• Home
  • »
  • News
  • »
  • business
  • »
  • HDFC ಸೇರಿದಂತೆ ಐದು ಬ್ಯಾಂಕ್ ಗಳ ಸಾಲ ಇನ್ಮುಂದೆ ದುಬಾರಿ; ಎಷ್ಟು ಏರಿಕೆಯಾಗಿದೆ?

HDFC ಸೇರಿದಂತೆ ಐದು ಬ್ಯಾಂಕ್ ಗಳ ಸಾಲ ಇನ್ಮುಂದೆ ದುಬಾರಿ; ಎಷ್ಟು ಏರಿಕೆಯಾಗಿದೆ?

HDFC

HDFC

ಆರ್‌ ಬಿಐ (RBI) ರೆಪೋ ದರವನ್ನು (Repo Rate) ಹೆಚ್ಚಿಸಿದ ನಂತರ ಬ್ಯಾಂಕ್‌ ಗಳು ಸಹ ನಿರಂತರವಾಗಿ ಬಡ್ಡಿ ದರಗಳನ್ನು ಹೆಚ್ಚಿಸುತ್ತಿವೆ. ಎಚ್‌ಡಿಎಫ್‌ಸಿ ಮತ್ತು ಕೆನರಾ ಸೇರಿದಂತೆ ಐದು ಬ್ಯಾಂಕ್‌ ಗಳಿಂದ ಪಡೆಯುವ ಸಾಲ ದುಬಾರಿಯಾಗಿದೆ.

  • Share this:

ಎಚ್‌ಡಿಎಫ್‌ಸಿ ಬ್ಯಾಂಕ್ (HDFC Bank) ಮತ್ತೊಮ್ಮೆ ಎಂಸಿಎಲ್‌ಆರ್ (MCLR - Marginal Cost of Funds Based Lending Rate) ಅನ್ನು 25 ಬೇಸಿಸ್ ಪಾಯಿಂಟ್‌ (Basis Points) ಗಳಷ್ಟು ಹೆಚ್ಚಿಸುವ ಮೂಲಕ ತನ್ನ ಗ್ರಾಹಕರಿಗೆ (Customer) ಮತ್ತೊಮ್ಮೆ ಶಾಕ್ ನೀಡಿದೆ. ಎಂಸಿಎಲ್ಆರ್ ಹೆಚ್ಚಳದಿಂದ ಬ್ಯಾಂಕಿನಿಂದ ಪಡೆಯುವ ಪ್ರತಿ ಸಾಲವೂ (Loan) ದುಬಾರಿಯಾಗುತ್ತದೆ. ಇದರಿಂದ ಇಎಂಐ (EMI- Equated Monthly Installment) ಹೊರೆ ಆಗಲಿದೆ. ಈ ಹಿಂದೆ ಬ್ಯಾಂಕ್ RPLR (Retail Prime Lending Rate) ಹೆಚ್ಚಿಸಿತ್ತು. ಆರ್‌ ಬಿಐ (RBI) ರೆಪೋ ದರವನ್ನು (Repo Rate) ಹೆಚ್ಚಿಸಿದ ನಂತರ ಬ್ಯಾಂಕ್‌ ಗಳು ಸಹ ನಿರಂತರವಾಗಿ ಬಡ್ಡಿ ದರಗಳನ್ನು ಹೆಚ್ಚಿಸುತ್ತಿವೆ. ಎಚ್‌ಡಿಎಫ್‌ಸಿ ಮತ್ತು ಕೆನರಾ ಸೇರಿದಂತೆ ಐದು ಬ್ಯಾಂಕ್‌ ಗಳಿಂದ ಪಡೆಯುವ ಸಾಲ ದುಬಾರಿಯಾಗಿದೆ.


ಎಚ್‌ಡಿಎಫ್‌ಸಿ ಬ್ಯಾಂಕ್ ವಿವಿಧ ಅವಧಿಗಳಿಗೆ ಕನಿಷ್ಠ ವೆಚ್ಚ ಆಧಾರಿತ ಸಾಲ ದರವನ್ನು (ಎಂಸಿಎಲ್‌ಆರ್) 0.25 ರಷ್ಟು ಹೆಚ್ಚಿಸಿದೆ. ಹೊಸ ದರಗಳು ಮೇ 7 ರಿಂದ ಅನ್ವಯಗೊಂಡಿವೆ. ಹೆಚ್ಚಳದ ನಂತರ ಒಂದು ವರ್ಷದ ಎಂಸಿಎಲ್ಆರ್ ಅನ್ನು ಶೇಕಡಾ 7.50ಕ್ಕೆ ಪರಿಷ್ಕರಿಸಲಾಗಿದೆ. ಒಂದು ದಿನದ ಅವಧಿಗೆ MCLR 7.15 ಆಗಿದೆ. ಮತ್ತೊಂದೆಡೆ, ಕರೂರ್ ವೈಶ್ಯ ಬ್ಯಾಂಕ್ ಕೂಡ ಬಡ್ಡಿದರವನ್ನು ಶೇಕಡಾ 7.15 ರಿಂದ ಶೇಕಡಾ 7.45 ಕ್ಕೆ ಹೆಚ್ಚಿಸಿದೆ.


EMI ಹೊರೆ ಹೆಚ್ಚಾಗಲಿದೆ


ಎಚ್‌ಡಿಎಫ್‌ಸಿ ಬ್ಯಾಂಕ್ ಎಂಸಿಎಲ್‌ಆರ್ ಅನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ, ಅದರ ಪರಿಣಾಮವು ಎಲ್ಲಾ ರೀತಿಯ ಸಾಲಗಳ ಮೇಲೆ ಇರುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಈ ಬ್ಯಾಂಕಿನಿಂದ ಸಾಲ ಪಡೆಯುವ ಗ್ರಾಹಕರ ಮೇಲೆ EMI ಹೊರೆ ಹೆಚ್ಚಾಗುತ್ತದೆ. ವರದಿ ಪ್ರಕಾರ, ಹೊಸ ದರಗಳು ಮೇ 7 ರಿಂದ ಅನ್ವಯವಾಗಲಿದೆ.


ಇದನ್ನೂ ಓದಿ: Reliance: ಭಾರತದಲ್ಲಿ ಟಾಡ್ಸ್ ಎಸ್.ಪಿ.ಎ ಫ್ರಾಂಚೈಸಿಗಾಗಿ ರಿಲಯನ್ಸ್ ಒಪ್ಪಂದ


ಎಚ್‌ಡಿಎಫ್‌ಸಿ ಬ್ಯಾಂಕ್ ಸಾಲದ ಮಾರ್ಜಿನಲ್ ವೆಚ್ಚವನ್ನು (ಎಂಸಿಎಲ್‌ಆರ್) 25 ಬೇಸಿಸ್ ಪಾಯಿಂಟ್ ‌ಗಳಷ್ಟು ಹೆಚ್ಚಿಸಿದೆ. ಎಂಸಿಎಲ್‌ಆರ್ ಬಡ್ಡಿದರವಾಗಿದ್ದು, ಇದರ ಆಧಾರದ ಮೇಲೆ ಸಾಲಕ್ಕೆ ಬ್ಯಾಂಕ್ ‌ನ ಬಡ್ಡಿ ದರವನ್ನು ನಿಗದಿಪಡಿಸಲಾಗಿದೆ.


ಯಾವುದೇ ರೀತಿಯ ಸಾಲಕ್ಕೆ, ಬಡ್ಡಿದರವು ಇದಕ್ಕಿಂತ ಕಡಿಮೆ ಇರುವಂತಿಲ್ಲ. ಈ ಹೆಚ್ಚಳದ ನಂತರ, ಎಚ್‌ಡಿಎಫ್‌ಸಿ ಬ್ಯಾಂಕ್ ‌ನ ಎಂಸಿಎಲ್‌ಆರ್ 7.10 ರಿಂದ 7.70 ರ ವ್ಯಾಪ್ತಿಯಲ್ಲಿರುತ್ತದೆ. ಈ ಮೊದಲು ಇದು ಶೇಕಡಾ 6.90 ರಿಂದ 7.75 ರ ನಡುವೆ ಇತ್ತು. ಇದಕ್ಕೂ ಮೊದಲು, ಎಚ್‌ಡಿಎಫ್‌ಸಿ ಇತ್ತೀಚೆಗೆ RPLR ಚಿಲ್ಲರೆ ಪ್ರೈಮ್ ಲೆಂಡಿಂಗ್ ದರವನ್ನು ಹೆಚ್ಚಿಸಿದೆ.


ಎಷ್ಟು ಏರಿಕೆ ಆಗಿದೆ?


ಎಚ್‌ಡಿಎಫ್‌ಸಿ ಬ್ಯಾಂಕ್ ವೆಬ್‌ ಸೈಟ್ ಪ್ರಕಾರ, ಈ ಬದಲಾವಣೆಯ ನಂತರ, ಎಂಸಿಎಲ್‌ಆರ್ ಈಗ ಶೇಕಡಾ 7.15, ಒಂದು ತಿಂಗಳಿಗೆ ಶೇಕಡಾ 7.20, ಮೂರು ತಿಂಗಳಿಗೆ ಶೇಕಡಾ 7.25, ಆರು ತಿಂಗಳಿಗೆ ಶೇಕಡಾ 7.35 ಕ್ಕೆ ಏರಿದೆ.


ವರ್ಷದ ಸಾಲದ ಬಗ್ಗೆ ನೋಡಿದರೆ ಅದು 7.50 ಪ್ರತಿಶತ, ಎರಡು ವರ್ಷಗಳಿಗೆ ಇದು 7.60 ಪ್ರತಿಶತ, ಆದರೆ ಮೂರು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಸಾಲಗಳಿಗೆ ಇದು 7.70 ಆಗಿದೆ.


ಬ್ಯಾಂಕ್ ಆಫ್ ಮಹಾರಾಷ್ಟ್ರ


ಬ್ಯಾಂಕ್ ಎಲ್ಲಾ ಅವಧಿಗಳಿಗೆ ಶೇ.0.15 MCLR ಅನ್ನು ಹೆಚ್ಚಿಸುತ್ತದೆ. ಇದರೊಂದಿಗೆ ಹೊಸ ದರ ಶೇ.7.40ಕ್ಕೆ ಏರಿಕೆಯಾಗಿದ್ದು, ಮೇ 7ರಿಂದ ಅನ್ವಯವಾಗಲಿದೆ. ಈಗ ಒಂದು ವರ್ಷದ MCLR ದರವು 7.25 ರಿಂದ 7.40% ಕ್ಕೆ ಏರಿದೆ. ಇತರ ಅವಧಿಯ ಸಾಲಗಳ ದರವು ಶೇಕಡಾ 6.85-7.30 ವ್ಯಾಪ್ತಿಯಲ್ಲಿರುತ್ತದೆ.


ಕೆನರಾ ಬ್ಯಾಂಕ್ ಕೂಡ ದರಗಳನ್ನು ಹೆಚ್ಚಿಸಿದೆ


ಕೆನರಾ ಬ್ಯಾಂಕ್ ರೆಪೋ ದರ ಲಿಂಕ್ಡ್ ದರಗಳನ್ನು ಶೇ.7.30 ಪ್ರತಿಶತಕ್ಕೆ ಹೆಚ್ಚಿಸಿದೆ. ಹೊಸ ದರಗಳು ಮೇ 7 ರಿಂದ ಜಾರಿಗೆ ಬಂದಿವೆ. ಇದಲ್ಲದೇ ಎಂಸಿಎಲ್‌ಆರ್ ದರವನ್ನು ಶೇ.7.35ಕ್ಕೆ ಹೆಚ್ಚಿಸಲಾಗಿದೆ. ಹೊಸ ದರಗಳು ಹೊಸ ಗ್ರಾಹಕರಿಗೆ ಅನ್ವಯಿಸುತ್ತವೆ ಎಂದು ಬ್ಯಾಂಕ್ ಹೇಳಿದೆ.


ಇದನ್ನೂ ಓದಿ:  FD Interest Rate Hike: ಹೆಚ್ಚಾಯ್ತು ಎಫ್​ಡಿ ಬಡ್ಡಿದರ, ಹಣವನ್ನು ಬ್ಯಾಂಕಲ್ಲಿ ಇಡೋದೇ ಬೆಸ್ಟಾ?


ಇಂಡಿಯನ್ ಓವರ್‌ಸೀಸ್ ಬ್ಯಾಂಕ್


ಬ್ಯಾಂಕ್ ರೆಪೊ ದರಕ್ಕೆ ಲಿಂಕ್ ಮಾಡಿದ ಬಡ್ಡಿದರವನ್ನು ಶೇಕಡಾ 7.25 ಕ್ಕೆ ಹೆಚ್ಚಿಸಿದೆ. ಹೊಸ ದರಗಳು ಮೇ 10 ರಿಂದ ಅನ್ವಯವಾಗುತ್ತವೆ. ಈಗ ಗ್ರಾಹಕರಿಗೆ ಅದೇ ದರದಲ್ಲಿ ಸಾಲ ಸಿಗಲಿದೆ.

Published by:Mahmadrafik K
First published: