Price Hike: ಚಾಕೊಲೇಟ್, ಚ್ಯೂಯಿಂಗ್ ಗಮ್ ಬೆಲೆಯೂ ಆಗಲಿದೆಯೇ ಏರಿಕೆ?

ಒಟ್ಟು 143 ವಸ್ತುಗಳ ಪೈಕಿ ಶೇಕಡಾ 92ರಷ್ಟು ವಸ್ತುಗಳನ್ನು ಶೇಕಡಾ 18ರಷ್ಟು ತೆರಿಗೆ ಸ್ಲ್ಯಾಬ್ ನಿಂದ ಶೇಕಡಾ 28ರ ಟಾಪ್ ಸ್ಲ್ಯಾಬಿಗೆ ವರ್ಗಾಯಿಸಲು ಉದ್ದೇಶಿಸಲಾಗಿದೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಗಾಯದ ಮೇಲೆ ಬರೆ ಎಂಬಂತೆ, ಈಗಾಗಲೇ ನಮ್ಮ ಭಾರತ ದೇಶದಲ್ಲಿ ದಿನೇ ದಿನೇ ಪ್ರಮುಖ ಸರಕುಗಳ ಬೆಲೆಗಳು ಮತ್ತು ತೈಲದ ಬೆಲೆಗಳು ಹೆಚ್ಚಾಗುತ್ತಿದ್ದು, ಮಧ್ಯಮ ವರ್ಗದ ಜನರಿಗೆ ತುಂಬಾನೇ ಹೊರೆ ಆಗುತ್ತಿದೆ ಎಂದು ಹೇಳಬಹುದು. ಅದರಲ್ಲಿ ಜಿಎಸ್‌ಟಿ ಮಂಡಳಿಯು (GST Council) ಈಗ 143 ವಸ್ತುಗಳ ಮೇಲಿನ ದರಗಳನ್ನು ಹೆಚ್ಚಿಸಲು ರಾಜ್ಯಗಳ ಅಭಿಪ್ರಾಯಗಳನ್ನು ಕೇಳಿದೆ ಎಂದು ವರದಿಯೊಂದು ತಿಳಿಸಿದೆ. ಯಾವ್ಯಾವ ಉತ್ಪನ್ನಗಳ ಮೇಲೆ ಜಿಎಸ್‌ಟಿ ದರಗಳನ್ನು (GST Rates) ಹೆಚ್ಚಿಗೆ ಮಾಡಲಿದೆ ಎಂದು ನೀವು ಕೇಳುವುದಾದರೆ, ಅವು ಹ್ಯಾಂಡ್ ಬ್ಯಾಗ್‌ಗಳು, ಸುಗಂಧ ದ್ರವ್ಯಗಳು, ಡಿಯೋಡರೆಂಟ್ ಗಳು, ಚಾಕೊಲೇಟ್ ಗಳು, ಚ್ಯೂಯಿಂಗ್ ಗಮ್, ಚರ್ಮದ ಉಡುಪು ಮತ್ತು ಬಟ್ಟೆ ಪರಿಕರಗಳು ಮತ್ತು ವಾಲ್ನಟ್ ಗಳು ಆಗಿವೆ ಎಂದು ಹೇಳಲಾಗುತ್ತಿದೆ.

ಒಟ್ಟು 143 ವಸ್ತುಗಳ ಪೈಕಿ ಶೇಕಡಾ 92ರಷ್ಟು ವಸ್ತುಗಳನ್ನು ಶೇಕಡಾ 18ರಷ್ಟು ತೆರಿಗೆ ಸ್ಲ್ಯಾಬ್ ನಿಂದ ಶೇಕಡಾ 28ರ ಟಾಪ್ ಸ್ಲ್ಯಾಬಿಗೆ ವರ್ಗಾಯಿಸಲು ಉದ್ದೇಶಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.

ಯಾವೆಲ್ಲ ವಸ್ತುಗಳ ಬೆಲೆ ಹೆಚ್ಚಳ?
ಕಸ್ಟರ್ಡ್ ಪೌಡರ್, ಕೈಗಡಿಯಾರಗಳು, ಹಪ್ಪಳ, ಸೂಟ್ಕೇಸ್ ಗಳು, ಬೆಲ್ಲ, ಹ್ಯಾಂಡ್ ಬ್ಯಾಗ್‌ಗಳು, ಸುಗಂಧ ದ್ರವ್ಯಗಳು, ಪವರ್ ಬ್ಯಾಂಕ್ ಗಳು, 32 ಇಂಚುಗಳಿಗಿಂತ ಕಡಿಮೆ ಇರುವ ಕಲರ್ ಟಿವಿ ಸೆಟ್, ಚಾಕೊಲೇಟ್ ಗಳು, ಸೆರಾಮಿಕ್ ಸಿಂಕ್ ಗಳು, ವಾಶ್ ಬೇಸಿನ್ ಗಳು, ಚ್ಯೂಯಿಂಗ್ ಗಮ್ ಗಳು, ವಾಲ್ನಟ್ ಗಳು, ಕನ್ನಡಕಗಳು, ಆಲ್ಕೋಹಾಲ್ ರಹಿತ ಪಾನೀಯಗಳು ಮತ್ತು ಚರ್ಮದ ಉಡುಪು ಮತ್ತು ಬಟ್ಟೆಯ ಪರಿಕರಗಳು ಈ 143 ವಸ್ತುಗಳಲ್ಲಿ ಸೇರಿವೆ.

ಹಪ್ಪಳ ಮತ್ತು ಬೆಲ್ಲ ಏನಾಗಲಿವೆ?
ಹಪ್ಪಳ ಮತ್ತು ಬೆಲ್ಲದಂತಹ ಆಹಾರ ಪದಾರ್ಥಗಳನ್ನು ಶೂನ್ಯದಿಂದ ಶೇಕಡಾ 5 ರಷ್ಟು ಜಿಎಸ್‌ಟಿ ಸ್ಲ್ಯಾಬ್ ಗೆ ವರ್ಗಾಯಿಸಬಹುದು. ವಾಲ್ನಟ್ ಗಳ ಜಿಎಸ್‌ಟಿ ದರವನ್ನು ಶೇಕಡಾ 5 ರಿಂದ ಶೇಕಡಾ 12ಕ್ಕೆ, ಕಸ್ಟರ್ಡ್ ಪೌಡರ್ ಶೇಕಡಾ 5 ರಿಂದ ಶೇಕಡಾ 18ಕ್ಕೆ ಮತ್ತು ಮರದ ಟೇಬಲ್ ಮತ್ತು ಕಿಚನ್ ವೇರ್ ಗಳಿಗೆ ಶೇಕಡಾ 12 ರಿಂದ ಶೇಕಡಾ 18ಕ್ಕೆ ಹೆಚ್ಚಿಸಬಹುದು ಎಂದು ವರದಿ ತಿಳಿಸಿದೆ.

ಜಿಎಸ್ಟಿ ಸ್ಲ್ಯಾಬ್ ಬದಲಾವಣೆಗಳು
ಏತನ್ಮಧ್ಯೆ ವರದಿಗಳ ಪ್ರಕಾರ ದೇಶದಲ್ಲಿ ಪರೋಕ್ಷ ತೆರಿಗೆ ಆಡಳಿತ ಮಂಡಳಿಯಾದ ಜಿಎಸ್‌ಟಿ ಕೌನ್ಸಿಲ್ ಮುಂದಿನ ತಿಂಗಳು ತನ್ನ ಸಭೆಯಲ್ಲಿ, ಸಾಮೂಹಿಕ ಬಳಕೆಯ ಕೆಲವು ಸರಕುಗಳನ್ನು ಶೇಕಡಾ 3ಕ್ಕೆ ಮತ್ತು ಉಳಿದವುಗಳನ್ನು ಶೇಕಡಾ 8ರ ಸ್ಲ್ಯಾಬ್ ಗಳಿಗೆ ವರ್ಗಾಯಿಸುವ ಮೂಲಕ ಶೇಕಡಾ 5ರ ಸ್ಲ್ಯಾಬ್ ಅನ್ನು ತೆಗೆದು ಹಾಕುವ ಪ್ರಸ್ತಾಪವನ್ನು ಪರಿಗಣಿಸಬಹುದು.

ವಿನಾಯಿತಿ ಪಟ್ಟಿಯೂ ಇದೆ
ಪ್ರಸ್ತುತವಾಗಿ ನಾಲ್ಕು ಜಿಎಸ್‌ಟಿ ಸ್ಲ್ಯಾಬ್ ಗಳಿದ್ದು, ಅದರಲ್ಲಿ ಶೇಕಡಾ 5, ಶೇಕಡಾ 12, ಶೇಕಡಾ 18 ಮತ್ತು ಶೇಕಡಾ 28 ಇವೆ. ಶೇಕಡಾ 18ರಷ್ಟು ಸ್ಲ್ಯಾಬ್ ನಲ್ಲಿ 480 ವಸ್ತುಗಳು ಇದ್ದು, ಇದರಿಂದ ಶೇಕಡಾ 70ರಷ್ಟು ಜಿಎಸ್‌ಟಿ ಸಂಗ್ರಹವಾಗುತ್ತದೆ. ಇದಲ್ಲದೆ ಲೆವಿಯನ್ನು ಆಕರ್ಷಿಸದ ಬ್ರ್ಯಾಂಡ್ ಮಾಡದ ಮತ್ತು ಅನ್ ಪ್ಯಾಕ್ ಮಾಡದ ಆಹಾರ ಪದಾರ್ಥಗಳಂತಹ ವಸ್ತುಗಳ ವಿನಾಯಿತಿ ಪಟ್ಟಿ ಇದೆ. ಕೆಲವು ಆಹಾರೇತರ ವಸ್ತುಗಳನ್ನು ಶೇಕಡಾ 3ಕ್ಕೆ ಸ್ಥಳಾಂತರಿಸುವ ಮೂಲಕ ವಿನಾಯಿತಿ ವಸ್ತುಗಳ ಪಟ್ಟಿಯನ್ನು ಕತ್ತರಿಸಲು ಕೌನ್ಸಿಲ್ ನಿರ್ಧರಿಸಬಹುದು ಎಂದು ಸುದ್ದಿ ಸಂಸ್ಥೆಯೊಂದರ ವರದಿ ತಿಳಿಸಿದೆ.

ಇದನ್ನೂ ಓದಿ: Ration Card New Alert: ಹುಷಾರ್! ನಿಮ್ಮ ರೇಷನ್ ಕಾರ್ಡ್ ರದ್ದಾಗಬಹುದು ಎಚ್ಚರ!

ಶೇಕಡಾ 5ರಷ್ಟು ಸ್ಲ್ಯಾಬ್ ಅನ್ನು ಶೇಕಡಾ 7 ಅಥವಾ 8 ಅಥವಾ ಶೇಕಡಾ 9ಕ್ಕೆ ಹೆಚ್ಚಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ ಎಂದು ವರದಿ ತಿಳಿಸಿದೆ. ಮೇ ತಿಂಗಳಲ್ಲಿ ನಡೆಯಲಿರುವ ಮುಂದಿನ ಸಭೆಯಲ್ಲಿ ಕೇಂದ್ರ ಮತ್ತು ರಾಜ್ಯಗಳ ಹಣಕಾಸು ಸಚಿವರನ್ನು ಒಳಗೊಂಡ ಜಿಎಸ್‌ಟಿ ಮಂಡಳಿಯು ಅಂತಿಮ ನಿರ್ಧಾರ ತೆಗೆದು ಕೊಳ್ಳಲಿದೆ.

ಜಿಎಸ್ಟಿ ಪರಿಹಾರ ವ್ಯವಸ್ಥೆ ಅಂತ್ಯ
ಜಿಎಸ್‌ಟಿ ಪರಿಹಾರ ವ್ಯವಸ್ಥೆಯು ಜೂನ್ ನಲ್ಲಿ ಕೊನೆಗೊಳ್ಳಲಿದೆ. ತೆರಿಗೆ ದರಗಳನ್ನು ತರ್ಕಬದ್ಧಗೊಳಿಸುವ ಮೂಲಕ ಮತ್ತು ತೆರಿಗೆ ರಚನೆಯಲ್ಲಿನ ವೈಪರೀತ್ಯಗಳನ್ನು ಸರಿಪಡಿಸುವ ಮೂಲಕ ಆದಾಯವನ್ನು ಹೆಚ್ಚಿಸುವ ಮಾರ್ಗಗಳನ್ನು ಸೂಚಿಸಲು ಕಳೆದ ವರ್ಷ, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ರಾಜ್ಯ ಸಚಿವರ ಸಮಿತಿಯನ್ನು ಕೌನ್ಸಿಲ್ ರಚಿಸಿತ್ತು.

ಇದನ್ನೂ ಓದಿ: Rs. 900 Per Month to Farmers: ದೇಸಿ ಹಸು ಸಾಕಿದ್ರೆ ಪ್ರತಿ ತಿಂಗಳು 900 ರೂ. ರೈತರಿಗೆ! ಏನಿದು ಯೋಜನೆ?

ಜೂನ್ 2022 ರವರೆಗೆ ಐದು ವರ್ಷಗಳ ಕಾಲ ಜಿಎಸ್‌ಟಿ ವ್ಯವಸ್ಥೆಯ ಜಾರಿಯಿಂದಾಗಿ ರಾಜ್ಯಗಳು ತಮ್ಮ ಆದಾಯದ ಕೊರತೆಯನ್ನು ಸರಿದೂಗಿಸುವಂತೆ ಕೇಂದ್ರ ಸರ್ಕಾರವನ್ನು ಕೇಳಲಾಗಿತ್ತು.2015-16 ರ ಮೂಲ ವರ್ಷದ ಆದಾಯಕ್ಕಿಂತ ರಾಜ್ಯಗಳ ಆದಾಯವನ್ನು ವಾರ್ಷಿಕ ಶೇಕಡಾ 14ರಂತೆ ರಕ್ಷಿಸಲು ಕೇಂದ್ರವು ಒಪ್ಪಿಕೊಂಡಿತ್ತು.
Published by:guruganesh bhat
First published: