• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • Alibaba Paytm: ಪೇಟಿಎಂನಿಂದ ಹಿಂದೆ ಸರಿಯಿತಾ ಅಲಿಬಾಬಾ ಗ್ರೂಪ್? ಬ್ಲಾಕ್ ಡೀಲ್ ಮೂಲಕ ಷೇರ್ ಮಾರಿದ ಇ-ಕಾಮರ್ಸ್ ದೈತ್ಯ!

Alibaba Paytm: ಪೇಟಿಎಂನಿಂದ ಹಿಂದೆ ಸರಿಯಿತಾ ಅಲಿಬಾಬಾ ಗ್ರೂಪ್? ಬ್ಲಾಕ್ ಡೀಲ್ ಮೂಲಕ ಷೇರ್ ಮಾರಿದ ಇ-ಕಾಮರ್ಸ್ ದೈತ್ಯ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಭಾರತೀಯ ಡಿಜಿಟಲ್ ಪಾವತಿ ಸಂಸ್ಥೆ ಪೇಟಿಎಂ ನಲ್ಲಿನ ತನ್ನುಳಿದ ಷೇರನ್ನು ಚೀನಾದ ಅಲಿಬಾಬಾ ಗ್ರೂಪ್ ಬ್ಲಾಕ್ ಡೀಲ್ ಮೂಲಕ ಮಾರಾಟ ಮಾಡಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ. ಬನ್ನಿ ಏನಿದು ಬ್ಲಾಕ್ ಡೀಲ್ ಅಂತ ತಿಳಿದುಕೊಳ್ಳೋಣ.

  • Trending Desk
  • 4-MIN READ
  • Last Updated :
  • Share this:

    ಭಾರತೀಯ ಡಿಜಿಟಲ್ ಪಾವತಿ ಸಂಸ್ಥೆ (Digital Payments Institute of India) ಪೇಟಿಎಂನಲ್ಲಿನ (Paytm) ತನ್ನುಳಿದ ಷೇರನ್ನು ಚೀನಾದ ಅಲಿಬಾಬಾ ಗ್ರೂಪ್ ಬ್ಲಾಕ್ ಡೀಲ್ ಮೂಲಕ ಮಾರಾಟ ಮಾಡಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ. ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನಿಂದ (National Stock Exchange) ಪಡೆದ ಮಾಹಿತಿಯ ಪ್ರಕಾರ ಅಲಿಬಾಬಾ ಪೇಟಿಎಂನಲ್ಲಿನ 21.43 ಮಿಲಿಯನ್ (Alibaba Paytm)  ಷೇರುಗಳನ್ನು (Stock)  ₹642.74 ರಂತೆ ಮೋರ್ಗನ್ ಸ್ಟಾನ್ಲಿ ಸೇರಿದಂತೆ ಹೂಡಿಕೆದಾರರಿಗೆ ಮಾರಾಟ ಮಾಡಿದೆ ಎಂಬುದು ಸುದ್ದಿಯಾಗಿದೆ.


    ಹೂಡಿಕೆದಾರರಿಗೆ ಮಾರಾಟ


    ಪೇಟಿಎಂ ಷೇರುಗಳು 8.75% ರಷ್ಟು ಕುಸಿದು ರೂ 650.20 ಕ್ಕೆ ತಲುಪಿತು. ಕಳೆದ ತಿಂಗಳವರೆಗೆ ಪೇಟಿಎಂ ನಲ್ಲಿ ಸುಮಾರು 6.26% ಷೇರು ಹೊಂದಿದ್ದ ಸಂಸ್ಥೆಯು ಜನವರಿಯಲ್ಲಿ ಮುಕ್ತ ಮಾರುಕಟ್ಟೆ ಕಾರ್ಯಾಚರಣೆಗಳಲ್ಲಿ ಸುಮಾರು 7% ರಷ್ಟು ರಿಯಾಯಿತಿಯಲ್ಲಿ ಷೇರುಗಳಲ್ಲಿ ಭಾಗಶಃ 3.1% ಪಾಲನ್ನು ಮಾರಾಟ ಮಾಡಿದೆ. ಖರೀದಿದಾರರಲ್ಲಿ ಮಾರ್ಗನ್ ಸ್ಟಾನ್ಲಿ, ರೂ 294 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿತು ಎಂದು ವರದಿಯಾಗಿದೆ.


    ಜೊಮಾಟೊದಲ್ಲಿ ಷೇರು ಮಾರಾಟ


    ಸುಮಾರು ಎರಡು ತಿಂಗಳ ಹಿಂದೆ, ಅಲಿಬಾಬಾ ಆನ್‌ಲೈನ್ ಆಹಾರ ವಿತರಣಾ ದೈತ್ಯ ಜೊಮಾಟೊದಲ್ಲಿನ 3.07% ಷೇರನ್ನು ರೂ 1,631 ಕೋಟಿಗೆ ಮುಕ್ತ ಮಾರುಕಟ್ಟೆ ವಹಿವಾಟಿನ ಮೂಲಕ ಮಾರಾಟ ಮಾಡಿತು. ಡಿಸೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ, ಸಂಸ್ಥೆಯು ಇದೀಗ ಸುಮಾರು 3.46% ಷೇರನ್ನು ಹೊಂದಿದೆ.


    ಚೀನಾದೊಂದಿಗೆ ಭಾರತದ ವ್ಯಾಪಾರ ಸಂಬಂಧಗಳ ಪರಿಶೀಲನೆ


    ಕಳೆದ ವರ್ಷ ಮೇ ತಿಂಗಳಲ್ಲಿ ಪೇಟಿಎಂ ಮಾಲ್‌ನಲ್ಲಿ ₹42 ಕೋಟಿಗೆ ಅಲಿಬಾಬಾ ತನ್ನ ಹೂಡಿಕೆಯಿಂದ ನಿರ್ಗಮಿಸಿತು. 2021 ರಲ್ಲಿ, ಜಾಕ್ ಮಾ-ಸ್ಥಾಪಿತ ಸಂಸ್ಥೆಯು ಬಿಗ್‌ಬಾಸ್ಕೆಟ್‌ನಲ್ಲಿನ ತನ್ನ ಷೇರುಗಳನ್ನು ಟಾಟಾ ಗುಂಪಿಗೆ ಮಾರಾಟ ಮಾಡಿತು.


    ಚೀನಾದೊಂದಿಗೆ ಭಾರತದ ಸಂಬಂಧಗಳು ಹದಗೆಟ್ಟಿರುವ ಸಮಯದಲ್ಲೇ ಸಂಸ್ಥೆಯು ನಿರ್ಗಮಿಸಿದ್ದು ಮೋದಿಯವರ ಆಡಳಿತವು ಚೀನಾದೊಂದಿಗೆ ಭಾರತದ ವ್ಯಾಪಾರ ಸಂಬಂಧಗಳ ಪರಿಶೀಲನೆಯನ್ನು ಬಿಗಿಗೊಳಿಸಿದೆ.


    Has Alibaba Group pulled out of Paytm E-commerce giant sold shares through block deal
    ಸಾಂಕೇತಿಕ ಚಿತ್ರ


    ಅಂಕಿಅಂಶದ ಪ್ರಕಾರ ಕಂಪನಿಯ 22.8 ಮಿಲಿಯನ್ ಷೇರುಗಳು ಅಥವಾ ಒಟ್ಟು ಷೇರು ಬಂಡವಾಳದ ಸುಮಾರು 3.5% ನಷ್ಟು ಪ್ರಮಾಣ 690.25 ರೂಪಾಯಿಗಳಿಂದ 655 ರೂಪಾಯಿಗಳ ನಡುವಿನ ಬೆಲೆಯಲ್ಲಿ ಬದಲಾಗಿದೆ ಎಂಬುದು ವರದಿಯಾಗಿದೆ.


    ಇದನ್ನೂ ಓದಿ:Business Idea: ಈ ಪದಾರ್ಥಕ್ಕೆ ಇಡೀ ವರ್ಷ ಬೇಡಿಕೆ; 50 ಸಾವಿರ ಹೂಡಿಕೆ ಮಾಡಿ ಲಕ್ಷ ಲಕ್ಷ ಹಣ ಗಳಿಸಿ


    ಬ್ಲಾಕ್ ಡೀಲ್ ಮೂಲಕ ಮಾರಾಟ


    ರಾಯಿಟರ್ಸ್‌ನ ವಿನಂತಿಗಳಿಗೆ ಪೇಟಿಎಂ ಆಗಲಿ, ಆಲಿಬಾಬಾ ಗ್ರೂಪ್ ಆಗಲಿ ತಕ್ಷಣ ಪ್ರತಿಕ್ರಿಯಿಸಲಿಲ್ಲ ಎಂಬುದು ತಿಳಿದುಬಂದಿದೆ. ಜನವರಿಯಲ್ಲಿ, ಅಲಿಬಾಬಾ ಕಂಪನಿಯಲ್ಲಿನ 3.1% ಪಾಲನ್ನು $125 ಮಿಲಿಯನ್ ಮೌಲ್ಯದ ಬ್ಲಾಕ್ ಡೀಲ್ ಮೂಲಕ ಮಾರಾಟ ಮಾಡಿದೆ ಎಂಬುದು ಕೆಲವೊಂದು ಮೂಲಗಳಿಂದ ರಾಯಿಟರ್ಸ್‌ಗೆ ವರದಿಯಾಗಿದೆ.


    ಗಳಿಕೆಯ ನಂತರ ಕಳೆದ ಐದು ದಿನಗಳಲ್ಲಿ ಕಂಪನಿಯ ಷೇರುಗಳು 18.2% ಕ್ಕಿಂತ ಹೆಚ್ಚು ಗಳಿಸಿವೆ. ಡಿಜಿಟಲ್ ಸೇವಾ ಸಂಸ್ಥೆಯು ತನ್ನ ನಗದು ಪ್ರಮಾಣವನ್ನು ಕಡಿಮೆ ಮಾಡಲು ಮತ್ತು ಲಾಭದಾಯಕತೆಯನ್ನು ಸಾಧಿಸುವ ಒತ್ತಡದಲ್ಲಿದೆ. 2021 ರಲ್ಲಿ ಪಟ್ಟಿ ಮಾಡಿದ ನಂತರ ಸಂಸ್ಥೆಯ ಸ್ಟಾಕ್ ಮೌಲ್ಯದ 58% ನಷ್ಟು ಕಳೆದುಕೊಂಡಿದೆ.


    Has Alibaba Group pulled out of Paytm E-commerce giant sold shares through block deal
    ಸಾಂಕೇತಿಕ ಚಿತ್ರ


    42% ಲಾಭ ಏರಿಕೆ


    ಡಿಸೆಂಬರ್ ತ್ರೈಮಾಸಿಕದಲ್ಲಿ ಪೇಟಿಎಂ ತನ್ನ ನಷ್ಟವನ್ನು ರೂ 392 ಕೋಟಿಗೆ ತಗ್ಗಿಸಿಕೊಂಡಿದೆ, ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ರೂ 778.5 ಕೋಟಿ ನಷ್ಟಕ್ಕೆ ಹೋಲಿಸಿದರೆ 50% ದಷ್ಟು ಕಡಿಮೆಯಾಗಿದೆ.


    ಸಾಫ್ಟ್‌ಬ್ಯಾಂಕ್ ಬೆಂಬಲಿತ ಸಂಸ್ಥೆಯ ಆದಾಯವು ಹಿಂದಿನ ವರ್ಷದ ತ್ರೈಮಾಸಿಕದಲ್ಲಿ ರೂ 1,456 ಕೋಟಿಯಿಂದ ರೂ 2,062 ಕೋಟಿಗೆ 42% ಏರಿಕೆ ಕಂಡುಕೊಂಡಿದೆ.




    ವಿಜಯ್ ಶೇಖರ್ ಶರ್ಮಾ ನೇತೃತ್ವದ ಕಂಪನಿಯು ESOP ವೆಚ್ಚಗಳಿಗೆ ಮುಂಚಿತವಾಗಿ Ebitda (ಬಡ್ಡಿ, ತೆರಿಗೆಗಳು, ಸವಕಳಿ ಮತ್ತು ಭೋಗ್ಯಕ್ಕೆ ಮುಂಚಿತವಾಗಿ ಕಂಪನಿಯ ಗಳಿಕೆ) ಲಾಭದಾಯಕತೆಯನ್ನು ಸಾಧಿಸಿದೆ ಎಂದು ವರದಿಯಾಗಿದೆ. 31 ಕೋಟಿ ರೂ.ಗಳ Ebitda ಅನ್ನು ವರದಿ ಮಾಡಿದೆ.

    Published by:Gowtham K
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು