ಮಾರ್ಚ್​ನಲ್ಲಿ ₹ 1,42,095 ಕೋಟಿ GST ಸಂಗ್ರಹ! ಸಾರ್ವಕಾಲಿಕ ಗರಿಷ್ಠ ಮಟ್ಟದ ದಾಖಲೆ

2022 ರ ಆದಾಯವು ಕಳೆದ ವರ್ಷದ ಇದೇ ತಿಂಗಳ ಜಿಎಸ್‌ಟಿ ಆದಾಯಕ್ಕಿಂತ 15 ಶೇಕಡಾ ಹೆಚ್ಚಾಗಿದೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

 • Share this:
  ದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು 2022ರ ಮಾರ್ಚ್‌ ತಿಂಗಳಲ್ಲಿ ₹ 1,42,095 ಕೋಟಿ ಗಳಿಸುವ ಮೂಲಕ ಸಾರ್ವಕಾಲಿಕ ಗರಿಷ್ಠ ಮಟ್ಟದ ಸಂಗ್ರಹವಾಗಿದೆ. ಇದು ಈ ಹಿಂದೆ ಸಂಗ್ರಹವಾದ ಜಿಎಸ್​ಟಿ ಸಂಗ್ರಹದ ದಾಖಲೆಯಾದ ₹ 1,40,986 ಕೋಟಿಯನ್ನು ಮೀರಿಸಿದೆ ಎಂದು ದೇಶದ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ. ಹಿಂದಿನ ತಿಂಗಳಿನ ಜಿಎಸ್​ಟಿ (GST collections) ಸಂಗ್ರಹಕ್ಕಿಂತ 6.8 ಶೇಕಡಾ ಹೆಚ್ಚಾಗಿದೆ ಎಂದು ಹಣಕಾಸು ಸಚಿವಾಲಯವು (Finance Ministry) ಏಪ್ರಿಲ್ 1 ರಂದು ಬಿಡುಗಡೆ ಮಾಡಿದ ಅಂಕಿಅಂಶಗಳು ಸೂಚಿಸುತ್ತವೆ. ಮಾರ್ಚ್ 2022 ರ ಆದಾಯವು ಕಳೆದ ವರ್ಷದ ಇದೇ ತಿಂಗಳ ಜಿಎಸ್‌ಟಿ ಆದಾಯಕ್ಕಿಂತ 15 ಶೇಕಡಾ ಹೆಚ್ಚಾಗಿದೆ.

  ಒಟ್ಟು ಕೇಂದ್ರ ಜಿಎಸ್‌ಟಿ 25,830 ಕೋಟಿ, ರಾಜ್ಯ ಜಿಎಸ್‌ಟಿ 32,378 ಕೋಟಿ, ಇಂಟಿಗ್ರೇಟೆಡ್ ಜಿಎಸ್‌ಟಿ 74,470 ಕೋಟಿ ಮತ್ತು ಪರಿಹಾರ ಸೆಸ್ 9,417 ಕೋಟಿ ಸಂಗ್ರಹವಾಗಿದೆ. ಮಾರ್ಚ್‌ನಲ್ಲಿ ಸರ್ಕಾರವು ಇಂಟಿಗ್ರೇಟೆಡ್ ಜಿಎಸ್‌ಟಿಯಿಂದ ಕೇಂದ್ರ ಜಿಎಸ್‌ಟಿಗೆ ರೂ 29,816 ಕೋಟಿ ಮತ್ತು ರಾಜ್ಯ ಜಿಎಸ್‌ಟಿಗೆ ರೂ 25,032 ಕೋಟಿ ನಿಗದಿಪಡಿಸಿದೆ.

  ಸಂಪೂರ್ಣ ಅಂಕಿ ಅಂಶಗಳು ಇಂತಿವೆ
  ಮಾರ್ಚ್ 2022 ರಲ್ಲಿ ಸಂಗ್ರಹಿಸಲಾದ ಒಟ್ಟು GST ಆದಾಯವು ₹ 1,42,095 ಕೋಟಿಗಳಾಗಿದ್ದು, ಇದರಲ್ಲಿ CGST (ಕೇಂದ್ರೀಯ ಸರಕು ಮತ್ತು ಸೇವಾ ತೆರಿಗೆ) ₹ 25,830 ಕೋಟಿ, SGST (ರಾಜ್ಯ ಸರಕು ಮತ್ತು ಸೇವಾ ತೆರಿಗೆ) ₹ 32,378 ಕೋಟಿ, IGST (ಸಮಗ್ರ ಸರಕು ಮತ್ತು ಸೇವಾ ತೆರಿಗೆ) ) ₹ 74,470 ಕೋಟಿ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ ₹ 39,131 ಕೋಟಿ ಸೇರಿದಂತೆ) ಮತ್ತು ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ ₹ 981 ಕೋಟಿ ಸೇರಿದಂತೆಸೆಸ್ ₹ 9,417 ಕೋಟಿ ಸಂಗ್ರಹವಾಗಿದೆ ಎಂದು ಹಣಕಾಸು ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿಅಂಶಗಳು ಮಾಹಿತಿ ನೀಡಿವೆ.

  ಇನ್ವರ್ಟೆಡ್ ಡ್ಯೂಟಿ ರಚನೆಯನ್ನು ಸರಿಪಡಿಸಲು ಕೌನ್ಸಿಲ್ ಕೈಗೊಂಡ ವಿವಿಧ ದರದ ತರ್ಕಬದ್ಧ ಕ್ರಮಗಳಿಂದಲೂ ಆದಾಯದಲ್ಲಿ ಸುಧಾರಣೆಯಾಗಿದೆ ಎಂದು ಸಚಿವಾಲಯ ಹೇಳಿದೆ.

  ಮಾರ್ಚ್ 2020 ರ ಆದಾಯಕ್ಕಿಂತ ಬಹುತೇಕ ಅರ್ಧಪಾಲು ಹೆಚ್ಚಳ!
  ಮಾರ್ಚ್ 2022 ರ ಆದಾಯವು ಕಳೆದ ವರ್ಷದ ಇದೇ ತಿಂಗಳ ಜಿಎಸ್‌ಟಿ ಆದಾಯಕ್ಕಿಂತ 15% ಹೆಚ್ಚಾಗಿದೆ. ಮಾರ್ಚ್ 2020 ರಲ್ಲಿನ ಜಿಎಸ್‌ಟಿ ಆದಾಯಕ್ಕಿಂತ 46% ಹೆಚ್ಚಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

  ಇದನ್ನೂ ಓದಿ: Good News: ಹಣ ಇಲ್ಲದಿದ್ದರೂ ರೈಲು ಟಿಕೆಟ್ ಬುಕ್ ಮಾಡೋದು ಹೀಗೆ!

  ಫೆಬ್ರವರಿ 2022 ರಲ್ಲಿ ಒಟ್ಟು ಇ-ವೇ ಬಿಲ್‌ಗಳ ಸಂಖ್ಯೆ 6.91 ಕೋಟಿಯಾಗಿದ್ದು, ಜನವರಿ 2022 ರಲ್ಲಿ ಉತ್ಪತ್ತಿಯಾದ ಇ-ವೇ ಬಿಲ್‌ಗಳಿಗೆ ಹೋಲಿಸಿದರೆ (6.88 ಕೋಟಿ) ವ್ಯಾಪಾರ ಚಟುವಟಿಕೆಯ ವೇಗದ ಚೇತರಿಕೆಗೊಂಡಿದೆ ಎಂಬುದನ್ನು ಇದು ಸೂಚಿಸುತ್ತದೆ ಎಂದು ತಿಳಿಸಲಾಗಿದೆ.

  ಸತತ ಒಂಬತ್ತನೇ ತಿಂಗಳಿನ ಸಾಧನೆ!
  ಇದು ಸತತ ಒಂಬತ್ತನೇ ತಿಂಗಳಿನಲ್ಲಿಯೂ ಒಟ್ಟು ಜಿಎಸ್‌ಟಿ ರೂ 1-ಲಕ್ಷ-ಕೋಟಿಯ ಗಡಿ ದಾಟಿದೆ. ಒಟ್ಟಾರೆಯಾಗಿಒಟ್ಟು GST ಸಂಗ್ರಹ 14.83 ಲಕ್ಷ ಕೋಟಿ ರೂ.ಗಳಾಗಿದ್ದು, FY21 ರಲ್ಲಿ 11.37 ಲಕ್ಷ ಕೋಟಿ ರೂ.ಗಳಿಂದ 30 ಪ್ರತಿಶತ ಹೆಚ್ಚಾಗಿದೆ.

  ಹಣಕಾಸು ಸಚಿವಾಲಯದ ಸಾಧನೆ!
  ತೆರಿಗೆ ವಂಚನೆ ವಿರೋಧಿ ಚಟುವಟಿಕೆಗಳ ಜೊತೆಗೆ ಆರ್ಥಿಕ ಚೇತರಿಕೆ ಮುನ್ನುಗ್ಗುತ್ತಿರುವುದು ಜಿಎಸ್​ಟಿ ಸಂಗ್ರಹ ಹೆಚ್ಚಳವಾಗಲು ಕಾರಣವಾಗಿದೆ. ಜಿಎಸ್‌ಟಿ ಕೌನ್ಸಿಲ್ ಕೈಗೊಂಡ ವಿವಿಧ ದರಗಳ ತರ್ಕಬದ್ಧ ಕ್ರಮಗಳಿಂದ ಜಿಎಸ್‌ಟಿ ಸಂಗ್ರಹಗಳಲ್ಲಿ ಏರಿಕೆಯಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

  ಮಾರ್ಚ್‌ನ ಆದಾಯವು ಕಳೆದ ವರ್ಷದ ಇದೇ ತಿಂಗಳ ಜಿಎಸ್‌ಟಿ ಆದಾಯಕ್ಕಿಂತ 15% ಹೆಚ್ಚಾಗಿದೆ ಮತ್ತು ಮಾರ್ಚ್ 2020 ರಲ್ಲಿನ ಜಿಎಸ್‌ಟಿ ಆದಾಯಕ್ಕಿಂತ 46% ಹೆಚ್ಚಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

  ಇದನ್ನೂ ಓದಿ: Shocking News: ಕಳೆದ 7 ವರ್ಷಗಳಿಂದ ದೇಶಕ್ಕೆ ಪ್ರತಿದಿನ 100 ಕೋಟಿ ಲಾಸ್!

  ಫೆಬ್ರವರಿಯಲ್ಲಿ ಜಿಎಸ್‌ಟಿ  ₹1,33,026 ಕೋಟಿ ಸಂಗ್ರಹವಾಗಿದೆ. ಫೆಬ್ರವರಿ ದೇಶದಾದ್ಯಂತ ಓಮಿಕ್ರಾನ್ ಅಲೆಯಿಂದ ಸಮಸ್ಯೆ ಉಂಟಾಗಿತ್ತು. ಆದ್ದರಿಂದ ಒಟ್ಟು ಮಾರಾಟ ತೆರಿಗೆ ಸಂಗ್ರಹವು ಜನವರಿಯಲ್ಲಿ ನಿವ್ವಳವಾದ ₹1,40,986 ಕೋಟಿಗಿಂತ ಕಡಿಮೆಯಾಗಿತ್ತು.
  Published by:guruganesh bhat
  First published: