Success Story: 6 ವರ್ಷಗಳಲ್ಲಿ 46000 ಕೋಟಿ ಮೌಲ್ಯದ ಸ್ಟಾರ್ಟಪ್ ಹುಟ್ಟುಹಾಕಿದ ನಾಲ್ವರು ಸಹಪಾಠಿಗಳು

ತಾವು ಕಂಡ ಕನಸನ್ನು ನನಸು ಮಾಡಿಕೊಂಡು ಯಶಸ್ಸು ಸಾಧಿಸಿದ 4 ವಿದ್ಯಾರ್ಥಿಗಳ ಸ್ಫೂರ್ತಿಯ ಸುದ್ದಿ ಇದಾಗಿದೆ.

ಸಾರ್ಟ್​ಅಪ್​ ಕಂಪನಿ

ಸಾರ್ಟ್​ಅಪ್​ ಕಂಪನಿ

  • Share this:
ಹೆಚ್ಚಿನ ಜನರು ಕನಸು ಕಾಣುವುದರಲ್ಲೇ ತಮ್ಮ ಸಂಪೂರ್ಣ ಜೀವನ ಕಳೆದುಬಿಡುತ್ತಾರೆ. ಕನಸು ಕಾಣುವುದು ತಪ್ಪಲ್ಲ. ಆದರೆ ಕನಸನ್ನು (Dream) ನನಸು ಮಾಡಿಕೊಳ್ಳುವ ಜೀವನದಲ್ಲಿ ಏನನ್ನಾದರೂ ಸಾಧಿಸುವ ರೀತಿಯಲ್ಲಿ ಕನಸು ಕಾಣಿರಿ ಎಂಬ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ (APJ Abdul Kalam) ಮಾತನ್ನು ನಾವಿಲ್ಲಿ ಸ್ಮರಿಸಬಹುದು. ಈ ಲೇಖನದಲ್ಲೂ ತಾವು ಕಂಡ ಕನಸನ್ನು ನನಸು ಮಾಡಿಕೊಂಡು ಯಶಸ್ಸು ಸಾಧಿಸಿದ 4 ವಿದ್ಯಾರ್ಥಿಗಳ ಸ್ಫೂರ್ತಿಯ ಸುದ್ದಿ ಇದಾಗಿದೆ.ಬರೇ 6 ವರ್ಷಗಳಲ್ಲಿ ತನ್ನದೇ ಸ್ಟಾರ್ಟಪ್ (Startup ) ಆರಂಭಿಸಿ ತನ್ನ ಜೀವನದ ಅತಿದೊಡ್ಡ ಮಹತ್ವಾಕಾಂಕ್ಷೆಯನ್ನು ತನ್ನ ಸ್ನೇಹಿತರೊಂದಿಗೆ ಸೇರಿ ಪೂರ್ತಿಗೊಳಿಸಿದ ಹ್ಯಾನೊ ರೆನ್ನರ್ (Hanno Renner) ಕುರಿತು ನಾವಿಂದು ತಿಳಿದುಕೊಳ್ಳಲಿದ್ದೇವೆ. 31ರ ಹರೆಯದ ಹ್ಯಾನೊ ರೆನ್ನರ್ ಇದೀಗ ಅತ್ಯಂತ ಹೆಸರಾಂತ ಯುರೋಪಿಯನ್ ಸ್ಟಾರ್ಟಪ್‌ಗಳಲ್ಲೊಂದರ ಒಡೆಯನಾಗಿದ್ದಾರೆ. ಒಂದು ಕಾಲದಲ್ಲಿ ತನ್ನ ಬ್ಯಾಂಕ್ ಖಾತೆಯಲ್ಲಿ ಇವರು ಬರೇ 14,000 ರೂ, ಗಳನ್ನು ಉಳಿಸಿಕೊಂಡಿದ್ದರು. ಆದರೆ ಇಂದು ಅವರ ಕಂಪನಿ 6.3 ಬಿಲಿಯನ್‌ಗಿಂತಲೂ (43,000 ಕೋಟಿ ರೂ) ಹೆಚ್ಚಿನ ಆರ್ಥಿಕ ಲಾಭ ಗಳಿಸಿಕೊಂಡಿದೆ.

ಸ್ಟಾರ್ಟ್‌ಅಪ್ ನಿರ್ಮಿಸಿದ ನಾಲ್ವರು ಸಹಪಾಠಿಗಳು:

2015ರಲ್ಲಿ ರೆನ್ನರ್ ತಮ್ಮ ಸಹಪಾಠಿಗಳಾದ ರೋಮನ್ ಶುಮೇಕರ್, ಆರ್ಸೆನಿ ವರ್ಶಿನಿನ್ ಮತ್ತು ಇಗ್ನಾಜ್ ಫೋರ್ಸ್ಟ್‌ಮಿಯರ್ ಜತೆಗೂಡಿ ಜರ್ಮನ್ ಸ್ಟಾರ್ಟ್ಅಪ್ ಪರ್ಸೋನಿಯೊವನ್ನು ಜೊತೆಯಾಗಿ ಸ್ಥಾಪಿಸಿದರು. ಮ್ಯೂನಿಚ್‌ನಲ್ಲಿರುವ ಸೆಂಟರ್ ಫಾರ್ ಡಿಜಿಟಲ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್‌ನಲ್ಲಿ ಅಧ್ಯಯನ ಮಾಡುವಾಗ ಅವರು ತಮ್ಮ ಸಹ-ಸಂಸ್ಥಾಪಕರನ್ನು ಭೇಟಿಯಾದರು. ಹೊಸ ರೀತಿಯ ಸಾಫ್ಟ್‌ವೇರ್ ನಿರ್ಮಾಣದ ರೂವಾರಿಯಾಗಿ ಪರ್ಸೋನಿಯ ಯೋಜನೆ ರೂಪುಗೊಂಡಿತು. ಇದು SMBಗಳ (ಸಣ್ಣ ಹಾಗೂ ಮಧ್ಯಮ ಬ್ಯುಸಿನೆಸ್‌) ಅಗತ್ಯಗಳನ್ನು ಪೂರೈಸುವ ಗುರಿ ಹೊಂದಿದೆ.

ಸವಾಲುಗಳಿಂದಲೇ ಆರಂಭವಾದ ಕಂಪನಿ:

ನಾಲ್ವರು ಸ್ನೇಹಿತರು ಸೇರಿ ಪ್ರಾರಂಭಿಸುವ ಮೊದಲ ಸ್ಥಾಪನೆಯಾದ್ದರಿಂದ ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು. ಯಾವುದೇ ಸಂಪನ್ಮೂಲ ಹಾಗೂ ಸೌಕರ್ಯಗಳಿಲ್ಲದ ಕಾರಣ ಕಚೇರಿ ಹೊಂದಲು ತೊಡಕುಂಟಾಯಿತು. ಹೀಗಾಗಿ ಕಾಲೇಜು ಕ್ಯಾಂಪಸ್‌ನ ಯಾವುದಾದರೂ ಸ್ಥಳದಿಂದ ಉದ್ಯಮ ಆರಂಭಿಸುವ ಯೋಜನೆ ರೂಪಿಸಿಕೊಂಡರು. ಗ್ರಾಹಕರು ಇವರನ್ನು ಹುಡುಕಿಕೊಂಡು ಬರಲು ಆರಂಭಿಸುತ್ತಿದ್ದಂತೆ, ಸಣ್ಣ ಕಚೇರಿಯನ್ನು ಬಾಡಿಗೆಗೆ ಪಡೆಯುವ ಮೂಲಕ ಕೆಲವು ಉದ್ಯೋಗಿಗಳನ್ನು ನೇಮಿಸಿಕೊಂಡು ಜೊತೆಗೆ ತಮ್ಮ ಮೊದಲ ಸಾಫ್ಟ್‌ವೇರ್ ಪರವಾನಗಿಗಳನ್ನು ಖರೀದಿಸುವ ಮೂಲಕ ಕಂಪನಿ ಸ್ಥಾಪಿಸಲು ಆದಾಯ ಹೂಡಿದರು.

ಉದ್ಯಮವನ್ನು ವಿಸ್ತರಿಸುವ ಸಲುವಾಗಿ ನಿಧಿ ಸಂಗ್ರಹಣೆ ಕಾರ್ಯದಲ್ಲಿ ತೊಡಗಿದ್ದಾಗ ಜುಲೈ 2016ರಲ್ಲಿ ಇವರು ನಿರೀಕ್ಷಿಸದ ರೀತಿಯಲ್ಲಿ ದೊಡ್ಡ ತಿರುವು ಇವರನ್ನರಸಿ ಬಂದಿತು. ತಮ್ಮ ಮೊದಲ ಹೂಡಿಕೆಯಾದ 2.1 ಮಿಲಿಯನ್ ಯೋರೋಗಳನ್ನು ಸ್ವೀಕರಿಸುವ ಮೊದಲು ಅವರ ಕಂಪನಿಯ ಖಾತೆಯು ಕೇವಲ 200 ಯುರೋಗಳಿಗೆ ಇಳಿದಿತ್ತು. ಆ ಬ್ಯಾಂಕ್ ಖಾತೆಯ ಸ್ಕ್ರೀನ್‌ಶಾಟ್ ಅನ್ನು ತಾವಿನ್ನೂ ಹೊಂದಿರುವುದಾಗಿ ನೆನಪಿಸಿಕೊಂಡ ರೆನ್ನರ್, ನಮ್ಮ ಮೊದಲ ಸುತ್ತಿನ ಫಂಡಿಂಗ್ 2 ಮಿಲಿಯನ್ ಅನ್ನು ನಾವು ಪಡೆದಾಗ ನಮ್ಮ ಖಾತೆಯಲ್ಲಿ 200 ಯುರೋಗಳಿತ್ತು. ನಾವು ಅಂತಹ ಆರ್ಥಿಕ ಸಂಕಷ್ಟದ ಸಮಯದಲ್ಲೂ ಎಷ್ಟು ಮುತುವರ್ಜಿಯಿಂದ ವ್ಯವಹಾರ ನಡೆಸುತ್ತಿದ್ದವು ಎಂಬುದು ನಮಗೆ ತಿಳಿದದ್ದೇ ಆಗ ಎಂಬುದಾಗಿ ರೆನ್ನರ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಯಶಸ್ಸಿನ ಬೆನ್ನೇರಿದ ಸ್ಟಾರ್ಟಪ್:

ಅಲ್ಲಿಂದ ನಂತರ ಕಂಪನಿಯು ತನ್ನ ಸಾಮರ್ಥ್ಯ ಹೆಚ್ಚಿಸಿಕೊಂಡಿತು. ಕಂಪನಿಯು ಹೂಡಿಕೆದಾರರಿಂದ 500 ಮಿಲಿಯನ್‌ ಡಾಲರ್‌ಗಿಂತಲೂ ಹೆಚ್ಚಿನ ಹಣ ಸಂಗ್ರಹಿಸಿದೆ. ಇಂದಿಗೆ ಕಂಪನಿ ಎಷ್ಟರ ಮಟ್ಟಿಗೆ ಪ್ರಾಬಲ್ಯ ಪಡೆದುಕೊಂಡಿದೆ ಎಂದರೆ ಇಂದು ಮಾರುಕಟ್ಟೆಯಲ್ಲಿ SAP ಮತ್ತು ಸೇಲ್ಸ್‌ಫೋರ್ಸ್‌ನಂತಹ ಐಟಿ ದಿಗ್ಗಜರನ್ನು ನೇರವಾಗಿ ಖರೀದಿಸುವ ಮಟ್ಟಿಗೆ ಬೆಳೆದು ನಿಂತಿದೆ. ನಾಲ್ವರು ವಿದ್ಯಾರ್ಥಿಗಳ ಮೂಲಕ ಸ್ಥಾಪನೆಗೊಂಡ ಕಂಪನಿಯಲ್ಲಿ ಇದೀಗ 100ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಹಾಗೂ ಕಂಪನಿಯ ಮೌಲ್ಯ 46,000 ಕೋಟಿ ರೂ. ಆಗಿದೆ.
Published by:Seema R
First published: