Supreme Court on GST: ಕೇಂದ್ರ ಮತ್ತು ರಾಜ್ಯ ಇಬ್ಬರಿಗೂ ಜಿಎಸ್‌ಟಿ ಕಾನೂನು ರೂಪಿಸುವ ಅಧಿಕಾರವಿದೆ: ಸುಪ್ರೀಂ ಕೋರ್ಟ್
ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರ ಜಿಎಸ್‌ಟಿ ವಿಷಯಗಳಲ್ಲಿ ಸಮಾನವಾಗಿ ಕಾನೂನು ಮಾಡಬಹುದು. ಜಿಎಸ್‌ಟಿ ಕೌನ್ಸಿಲ್‌ನ ಎಲ್ಲಾ ಶಿಫಾರಸುಗಳು ರಾಜ್ಯ ಶಾಸಕಾಂಗದ ಮೇಲೆ ವಿಧಿಸಲು ಬದ್ಧವಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಕೇಂದ್ರ ಸರ್ಕಾರ ಮತ್ತು ರಾಜ್ಯಗಳು ಸರಕು ಮತ್ತು ಸೇವಾ ತೆರಿಗೆ (GST) ವಿಷಯಗಳ ಕುರಿತು ಕಾನೂನು ರೂಪಿಸಲು ಸಮಾನ ಮತ್ತು ಸಮನ್ವಯ ಅಧಿಕಾರವನ್ನು ಹೊಂದಿವೆ ಎಂದು ಸುಪ್ರೀಂ ಕೋರ್ಟ್ (Supreme Court) ಗುರುವಾರ ಮಹತ್ವದ ತೀರ್ಪು ನೀಡಿತು. ಜಿಎಸ್‌ಟಿ ಕೌನ್ಸಿಲ್‌ನ ಶಿಫಾರಸುಗಳು ಕೇಂದ್ರ ಮತ್ತು ರಾಜ್ಯಗಳ ಮೇಲೆ ಬದ್ಧವಾಗಿಲ್ಲ. ಅಂತಹ ಶಿಫಾರಸುಗಳು ಕೇವಲ ಮನವೊಲಿಸುವ ಮೌಲ್ಯವನ್ನು ಹೊಂದಿವೆ ಎಂದು ನ್ಯಾಯಮೂರ್ತಿ ಧನಂಜಯ ವೈ ಚಂದ್ರಚೂಡ್ (Justice Dhananjaya Y Chandrachud) ನೇತೃತ್ವದ ಪೀಠ ಜಿಎಸ್‌ಟಿ ಸಂಬಂಧಿಸಿದ ಕಾನೂನು ನಿಬಂಧನೆಗಳನ್ನು ವ್ಯಾಖ್ಯಾನಿಸಿತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಫೆಡರಲ್ ಘಟಕಗಳ ಅಧಿಕಾರವನ್ನು ವಿವರಿಸುವ ಮಹತ್ವದ ತೀರ್ಪನ್ನು ಕೋರ್ಟ್ ನೀಡಿದೆ ಎಂದೇ ವಿಶ್ಲೇಷಣೆ ಕೇಳಿಬಂದಿದೆ.
ಸರಕು ಮತ್ತು ಸೇವಾ ತೆರಿಗೆ ಕಾಯಿದೆಯಲ್ಲಿ 2017 (ಜಿಎಸ್‌ಟಿ ಕಾಯಿದೆ) ಕೇಂದ್ರ ಮತ್ತು ರಾಜ್ಯಗಳು ರಚಿಸಿರುವ ಕಾನೂನುಗಳ ನಡುವೆ ಕೆಲವು ಸಂದರ್ಭಗಳಲ್ಲಿ ವ್ಯವಹರಿಸುವ ಯಾವುದೇ ನಿಬಂಧನೆಗಳಿಲ್ಲ ಎಂದ ಕೋರ್ಟ್ ಇಂತಹ ಸಂದರ್ಭಗಳಲ್ಲಿ ಜಿಎಸ್‌ಟಿ ಕೌನ್ಸಿಲ್ ಸಲಹೆ ನೀಡಬೇಕೆಂದು ನ್ಯಾಯಾಲಯ ಸೂಚಿಸಿದೆ.
ಜಿಎಸ್‌ಟಿ ಕೌನ್ಸಿಲ್ ಸಾಮರಸ್ಯದಿಂದ ಕೆಲಸ ಮಾಡಬೇಕು ಕೇಂದ್ರ ಮತ್ತು ರಾಜ್ಯ ಶಾಸಕಾಂಗಗಳು ಜಿಎಸ್‌ಟಿಯ ಮೇಲೆ ಶಾಸನ ಮಾಡಲು ಏಕಕಾಲದಲ್ಲಿ ಅಧಿಕಾರವನ್ನು ಹೊಂದಿವೆ. ಸಂವಿಧಾನವು ಕಾನೂನು ರೂಪಿಸಲು ನಿರಾಕರಣೆ ನಿಬಂಧನೆಯನ್ನು ಕಲ್ಪಿಸುವುದಿಲ್ಲ. ಕಾನೂನು ರೂಪಿಸುವ ಅಧಿಕಾರವನ್ನು ಇಬ್ಬರಿಗೂ ನೀಡಿದಾಗ ಕಾರ್ಯಸಾಧ್ಯವಾದ ಪರಿಹಾರವನ್ನು ಸಾಧಿಸಬಹುದು. ಜೊತೆಗೆ ಜಿಎಸ್‌ಟಿ ಕೌನ್ಸಿಲ್ ಸಾಮರಸ್ಯದಿಂದ ಕೆಲಸ ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ.
ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರ ಜಿಎಸ್‌ಟಿ ವಿಷಯಗಳಲ್ಲಿ ಸಮಾನವಾಗಿ ಕಾನೂನು ಮಾಡಬಹುದು. ಜಿಎಸ್‌ಟಿ ಕೌನ್ಸಿಲ್‌ನ ಎಲ್ಲಾ ಶಿಫಾರಸುಗಳು ರಾಜ್ಯ ಶಾಸಕಾಂಗದ ಮೇಲೆ ವಿಧಿಸಲು ಬದ್ಧವಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ. ಆರ್ಟಿಕಲ್ 246A ಪ್ರಕಾರ ಸಂಸತ್ತು ಮತ್ತು ರಾಜ್ಯ ಶಾಸಕಾಂಗ ಎರಡೂ ತೆರಿಗೆಯ ವಿಷಯಗಳ ಮೇಲೆ ಶಾಸನ ಮಾಡಲು ಸಮಾನ ಅಧಿಕಾರವನ್ನು ಹೊಂದಿವೆ ಎಂದು ನ್ಯಾಯಾಲಯವು ಸೂಚನೆ ನೀಡಿದೆ.
ಸ್ಪರ್ಧಾತ್ಮಕ ಫೆಡರಲಿಸಂ ಪದ ಬಳಸಿದ ಕೋರ್ಟ್ ಕಲಂ 246A ಪ್ರಕಾರ ರಾಜ್ಯ ಮತ್ತು ಕೇಂದ್ರವನ್ನು ಸಮಾನವಾಗಿ ಪರಿಗಣಿಸಲಾಗುತ್ತದೆ. ವಿಧಿ 279 ರಾಜ್ಯ ಮತ್ತು ಕೇಂದ್ರವು ಪರಸ್ಪರ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಹೇಳುತ್ತದೆ. ಇದು ಸ್ಪರ್ಧಾತ್ಮಕ ಫೆಡರಲಿಸಂ ಅನ್ನು ಸೂಚಿಸುತ್ತದೆ ಎಂದು ತೀರ್ಪು ವ್ಯಾಖ್ಯಾನಿಸಿದೆ.
ಅವ್ಯವಸ್ಥೆಯನ್ನು ತಪ್ಪಿಸಲು ಭಾರತೀಯ ಸಂವಿಧಾನವು ಅಗತ್ಯವಾಗಿ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಅಧಿಕಾರವನ್ನು ಒದಗಿಸುತ್ತದೆ. ಆದರೆ ಎರಡು ಸಾಂವಿಧಾನಿಕ ಘಟಕಗಳ ನಡುವಿನ ಸಂಬಂಧವು ಯಾವಾಗಲೂ ಸಹಕಾರಿಯಾಗಿರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಭಾರತವು ಬಹುಪಕ್ಷ ಪದ್ಧತಿಯನ್ನು ಹೊಂದಿರುವ ವ್ಯವಸ್ಥೆಯಾಗಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವು ಇತರ ರಾಜ್ಯಗಳಲ್ಲಿ ಅಧಿಕಾರದಲ್ಲಿ ಇರಬಹುದು ಅಥವಾ ಇಲ್ಲದಿರಬಹುದು. ಕೆಲವು ಸಂದರ್ಭಗಳಲ್ಲಿ ರಾಜ್ಯಗಳಿಗೆ ಕಡಿಮೆ ಅಧಿಕಾರವನ್ನು ನೀಡಿದ್ದರೂ ಸಹ, ಅವರು ಇನ್ನೂ ವಿವಿಧ ರೂಪಗಳನ್ನು ಬಳಸಿಕೊಂಡು ಒಕ್ಕೂಟ ಸರ್ಕಾರದ ಆದೇಶಗಳನ್ನು ವಿರೋಧಿಸಬಹುದು. ಸಂವಿಧಾನವು ಅನುಮತಿಸಿದ ರಾಜಕೀಯ ಸ್ಪರ್ಧೆಗಳಲ್ಲಿ ಒಂದು ಸರ್ಕಾರವು [ಕೇಂದ್ರ ಅಥವಾ ರಾಜ್ಯಗಳು] ಯಾವಾಗಲೂ ಇತರ ಘಟಕಗಳ ಮೇಲೆ ಹೆಚ್ಚಿನ ಅಧಿಕಾರವನ್ನು ಹೊಂದಿರುವುದು ಅನಿವಾರ್ಯವಲ್ಲ ಎಂದು ನ್ಯಾಯಾಲಯ ತೀರ್ಪಿನಲ್ಲಿ ಉಲ್ಲೇಖಿಸಿದೆ.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ