• Home
  • »
  • News
  • »
  • business
  • »
  • GST On Paratha: ರೆಡಿ-ಟು-ಈಟ್ ಪರೋಟಗಳ ಮೇಲೂ ಜಿಎಸ್‌ಟಿ!

GST On Paratha: ರೆಡಿ-ಟು-ಈಟ್ ಪರೋಟಗಳ ಮೇಲೂ ಜಿಎಸ್‌ಟಿ!

Gujarat AAAR approves 18 percent GST on ready to eat parathas stg asp

Gujarat AAAR approves 18 percent GST on ready to eat parathas stg asp

ಗುಜರಾತ್ ಅಡ್ವಾನ್ಸ್ ರೂಲಿಂಗ್ ಮೇಲ್ಮನವಿ ಪ್ರಾಧಿಕಾರ (AAAR), AAR (ಅಡ್ವಾನ್ಸ್ ರೂಲಿಂಗ್ ಅಥಾರಿಟಿ) ಯ ತೀರ್ಪನ್ನು ಅನುಮೋದಿಸುವಾಗ, ಪರೋಟಗಳ ಮೇಲೆ 18% GST ಅನ್ವಯಿಸುತ್ತದೆ ಎಂದು ತಿಳಿಸಿದೆ. ವಿವೇಕ್ ರಂಜನ್ ಮತ್ತು ಮಿಲಿಂದ್ ತೊರವಾನೆ ಅವರ ದ್ವಿಸದಸ್ಯ ಪೀಠವು ಪರೋಟಗಳು, ಸಾದಾ ಚಪಾತಿ ಅಥವಾ ರೋಟಿಗಿಂತ ಭಿನ್ನವಾಗಿರುತ್ತವೆ ಮತ್ತು ಅವುಗಳನ್ನು ಸಾದಾ ಚಪಾತಿ ಅಥವಾ ರೋಟಿ ಎಂದು ಪರಿಗಣಿಸಲಾಗುವುದಿಲ್ಲ ಅಥವಾ ಅಂಗೀಕರಿಸಲಾಗುವುದಿಲ್ಲ ಎಂಬ ಹೇಳಿಕೆಯನ್ನು ಗಮನಿಸಿದೆ.

ಮುಂದೆ ಓದಿ ...
  • News18 Kannada
  • Last Updated :
  • New Delhi, India
  • Share this:

ಗುಜರಾತ್‌ನ  (Gujarat) ಅಡ್ವಾನ್ಸ್ ರೂಲಿಂಗ್ ಮೇಲ್ಮನವಿ ಪ್ರಾಧಿಕಾರ (AAAR),  AAR ನ ತೀರ್ಪನ್ನು ಬೆಂಬಲಿಸಿದೆ ಮತ್ತು ರೆಡಿ-ಟು-ಈಟ್ ಪರೋಟ (Paratha) ಮೇಲೆ 18% GST ಅನ್ನು ಅನುಮೋದಿಸಿದೆ. ಗುಜರಾತ್ ಅಡ್ವಾನ್ಸ್ ರೂಲಿಂಗ್ ಮೇಲ್ಮನವಿ ಪ್ರಾಧಿಕಾರ (AAAR), AAR (ಅಡ್ವಾನ್ಸ್ ರೂಲಿಂಗ್ ಅಥಾರಿಟಿ) ಯ ತೀರ್ಪನ್ನು ಅನುಮೋದಿಸುವಾಗ, ಪರೋಟಗಳ ಮೇಲೆ 18% GST ಅನ್ವಯಿಸುತ್ತದೆ ಎಂದು ತಿಳಿಸಿದೆ. ವಿವೇಕ್ ರಂಜನ್ ಮತ್ತು ಮಿಲಿಂದ್ ತೊರವಾನೆ ಅವರ ದ್ವಿಸದಸ್ಯ ಪೀಠವು ಪರೋಟಗಳು, ಸಾದಾ ಚಪಾತಿ ಅಥವಾ ರೋಟಿಗಿಂತ ಭಿನ್ನವಾಗಿರುತ್ತವೆ ಮತ್ತು ಅವುಗಳನ್ನು ಸಾದಾ ಚಪಾತಿ ಅಥವಾ ರೋಟಿ (Roti) ಎಂದು ಪರಿಗಣಿಸಲಾಗುವುದಿಲ್ಲ ಅಥವಾ ಅಂಗೀಕರಿಸಲಾಗುವುದಿಲ್ಲ ಎಂಬ ಹೇಳಿಕೆಯನ್ನು ಗಮನಿಸಿದೆ.


ಬ್ರಿಟಿಷರು ಸಹ ಆಹಾರ ಪದಾರ್ಥಗಳ ಮೇಲೆ ತೆರಿಗೆ ವಿಧಿಸಿರಲಿಲ್ಲ
GAAAR ನ ತೀರ್ಪಿಗೆ ಪ್ರತಿಕ್ರಿಯಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, "ಬ್ರಿಟಿಷರು ಸಹ ಆಹಾರ ಪದಾರ್ಥಗಳ ಮೇಲೆ ತೆರಿಗೆ ವಿಧಿಸಿರಲಿಲ್ಲ" ಎಂದು ತಿಳಿಸಿದ್ದಾರೆ. ದೇಶವು ಇಂದು ಎದುರಿಸುತ್ತಿರುವ ಹಣದುಬ್ಬರಕ್ಕೆ ಪ್ರಧಾನ ಕಾರಣ ಕೇಂದ್ರವು ವಿಧಿಸುತ್ತಿರುವ ಹೆಚ್ಚಿನ ಜಿಎಸ್‌ಟಿ ಎಂದು ವಾಗ್ದಾಳಿ ನಡೆಸಿದ ಎಎಪಿ ಸಂಚಾಲಕರು, ಇದನ್ನು ಕಡಿಮೆ ಮಾಡಬೇಕು ಹಾಗೂ ಜನರೇ ಹಣದುಬ್ಬರವನ್ನು ತೊಡೆದುಹಾಕಬೇಕು ಎಂದು ತಿಳಿಸಿದ್ದಾರೆ.


ತವಾದಲ್ಲಿ ಬಿಸಿಮಾಡಿಕೊಂಡು ಪರೋಟಗಳನ್ನು ಸೇವಿಸಬೇಕು: ಮೇಲ್ಮನವಿದಾರರು
ಮೇಲ್ಮನವಿದಾರರು ಮಲಬಾರ್ ಪರೋಟ, ಮಿಶ್ರ ತರಕಾರಿ ಪರೋಟ, ಈರುಳ್ಳಿ ಪರೋಟ, ಮೇತಿ ಪರೋಟ, ಆಲೂ ಪರೋಟ ಲಚ್ಚ ಪರೋಟ, ಮೂಲಿ ಪರೋಟ ಮತ್ತು ಸಾದಾ ಪರೋಟ  ಸೇರಿದಂತೆ ಎಂಟು ವಿಧದ ರೆಡಿ-ಟು-ಈಟ್ ಫ್ರೋಜನ್ ಪರೋಟಗಳನ್ನು ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದು, ಎಲ್ಲಾ ವಿಧದ ಪರೋಟಗಳ ಪ್ರಮುಖ ಪದಾರ್ಥಗಳು ಗೋಧಿ ಹಿಟ್ಟು ಮತ್ತು ಆಲೂಗಡ್ಡೆ, ವಿವಿಧ ತರಕಾರಿಗಳಾದ ಮೂಲಂಗಿ, ಈರುಳ್ಳಿ, ಮೆಂತೆ ಸೊಪ್ಪು ಪದಾರ್ಥಗಳಾಗಿವೆ.


ಪರೋಟಗಳನ್ನು ಪ್ಯಾಕ್ ಮಾಡಿದ ಸ್ಥಿತಿಯಲ್ಲಿ ಸರಬರಾಜು ಮಾಡಲಾಗುತ್ತದೆ ಮತ್ತು ಮಾರಾಟ ಮಾಡಲಾಗುತ್ತದೆ ಮತ್ತು ನೇರವಾಗಿ ಇದನ್ನು ಪ್ಯಾನ್ ಇಲ್ಲವೇ ತವಾದಲ್ಲಿ ಮಂದ ಉರಿಯಲ್ಲಿ 3-4 ನಿಮಿಷಗಳ ಕಾಲ ಬಿಸಿ ಮಾಡಿಕೊಂಡು ಸೇವಿಸಬಹುದಾಗಿದೆ ಎಂದು ತಿಳಿಸಿದ್ದಾರೆ.


18% ಜಿಎಸ್‌ಟಿಗೆ ವಿರೋಧ ವ್ಯಕ್ತಪಡಿಸಿದ ಅರ್ಜಿದಾರರು
ಗುಜರಾತ್‌ನ ಅಡ್ವಾನ್ಸ್ ರೂಲಿಂಗ್ ಮೇಲ್ಮನವಿ ಪ್ರಾಧಿಕಾರ (AAAR) ಪರೋಟಗಳ ಅರ್ಹತೆಯ ವರ್ಗೀಕರಣವು HSN 21069099 ನಲ್ಲಿದೆ ಮತ್ತು 18% GST ಅನ್ವಯಿಸುತ್ತದೆ ಎಂದು ತೀರ್ಪು ನೀಡಿದೆ. GAAR ನ ಮುಂಗಡ ತೀರ್ಪು ಮೇಲ್ಮನವಿದಾರರಲ್ಲಿ ಅಸಮಾಧಾವನ್ನುಂಟು ಮಾಡಿದೆ. ಪರೋಟಗಳನ್ನು ಬೇಯಿಸಲು 3-4 ನಿಮಿಷಗಳು ಬೇಕಾಗಿರುವುದರಿಂದ 1905 ರ ಅಧ್ಯಾಯದ ಶಿರೋನಾಮೆ ಅಡಿಯಲ್ಲಿ ಪರೋಟಗಳನ್ನು ವರ್ಗೀಕರಿಸಲಾಗುವುದಿಲ್ಲ ಎಂಬುದನ್ನು ಗಮನಿಸುವಲ್ಲಿ GAAR ದೋಷಯುಕ್ತವಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.


ಇದನ್ನೂ ಓದಿ: Onion Prices: ಕಣ್ಣೀರು ತರಿಸಲಿದೆ ಈರುಳ್ಳಿ; ದೀಪಾವಳಿ ನಂತರ ಮತ್ತೆ ಬೆಲೆ ಏರಿಕೆ?


ಅಧ್ಯಾಯ 19 ರ GST ಸುಂಕ ಮತ್ತು HSN ವಿವರಣಾತ್ಮಕ ಟಿಪ್ಪಣಿಗಳ ಪ್ರಕಾರವಾಗಿ, 1905 ರ ಶೀರ್ಷಿಕೆಯು ಕೇವಲ ರೆಡಿ ಟು ಈಟ್ ಉತ್ಪನ್ನಗಳಿಗೆ ಮಾತ್ರ ಅನ್ವಯವಾಗುತ್ತದೆ ಎಂಬುದಾಗಿ ಉಲ್ಲೇಖಗೊಂಡಿಲ್ಲ. 1905 ರ ಶೀರ್ಷಿಕೆಯ ಅಡಿಯಲ್ಲಿ ಬರುವ ಪಿಜ್ಜಾ ಬ್ರೆಡ್ ಅನ್ನು ಉಲ್ಲೇಖಿಸಿರುವ ಮೇಲ್ಮನವಿದಾರರು, ರಿಯಾಯಿತಿ ದರದ ಸುಂಕಕ್ಕೆ ಈ ಉತ್ಪನ್ನವೂ ಅರ್ಹವಾಗಿದ್ದು, ಪಿಜ್ಜಾ ಬ್ರೆಡ್, ರಸ್ಕ್ ಮತ್ತು ಟೋಸ್ಟ್ ಮಾಡಿದ ಬ್ರೆಡ್‌ಗೆ 5% GST ಅನ್ವಯಿಸುತ್ತದೆ ಎಂದು ತಿಳಿಸಿದ್ದಾರೆ.


ಪಿಜ್ಜಾ ಬ್ರೆಡ್ ಮತ್ತು ಟೋಸ್ಟ್ ಮಾಡಿದ ಬ್ರೆಡ್ ಅನ್ನು ಸೇವಿಸುವ ಮೊದಲು ಅದನ್ನು ಬಿಸಿಮಾಡಬೇಕು ಹಾಗೂ ಬೇಯಿಸಬೇಕು. ಶೀರ್ಷಿಕೆ 1905 ಸೇವನೆಗೆ ಸಿದ್ಧವಾಗಿರುವ ಉತ್ಪನ್ನಗಳಿಗೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನು ಇದು ಸಾಬೀತುಪಡಿಸುತ್ತದೆ ಎಂದು ತಿಳಿಸಿದ್ದಾರೆ.


ಚಪಾತಿ, ರೋಟಿ ಹಾಗೂ ಪರೋಟಕ್ಕೆ ಭಿನ್ನತೆ ಇದೆ
1905 ರ ಶೀರ್ಷಿಕೆಯಡಿಯಲ್ಲಿ ವರ್ಗೀಕರಿಸಬಹುದಾದ ಮತ್ತು 5% GST ಗೆ ಅನ್ವಯವಾಗುವ ಪರೋಟಗಳು, ರೋಟಿ ಇಲ್ಲವೇ ಚಪಾತಿಗೆ ಹೋಲುತ್ತವೆ ಎಂದು ಮೇಲ್ಮನವಿದಾರರು ವಾದಿಸಿದ್ದಾರೆ. AAAR ಗಮನಿಸಿರುವಂತೆ, ಬೇರೆ ಬೇರೆ ರೀತಿಯ ಪರೋಟಗಳಲ್ಲಿ ಹೆಚ್ಚು ಸಾಮಾನ್ಯವಾಗಿ ಬಳಸಲಾಗಿರುವ ಪದಾರ್ಥವೆಂದರೆ ಗೋಧಿ ಹಿಟ್ಟು ಹಾಗೂ ಇತರ ಸಾಮಾಗ್ರಿಗಳಾದ ನೀರು, ಸಸ್ಯಜನ್ಯ ಎಣ್ಣೆ, ಉಪ್ಪು, ಉತ್ಕರ್ಷಣ ನಿರೋಧಕಗಳು, ಆಲೂಗಡ್ಡೆ, ತರಕಾರಿಗಳು, ಮೂಲಂಗಿ, ಈರುಳ್ಳಿ, ಮೆಂತ್ಯೆ ಸೊಪ್ಪು ಇತ್ಯಾದಿ. ಅದಾಗ್ಯೂ ಸಾದಾ ರೋಟಿ ಅಥವಾ ಚಪಾತಿಯನ್ನು ಬರೇ ಗೋಧಿ ಹಿಟ್ಟು ಹಾಗೂ ನೀರಿನಿಂದ ತಯಾರಿಸಲಾಗುತ್ತದೆ. ಪರೋಟದಲ್ಲಿ ಬಳಸಲಾಗಿರುವ ಸಾಮಾಗ್ರಿಗಳು ಹಾಗೂ ರೋಟಿ ಅಥವಾ ಚಪಾತಿಯಲ್ಲಿ ಬಳಸಲಾಗಿರುವ ಸಾಮಾಗ್ರಿಗಳನ್ನು ಆಧರಿಸಿ ಎರಡರ ಸಂಯೋಜನೆಯು ಭಿನ್ನವಾಗಿದೆ ಎಂದು AAAR ತಿಳಿಸಿದೆ.


ಇದನ್ನೂ ಓದಿ: PFI Ban: ಅಯೋಧ್ಯೆ ಟಾರ್ಗೆಟ್​ ಮಾಡಿದ್ದ ಪಿಎಫ್​ಐ, ರಾಮ ಮಂದಿರ ಉರುಳಿಸಿ ಮಸೀದಿ ನಿರ್ಮಿಸಲು ಪ್ಲಾನ್!


ಅಂತಿಮ ಬಳಕೆದಾರರು ಉತ್ಪನ್ನದ ವರ್ಗೀಕರಣವನ್ನು ನಿರ್ಧರಿಸಲು ಸಾಧ್ಯವಿಲ್ಲ ಮತ್ತು ಹಲವಾರು ಅಂಶಗಳನ್ನು ಪರಿಗಣಿಸುವ ಅಗತ್ಯವಿದೆ ಎಂದು ಮೇಲ್ಮನವಿ ಪ್ರಾಧಿಕಾರವು ಅಭಿಪ್ರಾಯಪಟ್ಟಿದೆ. ಪರೋಟಗಳು ಸಾದಾ ಚಪಾತಿ ಅಥವಾ ರೋಟಿಗಳಿಗಿಂತ ಬಹಳ ಭಿನ್ನವಾಗಿರುತ್ತವೆ ಮತ್ತು ಉತ್ಪನ್ನಗಳನ್ನು ಅವುಗಳ ಅರ್ಹತೆಯ ಮೇಲೆ ವರ್ಗೀಕರಿಸಬೇಕು ಎಂದು ತೀರ್ಪಿತ್ತಿದೆ.

Published by:Ashwini Prabhu
First published: