ಐಪಿಎಲ್ (IPL) ಆರಂಭವಾಗಿರೋದ್ರಿಂದ ಕ್ರಿಕೆಟ್ ಪ್ರೇಮಿಗಳಿಗೆ ದಿನವೂ ಹಬ್ಬ. ಕ್ರಿಕೆಟ್ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರನ್ನು ಮೈದಾನದಲ್ಲಿ ವೀಕ್ಷಿಸುತ್ತಿದ್ದಾರೆ. ಅದರಲ್ಲೂ ಬಹಳಷ್ಟು ಅಭಿಮಾನಿಗಳು Dream11 ಎಂಬ ಜನಪ್ರಿಯ ಫ್ಯಾಂಟಸಿ ಕ್ರೀಡಾ ಅಪ್ಲಿಕೇಶನ್ ಅನ್ನು ಬಳಸಿಕೊಂಡು ತಮ್ಮ ನೆಚ್ಚಿನ ತಂಡಗಳು ಅಥವಾ ಆಟಗಾರರೊಂದಿಗೆ ಆಡುತ್ತಾರೆ. ಆದರೆ ಈ ಅಪ್ಲಿಕೇಶನ್ (Application) ಅನ್ನು ಯಾರು ಸ್ಥಾಪಿಸಿದರು ಮತ್ತು ಅದರ ಮಾಲೀಕತ್ವವನ್ನು ಯಾರು ಹೊಂದಿದ್ದಾರೆ ಎಂಬುದು ನಿಮಗೆ ಗೊತ್ತಾ? ಅವರೇ ಡ್ರೀಮ್ 11 (Dream 11) ನ ಸಹ-ಸಂಸ್ಥಾಪಕ ಮತ್ತು ಸಿಇಒ ಹರ್ಷ್ ಜೈನ್. ಯುವಜನತೆಗೆ ಸ್ಪೂರ್ತಿಯಾಗುವ ಇವರು ಭಾರತದ ಕೆಲವು ಶ್ರೀಮಂತ ಯುವ ಬಿಲಿಯನೇರ್‌ಗಳಲ್ಲಿ ಒಬ್ಬರು.
65 ಸಾವಿರ ಕೋಟಿಯ ಡ್ರೀಮ್ 11!
ಹರ್ಷ್ ಜೈನ್ ಅವರು 2008 ರಲ್ಲಿ ತಮ್ಮ ಸ್ನೇಹಿತ ಭವಿತ್ ಶೇಟ್ ಅವರೊಂದಿಗೆ ಡ್ರೀಮ್ 11 ಅನ್ನು ಸ್ಥಾಪಿಸಿದ್ದಾರೆ. IPL ಮತ್ತು ಇತರ ಕ್ರಿಕೆಟ್ ಪಂದ್ಯಾವಳಿಗಳ ಯಶಸ್ಸಿನೊಂದಿಗೆ ಅವರ ಅಪ್ಲಿಕೇಶನ್ ಬಹಳ ಜನಪ್ರಿಯತೆ ಗಳಿಸಿದೆ.
ಇಂದು ಡ್ರೀಮ್ 11 $8 ಬಿಲಿಯನ್ ಕಂಪನಿಯಾಗಿದೆ. ಅಂದರೆ ಸುಮಾರು ರೂ. 65,000 ಕೋಟಿ ರೂ. ಅಲ್ಲದೇ ಈ ಅಪ್ಲಿಕೇಶನ್ ಸುಮಾರು 150 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿದೆ.
ಪ್ರಸ್ತುತ, ಜೈನ್ ಡ್ರೀಮ್ 11 ನ CEO ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹರ್ಷ್ ಕಂಪನಿಯ ಉತ್ಪನ್ನ, ವಿನ್ಯಾಸ, ತಂತ್ರಜ್ಞಾನ ಮತ್ತು ಮಾರ್ಕೆಟಿಂಗ್ ಅನ್ನು ನೋಡಿಕೊಳ್ಳುತ್ತಾರೆ ಮತ್ತು ಭವಿತ್ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತಾರೆ.
ಅವರು ಉದ್ಯಮಿ ಆನಂದ್ ಜೈನ್ ಅವರ ಪುತ್ರ. ಅಲ್ಲದೇ ಅವರು ಮುಖೇಶ್ ಅಂಬಾನಿಗೆ ಆಪ್ತರೂ ಆಗಿದ್ದು ಆಗಾಗ್ಗೆ ಧೀರೂಭಾಯಿ ಅಂಬಾನಿಯ ಮೂರನೇ ಪುತ್ರ ಎಂದು ಪರಿಗಣಿಸಲ್ಪಡುತ್ತಾರೆ.
150 ಬಾರಿ ತಿರಸ್ಕರಿಸಲ್ಪಟ್ಟಿತ್ತು ಇವರ ಬ್ಯುಸಿನೆಸ್ ಐಡಿಯಾ!
ಕಳೆದ ವರ್ಷ ಪೊಡ್‌ಕಾಸ್ಟ್ ನಲ್ಲಿ ಅವರು ಹೇಳಿದ ಹಾಗೆ ಹರ್ಷ್ ಅವರ ಬ್ಯುಸಿನೆಸ್ ಐಡಿಯಾ ಬರೋಬ್ಬರಿ 152 ಬಾರಿ ತಿರಸ್ಕರಿಸಲ್ಪಟ್ಟಿತ್ತಂತೆ! 2012 ರ ನಂತರ, ಅವರು ಮತ್ತು ಅವರ ಸಂಸ್ಥಾಪಕ ತಂಡವು ಹಣಕ್ಕಾಗಿ ಎರಡು ವರ್ಷಗಳಲ್ಲಿ ಸುಮಾರು 150 ಸಾಹಸೋದ್ಯಮ ಬಂಡವಾಳಗಾರರನ್ನು ಸಂಪರ್ಕಿಸಿದೆ. ಆದರೆ ಅದನ್ನು ತಿರಸ್ಕರಿಸಲಾಯಿತು. ಆದರೆ ನಂತರ ಪ್ರತಿಯೊಬ್ಬರೂ ನಮ್ಮ ವ್ಯವಹಾರದ ಬಗ್ಗೆ ನಮಗೆ ಕಲಿಸಿದರು ಎಂಬುದಾಗಿ ಹರ್ಷ್ ಹೇಳಿದ್ದಾರೆ.
ಇದನ್ನೂ ಓದಿ: ದೇಶದ ಲಕ್ಷಾಂತರ ಪಿಂಚಣಿದಾರರಿಗೆ ಮೋದಿ ಸರ್ಕಾರದಿಂದ ಬೊಂಬಾಟ್ ಸುದ್ದಿ!
ಆರಂಭಿಕ ದಿನಗಳು ಕಷ್ಟಕರವಾಗಿದ್ದವು!
ಮುಂಬೈನಲ್ಲಿ ಜನಿಸಿದ ಹರ್ಷ್ ಜೈನ್ ಕ್ರೀಡೆ, ತಂತ್ರಜ್ಞಾನ ಮತ್ತು ಗೇಮಿಂಗ್ ಉತ್ಸಾಹಿ. ಅಲ್ಲದೇ ಅವರು ಮ್ಯಾಂಚೆಸ್ಟರ್ ಯುನೈಟೆಡ್, ಮುಂಬೈ ಇಂಡಿಯನ್ಸ್ ಮತ್ತು ಭಾರತೀಯ ಕ್ರಿಕೆಟ್ ತಂಡದ ಕಟ್ಟಾ ಅಭಿಮಾನಿ.
2008 ರಲ್ಲಿ, IPL ಮೊದಲ ಬಾರಿಗೆ ಪ್ರಾರಂಭವಾದಾಗ, ಅವರು ಮತ್ತು ಅವರ ಸ್ನೇಹಿತ ಭವಿತ್ ಅವರು ಡ್ರೀಮ್ 11 ಅನ್ನು ಪ್ರಾರಂಭಿಸುವ ಆಲೋಚನೆಯನ್ನು ಹೊಂದಿದ್ದರು. ಆದಾಗ್ಯೂ ಡ್ರೀಮ್ 11 ಆರಂಭಿಕ ದಿನಗಳಲ್ಲಿ ಇಬ್ಬರೂ ಕಷ್ಟಗಳನ್ನು ಎದುರಿಸಿದರು ಅನ್ನೋದು ಸುಳ್ಳಲ್ಲ. ಆದರೆ ಅಂತಿಮವಾಗಿ ಗೆದ್ದಿದ್ದಾರೆ.
ಇದನ್ನೂ ಓದಿ: ವೀಕೆಂಡ್‌ನಲ್ಲಿ ನಿಮ್ಮ ನಗರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟಿದೆ? ಇಲ್ಲಿದೆ ವಿವರ
ಇನ್ನು, ಹರ್ಷ್ 2001 ರಿಂದ 2003 ರವರೆಗೆ ಇಂಗ್ಲೆಂಡ್‌ನ ಸೆವೆನೋಕ್ಸ್ ಹೈಸ್ಕೂಲ್‌ನಲ್ಲಿ ಅಧ್ಯಯನ ಮಾಡಿದರು. ನಂತರ ಅವರು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಿಂದ (2003-2007) ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಅನ್ನು ಪಡೆದರು.
ಅಲ್ಲದೇ ಕೊಲಂಬಿಯಾ ಯೂನಿವರ್ಸಿಟಿಯ ಕೊಲಂಬಿಯಾ ಬಿಸಿನೆಸ್ ಸ್ಕೂಲ್‌ನಿಂದ ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ (MBA) ಅನ್ನು ಸಹ ಹೊಂದಿದ್ದಾರೆ.
ಇನ್ನು, 2013 ರಲ್ಲಿ ಹರ್ಷ ಜೈನ್ ದಂತವೈದ್ಯೆ ರಚನಾ ಶಾ ಅವರನ್ನು ವಿವಾಹವಾಗಿದ್ದು ಅವರಿಗೆ ಕ್ರಿಶ್ ಎಂಬ ಮಗನಿದ್ದಾನೆ. ವರದಿಗಳ ಪ್ರಕಾರ, ಹರ್ಷ್ ದಂಪತಿ 2021 ರಲ್ಲಿ ದಕ್ಷಿಣ ಮುಂಬೈನ ಪೆದ್ದಾರ್ ರಸ್ತೆಯಲ್ಲಿ 72 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಡ್ಯೂಪ್ಲೆಕ್ಸ್ ಅಪಾರ್ಟ್ಮೆಂಟ್ ಅನ್ನು ಖರೀದಿಸಿದ್ದಾರೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ