• Home
  • »
  • News
  • »
  • business
  • »
  • FD Rates: ಎಫ್‌ಡಿ ಮೇಲಿನ ಬಡ್ಡಿದರ ಹೆಚ್ಚಿಸಿದ ಎಚ್‌ಡಿಎಫ್‌ಸಿ ಬ್ಯಾಂಕ್; ಜ.24ರಿಂದಲೇ ಪರಿಷ್ಕೃತ ದರ ಜಾರಿ, ಇಲ್ಲಿದೆ ವಿವರ

FD Rates: ಎಫ್‌ಡಿ ಮೇಲಿನ ಬಡ್ಡಿದರ ಹೆಚ್ಚಿಸಿದ ಎಚ್‌ಡಿಎಫ್‌ಸಿ ಬ್ಯಾಂಕ್; ಜ.24ರಿಂದಲೇ ಪರಿಷ್ಕೃತ ದರ ಜಾರಿ, ಇಲ್ಲಿದೆ ವಿವರ

ಎಫ್‌ಡಿ ಮೇಲಿನ ಬಡ್ಡಿದರ ಹೆಚ್ಚಳ

ಎಫ್‌ಡಿ ಮೇಲಿನ ಬಡ್ಡಿದರ ಹೆಚ್ಚಳ

ಎಚ್‌ಡಿಎಫ್‌ಸಿ ಬ್ಯಾಂಕ್ ಬಡ್ಡಿದರಗಳನ್ನು ಹೆಚ್ಚಿಸಿದ್ದು, ಈಗ ಸಾಮಾನ್ಯ ಜನರಿಗೆ ಶೇಕಡಾ 7ರಷ್ಟು ಹಾಗೂ ಹಿರಿಯ ನಾಗರಿಕರಿಗೆ ಶೇಕಡಾ 7.75 ರಷ್ಟು ಗರಿಷ್ಠ ಬಡ್ಡಿದರವನ್ನು ನಿಗದಿಗೊಳಿಸಿದೆ.

  • Share this:

ಬ್ಯಾಂಕುಗಳಲ್ಲಿ (Banks) ಎಫ್‌ಡಿ ರೂಪದಲ್ಲಿ ಹಣವನ್ನು ಉಳಿತಾಯ ಮಾಡುವ ಅನೇಕರಿಗೊಂದು ಸಂತೋಷದ ಸುದ್ದಿ. ರಾಷ್ಟ್ರದ ಅತಿದೊಡ್ಡ ಖಾಸಗಿ ಬ್ಯಾಂಕ್‌ ಎಚ್‌ಡಿಎಫ್‌ಸಿ (HDFC Bank) ಫಿಕ್ಸ್ಡ್‌ ಡೆಪಾಸಿಟ್‌ ಅಥವಾ ಸ್ಥಿರ ಠೇವಣಿಗಳ (Fixed Deposits) ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿದೆ. ಈ ಮೂಲಕ ಗ್ರಾಹಕರಿಗೆ ಹೊಸ ವರ್ಷದ ಕೊಡುಗೆ ನೀಡಿದೆ. ಹೌದು, ಎಚ್‌ಡಿಎಫ್‌ಸಿ ಬ್ಯಾಂಕ್‌ ₹2 ಕೋಟಿ ಒಳಗಿನ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳನ್ನು (FD Rates) ಹೆಚ್ಚಿಸಿದೆ ಎಂದು ಘೋಷಿಸಿಕೊಂಡಿದೆ. ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಹೊಸ ದರಗಳು 24ನೇ ಜನವರಿ 2023 ರಿಂದ ಜಾರಿಯಾಗುತ್ತವೆ. ‌


ಸಾಮಾನ್ಯರಿಗೆ ಶೇ.7 ಹಾಗೂ ಹಿರಿಯ ನಾಗರಿಕರಿಗೆ ಶೇ.7.75 ಬಡ್ಡಿದರ


ಎಚ್‌ಡಿಎಫ್‌ಸಿ ಬ್ಯಾಂಕ್ ಬಡ್ಡಿದರಗಳನ್ನು ಹೆಚ್ಚಿಸಿದ್ದು, ಈಗ ಸಾಮಾನ್ಯ ಜನರಿಗೆ ಶೇಕಡಾ 7ರಷ್ಟು ಹಾಗೂ ಹಿರಿಯ ನಾಗರಿಕರಿಗೆ ಶೇಕಡಾ 7.75 ರಷ್ಟು ಗರಿಷ್ಠ ಬಡ್ಡಿದರವನ್ನು ನಿಗದಿಗೊಳಿಸಿದೆ. ಈ ದರವನ್ನು 5 ವರ್ಷಗಳು, 10 ವರ್ಷಗಳ ಠೇವಣಿ ಅವಧಿಯ ಮೇಲೆ ನೀಡುತ್ತಿದೆ.


ಪರಿಷ್ಕೃತ ಬಡ್ಡಿದರ ಅನುಸಾರ, ಬ್ಯಾಂಕ್ ಸಾಮಾನ್ಯ ಜನರಿಗೆ 7 ದಿನಗಳಿಂದ 10 ವರ್ಷಗಳವರೆಗೆ ಪಕ್ವವಾಗುವ ಠೇವಣಿಗಳ ಮೇಲೆ ಶೇಕಡಾ 3.00 ರಿಂದ ಶೇ 7.00 ವರೆಗಿನ ಬಡ್ಡಿ ದರಗಳನ್ನು ಒದಗಿಸುತ್ತಿದೆ. ಅದೇ ಹಿರಿಯ ನಾಗರಿಕರಿಗೆ ಶೇಕಡಾ 3.50 ರಿಂದ ಶೇಕಡಾ 7.75 ಬಡ್ಡಿದರ ಒದಗಿಸುತ್ತಿದೆ.


hdfc bank job in bengaluru
HDFC ಬ್ಯಾಂಕ್​


HDFC ಬ್ಯಾಂಕ್ ಎಫ್‌ಡಿ ದರಗಳು ಹೀಗಿವೆ


ಸದ್ಯ ಎಚ್‌ಡಿಎಫ್‌ಸಿ ಬ್ಯಾಂಕ್‌ ಶೇಕಡಾ 7 ರಷ್ಟು ಬಡ್ಡಿದರವನ್ನು ನೀಡುತ್ತದೆ ಎಂದಾದರೂ, ಸದ್ಯ ಇರುವಂಥ ಸ್ಥಿರ ಠೇವಣಿಗೆ ಎಷ್ಟು ಬಡ್ಡಿ ಸಿಗುತ್ತದೆ? ಯಾವ ಅವಧಿಗೆ ಮುಗಿಯುವ ಎಫ್‌ಡಿಗೆ ಎಷ್ಟು ಬಡ್ಡಿ ಸಿಗುತ್ತದೆ? ಎಷ್ಟು ಅವಧಿಗೆ ಎಫ್ಡಿ ಇಡುವುದು ಉತ್ತಮ ಮುಂತಾದ ವಿವರಗಳು ಹೀಗಿವೆ.


*ಮುಂದಿನ 7 ರಿಂದ 29 ದಿನಗಳಲ್ಲಿ ಮೆಚ್ಯೂರ್ ಆಗುವ ಠೇವಣಿಗಳ ಮೇಲೆ ಬ್ಯಾಂಕ್ ಶೇಕಡಾ 3 ಬಡ್ಡಿದರವನ್ನು ನೀಡುತ್ತಿದೆ.


*HDFC ಬ್ಯಾಂಕ್ ಮುಂದಿನ 30 ರಿಂದ 45 ದಿನಗಳಲ್ಲಿ ಪಕ್ವವಾಗುವ ಠೇವಣಿಗಳ ಮೇಲೆ ಶೇಕಡಾ 3.50 ಬಡ್ಡಿದರವನ್ನು ನೀಡುತ್ತಿದೆ.




*ಎಚ್‌ಡಿಎಫ್‌ಸಿ ಬ್ಯಾಂಕ್ 46 ರಿಂದ 6 ತಿಂಗಳವರೆಗೆ ಮಾಡಿದ ಠೇವಣಿಗಳಿಗೆ ಶೇಕಡಾ 4.50 ಬಡ್ಡಿದರವನ್ನು ಒದಗಿಸುತ್ತದೆ ಮತ್ತು 6 ತಿಂಗಳಿಂದ 9 ತಿಂಗಳವರೆಗೆ ಮಾಡಿದ ಠೇವಣಿಗಳಿಗೆ ಶೇಕಡಾ 5.75 ಬಡ್ಡಿದರ ನೀಡುತ್ತದೆ.


*9 ತಿಂಗಳು, 1 ವರ್ಷದವರೆಗೆ ಪಕ್ವವಾಗುವ ಠೇವಣಿಗಳ ಮೇಲೆ ಶೇಕಡಾ 6.00 ಬಡ್ಡಿ ದರವನ್ನು ಪಾವತಿಸಲಾಗುತ್ತದೆ.


*1 ವರ್ಷದಿಂದ 15 ತಿಂಗಳವರೆಗೆ ಪಕ್ವವಾಗುವ ಠೇವಣಿಗಳ ಮೇಲೆ ಶೇಕಡಾ 6.60 ಬಡ್ಡಿ ದರವನ್ನು ವಿಧಿಸಲಾಗುತ್ತದೆ.


*ಎಚ್‌ಡಿಎಫ್‌ಸಿ ಬ್ಯಾಂಕ್ ಈಗ ಸಾಮಾನ್ಯ ಜನರಿಗೆ 15 ತಿಂಗಳಿಂದ 10 ವರ್ಷಗಳಲ್ಲಿ ಪಕ್ವವಾಗುವ ಠೇವಣಿಗಳ ಮೇಲೆ ಶೇಕಡಾ 7.00 ಬಡ್ಡಿದರವನ್ನು ನೀಡುತ್ತದೆ.


ಸಾಂದರ್ಭಿಕ ಚಿತ್ರ


ಇನ್ನು, 7 ದಿನಗಳಿಂದ 5 ವರ್ಷಗಳವರೆಗಿನ ಸ್ಥಿರ ಠೇವಣಿಯಲ್ಲಿ ಹಿರಿಯ ನಾಗರಿಕರು 50 bps ಹೆಚ್ಚುವರಿ ಬಡ್ಡಿ ದರವನ್ನು ಪಡೆಯುತ್ತಾರೆ. ಅಲ್ಲದೇ, ಹಿರಿಯ ನಾಗರಿಕರು 75 bps ಹೆಚ್ಚುವರಿ ಬಡ್ಡಿ ದರವನ್ನು ಪಡೆಯುತ್ತಾರೆ.


HDFC ಬ್ಯಾಂಕ್‌ನ ಹಿರಿಯ ನಾಗರಿಕ ಆರೈಕೆ FD ಯೋಜನೆಯಡಿ ಹಿರಿಯ ನಾಗರಿಕರಿಗೆ 75 bps ಹೆಚ್ಚುವರಿ ಬಡ್ಡಿ ದರವನ್ನು ಒದಗಿಸಲಾಗಿದೆ. ಈ ಸ್ಕೀಮ್ ಅವಧಿಯು 31ನೇ ಮಾರ್ಚ್ 2023 ರವರೆಗೆ ಮಾನ್ಯವಾಗಿರುತ್ತದೆ.


ಸಾಮಾನ್ಯವಾಗಿ ಸ್ಥಿರ ಠೇವಣಿಗಳಲ್ಲಿ ನೀವು ಹಣವನ್ನು ಕಳೆದುಕೊಳ್ಳುವ ಭಯ ಇರುವುದಿಲ್ಲ. ಬದಲಾಗಿ ನಿಮ್ಮ ಹಣಕ್ಕೆ ಭದ್ರತೆ ಇರುತ್ತದೆ. ಅಲ್ಲದೇ ಸ್ಥಿರವಾಗಿ ಬಡ್ಡಿ ಕೂಡ ಬರುತ್ತಿರುತ್ತದೆ.


ಆದ್ದರಿಂದಲೇ ಎಫ್‌ಡಿ ರೂಪದ ಉಳಿತಾಯವು ಬಹಳಷ್ಟು ಜನಪ್ರಿಯವಾಗಿದೆ. ಅಲ್ಲದೇ ಇದೀಗ ಬಡ್ಡಿದರ ಕೂಡ ಏರಿಕೆಯಾಗಿರುವುದು ಅನೇಕ ಬ್ಯಾಂಕ್‌ ಗ್ರಾಹಕರಲ್ಲಿ ಸಂತೋಷ ಮೂಡಿಸಿದೆ.

Published by:Sumanth SN
First published: