• Home
 • »
 • News
 • »
 • business
 • »
 • Business Tips: ನಿಮ್ಮದೇ ಸ್ವಂತ ಬ್ಯುಸಿನೆಸ್‌ ಹೊಂದಿದ್ದೀರಾ? ಈ ಸ್ಮಾರ್ಟ್‌ ಸಲಹೆಗಳ ಬಗ್ಗೆ ತಿಳಿದುಕೊಂಡಿರಿ

Business Tips: ನಿಮ್ಮದೇ ಸ್ವಂತ ಬ್ಯುಸಿನೆಸ್‌ ಹೊಂದಿದ್ದೀರಾ? ಈ ಸ್ಮಾರ್ಟ್‌ ಸಲಹೆಗಳ ಬಗ್ಗೆ ತಿಳಿದುಕೊಂಡಿರಿ

ಸಾಂದರ್ಭಿಕ ಚಿತ್ರ ಚಿತ್ರ

ಸಾಂದರ್ಭಿಕ ಚಿತ್ರ ಚಿತ್ರ

ಒಂದು ಉದ್ಯಮ ಸರಿಯಾಗಿ ಮುನ್ನಡೆಯಬೇಕಾದ್ರೆ ಅದಕ್ಕೆ ಅದರದೇ ಆದಂತಹ ಕೆಲವೊಂದು ಚೌಕಟ್ಟುಗಳಿವೆ. ಅವುಗಳನ್ನು ಸರಿಯಾಗಿ ಪಾಲಿಸಿದ್ರೆ ಒಂದು ವ್ಯವಹಾರ ಯಶಸ್ವಿಯಾಗಿ ಸಾಗಲು ಸಾಧ್ಯವಾಗುತ್ತದೆ. ಹಾಗಿದ್ರೆ ಒಂದು ಸ್ವ-ಉದ್ಯಮ ಯಶಸ್ವಿಯನ್ನು ಕಾಣ್ಬೇಕಾದ್ರೆ ಪಾಲಿಸಬೇಕಾದ ಕೆಲವೊಂದು ಮಾರ್ಗಗಳು ಯಾವುದೆಲ್ಲಾ ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.

ಮುಂದೆ ಓದಿ ...
 • Share this:

  ಸ್ವಂತ ಉದ್ಯಮ (Own Business) ಅಂದರೆ ಖಂಡಿತ ಅಲ್ಲಿ ನಮ್ಮ ಪರಿಶ್ರಮ, ಬಂಡವಾಳ, ಸಮಯ ಎಲ್ಲವನ್ನೂ ಮೀಸಲಿಟ್ಟಿರುತ್ತೇವೆ. ಹೀಗೆ ಒಂದೊಳ್ಳೆ ಉದ್ದೇಶದಿಂದ ಸ್ಥಾಪಿಸಿದ ಸಣ್ಣದೋ, ದೊಡ್ಡದೋ ನಮ್ಮದೇ ಕಂಪನಿಯನ್ನು ಲಾಭದಾಯಕವಾಗಿ ಮುನ್ನಡೆಸಲು ಮೈಯೆಲ್ಲಾ ಕಣ್ಣಾಗಿರಬೇಕು. ಹೀಗಾಗಿ ಕೆಲವು ಉದ್ಯಮದ ಸಲಹೆಗಳನ್ನು ಕರಾರುವಕ್ಕಾಗಿ ಪಾಲಿಸಬೇಕಾಗುತ್ತದೆ. ಪ್ರಾಮಾಣಿಕತೆ, ಹೂಡಿಕೆ, ಲಾಭ ಹಂಚಿಕೆ (Profit Sharing), ಉದ್ಯೋಗಿಗಳ ಕಾಳಜಿ (Employees), ಹೊಸ ಕಲ್ಪನೆ ಹೀಗೆ ಎಲ್ಲದರ ಜೊತೆ ನಮ್ಮ ಸ್ವಂತ ಉದ್ಯಮವನ್ನು ಮುಂದೆ ಯಶಸ್ವಿಯಾಗಿ ಕೊಂಡೊಯ್ಯಲು ಕೆಲವು ಸ್ಮಾರ್ಟ್‌ ನಿಯಮಗಳನ್ನು (Smart Rules) ಸಹ ತಿಳಿದುಕೊಂಡಿರಬೇಕು.


  ಜಗತ್ತು ಎಲ್ಲದರಲ್ಲೂ ಡಿಜಿಟಲ್‌, ಬೆರಳ ತುದಿಯಲ್ಲೇ ಎಲ್ಲಾ ಸಿಗುವ ಸ್ಮಾರ್ಟ್‌ ಕಲ್ಪನೆಗೆ ಒಗ್ಗಿಕೊಳ್ಳುತ್ತಿದೆ. ಅಂತೆಯೇ ನಾವು ಆರಂಭಿಸಿರುವ ಉದ್ಯಮದಲ್ಲಿ ಗ್ರಾಹಕರ ಬೇಡಿಕೆಗಳನ್ನು ಪೂರೈಸುವ ಅಥವಾ ನಿಮ್ಮ ಕಂಪನಿಗೆ, ನಿಮಗೆ ಅನುಕೂಲವಾಗುವಂತಹ ಸ್ಮಾರ್ಟ್‌ ಕಲ್ಪನೆಯನ್ನು ಅಳವಡಿಸಿಕೊಳ್ಳಬೇಕು.


  ಈ ಮೂಲಕ ಉತ್ಪಾದಕತೆಯಲ್ಲಿ ಹೆಚ್ಚಳವನ್ನು ಸಾಧಿಸಬೇಕು. ನಿಮ್ಮ ವ್ಯಾಪಾರ ಪ್ರಯಾಣವನ್ನು ನೀವು ಪ್ರಾರಂಭಿಸಿದಾಗ ತೊಂದರೆಗಳನ್ನು ತಪ್ಪಿಸಲು ಇಲ್ಲಿ ಹೇಳುವ ಕೆಲವು ಸ್ಮಾರ್ಟ್ ನಿಯಮಗಳನ್ನು ತಿಳಿಯಿರಿ.


  ಇದನ್ನೂ ಓದಿ: ಮಣ್ಣಿಲ್ಲದೇ ಬರೀ ನೀರಿಂದಲೇ ಕೃಷಿ ಮಾಡಬಹುದಂತೆ! ಹೈಡ್ರೋಪೋನಿಕ್ಸ್ ಆಗ್ರಿಕಲ್ಚರ್‌ನಿಂದ ಕೋಟಿ ಆದಾಯ ಫಿಕ್ಸ್!


  ಮಾರ್ಕೆಟಿಂಗ್


  ಯಾವುದೇ ಉದ್ಯಮ ಅಥವಾ ಉತ್ಪನ್ನವಾಗಲೀ ಮುಖ್ಯವಾಗಿ ಮಾರ್ಕೆಟಿಂಗ್‌ ತುಂಬಾ ಪ್ರಮುಖವಾದದ್ದು. ನೀವು ಮಾರಾಟ ಮಾಡುತ್ತಿರುವ ಉತ್ಪನ್ನದ ಬಗ್ಗೆ ನಾಲ್ಕು ಜನರಿಗೆ ತಿಳಿಯಬೇಕಾದರೆ ನೀವು ಉದ್ಯಮದಲ್ಲಿ ಮಾರ್ಕೆಟಿಂಗ್‌ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಡಬೇಕು. ಈಗಂತೂ ಡಿಜಿಟಲ್‌ ಮಾರ್ಕೆಟಿಂಗ್‌, ಸ್ವ ಉದ್ಯೋಗಿಗಳೇ ಹೋಗಿ ಮಾಡುವ ಪ್ರಚಾರದಂತಹ ಎಲ್ಲಾ ಮಾರ್ಕೆಟಿಂಗ್‌ ಸೌಲಭ್ಯಗಳು ಇವೆ.


  ಸಾಂದರ್ಭಿಕ ಚಿತ್ರ ಚಿತ್ರ


  ಮಾರ್ಕೆಟಿಂಗ್ ಎಂದರೆ ನೀವಿಲ್ಲಿ ಬರೀ ಜಾಹೀರಾತು ಎಂದು ಪರಿಗಣಿಸಬಾರದು. ಸರಿಯಾದ ಗುರಿ, ಗ್ರಾಹಕರು, ಬೆಲೆ, ಪ್ರಚಾರ ಮತ್ತು ವಿತರಣೆಯನ್ನು ಕಂಡುಹಿಡಿಯಲು ಮಾರುಕಟ್ಟೆ ಬಗ್ಗೆ ಹೆಚ್ಚಿನ ಸಂಶೋಧನೆ ಅಗತ್ಯವಿರುತ್ತದೆ.


  ಹಾಗೆಯೇ ಸಾಮಾಜಿಕ ಮಾಧ್ಯಮಗಳನ್ನು ಮಾರ್ಕೆಟಿಂಗ್‌ ತಂತ್ರವಾಗಿ ದೊಡ್ಡ ಮಟ್ಟದಲ್ಲಿ ತೆಗೆದುಕೊಳ್ಳಬೇಕು. ಜಾಹೀರಾತು, ಸೋಶಿಯಲ್‌ ಮೀಡಿಯಾ, ಪಿಆರ್‌, ಹೀಗೆ ಎಲ್ಲದರ ಬಗ್ಗೆಯೂ ಮಾರ್ಕೆಟಿಂಗ್‌ನಲ್ಲಿ ಹೆಚ್ಚಿನ ಗಮನಹರಿಸಬೇಕು. ಒಟ್ಟಾರೆ ಉದ್ಯಮದ ಬೆಳವಣಿಗೆಯನ್ನು ಹೆಚ್ಚಿಸಲು ಮಾರ್ಕೆಟಿಂಗ್ ಅತ್ಯಂತ ನಿರ್ಣಾಯಕವಾಗಿದೆ.


  ಸರಿಯಾದ ಅಕೌಂಟೆಂಟ್‌ ನೇಮಕ


  ಉದ್ಯಮದಲ್ಲಿ ಅಕೌಂಟಿಂಗ್ ಸಾಫ್ಟ್‌ವೇರ್ ಹೊಂದಿರುವುದಷ್ಟೇ ಅಲ್ಲ ವಿಷಯಗಳನ್ನು ಹೊಂದಿಸಲು ಮತ್ತು ಸರಿಯಾದ ಸಂಖ್ಯೆಗಳನ್ನು ನವೀಕರಿಸಲು ನಿಮಗೆ ಸಹಾಯ ಮಾಡಲು ಉತ್ತಮ ಅಕೌಂಟೆಂಟ್ ಬೇಕಾಗಬಹುದು. ಉದ್ಯಮ ದೊಡ್ಡ ಮಟ್ಟದಲ್ಲಿದ್ದರೆ ಚಾರ್ಟರ್ಡ್ ಅಕೌಂಟೆಂಟ್ (CA) ನಿಮಗೆ ಲೆಕ್ಕಪತ್ರ ವ್ಯವಸ್ಥೆಯನ್ನು ಹೊಂದಿಸಲು ಮತ್ತು ಅದನ್ನು ನಿಯಂತ್ರಣಕ್ಕೆ ಅನುಗುಣವಾಗಿ ಮಾಡಲು ಸಹಾಯ ಮಾಡುತ್ತಾರೆ.


  ನಿಮ್ಮ ಲೆಕ್ಕಪತ್ರ ನಿರ್ವಹಣೆ ಮತ್ತು ತೆರಿಗೆ ಸಮಸ್ಯೆಗಳ ಬಗ್ಗೆ ಅವರು ಸಲಹೆ ನೀಡಬಹುದು. ಅವರು GST (ಅನ್ವಯಿಸಿದರೆ) ಮತ್ತು ಮುಂಗಡ ತೆರಿಗೆಗಳ ತ್ರೈಮಾಸಿಕ ಫೈಲಿಂಗ್ ಅನ್ನು ಸಹ ನಿರ್ವಹಿಸಬಹುದು.


  ಮೇಲ್ಸ್‌ಗಳನ್ನು ಪರಿಶೀಲಿಸಿ


  ನಿಮ್ಮ ಉದ್ಯಮದಲ್ಲಿ ಸ್ಮಾರ್ಟ್ ಟಾಸ್ಕ್ ಮಾಸ್ಟರ್ ಆಗಿ ಕೆಲಸ ಮಾಡಿ. ತುರ್ತು ಮೇಲ್‌ಗಳನ್ನು ನೋಡುವುದು ಸೇರಿ ಇಂತಹ ನಿಯಮಗಳನ್ನು ಅಳವಡಿಸಿಕೊಳ್ಳಿ. ಬೆಳವಣಿಗೆಯ ಹಾದಿಯಲ್ಲಿ ಹೊಸ ವ್ಯಾಪಾರಕ್ಕಾಗಿ ಗ್ರಾಹಕ ಮತ್ತು ಪೂರೈಕೆದಾರ ಮೇಲ್‌ಗಳು ಅತ್ಯಂತ ನಿರ್ಣಾಯಕವಾಗಿವೆ. ಮೇಲ್‌ಗಳನ್ನು ಸ್ಕ್ಯಾನ್ ಮಾಡಲು ಬೆಳಗ್ಗೆ ಮೊದಲು 30 ನಿಮಿಷಗಳನ್ನು ನಿಗದಿಪಡಿಸಿ.


  ಸಾಂಕೇತಿಕ ಚಿತ್ರ


  ಅಪ್ರಸ್ತುತ ಮೇಲ್‌ಗಳನ್ನು ಓದುವುದನ್ನು ತಪ್ಪಿಸಲು ಉತ್ತಮ ಸ್ಪ್ಯಾಮ್ ಫಿಲ್ಟರ್ ಅನ್ನು ಬಳಸಿ ಇದರಿಂದ ನೀವು ಜಂಕ್ ಮೇಲ್‌ಗಳಲ್ಲಿ ಸಮಯವನ್ನು ವ್ಯರ್ಥ ಮಾಡುವುದನ್ನು ತಪ್ಪಿಸಬಹುದು.


  ದಿನದ ವೇಳಾಪಟ್ಟಿ ರಚಿಸಿ


  ಉದ್ಯಮದಲ್ಲಿ ಟಾಸ್ಕ್‌ ಶೀಟ್‌ ಹೊಂದುವುದು ಮುಖ್ಯವಾಗುತ್ತದೆ. ಮೇಲ್‌ಗಳನ್ನು ಸ್ಕ್ಯಾನ್ ಮಾಡಿದ ನಂತರ, ಕೈಯಲ್ಲಿರುವ ಕಾರ್ಯಗಳನ್ನು ಪರಿಶೀಲಿಸಲು ಸಮಯ ನೀಡಿ. ದಿನದ ಕೆಲಸಗಳ ಬಗ್ಗೆ ಪಟ್ಟಿ ಮಾಡಿ ಪ್ರತಿಯೊಂದನ್ನು ಸಹ ಅಂದೇ ಮುಗಿಸಲು ಪ್ರಯತ್ನಿಸಿ.

  Published by:Prajwal B
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು