ಅಮೆರಿಕಾದಲ್ಲಿ (America) ಉದ್ಯೋಗ ಪಡೆಯಬೇಕೆಂಬುದು ಅನೇಕ ಯುವಕ ಯುವತಿಯರ ಕನಸಾಗಿದೆ. ಐಟಿ, ಇಂಜಿನಿಯರಿಂಗ್, ಆರ್ಕಿಟೆಕ್ಚರ್ ಮತ್ತು ಫೈನಾನ್ಸ್ ಕ್ಷೇತ್ರಗಳಲ್ಲಿರುವ ಜನರು ಹೆಚ್ಚಾಗಿ ಯುಎಸ್ನಲ್ಲಿ ಕೆಲಸ ಮಾಡಲು ಬಯಸುತ್ತಾರೆ. ಯುಎಸ್ನಲ್ಲಿ ಕೆಲಸ ಮಾಡಲು ಬರುವ ವಿದೇಶಿಯರಿಗೆ (Foreign Workers) ಅಲ್ಲಿನ ಸರ್ಕಾರ ಎಚ್-1ಬಿ ವೀಸಾಗಳನ್ನು (H-1B Visa) ನೀಡುತ್ತದೆ. ಇದನ್ನು ಮೂರು ವರ್ಷಗಳ ಅವಧಿಗೆ ನೀಡಲಾಗುತ್ತದೆ. ಆ ನಂತರ ಇನ್ನೂ ಮೂರು ವರ್ಷ ವಿಸ್ತರಿಸುವ ಸಾಧ್ಯತೆ ಇರುತ್ತದೆ. 2024 ರ H1-B ವೀಸಾ ಪ್ರಕ್ರಿಯೆಯು ಮಾರ್ಚ್ 1ರಿಂದ (ನಾಳೆ) ಪ್ರಾರಂಭವಾಗಲಿದೆ ಎಂದು ಯುಎಸ್ಸಿಐಎಸ್ ( US Citizenship and Immigration Services) ಪ್ರಕಟಣೆ ಹೊರಡಿಸಿದೆ.
H-1B ಮಾದರಿಯ ವೀಸಾವು ಅಮೆರಿಕಾದ ಕಂಪನಿಗಳಿಗೆ ವಿದೇಶಿ ಉದ್ಯೋಗಿಗಳನ್ನು ವಿಶೇಷ ಸ್ಥಾನಗಳಿಗೆ ತಾತ್ಕಾಲಿಕವಾಗಿ ನೇಮಿಸಿಕೊಳ್ಳಲು ಇರುವ ಏಕೈಕ ಮಾರ್ಗವಾಗಿದೆ. ಹೆಚ್ಚಾಗಿ, H-1B ಪ್ರಕಾರದ ವೀಸಾ ಹೊಂದಿರುವವರು ಗ್ರೀನ್ ಕಾರ್ಡ್‌ಗೆ ಅರ್ಹತೆಯನ್ನು ಪಡೆಯುತ್ತಾರೆ. ಪ್ರತಿ ವರ್ಷ, ಅಮೆರಿಕಾ H-1B ವೀಸಾಕ್ಕಾಗಿ ಉದ್ಯೋಗದಾತರಿಂದ ವರ್ಷಕ್ಕೆ ಸುಮಾರು 65,000 ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ.
ಮಾರ್ಚ್ 1 ರಿಂದ ವೀಸಾ ಪ್ರಕ್ರಿಯೆ ಆರಂಭ
ಈ ವರ್ಷ ನೀಡಲಾದ H1-B ವೀಸಾಗಳ ನೋಂದಣಿ ಪ್ರಕ್ರಿಯೆಯು ಮಾರ್ಚ್ 1 ರಿಂದ ಪ್ರಾರಂಭವಾಗಲಿದೆ ಎಂದು ಅಮೆರಿಕಾ ಸಿಟಿಜನ್ಶಿಪ್ ಆಂಡ್ ಇಮಿಗ್ರೇಷನ್ ಸರ್ವೀಸಸ್ (UCIS) ಹೇಳಿಕೆಯಲ್ಲಿ ತಿಳಿಸಿದೆ. ಮಾರ್ಚ್ 17 ರಂದು ನೋಂದಣಿ ಕೊನೆಗೊಳ್ಳುತ್ತದೆ. ಪ್ರತಿ ನೋಂದಾಯಿತ ವ್ಯಕ್ತಿಗೆ ದೃಢೀಕರಣ ಸಂಖ್ಯೆಯನ್ನು ನೀಡಲಾಗುತ್ತದೆ. ಅದರ ಆಧಾರದ ಮೇಲೆ ನೋಂದಣಿಯನ್ನು ಟ್ರ್ಯಾಕಿಂಗ್ ಮಾಡಬಹುದು ಎಂದು ತಿಳಿಸಿದೆ.
ಶೇ. 70 ರಷ್ಟು ಭಾರತೀಯ ಅಭ್ಯರ್ಥಿಗಳು
ಪ್ರತಿ ವರ್ಷ, ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕೆಲಸ ಮಾಡಲು ವಿವಿಧ ಕ್ಷೇತ್ರಗಳಲ್ಲಿನ ವೃತ್ತಿಪರರಿಗೆ ಸರ್ಕಾರವು ಸೀಮಿತ ಸಂಖ್ಯೆಯ H-1B ವೀಸಾಗಳನ್ನು ನೀಡುತ್ತದೆ. ಪ್ರತಿ ವರ್ಷ ಸುಮಾರು 65 ಸಾವಿರ ವೀಸಾಗಳನ್ನು ನೀಡಲಾಗುತ್ತದೆ. ಇದರ ಜೊತೆಗೆ, ಅಮೆರಿಕಾದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಬಯಸುವವರಿಗೆ 20,000 H1-B ವೀಸಾಗಳನ್ನು ಒದಗಿಸಲಾಗುತ್ತದೆ. ಈ ವೀಸಾಗಳಿಗೆ ಅರ್ಜಿ ಸಲ್ಲಿಸುವವರಲ್ಲಿ ಭಾರತ ಮತ್ತು ಚೀನಾದವರೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಅಮೆರಿಕಾ ವಾರ್ಷಿಕವಾಗಿ ನೀಡುವ ಈ ವೀಸಾಗಳನ್ನು ಶೇ. 70 ಕ್ಕಿಂತ ಹೆಚ್ಚು ಭಾರತೀಯ ಅಭ್ಯರ್ಥಿಗಳೇ ಪಡೆದಿರುವುದು ಗಮನಾರ್ಹವಾಗಿದೆ.
ನೋಂದಣಿ ಪ್ರಕ್ರಿಯೆ ಹೇಗೆ? ಆನ್ಲೈನ್ಲ್ಲಿ H-1B ವೀಸಾಗಾಗಿ ನೋಂದಣಿಗಾಗಿ ಈ ರೀತಿ ಅರ್ಜಿ ಸಲ್ಲಿಸಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ