Economic Crisis: ಬೆಂಗಳೂರಿಗೂ ಅಪ್ಪಳಿಸಿದೆಯೇ ಅಮೆರಿಕಾದ ಆರ್ಥಿಕ ಹಿಂಜರಿತ?

ಕೋಡಿಂಗ್ ರಾಜಧಾನಿಯಾದ ಬೆಂಗಳೂರು ಮುಖ್ಯವಾಗಿ ಸೇರಿದಂತೆ ಭಾರತದಲ್ಲಿರುವ ದಿಗ್ಗಜ ಐಟಿ ಕಂಪನಿಗಳ ಒಟ್ಟು ಆದಾಯದ ಪೈಕಿ ಏನಿಲ್ಲವೆಂದರೂ ಶೇ. 40 ರಷ್ಟು ಪ್ರಮಾಣವು ಅದು ಅಮೆರಿಕಕ್ಕೆ ರಫ್ತು ಮಾಡುವುದರಿಂದಲೇ ಬರುವುದರಿಂದಲೇ ಬರುತ್ತದೆ ಎನ್ನಲಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಈಗಂತೂ ಜಾಗತಿಕವಾಗಿ ಅಮೆರಿಕದಲ್ಲಿ ಆರ್ಥಿಕ ಹಿಂಜರಿತ (Recession in America) ಮುಂದಿನ ವರ್ಷದವರೆಗೆ ಬಂದಪ್ಪಳಿಸಲಿದೆ ಎಂದು ಬಹುತೇಕ ಆರ್ಥಿಕ ವಿಶ್ಲೇಷಕರು ಅಭಿಪ್ರಾಯವ ವ್ಯಕ್ತಪಡಿಸುತ್ತಿರುವುದು ಸುಳ್ಳಲ್ಲ. ಇತ್ತೀಚಿಗಷ್ಟೇ ಗೋಲ್ಡ್ ಮ್ಯಾನ್ ಸ್ಯಾಕ್ಸ್ ಎಂಬ ಆರ್ಥಿಕ ವಿಶ್ಲೇಷಣಾ ಸಂಸ್ಥೆಯು (Institute of Economic Analysis) ತನ್ನ ವರದಿಯಲ್ಲಿ ಅಮೆರಿಕವು ಮುಂದಿನ ವರ್ಷದವರೆಗೆ ಆರ್ಥಿಕ ಹಿಂಜರಿತ ಅಥವಾ ರಿಸೆಷನ್ ಅನ್ನು ಅನುಭವಿಸುವ ಸಾಧ್ಯತೆ ಶೇ. 30 ರಷ್ಟು ಇರುವುದಾಗಿ ತಿಳಿಸಿದೆ. ಈ ನಿಟ್ಟಿನಲ್ಲಿ ಒಂದೊಮ್ಮೆ ಅಮೆರಿಕದಲ್ಲಿ ಆರ್ಥಿಕ ಹಿಂಜರಿತ ಉಂಟಾದ ಸಂದರ್ಭದಲ್ಲಿ ಅದರ ಪರಿಣಾಮ ಭಾರತದ (India) ಮೇಲೆಯೂ ಗಂಭೀರವಾಗಿ ಬೀಳಲಿದೆ ಎಂದು ಈಗಾಗಲೇ ಕೆಲ ಆರ್ಥಿಕ ತಜ್ಞರು ವಿಶ್ಲೇಷಿಸುತ್ತಿರುವುದು ಸುಳ್ಳಲ್ಲ.

ಕೋಡಿಂಗ್ ರಾಜಧಾನಿಯಾದ ಬೆಂಗಳೂರು ಮುಖ್ಯವಾಗಿ ಸೇರಿದಂತೆ ಭಾರತದಲ್ಲಿರುವ ದಿಗ್ಗಜ ಐಟಿ ಕಂಪನಿಗಳ ಒಟ್ಟು ಆದಾಯದ ಪೈಕಿ ಏನಿಲ್ಲವೆಂದರೂ ಶೇ. 40 ರಷ್ಟು ಪ್ರಮಾಣವು ಅದು ಅಮೆರಿಕಕ್ಕೆ ರಫ್ತು ಮಾಡುವುದರಿಂದಲೇ ಬರುವುದರಿಂದಲೇ ಬರುತ್ತದೆ ಎನ್ನಲಾಗಿದ್ದು ಅಮೆರಿಕದಲ್ಲಾಗಬಹುದಾದ ರಿಸೆಷನ್ ಭಾರತದ ಮೇಲೆಯೂ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗುತ್ತಿದೆ.

ಭಾರತದಲ್ಲಿ ಐಟಿಗೆ ಸಂಬಂಧಿಸಿದ ನಿಫ್ಟಿ ಸೂಚ್ಯಂಕದಲ್ಲಿ ಇಳಿಕೆ
ಭಾರತದಲ್ಲಿ ಐಟಿಗೆ ಸಂಬಂಧಿಸಿದಂತೆ ನಿಫ್ಟಿ ಸೂಚ್ಯಂಕದಲ್ಲಿ ಇಲ್ಲಿಯವರೆಗೆ 27% ರಷ್ಟು ಇಳಿಕೆ ಕಂಡುಬಂದಿದೆ. ಈ ಒಂದು ಇಳಿತವು ಈ ಹಿಂದೆ ಕೋವಿಡ್ ಉಂಟಾದ ಸಂದರ್ಭದಲ್ಲಿ ಕಂಡುಬಂದಿತ್ತು. ಆದರೂ ಭಾರತದ ಟೆಕ್ ಕಂಪನಿಗಳು ಈ ನಿಟ್ಟಿನಲ್ಲಿ ಧನಾತ್ಮಕ ಧೋರಣೆಯನ್ನೇ ಹೊಂದಿವೆ ಎಂದು ಹೇಳಬಹುದು. ಏಕೆಂದರೆ, ಈಗಾಗಲೇ ಕೆಲ ಐಟಿ ಕಂಪನಿಗಳು ಜೂನ್ 2022ರ ತ್ರೈಮಾಸಿಕದಲ್ಲಿ ಡಿಸೆಂಟ್ ಎನ್ನಬಹುದಾದ ನಿವ್ವಳ ಲಾಭವನ್ನು ಗಳಿಸಿದ್ದು ಅದೆಷ್ಟೋ ಒಪ್ಪಂದಗಳು ಈಗಲೂ ಏರ್ಪಡುತ್ತಿವೆ ಎಂದು ಹೇಳಲಾಗುತ್ತಿದೆ.

ಇನ್ಫೋಸಿಸ್ ಸಂಸ್ಥೆಯ ತ್ರೈಮಾಸಿಕ ಲಾಭಾಂಶ ವರದಿ
ಇನ್ಫೋಸಿಸ್ ಸಂಸ್ಥೆಯು ತನ್ನ ಹಿಂದಿನ ಪ್ರದರ್ಶನಕ್ಕೆ ಹೋಲಿಸಿದರೆ ಈ ಬಾರಿಯ ಲೇಟೆಸ್ಟ್ ತ್ರೈಮಾಸಿಕದ ಅಂತ್ಯದಲ್ಲಿ ಸುಮಾರು 14% ರಿಂದ 16% ರಷ್ಟು ಪ್ರಮಾಣದ ಲಾಭವನ್ನು ದಾಖಲಿಸಿದೆ. ಇತ್ತೀಚಿಗಷ್ಟೆ ಕಂಪನಿಯು ಬಿಡುಗಡೆ ಮಾಡಿದ ತನ್ನ ತ್ರೈಮಾಸಿಕ ವರದಿಯಲ್ಲಿ ಈ ಅಂಶವನ್ನು ಪ್ರಕಟಿಸಿದೆ. ಅಲ್ಲದೆ ಅಮೆರಿಕ ಹಾಗೂ ಯುರೋಪ್ ಗ್ರಾಹಕರ ಹಲವು ಒಪ್ಪಂದಗಳು ಕಂಪನಿಯೊಂದಿಗೆ ಈಗಲೂ ಏರ್ಪಡುವ ಪ್ರಕ್ರಿಯೆಯಲ್ಲಿ ಸಾಗುತ್ತಿರುವುದೇ ಸಂಸ್ಥೆಯು ಮುಂಬರುವ ಸಮಯದಲ್ಲೂ ಸಹ ವ್ಯವಹಾರದಲ್ಲಿ ಪ್ರಗತಿಯೇ ಆಗಲಿದೆ ಎಂಬ ಧನಾತ್ಮಕ ಧೋರಣೆ ಹೊಂದುವುದಕ್ಕೆ ಕಾರಣವಾಗಿದೆ ಎಂದರೂ ತಪ್ಪಾಗಲಾರದು.

ಇನ್ನೊಂದೆಡೆ ನೋಡಿದರೆ ಭಾರತದ ಐಟಿ ದಿಗ್ಗಜ ಸಂಸ್ಥೆಗಳು ತಮ್ಮ ಕಚೇರಿ ಸ್ಥಳಕ್ಕಾಗಿ ವರ್ಷದಿಂದ ವರ್ಷಕ್ಕೆ 12% ರಷ್ಟು ಹೆಚ್ಚು ಬಾಡಿಗೆ ಭರಿಸುತ್ತಿವೆ. ಈ ಬಾಡಿಗೆ ದರಗಳು ಹಾಗೆ ನೋಡಿದರೆ ಅವು ಸಿಡ್ನಿ, ಶಾಂಘೈ ಅಥವಾ ಸಿಂಗಾಪೂರ್ ಕಚೇರಿಗಳಿಗೆ ನೀಡುತ್ತಿರುವ ಬಾಡಿಗೆ ಪ್ರಮಾಣಕ್ಕಿಂತ 2-3 ಪಟ್ಟು ಹೆಚ್ಚೇ ಆಗಿದೆ. ಆದಾಗ್ಯೂ ಇದನ್ನು ನಿಭಾಯಿಸುತ್ತಿರುವುದನ್ನು ಗಮನಿಸಿದರೆ ಬೆಂಗಳೂರಿನ ಐಟಿ ಕಂಪನಿಗಳು ತಮ್ಮ ಭವಿಷ್ಯದ ಒಪ್ಪಂದಗಳ ಬಗ್ಗೆ ಸಾಕಷ್ಟು ಆತ್ಮವಿಶ್ವಾಸದಿಂದ ಕೂಡಿವೆ ಅಂತಾನೇ ಹೇಳಬಹುದು.

ಹೆಚ್ಚಿನ ಪ್ರಮಾಣದಲ್ಲಾಗುತ್ತಿರುವ ಹಣದುಬ್ಬರದ ಸಮಸ್ಯೆ
ಭಾರತದ ಅದರಲ್ಲೂ ವಿಶೇಷವಾಗಿ ಬೆಂಗಳೂರು ಮೂಲದ ಈ ದಿಗ್ಗಜ ಐಟಿ ಕಂಪನಿಗಳ ಈ ರೀತಿಯ ಆತ್ಮವಿಶ್ವಾಸ ಅಥವಾ ಧನಾತ್ಮಕ ಧೋರಣೆ ಎಷ್ಟೊಂದು ಸರಿ ಆಗಿರಬಹುದು ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ. ಏಕೆಂದರೆ ಈ ಐಟಿ ಕಂಪನಿಗಳ ಆರ್ಥಿಕತೆಯನ್ನು ಬಲು ಸೂಕ್ಷ್ಮವಾಗಿ ಅವಲೋಕನ ಮಾಡಿದರೆ ಇಲ್ಲಿ ಸ್ಟ್ಯಾಗ್ ಫ್ಲೇಷನ್ ಇರುವುದು ಕಂಡುಬರುತ್ತದೆ.

ಇದನ್ನೂ ಓದಿ: MultiBagger Stock: ಒಂದೇ ವರ್ಷದಲ್ಲಿ ಈ ಷೇರಿನ ಬೆಲೆ ಶೇಕಡಾ 961ರಷ್ಟು ಏರಿಕೆ! ನೀವೂ ಇಲ್ಲಿ ಹೂಡಿಕೆ ಮಾಡಿದ್ದೀರಾ?

ಇದರಿಂದ ಹಣದುಬ್ಬರದ ಪ್ರಮಾಣವು ಹೆಚ್ಚಿನ ಪ್ರಮಾಣದಲ್ಲೇ ಸುಸ್ಥಿರವಾಗಿ ಸಾಗುತ್ತಿರುವ ಹಾಗೂ ಲಾಭಾಂಶವು ಪಾತಾಳಕ್ಕೆ ಕುಸಿದಿರುವ ಲಕ್ಷಣಗಳು ಕಂಡುಬರುತ್ತವೆ. ಇನ್ಫೋಸಿಸ್ ಸಂಸ್ಥೆಯು ಇತ್ತೀಚೆಗೆ ಉತ್ತಮ ಎನ್ನಬಹುದಾದ ಆದಾಯಗಳಿಕೆ ದಾಖಲಿಸಿದ್ದರೂ ಸಹ ಬಡ್ಡಿ ಹಾಗೂ ತೆರಿಗೆ ಪಾವತಿಯ ಮುಂಚೆ ಗಳಿಸಿದ ಆದಾಯದ (EBIT) ಲೆಕ್ಕ ಹಾಕಿದರೆ ಇನ್ಫೋಸಿಸ್ ಕೇವಲ 3.6 ರಷ್ಟು ಗಳಿಸಿದ್ದು ಇದನ್ನು ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ಆದಾಯ ತಗ್ಗಿರುವ ಅಂಶವು ಕಂಡುಬರುತ್ತದೆ.

ವಿವಿಧ ಟೆಕ್ ಕಂಪನಿಗಳ ಗಳಿಗೆ ಹೇಗಿದೆ?
ಅರ್ನಿಂಗ್ ಬಿಫೋರ್ ಇಂಟರೆಸ್ಟ್ ಆಂಡ್ ಟ್ಯಾಕ್ಸ್ (EBIT) ವಿಷಯವಾಗಿ ಇನ್ನೊಂದು ಐಟಿ ದಿಗ್ಗಜ ಸಂಸ್ಥೆಯಾದ ವಿಪ್ರೋವನ್ನು ಅವಲೋಕಿಸಿದರೆ ಅದರ ಗಳಿಕೆಯಲ್ಲಿ ಪಾತಾಳದಷ್ಟು ಕುಸಿತ ಕಂಡುಬಂದಿರುವುದನ್ನು ಗಮನಿಸಬಹುದಾಗಿದೆ. ಇನ್ನು ಟಿಸಿಎಸ್ ಸಂಸ್ಥೆಯು ತನ್ನ ಇತ್ತೀಚಿನ ತ್ರೈಮಾಸಿಕದಲ್ಲಿ 23% ರಷ್ಟು ಲಾಭವನ್ನು ದಾಖಲಿಸಿದ್ದರೂ EBIT ಪ್ರಮಾಣವು ಕಡಿಮೆಯೇ ಆಗಿದೆ. ಈ ಎಲ್ಲ ಅಂಶಗಳು ಸೇರಿ ಈ ವರ್ಷ ಲಾಭಾಂಶವು ಕಡಿಮೆ ಸ್ತರದಲ್ಲಿಯೇ ಇರಲಿದೆ ಎಂದು ಅಂದಾಜಿಸಲಾಗಿದೆ. ಏಕೆಂದರೆ ಪಾಶ್ಚಿಮಾತ್ಯ ಮಾರುಕಟ್ಟೆಯಲ್ಲಿ ಸಾಕಷ್ಟು ನಿಧಾನಗತಿ ಏರ್ಪಡಲಿದ್ದು ಅದರ ಪರಿಣಾಮ ಇಲ್ಲಿಯೂ ಬೀಳಲಿದೆ ಎನ್ನಲಾಗಿದೆ.

ಇದನ್ನೂ ಓದಿ:  Tax Return: ತೆರಿಗೆ ಪಾವತಿದಾರರಿಗೆ ಗುಡ್ ನ್ಯೂಸ್! ಫಾರ್ಮ್-16 ಇಲ್ಲದೆ ಐಟಿಆರ್ ಫೈಲ್ ಮಾಡ್ಬಹುದು

ಇನ್ನು ಅಟ್ರಿಷನ್ ದರ ಭಾರತದಲ್ಲಿ ನಿಭಾಯಿಸುವುದು ಮತ್ತಷ್ಟು ಸವಾಲಿನಿಂದ ಕೂಡಲಿದೆ. ಏಕೆಂದರೆ ಆಫ್ ಶೋರ್ ವ್ಯವಹಾರ ಸುಸ್ಥಿರ ಎನ್ನಬಹುದಾಗಿದ್ದರೂ ಹಲವು ಮುಖ್ಯ ಮಾನವ ಸಂಪನ್ಮೂಲಗಳು ಭಾರತದಲ್ಲೇ ಕೆಲಸ ನಿರ್ವಹಿಸಲು ಹಿಂದೇಟು ಹಾಕಬಹುದು, ಏಕೆಂದರೆ ಕ್ಲೈಂಟ್ ಸ್ಥಳಗಳಲ್ಲಿ ಕೆಲಸ ನಿರ್ವಹಿಸುವಿಕೆ ಅವರ ಆದಾಯದಲ್ಲಿ ಹೆಚ್ಚಿನ ಬೂಸ್ಟ್ ನೀಡುವುದರಿಂದ ಸಂಸ್ಥೆಗಳು ತಮ್ಮ ಮಾನವ ಸಂಪನ್ಮೂಲಗಳನ್ನು ಉಳಿಸಿಕೊಳ್ಳುವುದೂ ಸಹ ಒಂದು ಸವಾಲಾಗಿ ಪರಿಣಮಿಸಬಹುದು. ಈಗಾಗಲೇ ಟಿಸಿಎಸ್ ಸಂಸ್ಥೆಯಲ್ಲಿ ಈ ಬಾರಿ ಅಟ್ರಿಷನ್ ದರ (ಉದ್ಯೋಗಿಗಳು ಕೆಲಸ ತೊರೆಯುವುದು) ಬಹುತೇಕ 20% ರಷ್ಟಿದ್ದರೆ ಇನ್ಫೋಸಿಸ್ ನಲ್ಲಿ ಇದು 28% ರ ಗಡಿ ದಾಟಿತ್ತು.

ಕಡಿಮೆ ವೇತನದಲ್ಲಿ ಅನನುಭವಿ ಸಂಪನ್ಮೂಲಗಳನ್ನು ನೇಮಕ 
ಈ ಅಂಶವನ್ನು ಪ್ರಮುಖವಾಗಿ ಗಣನೆಗೆ ತೆಗೆದುಕೊಂಡರೆ ಕಂಪನಿಗಳಿಗೆ ತಮ್ಮ ಮಾರ್ಜಿನ್ ಪ್ರಾಫಿಟ್ ಅನ್ನು ಉಳಿಸಿಕೊಂಡು ಹೋಗಬೇಕೆಂದರೆ ಕಡಿಮೆ ವೇತನದಲ್ಲಿ ಅನನುಭವಿ ಸಂಪನ್ಮೂಲಗಳನ್ನು ನೇಮಕ ಮಾಡಿಕೊಂಡು ಅವರನ್ನು ಅನುಭವಿ ವ್ಯವಸ್ಥಾಪಕರ ಅಡಿಯಲ್ಲಿ ಕೆಲಸ ನಿರ್ವಹಿಸುವಂತೆ ಮಾಡಿಸುವಂತಹ ಸಂದರ್ಭ ಎದುರಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಮತ್ತೆ ಕ್ಲಿಷ್ಟಕರ ಅಥವಾ ಸಂಕೀರ್ಣ ಯೋಜನೆಯ ಭಾಗಗಳನ್ನು ಸಬ್ ಕಾಂಟ್ರ್ಯಾಕ್ಟ್ ಮಾಡಬೇಕಾಗಬಹುದು. ಈ ವಿಷಯದಲ್ಲೂ ಸಾಕಷ್ಟು ಹಣ ವ್ಯಯಿಸಬೇಕಾದ ಸಾಧ್ಯತೆಯಿರುತ್ತದೆ. ಇದೆಲ್ಲವನ್ನು ತಡೆಯಬೇಕೆಂದಿದ್ದರೆ ಭಾರತದ ಐಟಿ ಸೇವೆಗಳ ಅತಿ ಪ್ರಮುಖ ಹಾಗೂ ದೊಡ್ಡ ಮಾರುಕಟ್ಟೆಯಾದ ಅಮೆರಿಕದಲ್ಲಿ ರಿಸೆಷನ್ ಉಂಟಾಗುವುದು ತಪ್ಪಬೇಕು ಎಂದರೆ ತಪ್ಪಾಗಲಿಕ್ಕಿಲ್ಲ.
Published by:Ashwini Prabhu
First published: