• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • Hasmukh Chudgar: ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ ಹಸ್ಮುಖ್ ಚುದ್ಗರ್ ಸಹ ಒಬ್ಬರಂತೆ! ಇವರ ಆಸ್ತಿ ಎಷ್ಟಿದೆ ಅಂತ ಕೇಳಿದ್ರೆ ಶಾಕ್ ಆಗೋದು ಗ್ಯಾರೆಂಟಿ

Hasmukh Chudgar: ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ ಹಸ್ಮುಖ್ ಚುದ್ಗರ್ ಸಹ ಒಬ್ಬರಂತೆ! ಇವರ ಆಸ್ತಿ ಎಷ್ಟಿದೆ ಅಂತ ಕೇಳಿದ್ರೆ ಶಾಕ್ ಆಗೋದು ಗ್ಯಾರೆಂಟಿ

ಹಸ್ಮುಖ್ ಚುಡ್ಗರ್

ಹಸ್ಮುಖ್ ಚುಡ್ಗರ್

ಜೆನೆರಿಕ್ಸ್ ತಯಾರಕ ಇಂಟಾಸ್ ಫಾರ್ಮಾಸ್ಯುಟಿಕಲ್ಸ್ ನ ಸ್ಥಾಪಕ ಹಸ್ಮುಖ್ ಚುದ್ಗರ್ ಭಾರತದ ಅತ್ಯಂತ ಹಳೆಯ ಶತಕೋಟ್ಯಾಧಿಪತಿಗಳಲ್ಲಿ ಒಬ್ಬರು ಅಂತಾನೆ ಹೇಳಬಹುದು. ಹಸ್ಮುಖ್ ಚುದ್ಗರ್ ಅವರು 1977 ರಲ್ಲಿ ಇಂಟಾಸ್ ಫಾರ್ಮಾಸ್ಯುಟಿಕಲ್ಸ್ ಅನ್ನು ಸ್ಥಾಪಿಸಿದ್ದರು.

  • Share this:

ಮನುಷ್ಯ (Human) ಅಂದ ಮೇಲೆ ನೂರಾರು ಕಾಯಿಲೆಗಳು ಇದ್ದದ್ದೇ ಅಲ್ಲವೇ? ಹೌದು, ಈ ಕಾಯಿಲೆಗಳನ್ನು (Disease) ಗುಣಪಡಿಸುವಲ್ಲಿ ಅನಾದಿ ಕಾಲದಿಂದಲೂ ಈ ಔಷಧಿಗಳು ಮತ್ತು ಚಿಕಿತ್ಸೆಗಳು ತುಂಬಾನೇ ಮುಖ್ಯವಾದ ಪಾತ್ರವನ್ನು ಹೊಂದಿವೆ. ಆರಂಭಿಕ ದಿನಗಳಲ್ಲಿ, ಈ ಔಷಧಿಗಳು (Medicines) ಮತ್ತು ಚಿಕಿತ್ಸೆಗಳು ಈಗ ನಾವು ಹೊಂದಿರುವ ಚಿಕಿತ್ಸೆಗಳಿಗಿಂತ ಮತ್ತು ಔಷಧಿಗಳಿಗಿಂತಲೂ ತುಂಬಾನೇ ಭಿನ್ನವಾಗಿದ್ದವು. ಇಂದು, ಅಭಿವೃದ್ಧಿಯ ಹೊಸ ವಿಧಾನಗಳು ಮತ್ತು ಬೆಳೆಯುತ್ತಿರುವ ತಂತ್ರಜ್ಞಾನ ಈ ಔಷಧೀಯ ಉದ್ಯಮವನ್ನು ಮಿಲಿಯನ್ ಡಾಲರ್ ಜಾಗತಿಕ ಉದ್ಯಮವನ್ನಾಗಿ ಮಾಡಿವೆ.


ಈ ಔಷಧೀಯ ಉತ್ಪಾದನಾ ಕಂಪನಿಗಳು ಕೇವಲ ಅನಾರೋಗ್ಯದಿಂದ ಬಳಲುವವರಿಗೆ ಸಹಾಯ ಮಾಡುವುದಲ್ಲದೆ, ದೇಶದ ಆರ್ಥಿಕತೆಯನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತವೆ. ಇದು ಜಾಗತಿಕ ಮಟ್ಟದಲ್ಲಿ ಪರಿಸರ ವ್ಯವಸ್ಥೆಗೆ ಹೆಚ್ಚಿನ ಕೊಡುಗೆ ಸಹ ನೀಡಿದೆ. ಈಗ ಇಲ್ಲಿ ನಾವು ಇಂತಹದೇ ಒಂದು ದೊಡ್ಡ ಔಷಧಿ ತಯಾರಕ ಕಂಪನಿಯನ್ನು ಕಟ್ಟಿ ಬೆಳೆಸಿದ ಹರಿಕಾರಕರಾದ ಹಸ್ಮುಖ್ ಚುದ್ಗರ್ ಅವರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.


ಯಾರು ಈ ಹಸ್ಮುಖ್ ಚುದ್ಗರ್? ಇವರು ಕಟ್ಟಿ ಬೆಳೆಸಿದ ಔಷಧಿ ತಯಾರಕ ಕಂಪನಿ ಯಾವುದು?


ಇಂಟಾಸ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ಅಂತಹ ಒಂದು ಖಾಸಗಿ ಔಷಧೀಯ ಉತ್ಪಾದನಾ ಕಂಪನಿಯಾಗಿದ್ದು, ಗುಜರಾತ್ ರಾಜ್ಯದ ಅಹಮದಾಬಾದ್ ನಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿರುವ ಫಾರ್ಮಾಸ್ಯುಟಿಕಲ್ಸ್ ನ ಸೂತ್ರೀಕರಣ, ಉತ್ಪಾದನೆ ಮತ್ತು ಮಾರ್ಕೆಟಿಂಗ್ ನಲ್ಲಿ ತೊಡಗಿದೆ.


ಇದನ್ನೂ ಓದಿ: ಪೆಟ್ರೋಲ್ ಡೀಸೆಲ್ ಬೆಲೆಗಳಲ್ಲಿ ಹಾವು ಏಣಿಯಾಟ! ಹೀಗಿದೆ ಇಂದಿನ ದರ ವಿವರ
ಜೆನೆರಿಕ್ಸ್ ತಯಾರಕ ಇಂಟಾಸ್ ಫಾರ್ಮಾಸ್ಯುಟಿಕಲ್ಸ್ ನ ಸ್ಥಾಪಕ ಹಸ್ಮುಖ್ ಚುದ್ಗರ್ ಭಾರತದ ಅತ್ಯಂತ ಹಳೆಯ ಶತಕೋಟ್ಯಾಧಿಪತಿಗಳಲ್ಲಿ ಒಬ್ಬರು ಅಂತಾನೆ ಹೇಳಬಹುದು. ಹಸ್ಮುಖ್ ಚುದ್ಗರ್ ಅವರು 1977 ರಲ್ಲಿ ಇಂಟಾಸ್ ಫಾರ್ಮಾಸ್ಯುಟಿಕಲ್ಸ್ ಅನ್ನು ಸ್ಥಾಪಿಸಿದ್ದರು. ಫೋರ್ಬ್ಸ್ ಪ್ರಕಾರ, ಹಸ್ಮುಖ್ ಚುದ್ಗರ್ ಮತ್ತು ಕುಟುಂಬದ ನಿವ್ವಳ ಮೌಲ್ಯ 7.6 ಬಿಲಿಯನ್ ಡಾಲರ್ ಆಗಿದೆ.

ಹಸ್ಮುಖ್ ಅವರ ಕಂಪನಿಯ ನಿವ್ವಳ ಆದಾಯ ಈಗ 2.3 ಬಿಲಿಯನ್ ಡಾಲರ್


ಹಸ್ಮುಖ್ ಚುದ್ಗರ್ ಈಗ 2.3 ಬಿಲಿಯನ್ ಡಾಲರ್ (ಆದಾಯ) ಕಂಪನಿಯ ಕಾರ್ಯಾಚರಣೆಯನ್ನು ತಮ್ಮ ಮಕ್ಕಳಾದ ನಿಮಿಶ್ ಮತ್ತು ಬಿನಿಶ್ ಚುದ್ಗರ್ ಅವರಿಗೆ ಹಸ್ತಾಂತರಿಸಿದ್ದಾರೆ. ಹಸ್ಮುಖ್ ಅವರು ಗುಜರಾತ್ ವಿಶ್ವವಿದ್ಯಾಲಯದಿಂದ ಫಾರ್ಮಸಿಯಲ್ಲಿ ಪದವಿ ಪಡೆದಿದ್ದಾರೆ. ಅವರು ಪ್ರಸ್ತುತ ಇಂಟಾಸ್ ಫಾರ್ಮಾದ ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದಾರೆ. ಇಂಟಾಸ್ ಸುಮಾರು 15 ಕಾರ್ಖಾನೆಗಳನ್ನು ಹೊಂದಿದೆ, ಅವುಗಳಲ್ಲಿ 10 ಕಾರ್ಖಾನೆಗಳು ಯುರೋಪ್ ಮತ್ತು ಮೆಕ್ಸಿಕೊದಲ್ಲಿವೆ.



ಹಸ್ಮುಖ್ ಚುಡ್ಗರ್

ಇಂಟಾಸ್ 2019 ರಲ್ಲಿ ಸ್ತನ ಕ್ಯಾನ್ಸರ್ ಗೆ ಚಿಕಿತ್ಸೆ ನೀಡಲು ಎಲೆಫ್ತಾ ಎಂಬ ಕೈಗೆಟುಕುವ ಔಷಧವನ್ನು ಪ್ರಾರಂಭಿಸುವುದಾಗಿ ಘೋಷಿಸಿದಾಗ ತುಂಬಾನೇ ಸುದ್ದಿಯಾಯಿತು. ಇಂಟಾಸ್ ತಯಾರಿಸಿದ ಔಷಧವು ರೋಶೆ ತಯಾರಿಸಿದ ಹರ್ಸೆಪ್ಟಿನ್ ಗೆ ಹೋಲುತ್ತದೆ.


ಹಸ್ಮುಖ್ ಅವರಿಗೆ ಫಾರ್ಮಾ ಉದ್ಯಮದಲ್ಲಿ ತುಂಬಾನೇ ಅನುಭವವಿದೆ..


ಅಬುಧಾಬಿ ಇನ್ವೆಸ್ಟ್ಮೆಂಟ್ ಅಥಾರಿಟಿ 2022 ರಲ್ಲಿ ಸಿಂಗಾಪುರ್ ಮೂಲದ ಸಂಸ್ಥೆ ಟೆಮಾಸೆಕ್ ನಿಂದ ಇಂಟಾಸ್ ನಲ್ಲಿ 3 ಪ್ರತಿಶತದಷ್ಟು ಪಾಲನ್ನು ಸಹ ಖರೀದಿಸಿತು. ಈ ಕಂಪನಿಯ ಅತಿದೊಡ್ಡ ಮಾರುಕಟ್ಟೆಗಳು ಯುರೋಪ್ ಮತ್ತು ಭಾರತ ಆಗಿವೆ ಅಂತ ಹೇಳಲಾಗುತ್ತಿದೆ.


 


ಹಸ್ಮುಖ್ ಅವರು ಈ ಫಾರ್ಮಾ ಉದ್ಯಮದಲ್ಲಿ ತುಂಬಾನೇ ಅನುಭವವನ್ನು ಹೊಂದಿದ್ದಾರೆ. ಅವರು ಪ್ರಸ್ತುತ ಕಂಪನಿಯ ಉದ್ಯೋಗಿಗಳಿಗೆ ಸಹಾಯ ಮಾಡಲು ಸ್ಥಾಪಿಸಲಾದ ಇಂಟಾಸ್ ವೆಲ್ಫೇರ್ ಟ್ರಸ್ಟ್ ನ ಟ್ರಸ್ಟಿಯಾಗಿದ್ದಾರೆ. ಚುದ್ಗರ್ ತುಂಬಾನೇ ಸರಳ ವ್ಯಕ್ತಿಯಾಗಿದ್ದು, ಅವರು ಉದ್ಯಮದಲ್ಲಿ ತುಂಬಾನೇ ನಿಪುಣರು ಮತ್ತು ಹೆಚ್ಚು ಅನುಭವ ಹೊಂದಿರುವವರು ಆಗಿದ್ದಾರೆ. ಚುದ್ಗರ್ ಅವರು ತುಂಬಾನೇ ಮಹತ್ವಕಾಂಕ್ಷೆಯುಳ್ಳವರಾಗಿದ್ದು, ತುಂಬಾನೇ ಸಿಂಪಲ್ ಪ್ರೊಫೈಲ್ ಹೊಂದಿರಲು ಬಯಸುವ ಉದ್ಯಮಿಯಾಗಿದ್ದಾರೆ.


First published: