದರ ಬೆಲೆ ಏರಿಕೆ? ಇಳಿಕೆ?


    ಪ್ರೀಮಿಯಮ್ ಪೂರ್ತಿ ಕಟ್ಟಿದ ಬಳಿಕ 15 ವರ್ಷಗಳವರೆಗೆ ಅದನ್ನ ಉಳಿಸಿಕೊಂಡು (Deferment Period) ನಂತರ ಪಿಂಚಣಿ ಬರುವಂತೆ ಮಾಡಬಹುದು.


    ನೀವು ಪಾಲಿಸಿ ಮಾಡಿಸುವ ಮುನ್ನವೇ ಬಡ್ಡಿದರವನ್ನೂ ನಿಶ್ಚಯಿಸಬಹುದು. ಹೀಗೆ ಸಮ್ಮತವಾಗಿ ನಿರ್ಧರಿಸಿದ ಬಡ್ಡಿದರ ಕೊನೆಯವರೆಗೂ ಅನ್ವಯ ಆಗುತ್ತದೆ. ಮಾರುಕಟ್ಟೆಯಲ್ಲಿ ಬಡ್ಡಿ ದರ ಇಳಿಮುಖವಾದರೂ ನಿಮಗೆ ನಿಗದಿತ ಬಡ್ಡಿದರವೇ ಸಿಗುತ್ತದೆ. ಹೀಗಾಗಿ, ನಿಮ್ಮ ಹಣ ಎಷ್ಟು ರಿಟರ್ನ್ ಆಗುತ್ತದೆ ಎಂಬುದನ್ನು ನೀವು ಪೂರ್ವದಲ್ಲೇ ಗುರುತಿಸಬಹುದು.


    ಪಾಲಿಸಿಯಲ್ಲಿ ನಿಶ್ಚಯಿಸಲಾದ ತಟಸ್ಥ ಅವಧಿ (Deferment Period) ಮುಗಿಯುವುದರೊಳಗೆ ಪಾಲಿಸಿದಾರನ ಸಾವಾದರೆ ಅವರ ನಾಮಿನಿಗೆ (Annuitant) ಡೆತ್ ಬೆನಿಫಿಟ್ಸ್ ಸಿಗುತ್ತವೆ. ಡಿಫರ್ಮೆಂಟ್ ಪೀರಿಯಡ್ ಬಳಿಕ ಪಾಲಿಸಿದಾರನ ಸಾವಾದರೆ ಬೆನಿಫಿಟ್ಸ್ ಸಿಗುವುದಿಲ್ಲ. ನಾಮಿನಿಯ (Annuitant) ಸಾವಾದರೆ ಪಾಲಿಸಿ ನಿಷ್ಕ್ರಿಯಗೊಳ್ಳುತ್ತದೆ. ಇದೊಂದೇ ರಿಸ್ಕ್ ಇರುವುದು.


    ಇದನ್ನೂ ಓ ದಿ: Business Idea: ಕೇವಲ 15 ಸಾವಿರ ಹೂಡಿಕೆ ಮಾಡಿ ಪ್ರತಿ ತಿಂಗಳು ಗಳಿಸಿ 1 ಲಕ್ಷಕ್ಕೂ ಅಧಿಕ


    ಈ ಸ್ಕೀಮ್​ನಲ್ಲಿ Life Annuity with Return of Premium ಎಂಬ ಆಪ್ಷನ್ ಇದೆ. ಅದರಲ್ಲಿ ಡೆತ್ ಬೆನಿಫಿಟ್ ಉತ್ತಮವಾಗಿರುತ್ತದೆ. ಸಾವಾಗುವವರೆಗಿನ ಅವಧಿಯವರೆಗೆ ಕಟ್ಟಲಾದ ಪ್ರೀಮಿಯಮ್ ಮೊತ್ತದ ಶೇ. 105ರಷ್ಟು ಹಣ ನಾಮಿನಿಗೆ ಸಿಗುತ್ತದೆ.


    45ರಿಂದ 75 ವರ್ಷದವರೆಗಿನ ಯಾವುದೇ ವ್ಯಕ್ತಿ ಈ ಪಾಲಿಸಿಯ ಲಾಭ ಪಡೆಯಬಹುದು. ತಿಂಗಳಿಗೆ ಕನಿಷ್ಠ 1 ಸಾವಿರ ರೂ ರಿಟರ್ನ್ ಸಿಗುತ್ತದೆ. ಇದಕ್ಕಿಂತ ಹೆಚ್ಚು ರಿಟರ್ನ್ ಸಿಗಬೇಕಾದರೆ ಹೆಚ್ಚು ಪ್ರೀಮಿಯಮ್ ಕಟ್ಟಬೇಕಾಗುತ್ತದೆ.

    Published by:Vijayasarthy SN
    First published: