PM Kisan Scheme: 11ನೇ ಕಂತಿನ ಹಣ ಖಾತೆಗೆ ಬಂದಿಲ್ವಾ? ಹಾಗಿದ್ರೆ ನೀವು ಹೀಗ್​ ದೂರು ನೀಡ್ಬಹುದು

ಕೇಂದ್ರ ಸರ್ಕಾರವು ಹನ್ನೊಂದನೇ ಕಂತನ್ನು ಬಿಡುಗಡೆ ಮಾಡಿದೆ. ಆದರೆ ನಿಮಗೆ ಹಣ ಬಂದಿದೆಯೇ ಇಲ್ಲವೇ ನೋಡಿಕೊಳ್ಳಿ, ಒಂದು ವೇಳೆ ನಿಮ್ಮ ಖಾತೆಗೆ ಹಣ ಜಮೆ ಆಗದಿದ್ದರೆ ನೀವು ಹೀಗೆ ದೂರು ದಾಖಲಿಸಬಹುದು. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 11 ನೇ ಕಂತನ್ನು ಪ್ರಧಾನಮಂತ್ರಿ ನರೇಂದ್ರ  ಮೋದಿ (Narendra Modi) ಬಿಡುಗಡೆ ಮಾಡಿದ್ದಾರೆ.  ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (Pradhan Mantri Kisan Samman Nidhi) ಅಥವಾ ಪಿಎಂ ಕಿಸಾನ್ ಯೋಜನೆಯ 11ನೇ ಕಂತಿನ ಹಣವನ್ನು ಕೇಂದ್ರ ಸರ್ಕಾರ (Central Government) ನಿನ್ನೆ ಮೇ 31 ರಂದು ರೈತರ ಖಾತೆಗಳಿಗೆ ಜಮಾ ಮಾಡಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಮುಖಾಂತರ ಕೇಂದ್ರ ಸರ್ಕಾರ ರೈತರಿಗೆ ವರ್ಷಕ್ಕೆ ಮೂರು ಕಂತುಗಳಲ್ಲಿ ಒಟ್ಟು 6000ರೂ. ಆರ್ಥಿಕ ಸಹಾಯ ನೀಡುತ್ತದೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರ (Farmers) ಖಾತೆಗೆ 2000ರೂ. ಅನ್ನು ಸರ್ಕಾರ ಜಮೆ ಮಾಡುತ್ತದೆ.

ನೀವು ಪಿಎಂ ಕಿಸಾನ್​ ಯೋಜನೆಯ ಪಲಾನುಭವಿಗಳಾ?

ಈ ರೀತಿ ಇಲ್ಲಿಯ ತನಕ ಸರ್ಕಾರ 11 ಕಂತುಗಳಲ್ಲಿ ರೈತರ ಖಾತೆಗಳಿಗೆ ಹಣ ಜಮೆ ಮಾಡಿದೆ. ಈ ರೀತಿ ರೈತರ ಖಾತೆಗಳಿಗೆ ಹಣ ಜಮೆ ಮಾಡುವ ಮುನ್ನ ಕೇಂದ್ರ ಸರ್ಕಾರ ಫಲಾನುಭವಿಗಳ ಪಟ್ಟಿ ಬಿಡುಗಡೆ ಮಾಡುತ್ತದೆ. ಪ್ರತಿ ಬಾರಿಯೂ ಪಲಾನುಭವಿಗಳ ಪಟ್ಟಿಯನ್ನು  ಗ್ರಾಮ ಪಂಚಾಯತ್ ಗಳ ನೋಟಿಸ್ ಬೋರ್ಡ್ ಗಳಲ್ಲಿ ಪ್ರಕಟಿಸಲಾಗುತ್ತದೆ. ಪಿಎಂ ಕಿಸಾನ್​ ಹಣ ಖಾತೆಗೆ ಬರುವ ಮುನ್ನ ಪಟ್ಟಿಯಲ್ಲಿ ನಿಮ್ಮ ಹೆಸರು ಬಂದಿದೆಯಾ ಎಂದು  ಮೊದಲು ಕನ್ಫರ್ಮ್ ಮಾಡಿಕೊಳ್ಳಿ. ಇಲ್ಲವೇ ಆನ್ ಲೈನ್ ನಲ್ಲಿ ಕೂಡ ಫಲಾನುಭವಿಗಳ ಪಟ್ಟಿಯನ್ನು ಚೆಕ್ ಮಾಡಬಹುದು.

ನಿಮ್ಮ ಖಾತೆಗೆ 2 ಸಾವಿರ ರೂಪಾಯಿ ಹಣ ಬಂದಿಲ್ವಾ?

ಪಿಎಂ ಕಿಸಾನ್ ಯೋಜನೆ ಅಥವಾ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಸಣ್ಣ ಜಮೀನು ಹೊಂದಿರುವ ರೈತರಿಗೆ ಆರ್ಥಿಕ ಸಹಾಯವನ್ನು ನೀಡುವ ಉದ್ದೇಶದಿಂದ ಪ್ರಾರಂಭಿಸಲಾಗಿದೆ. ಮೊದಲು, ಈ ಯೋಜನೆಯು 2 ಹೆಕ್ಟೇರ್‌ಗಿಂತ ಕಡಿಮೆ ಜಮೀನು ಹೊಂದಿರುವ ಜನರಿಗೆ ಸೀಮಿತವಾಗಿತ್ತು. ಆದರೆ ನಂತರ, ಪಿಎಂ ಕಿಸಾನ್ ಯೋಜನೆಯನ್ನು ಎಲ್ಲಾ ಸಣ್ಣ ಭೂಹಿಡುವಳಿ ಕುಟುಂಬಗಳಿಗೆ ವಿಸ್ತರಿಸಲಾಯಿತು. ಕೇಂದ್ರ ಸರ್ಕಾರವು ಹನ್ನೊಂದನೇ ಕಂತನ್ನು ಬಿಡುಗಡೆ ಮಾಡಿದೆ. ಆದರೆ ನಿಮಗೆ ಹಣ ಬಂದಿದೆಯೇ ಇಲ್ಲವೇ ನೋಡಿಕೊಳ್ಳಿ, ಒಂದು ವೇಳೆ ನಿಮ್ಮ ಖಾತೆಗೆ ಹಣ ಜಮೆ ಆಗದಿದ್ದರೆ ನೀವು ಹೀಗೆ ದೂರು ದಾಖಲಿಸಬಹುದು.

ಇದನ್ನೂ ಓದಿ: ನಿನ್ನೆ-ಮೊನ್ನೆ ಬಂದವ್ರೆಲ್ಲ ನಂಬರ್​ 1 ಅಂತಾರೋ, ಇವ್ರಿಗೆ ನಂಬರ್​ಗಳೇ ಲೆಕ್ಕ ಇಲ್ಲ! ಆಲ್​ವೇಸ್​ ಟಾಪ್​

ಹಣ ಬಂದಿದೆಯೇ ಎಂದು ಮೊದಲು ಹೀಗೆ ಪರಿಶೀಲಿಸಿ!

1. ಮೊದಲು ನಿಮ್ಮ ಮೊಬೈಲ್​ ಅಥವಾ ಕಂಪ್ಯೂಟರ್​​ನಲ್ಲಿ PM ಕಿಸಾನ್​ ಯೋಜನೆಯ ಅಧಿಕೃತ ವೆಬ್​ಸೈಟ್​ https://pmkisan.gov.in ತೆರೆಯಿರಿ

2. ನಂತರ ಮುಖ ಪುಟದಲ್ಲಿ ಕಾಣುವ Farmers Corner ಆಯ್ಕೆ ಮಾಡಿ

3. Farmers Corner ವಿಭಾಗದಲ್ಲಿ, Beneficiaries List ಆಯ್ಕೆ ಮಾಡಿ

4. ಡ್ರಾಪ್ ಡೌನ್ ಪಟ್ಟಿಯಿಂದ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನು ಆಯ್ಕೆ ಮಾಡಿ.

5. ನಂತರ ಇಲ್ಲಿ ತೋರಿಸುವ 'Get Report' ಮೇಲೆ ಕ್ಲಿಕ್ ಮಾಡಿ

6. ಕ್ಲಿಕ್ ಮಾಡಿದ ನಂತರ ಇಲ್ಲಿ ಫಲಾನುಭವಿಗಳ ಸಂಪೂರ್ಣ ಪಟ್ಟಿ ಕಾಣಿಸಿಕೊಳ್ಳುತ್ತದೆ, ಅದರಲ್ಲಿ ನೀವು ನಿಮ್ಮ ಹೆಸರು ಇದೆಯಾ ಎಂದು ಪರಿಶೀಲಿಸಿ

ಇದನ್ನೂ ಓದಿ: ಈ ಕ್ಷೇತ್ರಕ್ಕೂ ಕಾಲಿಟ್ಟ ರಿಲಯನ್ಸ್​! ನಿಮ್ಗೆ ಬೇಕಿರೋದೆಲ್ಲಾ ಜಿಯೋ ಮಾರ್ಟ್​ನಲ್ಲೇ ಸಿಗುತ್ತೆ

ಹಣ ಬಂದಿಲ್ಲದಿದ್ದರೆ ಹೀಗೆ ದೂರು ನೀಡಿ

ಒಂದು ವೇಳೆ ನಿಮಗೆ ಹನ್ನೊಂದನೇ ಕಂತಿನ ಹಣ ಜಮೆ ಆಗಿಲ್ಲದಿದ್ದರೆ, ನೀವು ಪಿಎಂ ಕಿಸಾನ್ ಸಹಾಯವಾಣಿ ಸಂಖ್ಯೆ - 011-24300606 ಗೆ ಕರೆ ಮಾಡಬಹುದು. ನೀವು ಪಿಎಂ ಕಿಸಾನ್ ಟೋಲ್ ಫ್ರೀ ಸಂಖ್ಯೆ 18001155266 ಕ್ಕೂ ಕೂಡಾ ಕರೆ ಮಾಡಬಹುದು. ಇದಲ್ಲದೇ PMkisan-ict@gov.in ಗೆ ಮೇಲ್ ಮಾಡುವ ಮೂಲಕ ಪಿಎಂ ಕಿಸಾನ್ ಯೋಜನೆಯ 11 ನೇ ಕಂತಿಗೆ ಹಣವನ್ನು ಸ್ವೀಕರಿಸದ ಕಾರಣವನ್ನು ನೀವು ಕೇಳಬಹುದು.
Published by:Vasudeva M
First published: