• Home
  • »
  • News
  • »
  • business
  • »
  • Explained: ಕಣ್ಮರೆಯಾದ 2,000 ರೂಪಾಯಿ ನೋಟುಗಳು, ಚಲಾವಣೆಗೆ ಬ್ರೇಕ್ ಹಾಕಿತಾ ಆರ್​ಬಿಐ?

Explained: ಕಣ್ಮರೆಯಾದ 2,000 ರೂಪಾಯಿ ನೋಟುಗಳು, ಚಲಾವಣೆಗೆ ಬ್ರೇಕ್ ಹಾಕಿತಾ ಆರ್​ಬಿಐ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

2016 ರ ಕೊನೆಯಲ್ಲಿ ಮರು ಹಣ ಗಳಿಕೆಗಾಗಿ ಪರಿಚಯಿಸಲಾದ 2,000 ರೂಪಾಯಿ ನೋಟುಗಳು ಗಣನೀಯವಾಗಿ ಕಡಿಮೆಯಾಗಿವೆ. ಇತ್ತೀಚಿನ ದಿನಗಳಲ್ಲಿ 2,000 ರೂಪಾಯಿ ನೋಟುಗಳು ಬಹಳ ಕಡಿಮೆ ಚಲಾವಣೆಗೆ ಬರುತ್ತಿವೆ. ಬಹುತೇಕ ಕಣ್ಮರೆಯಾಗಿವೆ. ಹಾಗಿದ್ದರೆ ಈ ಗುಲಾಬಿ ಬಣ್ಣದ ನೋಟುಗಳಿಗೆ ಏನಾಗಿದೆ? ಇವು ಕಣ್ಮರೆಯಾಗಲು ಕಾರಣಗಳೇನು?

ಮುಂದೆ ಓದಿ ...
  • Trending Desk
  • Last Updated :
  • New Delhi, India
  • Share this:

    ನೋಟು ಅಮಾನ್ಯೀಕರಣದ (Demonetization) ಆರು ವರ್ಷಗಳ ನಂತರ ಬಹಳಷ್ಟು ಬದಲಾವಣೆಗಳನ್ನು ಕಾಣಬಹುದು. ಡಿಜಿಟಲ್ ಪಾವತಿ (Digital Payment) ಇದೀಗ ಸಮಾಜದ ವಿವಿಧ ವರ್ಗಗಳ ಜೀವನ ವಿಧಾನವಾಗಿ ಮಾರ್ಪಟ್ಟಿದೆ. ಇನ್ನೊಂದು ಕುತೂಹಲಕಾರಿಯಾದ ಬದಲಾವಣೆ ಅಂದರೆ 2016 ರ ಕೊನೆಯಲ್ಲಿ ಮರು ಹಣ ಗಳಿಕೆಗಾಗಿ ಪರಿಚಯಿಸಲಾದ 2,000 ರೂಪಾಯಿ ನೋಟುಗಳು ಗಣನೀಯವಾಗಿ ಕಡಿಮೆಯಾಗಿವೆ. ಇತ್ತೀಚಿನ ದಿನಗಳಲ್ಲಿ 2,000 ರೂಪಾಯಿ ನೋಟುಗಳು ಬಹಳ ಕಡಿಮೆ ಚಲಾವಣೆಗೆ ಬರುತ್ತಿವೆ. ಬಹುತೇಕ ಕಣ್ಮರೆಯಾಗಿವೆ. ಹಾಗಿದ್ದರೆ ಈ ಗುಲಾಬಿ ಬಣ್ಣದ ನೋಟುಗಳಿಗೆ ಏನಾಗಿದೆ? ಇವು ಕಣ್ಮರೆಯಾಗಲು ಕಾರಣಗಳೇನು? ಇಲ್ಲಿದೆ ವಿವರ


     2,000 ರೂಪಾಯಿ ನೋಟುಗಳನ್ನು ಆರ್‌ಬಿಐ ಯಾವಾಗ ಪರಿಚಯಿಸಿತು?


    ನವೆಂಬರ್ 8, 2016 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ 500 ಮತ್ತು 1,000 ರೂ ನೋಟುಗಳು ಅಮಾನ್ಯಗೊಳ್ಳುತ್ತವೆ ಎಂದು ತಿಳಿಸಿದರು. ನೋಟು ಅಮಾನ್ಯೀಕರಣ ನೀತಿಯನ್ನು ಜಾರಿಗೆ ತರುವ ಮುಖ್ಯ ಕಾರಣ ಕಪ್ಪುಹಣಕ್ಕೆ (ಬ್ಲ್ಯಾಕ್‌ಮನಿ) ಕಡಿವಾಣ ಹಾಕುವುದು, ನಕಲಿ ನೋಟುಗಳನ್ನು ನಿರ್ಮೂಲನೆ ಮಾಡುವುದು ಮತ್ತು ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುವ ಮೂಲಕ ನಗದು ರಹಿತ ಆರ್ಥಿಕತೆಯನ್ನು ಸೃಷ್ಟಿಸುವುದು ಯೋಜನೆಯ ಗುರಿಯಾಗಿತ್ತು. ಈ ನೋಟುಗಳನ್ನು ಬದಲಿಸಲು ಆರ್‌ಬಿಐ ಹೊಸ 500 ರ ನೋಟು ಮತ್ತು 2,000 ರೂಪಾಯಿ ನೋಟುಗಳನ್ನು ಪರಿಚಯಿಸಿತು. ಪ್ರಸ್ತುತ, ಆರ್‌ಬಿಐ ರೂ 2, ರೂ 5, ರೂ 10, ರೂ 20, ರೂ 50, ರೂ 100, ರೂ 200, ರೂ 500 ಮತ್ತು ರೂ 2,000 ಮುಖಬೆಲೆಯ ನೋಟುಗಳನ್ನು ಪೂರೈಸುತ್ತಿದೆ.


    ಇದನ್ನೂ ಓದಿ: LIC ಪಾಲಿಸಿದಾರರೇ ಎಚ್ಚರ.. ಇವುಗಳನ್ನು ಮಾಡದಿದ್ದರೆ ಎಲ್ಲಾ ಹಣವನ್ನು ಕಳೆದುಕೊಳ್ಳಬಹುದು ಜೋಕೆ!


    2,000 ರೂಪಾಯಿ ನೋಟುಗಳ ಉದ್ದೇಶವೇನಾಗಿತ್ತು?


    2,000 ರೂಪಾಯಿಗಳ ನೋಟುಗಳ ಹೆಚ್ಚಿನ ಮೌಲ್ಯದ ಕಾರಣದಿಂದಾಗಿ ಅಮಾನ್ಯಗೊಳಿಸಲಾದ ನೋಟುಗಳ ಮೌಲ್ಯವನ್ನು ವೇಗವಾಗಿ ಬದಲಾಯಿಸಲು ಸಹಾಯ ಮಾಡಲು ಇದನ್ನು ಪರಿಚಯಿಸಲಾಗಿತ್ತು. ನೋಟು ಅಮಾನ್ಯೀಕರಣದ ಸಮಯದಲ್ಲಿ ನಿಷೇಧಿತ ರೂ 500 ಹಾಗೂ ರೂ 1000 ಕರೆನ್ಸಿ ನೋಟುಗಳು ಚಲಾವಣೆಯಲ್ಲಿರುವ ನೋಟುಗಳ ಮೌಲ್ಯದ 80% ಕ್ಕಿಂತ ಹೆಚ್ಚು ಜಮೆಯಾಗಿದ್ದವು.


    ಆರ್‌ಬಿಐನ ಕರೆನ್ಸಿ ಪ್ರೆಸ್‌ಗಳು ತಡೆರಹಿತವಾಗಿ ಕಾರ್ಯನಿರ್ವಹಿಸುತ್ತಿದ್ದರೂ ಸಹ ರಾತ್ರೋರಾತ್ರಿ ಇಷ್ಟು ದೊಡ್ಡ ಸಂಖ್ಯೆಯನ್ನು ಬದಲಾಯಿಸುವುದು ಅಸಾಧ್ಯವಾಗಿತ್ತು. ಹಾಗಾಗಿ ಒಬ್ಬ ವ್ಯಕ್ತಿ ತನ್ನ ಖಾತೆಯಿಂದ ಎಷ್ಟು ಹಣವನ್ನು ಹಿಂಪಡೆಯಬಹುದು ಎಂಬುದನ್ನು ಆಧರಿಸಿ ಮಿತಿಗಳನ್ನು ಲೆಕ್ಕಹಾಕಲಾಯಿತು. ಈ ವೇಳೆ 2,000 ರೂ ನೋಟಿನಂತಹ ದೊಡ್ಡ ಮುಖಬೆಲೆಯ ನೋಟು ಕಡಿಮೆ ಬೆಲೆಯ ನೋಟುಗಳೊಂದಿಗೆ ಸಂಖ್ಯೆಗಳನ್ನು ಸರಿದೂಗಿಸಲು ನೆರವು ನೀಡಿತು. ವಾಸ್ತವವಾಗಿ, ರೂ 2,000 ನೋಟುಗಳು ಮಾರ್ಚ್ 31, 2017 ರಂತೆ ಚಲಾವಣೆಯಲ್ಲಿರುವ ಕರೆನ್ಸಿಯ ಮೌಲ್ಯದ ಶೇಕಡಾ 50.2 ರಷ್ಟಿದೆ.


    ಚಲಾವಣೆಯಿಂದ 2000 ರೂಪಾಯಿ ನೋಟುಗಳು ಮಾಯವಾಗಿವೆಯೇ?


    ಇಲ್ಲ, ಆದರೆ ಅವುಗಳ ಚಲಾವಣೆ ಗಮನಾರ್ಹವಾಗಿ ಕಡಿಮೆಯಾಗಿದೆ, ಮುಖ್ಯವಾಗಿ ಆರ್‌ಬಿಐ ಈ ಮುಖಬೆಲೆಯ ಒಂದೇ ಒಂದೂ ನೋಟುಗಳನ್ನು ಆರ್ಥಿಕ ವರ್ಷ 20, 21 ಮತ್ತು 22 ರಲ್ಲಿ ಮುದ್ರಿಸಲಿಲ್ಲ ಎಂದು ಕೇಂದ್ರ ಬ್ಯಾಂಕ್‌ನ ಇತ್ತೀಚಿನ ವಾರ್ಷಿಕ ವರದಿಯು ತಿಳಿಸಿದೆ. ಆರ್‌ಬಿಐ ಅಡಿಯಲ್ಲಿ ಕಾರ್ಯನಿರ್ವಹಿಸುವ ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಾನ್‌ನಿಂದ ಪಡೆದ ಆರ್‌ಟಿಐ ಉತ್ತರದ ಪ್ರಕಾರ, 2019-20, 2020-21 ಮತ್ತು 2021-22ರಲ್ಲಿ 2,000 ಮುಖಬೆಲೆಯ ಕರೆನ್ಸಿ ನೋಟುಗಳ ಶೂನ್ಯ ಸಂಖ್ಯೆಯನ್ನು ಮುದ್ರಿಸಲಾಗಿದೆ ಎಂಬುದು ತಿಳಿದುಬಂದಿದೆ.


    ಇದರ ಪರಿಣಾಮವಾಗಿ ಮಾರ್ಚ್ 31, 2022 ರಂತೆ, ಮೌಲ್ಯವನ್ನು ಆಧರಿಸಿ ಚಲಾವಣೆಯಲ್ಲಿರುವ ಎಲ್ಲಾ ಕರೆನ್ಸಿ ನೋಟುಗಳಲ್ಲಿ ಈ ನೋಟುಗಳು ಕೇವಲ 13.8% ವನ್ನು ಹೊಂದಿವೆ ಎಂದು ವರದಿ ಉಲ್ಲೇಖಿಸಿದೆ. ಆರ್‌ಬಿಐ ಕೂಡ ಈ ನೋಟುಗಳನ್ನು ಹಿಂಪಡೆಯಲು ಆರಂಭಿಸಿದ್ದು, ವರ್ಷಗಳಲ್ಲಿ ಈ ನೋಟುಗಳ ಸಂಖ್ಯೆಯು ಸ್ಥಿರವಾಗಿ ಕುಸಿಯುತ್ತಿದೆ. FY20 ರ (ಆರ್ಥಿಕ ವರ್ಷ) ಅಂತ್ಯದ ವೇಳೆಗೆ 274 ಕೋಟಿಗಳಿಂದ, 2,000 ರೂಪಾಯಿ ಕರೆನ್ಸಿ ನೋಟುಗಳ ಸಂಖ್ಯೆ FY22 ರ ಅಂತ್ಯದ ವೇಳೆಗೆ 214 ಕೋಟಿಗಳಿಗೆ ಕುಸಿದಿದೆ ಎನ್ನಲಾಗಿದೆ.


    ಆರ್‌ಬಿಐ 2000 ರೂಪಾಯಿ ನೋಟುಗಳ ಮುದ್ರಣವನ್ನು ನಿಲ್ಲಿಸಲು ಕಾರಣಗಳೇನು?


    2,000 ರೂಪಾಯಿ ನೋಟುಗಳು ಜನರನ್ನು ಗೊಂದಲಕ್ಕೀಡು ಮಾಡಿದೆ ಎಂದು ಸರಕಾರವು ನೋಟು ಅಮಾನ್ಯೀಕರಣಕ್ಕೆ ಕಾರಣಗಳನ್ನು ನೀಡಿದೆ. ಹೆಚ್ಚು ಮೌಲ್ಯದ ನೋಟುಗಳು ಹೆಚ್ಚು ಪ್ರಮಾಣದ ಸಂಗ್ರಹಣೆ ಮೌಲ್ಯವನ್ನು ಹೊಂದಿರುವುದರಿಂದ ಅವುಗಳನ್ನು ಹೆಚ್ಚು ಸುಲಭವಾಗಿ ಸಂಗ್ರಹಿಸಬಹುದು. ಆದಾಗ್ಯೂ ಕೇಂದ್ರ ಬ್ಯಾಂಕ್ ಅವುಗಳನ್ನು ದೀರ್ಘಾವಧಿಯ ಆಯ್ಕೆಯಾಗಿ ನೋಡುವುದಿಲ್ಲ ಎಂಬುವದೇ ಈ ನೋಟುಗಳ ಕುಸಿತಕ್ಕೆ ಕಾರಣವಾಗಿದೆ.


    ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ನ ಭಾರತದ ಅರ್ಥಶಾಸ್ತ್ರಜ್ಞ ಗೌರಾ ಸೇನ್ ಗುಪ್ತಾ ತಿಳಿಸಿರುವಂತೆ 2,000 ನೋಟುಗಳ ಷೇರನ್ನು ಕಡಿಮೆ ಮಾಡಲು ಪ್ರಜ್ಞಾಪೂರ್ವಕ ಪ್ರಯತ್ನ ನಡೆದಿದೆ ಏಕೆಂದರೆ ಆರ್ಥಿಕ ವರ್ಷ 2019 ರಿಂದ ಸಂಪೂರ್ಣ ಕುಸಿತವನ್ನು ಕಂಡಿದ್ದು ಇದರಿಂದ ತಿಳಿಯುತ್ತದೆ ಎಂದಿದ್ದಾರೆ. ಇದು ಸಣ್ಣ ಮುಖಬೆಲೆಯ ಪಾವತಿಗಳನ್ನು ಮಾಡಲು ನೋಟುಗಳನ್ನು ಬಳಸುವಲ್ಲಿನ ತೊಂದರೆಯ ಪ್ರತಿಬಿಂಬವಾಗಿದೆ ಎಂದು ಗೌರಾ ಸೇನ್ ಹೇಳಿದ್ದಾರೆ


    ನೋಟುಗಳಿಗೆ ಕುಸಿದ ಬೇಡಿಕೆ


    ನಗದು ನಿರ್ವಹಣಾ ಸಂಸ್ಥೆಯೊಂದರ ಅಧಿಕಾರಿಯೊಬ್ಬರು ತಿಳಿಸಿರುವಂತೆ 2,000 ನೋಟುಗಳಿಗೆ ಬೇಡಿಕೆ ಕಡಿಮೆ ಎಂದು ಬ್ಯಾಂಕ್‌ಗಳು ಅರಿತುಕೊಂಡಿವೆ ಹಾಗಾಗಿ ಅದರ ಉತ್ಪಾದನೆ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ. ಸಾರ್ವಜನಿಕರು ಕಡಿಮೆ ಮುಖಬೆಲೆಯ ಕರೆನ್ಸಿ ನೋಟುಗಳನ್ನು ರೂ 2,000 ರೂ ನೋಟುಗಳ ಮೇಲೆ ಹಿಂಪಡೆಯಲು ಬಯಸುತ್ತಾರೆ ಹಾಗಾಗಿ, ಕೆಲವು ಬ್ಯಾಂಕುಗಳು ತಮ್ಮ ಎಟಿಎಂಗಳನ್ನು ಮರುಮಾಪನ ಮಾಡುತ್ತಿವೆ ಎಂಬುದು ಅಧಿಕಾರಿಯ ಮಾತಾಗಿದೆ.

    ಬ್ಯಾಂಕ್ ಆಫ್ ಬರೋಡಾದ ಅರ್ಥಶಾಸ್ತ್ರಜ್ಞ ಸೋನಾಲ್ ಬಧನ್ ಕೂಡ ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಹೆಚ್ಚಿನ ಮುಖಬೆಲೆಯ ನೋಟುಗಳನ್ನು ಚಿಕ್ಕ ಮುಖಬೆಲೆಯ ನೋಟುಗಳಿಗೆ ಬದಲಾಯಿಸುವಂತೆ ಹೆಚ್ಚಿನ ವಿನಂತಿಗಳನ್ನು ಬ್ಯಾಂಕ್‌ಗಳು ಎದುರಿಸುವ ಸಾಧ್ಯತೆ ಇದೆ. ಹೀಗಾಗಿ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗುವ ರೀತಿಯಲ್ಲಿ ಎಟಿಎಂಗಳ ಮೂಲಕ ಸಣ್ಣ ಮುಖಬೆಲೆಯ ನೋಟುಗಳನ್ನು ಒದಗಿಸಲು ಪ್ರಜ್ಞಾಪೂರ್ವಕ ನಿರ್ಧಾರವನ್ನು ತೆಗೆದುಕೊಳ್ಳುತ್ತಿವೆ ಎಂದು ಬಧನ್ ತಿಳಿಸಿದ್ದಾರೆ.


    ಹಾಗಿದ್ದರೆ .2000 ರೂಪಾಯಿ ನೋಟುಗಳ ಚಲಾವಣೆಯಿಂದ ಕಣ್ಮರೆಯಾಗಲಿವೆಯೇ?


    ಆರ್ಥಿಕ ವರ್ಷ 20 ರಿಂದ RBI 2,000 ರೂ ನೋಟುಗಳನ್ನು ಮುದ್ರಿಸಿಲ್ಲದ ಕಾರಣ, ತಜ್ಞರು ಅವುಗಳನ್ನು ಮತ್ತೆ ಮುದ್ರಿಸಲು ಕಾರಣ ಕಾಣುತ್ತಿಲ್ಲ, ಅದರಲ್ಲೂ ವಿಶೇಷವಾಗಿ ಕಳ್ಳಹಣವನ್ನು ವಶಪಡಿಸಿಕೊಳ್ಳುವ ನಿದರ್ಶನಗಳು ಮುಂದುವರಿದಿವೆ.


    ಎನ್‌ಸಿಆರ್‌ಬಿ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ವಶಪಡಿಸಿಕೊಂಡ 2,000 ರೂಪಾಯಿ ಮುಖಬೆಲೆಯ ನಕಲಿ ನೋಟುಗಳ ಸಂಖ್ಯೆಯು 2016 ಮತ್ತು 2020 ರ ನಡುವೆ 2,272 ರಿಂದ ಗಣನೀಯವಾಗಿ ಹೆಚ್ಚಾಗಿದ್ದು, 2,44,834 ಕ್ಕೆ ತಲುಪಿದೆ ಎಂದು ಇತ್ತೀಚೆಗೆ ಸಂಸತ್ತಿನಲ್ಲಿ ನೀಡಿದ ಉತ್ತರದಲ್ಲಿ ಸರಕಾರ ಹೇಳಿತ್ತು.


    ಇಂದಿಗೂ ನಿಲ್ಲದ ಬ್ಲ್ಯಾಕ್‌ಮನಿ ದಂಧೆ


    ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಪತ್ತೆಯಾದ ಶೇಕಡ 90 ಕ್ಕಿಂತ ಹೆಚ್ಚು ನಕಲಿ ನೋಟುಗಳು ಕಡಿಮೆ ಗುಣಮಟ್ಟದ್ದಾಗಿವೆ ಮತ್ತು ಯಾವುದೇ ಪ್ರಮುಖ ಭದ್ರತಾ ವೈಶಿಷ್ಟ್ಯಗಳನ್ನು ಪಾಲಿಸಿಲ್ಲ. ಈ ನೋಟುಗಳ ಭದ್ರತಾ ವೈಶಿಷ್ಟ್ಯಗಳ ವಿವರಗಳನ್ನು ಸಾರ್ವಜನಿಕರಿಗಾಗಿ ಆರ್‌ಬಿಐ ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಲಾಗುತ್ತದೆ ಎಂದು ಸರಕಾರ ಸದನದಲ್ಲಿ ತಿಳಿಸಿದೆ. ಆಗಸ್ಟ್‌ನಲ್ಲಿ, ಆದಾಯ ತೆರಿಗೆ ಇಲಾಖೆಯು ಹರಿಯಾಣ ಮತ್ತು ದೆಹಲಿ-ಎನ್‌ಸಿಆರ್‌ನಲ್ಲಿ ಆಸ್ಪತ್ರೆಗಳನ್ನು ನಡೆಸುತ್ತಿರುವ ಹಲವಾರು ವ್ಯವಹಾರ ಗುಂಪುಗಳ ಮೇಲೆ ದಾಳಿ ನಡೆಸಿದ ನಂತರ 150 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಕಪ್ಪು ಹಣವನ್ನು (ಬ್ಲ್ಯಾಕ್ ಮನಿ) ಪತ್ತೆ ಮಾಡಿದೆ ಎಂದು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ವರದಿ ಮಾಡಿದೆ.


    ಇದನ್ನೂ ಓದಿ: ಆಧಾರ್ ಕಾರ್ಡ್‌ನಲ್ಲಿ ಹಳೇ ಫೋಟೋ ಇದ್ಯಾ? ಹೀಗೆ ನಿಮ್ಮ ಹೊಸ ಫೋಟೋ ಅಪ್​ಡೇಟ್​ ಮಾಡಿ!


    ಅದೇ ರೀತಿ, ತಮಿಳುನಾಡಿನಲ್ಲಿ ರೇಷ್ಮೆ ಸೀರೆ ವ್ಯಾಪಾರ ಮತ್ತು ಚಿಟ್ ಫಂಡ್ ನಡೆಸುತ್ತಿರುವ ಎರಡು ವ್ಯಾಪಾರ ಗುಂಪುಗಳ ಮೇಲೆ ನಡೆಸಿದ ಶೋಧನೆಯಲ್ಲಿ ಇಲಾಖೆಯು 250 ಕೋಟಿ ರೂ.ಗೂ ಹೆಚ್ಚು ಅಘೋಷಿತ ಆದಾಯವನ್ನು ಪತ್ತೆಹಚ್ಚಿದೆ ಎಂದು ಮತ್ತೊಂದು ಪಿಟಿಐ ವರದಿ ತೋರಿಸಿದೆ. ದೇಶಾದ್ಯಂತ ಕಳ್ಳ ಹಣವನ್ನು ವಶಪಡಿಸಿಕೊಂಡಂತಹ ಇಂತಹ ಹಲವಾರು ನಿದರ್ಶನಗಳಿವೆ. ಅಲ್ಲದೆ, ಈ ಮುಖಬೆಲೆಯಲ್ಲಿ ನಕಲಿ ಕರೆನ್ಸಿ ಅಧಿಕವಾಗಿದೆ, FY22 ರಲ್ಲಿ 2,000 ರೂ ಮುಖಬೆಲೆಯ ನಕಲಿ ನೋಟುಗಳಲ್ಲಿ 55% ಏರಿಕೆಯನ್ನು ಕೇಂದ್ರ ಬ್ಯಾಂಕ್ ಪತ್ತೆ ಮಾಡಿದೆ. ಈ ನೋಟುಗಳು ಕಣ್ಮರೆಯಾಗದಿದ್ದರೂ ಅವುಗಳು ಬಳಕೆ ಹಾಗೂ ಸಂಖ್ಯೆಯಲ್ಲಿ ಕಡಿಮೆಯಾಗುವ ಸಾಧ್ಯತೆ ಇದೆ.

    Published by:Precilla Olivia Dias
    First published: