GST: ವರ್ಷಾಂತ್ಯದಲ್ಲಿ 1.29 ಲಕ್ಷ ಕೋಟಿಯಷ್ಟು ಜಿಎಸ್‌ಟಿ ಹಣ ಸಂಗ್ರಹ

GST collections: ಕಳೆದ ನವೆಂಬರ್ ತಿಂಗಳಿನಲ್ಲಿ 1.31 ಲಕ್ಷ ಕೋಟಿ ರೂಪಾಯಿಗಿಂತ ಸ್ವಲ್ಪ ಕಡಿಮೆ, ಆದರೆ2 021ರ ಡಿಸೆಂಬರ್‌ನಲ್ಲಿ ಸರಾಸರಿ ತೆರಿಗೆ ಸಂಗ್ರಹವು ₹ 1,29,780 ಕೋಟಿಗಳಷ್ಟಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕೇಂದ್ರ(Central) ಮತ್ತು ರಾಜ್ಯ ಸರ್ಕಾರಗಳು(State Government) 2021ರ ಡಿಸೆಂಬರ್(December) ತಿಂಗಳಿನಲ್ಲಿ ಜಿಎಸ್ಟಿ(GST) ಸಂಗ್ರಹ ಬರೋಬ್ಬರಿ.1.29 ಲಕ್ಷ ಕೋಟಿಯಷ್ಟು ಸಂಗ್ರಹ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕೋವಿಡ್(Covid) ನಂತರ ಸತತ 6ನೇ ತಿಂಗಳು ಭಾರತದ(India) ಸರಕು ಮತ್ತು ಸೇವಾ ತೆರಿಗೆ ಸಂಗ್ರಹ 1 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಾಗಿದ್ದು, 1.29 ಲಕ್ಷ ಕೋಟಿಯಷ್ಟು ಸಂಗ್ರಹ ಮಾಡಲಾಗಿದೆ. ಆದರೆ ಕಳೆದ ನವೆಂಬರ್ ತಿಂಗಳಿನಲ್ಲಿ ಸಂಗ್ರಹಿಸಲಾದ ಜಿಎಸ್ಟಿ ಮೊತ್ತಕ್ಕಿಂತ ಡಿಸೆಂಬರ್ನಲ್ಲಿ ಕಡಿಮೆ ಮೊತ್ತದ ಜಿಎಸ್ಟಿ ಹಣಸಂಗ್ರಹವಾಗಿದೆ.

    ನವೆಂಬರ್ ನಲ್ಲಿ ಹೆಚ್ಚು ಸಂಗ್ರಹವಾಗಿದ್ದ GST ಹಣ

    ಡಿಸೆಂಬರ್ ತಿಂಗಳಿನಲ್ಲಿ ಸಂಗ್ರಹವಾಗಿರುವ ಜಿಎಸ್‌ಟಿ ಹಣಕ್ಕಿಂತ ನವೆಂಬರ್ ತಿಂಗಳಿನಲ್ಲಿ ಸಂಗ್ರಹವಾಗಿದ್ದ ಜಿಎಸ್ಟಿ ಅಧಿಕವಾಗಿದೆ.. ಕಳೆದ ನವೆಂಬರ್ ತಿಂಗಳಿನಲ್ಲಿ 1.31 ಲಕ್ಷ ಕೋಟಿ ರೂಪಾಯಿಗಿಂತ ಸ್ವಲ್ಪ ಕಡಿಮೆ, ಆದರೆ2 021ರ ಡಿಸೆಂಬರ್‌ನಲ್ಲಿ ಸರಾಸರಿ ತೆರಿಗೆ ಸಂಗ್ರಹವು ₹ 1,29,780 ಕೋಟಿಗಳಷ್ಟಾಗಿದೆ. ಇದರಲ್ಲಿ ಸಿಜಿಎಸ್‌ಟಿ ₹ 22,578 ಕೋಟಿ, ಎಸ್‌ಜಿಎಸ್‌ಟಿ ₹ 28,658 ಕೋಟಿ, ಐಜಿಎಸ್‌ಟಿ ₹ 69,155 ಕೋಟಿ ಹಾಗೂ ಸೆಸ್‌ ₹ 9,389 ಕೋಟಿಗಳಷ್ಟಿದೆ ಎಂದು ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ..

    ಇದನ್ನೂ ಓದಿ: ಜನವರಿ 1ರಿಂದ GST ನಿಯಮಗಳಲ್ಲಿ ಬದಲಾವಣೆ: ಯಾವುದರ ಬೆಲೆ ಏರಿಕೆ? ಇಳಿಕೆ?

    ಉತ್ತಮ ತೆರಿಗೆ ಆಡಳಿತದಿಂದ ಹೆಚ್ಚು ಜಿಎಸ್‌ಟಿ ಸಂಗ್ರಹ

    ಪ್ರಸಕ್ತ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಸರಾಸರಿ ಮಾಸಿಕ ಒಟ್ಟು ಜಿಎಸ್‌ಟಿ ಸಂಗ್ರಹವು 1.3 ಲಕ್ಷ ಕೋಟಿ ರೂಪಾಯಿ ಆಗಿದೆ. ಮೊದಲ ಮತ್ತು ಎರಡನೇ ತ್ರೈಮಾಸಿಕದಲ್ಲಿ ಕ್ರಮವಾಗಿ 1.1 ಲಕ್ಷ ಕೋಟಿ ರೂಪಾಯಿ ಮತ್ತು 1.15 ಲಕ್ಷ ಕೋಟಿ ರೂಪಾಯಿ ಸರಾಸರಿ ಮಾಸಿಕ ಸಂಗ್ರಹ ಆಗಿತ್ತು. "ಆರ್ಥಿಕ ಚೇತರಿಕೆ, ವಂಚನೆ-ವಿರೋಧಿ ಚಟುವಟಿಕೆಗಳು, ವಿಶೇಷವಾಗಿ ನಕಲಿ ಬಿಲ್ಲರ್‌ಗಳ ವಿರುದ್ಧ ಕ್ರಮಗಳು ಜಿಎಸ್‌ಟಿ ಸಂಗ್ರಹ ಹೆಚ್ಚುವುದಕ್ಕೆ ಕೊಡುಗೆ ನೀಡುತ್ತಿವೆ. ಇನ್ವರ್ಟೆಡ್ ಸುಂಕ ರಚನೆಯನ್ನು ಸರಿಪಡಿಸಲು ಜಿಎಸ್​ಟಿ ಸಮಿತಿ ಕೈಗೊಂಡ ವಿವಿಧ ದರಗಳ ಸಕ್ರಮ ಕ್ರಮಗಳಿಂದಲೂ ಆದಾಯದಲ್ಲಿ ಸುಧಾರಣೆಯಾಗಿದೆ. ಕಳೆದ ತ್ರೈಮಾಸಿಕದಲ್ಲಿಯೂ ಆದಾಯದ ಸಕಾರಾತ್ಮಕ ಪ್ರವೃತ್ತಿ ಮುಂದುವರಿಯುವ ನಿರೀಕ್ಷೆಯಿದೆ,” ಎಂದು ಸಚಿವಾಲಯ ತಿಳಿಸಿದೆ.

    ಇ-ವೇ ಬಿಲ್‌ಗಳ ಪ್ರಮಾಣವು ಶೇ 17 ರಷ್ಟು ಕಡಿಮೆ

    ಇನ್ನು2021ರ ಅಕ್ಟೋಬರ್‌ಗೆ ಹೋಲಿಸಿದರೆ ನವೆಂಬರ್‌ನಲ್ಲಿ ಸೃಷ್ಟಿಯಾಗಿರುವ ಇ-ವೇ ಬಿಲ್‌ಗಳ ಪ್ರಮಾಣವು ಶೇ 17 ರಷ್ಟು ಕಡಿಮೆ ಆಗಿದೆ. ಅಕ್ಟೋಬರ್‌ನಲ್ಲಿ 7.4 ಕೋಟಿ ಇ-ವೇ ಬಿಲ್‌ ಸೃಷ್ಟಿಯಾಗಿತ್ತು. ನವೆಂಬರ್‌ನಲ್ಲಿ 6.1 ಕೋಟಿಗೆ ಇಳಿಕೆ ಆಗಿದೆ. ಇ-ವೇ ಬಿಲ್‌ ಸೃಷ್ಟಿಯಲ್ಲಿ ಇಳಿಕೆ ಆಗಿದ್ದರು ಸಹ ಹೆಚ್ಚು ತೆರಿಗೆ ಸಂಗ್ರಹ ಆಗಿದೆ ..ಕೇಂದ್ರ ಮತ್ತು ರಾಜ್ಯ ತೆರಿಗೆ ಅಧಿಕಾರಿಗಳು ಸುಧಾರಿತ ತೆರಿಗೆ ನಿಯಮಾವಳಿ ಮತ್ತು ಉತ್ತಮ ತೆರಿಗೆ ಆಡಳಿತ ಇದಕ್ಕೆ ಕಾರಣ ಎಂದು ಸಚಿವಾಲಯ ಹೇಳಿದೆ. ಒಂದು ತಿಂಗಳ ವಹಿವಾಟಿನ ತೆರಿಗೆಯನ್ನು ನಂತರದ ತಿಂಗಳಲ್ಲಿ ಸಂಗ್ರಹಿಸಲಾಗುತ್ತದೆ.

    ಇದನ್ನೂ ಓದಿ: ಜನವರಿಯಿಂದ ಬಟ್ಟೆ ಮತ್ತು ಚಪ್ಪಲಿ ಮತ್ತಷ್ಟು ದುಬಾರಿ, ಇನ್ಯಾವ ವಸ್ತುಗಳ ಬೆಲೆ ಏರಲಿದೆ? ಫುಲ್ ಲಿಸ್ಟ್ ಇಲ್ಲಿದೆ

    ಒಟ್ಟು ಸಂಗ್ರಹದಲ್ಲಿ ತೀರುವಳಿ ನಂತರ ಕೇಂದ್ರವು 48,146 ಕೋಟಿ ರೂಪಾಯಿ ಸಂಗ್ರಹಿಸಿದರೆ, ರಾಜ್ಯಗಳು 49,760 ಕೋಟಿ ರೂಪಾಯಿ ಸಂಗ್ರಹಿಸಿವೆ. ಅಂತರ ರಾಜ್ಯ ವಹಿವಾಟಿನ ಮೇಲೆ ಸಂಗ್ರಹಿಸಲಾದ ತೆರಿಗೆಗಳನ್ನು ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ನಿಯಮಿತವಾಗಿ ಇತ್ಯರ್ಥಪಡಿಸಲಾಗುತ್ತದೆ.ಇನ್ನು ಒಟ್ಟು ಸಂಗ್ರಹದಲ್ಲಿ ಕೇಂದ್ರ ಜಿಎಸ್‌ಟಿ 22,578 ಕೋಟಿ ರೂಪಾಯಿ, ರಾಜ್ಯ ಜಿಎಸ್‌ಟಿ 28,658 ಕೋಟಿ ರೂಪಾಯಿ ಮತ್ತು ಅಂತರರಾಜ್ಯ ವಹಿವಾಟು ಹಾಗೂ ಆಮದುಗಳ ಮೇಲಿನ ಇಂಟಿಗ್ರೇಟೆಡ್ ಜಿಎಸ್‌ಟಿ 69,155 ಕೋಟಿ ರೂಪಾಯಿ. ಸೆಸ್‌ 9,389 ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ಪ್ರಕಟಣೆ ತಿಳಿಸಿದೆ.
    Published by:ranjumbkgowda1 ranjumbkgowda1
    First published: