HDFC Bank Customers: ಏಕಾಏಕಿ ಕೋಟಿ ಕೋಟಿ ಹಣ ಖಾತೆಗೆ ಜಮೆ! ಕಂಗಾಲಾದ ಹೆಚ್‌ಡಿಎಫ್‌ಸಿ ಬ್ಯಾಂಕ್ ಗ್ರಾಹಕರು

ಕಾರಿಗೆ ಇಂಧನಕ್ಕಾಗಿ 1,000 ರೂಪಾಯಿ ಮೊತ್ತ ಪಾವತಿಸಲು ತಮ್ಮ HDFC ಬ್ಯಾಂಕ್ ಡೆಬಿಟ್ ಕಾರ್ಡ್ ಬಳಸಿದ ನಂತರ ಅವರು ಖಾತೆಯ ಬ್ಯಾಲೆನ್ಸ್ ಸಂದೇಶವನ್ನು ಸ್ವೀಕರಿಸಿದರು. ಅವರ ಖಾತೆಯಲ್ಲಿ ಅಚ್ಚರಿ ಎಂಬಂತೆ 2.2 ಕೋಟಿ ಹಣ ಜಮೆ ಆಗಿತ್ತು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಸುಮ್ಮನೆ ನಿಮ್ಮ ಪಾಡಿಗೆ ನೀವಿರುತ್ತೀರಿ. ಥಟ್ ಅಂತ ಒಂದು ಮೆಸೆಜ್ ಮೊಬೈಲ್​ಗೆ ಬರುತ್ತೆ. ನಿಮ್ಮ ಅಕೌಂಟಿಗೆ ಕೋಟಿ ಹಣ ಜಮೆ ಆಗಿದೆ ಎಂದು ಮೆಸೆಜಲ್ಲಿರುತ್ತೆ. ಅದೂ ನೀವು ಖಾತೆ ಹೊಂದಿರುವ ಬ್ಯಾಂಕ್​ನಿಂದ ಬಂದಿರುವ ಅಧಿಕೃತ ಮೆಸೆಜ್! ಅರೇ, ಫೇಕ್ ಮೆಸೆಜ್ ಆಗಿರಬಹುದು, ವಂಚಕರು ಹಣ ಸೆಳೆಯಲು ಕಳುಹಿಸಿದ ಮೆಸೆಜ್ ಆಗಿರಬಹುದು ಎಂದು ಮೊಬೈಲ್ ಬ್ಯಾಂಕಿಂಗ್​ನಲ್ಲಿ (Mobile Banking) ಚೆಕ್ ಮಾಡಿದರೂ ಹಣ ಜಮೆ ಆಗಿದ್ದು ನಿಜ.   ಒಂದೇ ಸೆಕೆಂಡ್​ನಲ್ಲಿ ಕೋಟ್ಯಾಧಿಪತಿಯಾದರೆ ನಿಮಗೆ ಹೇಗೆ ಅನಿಸುತ್ತೆ!? ಹೆಚ್‌ಡಿಎಫ್‌ಸಿ ಬ್ಯಾಂಕ್​ನ ಕೆಲವು ಖಾತೆದಾರರಿಗೂ ಇದೇ (HDFC Bank Crorepati Customers) ಆಗಿತ್ತು. ಕೆಲವು ಗಂಟೆಗಳ ಕಾಲ ಕೋಟ್ಯಾಧಿಪತಿ ಆಗುವ ಕ್ಷಣಿಕ ಅದೃಷ್ಟವನ್ನು ಹೆಚ್‌ಡಿಎಫ್‌ಸಿ ಬ್ಯಾಂಕ್​ನ ಕೆಲವು ಖಾತೆದಾರರು (HDFC Bank Customer) ಹೊಂದಿದ್ದರು.

    ಹೆಚ್‌ಡಿಎಫ್‌ಸಿ ಬ್ಯಾಂಕ್​ನ ಕೆಲವು ಖಾತೆದಾರರ ಬ್ಯಾಲೆನ್ಸ್ ಭಾನುವಾರ ರಾತ್ರಿ 13 ಕೋಟಿ ರೂ.ವರೆಗೂ ದಿಢೀರ್ ಏರಿಕೆ ಕಂಡಿತ್ತು. ಮೂಲಗಳ ಪ್ರಕಾರ, ಚೆನ್ನೈನ ಬುರ್ಕಿಟ್ ರಸ್ತೆಯಲ್ಲಿರುವ ಹೆಚ್​ಡಿಎಫ್​ಸಿ ಬ್ಯಾಂಕ್ ಶಾಖೆಯಿಂದ ಇಂತಹ ಹಲವಾರು ಪ್ರಕರಣಗಳು ವರದಿಯಾಗಿವೆ.

    ಗೊತ್ತೇ ಇಲ್ಲದೆ 2.2 ಕೋಟಿ ಹಣ ಜಮೆ ಆಗಿತ್ತು
    ಪೆರಿಯನಾಯಕನಪಾಳ್ಯಂನ ನರೇನ್ (ಹೆಸರು ಬದಲಾಯಿಸಲಾಗಿದೆ) ಎಂಬ ಗ್ರಾಹಕರು ಭಾನುವಾರ ಬೆಳಿಗ್ಗೆ ತಮ್ಮ ಖಾತೆಯ ಬ್ಯಾಲೆನ್ಸ್ 2.2 ಕೋಟಿ ರೂಪಾಯಿಗಳನ್ನು ತೋರಿಸಿದ ನಂತರ ಗೊಂದಲಕ್ಕೊಳಗಾದರು.  ಕಾರಿಗೆ ಇಂಧನಕ್ಕಾಗಿ 1,000 ರೂಪಾಯಿ ಮೊತ್ತ ಪಾವತಿಸಲು ತಮ್ಮ HDFC ಬ್ಯಾಂಕ್ ಡೆಬಿಟ್ ಕಾರ್ಡ್ ಬಳಸಿದ ನಂತರ ಅವರು ಖಾತೆಯ ಬ್ಯಾಲೆನ್ಸ್ ಸಂದೇಶವನ್ನು ಸ್ವೀಕರಿಸಿದರು. ಅವರ ಖಾತೆಯಲ್ಲಿ ಅಚ್ಚರಿ ಎಂಬಂತೆ 2.2 ಕೋಟಿ ಹಣ ಜಮೆ ಆಗಿತ್ತು! ಇದರಿಂದ ದಿಗಿಲುಗೊಂಡ ಅವರು ಕೂಡಲೇ ಬ್ಯಾಂಕ್ ಅಧಿಕಾರಿಗಳಿಗೆ ವಿಷಯ ತಿಳಿಸಿದರು.

    ಇನ್ನೋರ್ವ ಗ್ರಾಹಕರಿಗೆ 50 ಲಕ್ಷ
    ಮತ್ತೋರ್ವ ಗ್ರಾಹಕರು ತಮ್ಮ ಖಾತೆಯ ಬ್ಯಾಲೆನ್ಸ್ 50 ಲಕ್ಷಕ್ಕೆ ಏರಿದೆ ಎಂದು ಹೇಳಿದ್ದಾರೆ. ಆದರೆ ಅವರು ದಿನವಿಡೀ ಪಾವತಿ ಮಾಡಲು ಹೆಣಗಾಡಿದರು. "ನನ್ನ ಕಾರ್ಡ್ ಅನ್ನು ನಿರ್ಬಂಧಿಸಲಾಗಿತ್ತು. ಹೀಗಾಗಿ ನನ್ನ ಆಸ್ಪತ್ರೆಯ ಬಿಲ್ ಅನ್ನು ಪಾವತಿಸಲು ನನಗೆ ಸಾಧ್ಯವಾಗಲಿಲ್ಲ. ನಾನು ಹಲವಾರು ಬಾರಿ ಕಸ್ಟಮರ್ ಕೇರ್ ಅನ್ನು ಸಂಪರ್ಕಿಸಿದರೂ, ನನಗೆ ಸರಿಯಾದ ಉತ್ತರ ಸಿಗಲಿಲ್ಲ" ಎಂದು ಅವರು ಹೇಳಿದರು.

    ಇದನ್ನೂ ಓದಿ: Multibagger Stock: ಒಂದೇ ತಿಂಗಳಲ್ಲಿ ಲಕ್ಷಗಟ್ಟಲೆ ಹಣ ಲಾಭ! ಇದು ಸಾಧ್ಯವಾದದ್ದು ಹೇಗೆ?

    ಭಾನುವಾರ ಬೆಳಗ್ಗೆ ಎಚ್‌ಡಿಎಫ್‌ಸಿ ಆ್ಯಪ್ ಪರಿಶೀಲಿಸಿದಾಗ ನನ್ನ ಬ್ಯಾಲೆನ್ಸ್ 300 ರಿಂದ 1.2 ಕೋಟಿ ರೂ. ಗೆ ಏರಿಕೆ ಆಗಿತ್ತು. ಆದರೆ ಕಾರ್ಡ್ ಬಳಕೆಯನ್ನು ತಡೆಹಿಡಿಯಲಾಗಿದ್ದು, ಕೆಲವೇ ಗಂಟೆಗಳಲ್ಲಿ ಬ್ಯಾಲೆನ್ಸ್ 300 ರೂ.ಗೆ ಕುಸಿದಿದೆ ಎಂದು ಬ್ಯಾಂಕ್‌ನ ಜಿಪಿ ರಸ್ತೆ ಶಾಖೆಯಲ್ಲಿ ಖಾತೆ ನಿರ್ವಹಿಸುತ್ತಿರುವ ಎಂ ಕಣ್ಣನ್ ಹೇಳಿದರು.

    ಇದನ್ನೂ ಓದಿ: RBI New Rules: ಬ್ಯಾಂಕಲ್ಲಿ ಹಣ ಇಡ್ತೀರಾ? ತಪ್ಪದೇ ಹೊಸ ನಿಯಮ ತಿಳಿಯಿರಿ

    ಶನಿವಾರ ನಿರ್ವಹಣೆಯ ದೈನಂದಿನ ಕೆಲಸಗಳ ಬಳಿಕ ಸಮಸ್ಯೆ ತಲೆದೋರಿದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ. "ನಾವು ಸಮಸ್ಯೆಯನ್ನು ಪತ್ತೆಹಚ್ಚಿದ್ದೇವೆ. ಈ ಖಾತೆಗಳ ಡೆಬಿಟ್ ಸೇವೆಗಳನ್ನು ನಿರ್ಬಂಧಿಸಿದ್ದೇವೆ. ಇದು ಇಡೀ ಭಾರತದಲ್ಲಿನ ಬ್ಯಾಂಕ್ ಬ್ರಾಂಚ್​ಗಳಲ್ಲಿ ತಲೆದೋರಿರುವ ಸಮಸ್ಯೆಯಾಗಿದೆ. ಇಂತಹ ಸಮಸ್ಯೆಗಳಲ್ಲಿ ಶೇಕಡಾ 80 ಕ್ಕಿಂತ ಹೆಚ್ಚು ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಚೆನ್ನೈನಲ್ಲಿರುವ ಬ್ಯಾಂಕ್‌ನ ಸುಮಾರು 10 ಪ್ರತಿಶತ ಶಾಖೆಗಳಲ್ಲಿ ಈ ಸಮಸ್ಯೆ ವರದಿಯಾಗಿದೆ” ಎಂದು ತಿಳಿಸಿದರು.
    Published by:guruganesh bhat
    First published: