ಕೈದೋಟ ನಿರ್ವಹಣೆ ಎಂಬುದು ಒಂದು ಉತ್ಸಾಹಭರಿತ ಹಾಗೂ ಮನಸ್ಸಿಗೆ ನೆಮ್ಮದಿ ನೀಡುವ ಚಟುವಟಿಕೆಯಾಗಿದೆ. ಹಲವಾರು ಜನರು ತಮಗಾಗುವ ಒತ್ತಡವನ್ನು ನಿಭಾಯಿಸಲು ಗಾರ್ಡನಿಂಗ್ ನಂತಹ ಹವ್ಯಾಸ ರೂಢಿಸಿಕೊಂಡಿರುವುದನ್ನು ನಾವು ನೋಡಬಹುದು. ಇನ್ನೂ ಕೆಲವರಿಗೆ ತಮ್ಮ ಮನೆಯ ಅಂಗಳದಲ್ಲೋ, ತಾರಸಿಯ ಮೇಲೋ ಬಗೆ ಬಗೆಯ ಹೂಗಿಡಗಳು ಅಥವಾ ತರಕಾರಿಗಳನ್ನು ಬೆಳೆಯುವ ರೂಢಿಯಿರುತ್ತದೆ. ಅದರಲ್ಲೂ ಈ ತರಕಾರಿಗಳನ್ನು ಬೆಳೆಯುವುದರಿಂದ ಸಾಕಷ್ಟು ಪ್ರಯೋಜನವಾಗಬಹುದು. ನೀವು ಬೆಳೆದ ತರಕಾರಿಗಳನ್ನೇ ಅಡುಗೆಗಾಗಿಯೂ ಬಳಸಬಹುದು.
ಜನವರಿ, ಫೆಬ್ರವರಿಯ ಸಮಯದಲ್ಲಿ ಇದನ್ನು ಬೆಳೆಯಿರಿ!
ಆದರೆ ನಮಗೆ ಯಾವಾಗ ಬೇಕೋ ಆವಾಗ ಬೇಕಾದ ಬೀಜಗಳನ್ನು ತಂದು ನೆಡುವುದಕ್ಕಿಂತಲೂ ಋತುಮಾನಕ್ಕನುಸಾರವಾಗಿ ಆದರ್ಶಪ್ರಾಯವಾಗಿರುವ ಸಸ್ಯಗಳನ್ನು ಬೆಳೆಯುವುದು ಜಾಣತನ. ಇದರಿಂದ ಅವು ತುಂಬಾ ಚೆನ್ನಾಗಿ ಬೆಳೆಯುತ್ತವೆ ಎನ್ನಬಹುದು.
ಇನ್ನು ನಿಮಗೆ ಚಳಿಗಾಲದ ಅಂತ್ಯದ ಸಮಯದಲ್ಲಿ ಏನಾದರೂ ಉಪಯುಕ್ತವಾದುದನ್ನು ಬೆಳೆಯಬೇಕೆಂಬ ಆಸೆ ಇದ್ದರೆ ಈ ಕೆಳಗಿನ ನಾಲ್ಕು ಸಸ್ಯಗಳನ್ನು ಖಂಡಿತವಾಗಿಯೂ ಬೆಳೆಯಬಹುದಾಗಿದೆ. ಹಾಗಾದರೆ ಆ ನಾಲ್ಕು ಸಸ್ಯಗಳು ಯಾವುವು ಎಂಬುದನ್ನು ಈ ಕೆಳಗೆ ನೋಡೋಣ.
1. ಹಸಿಮೆಣಸಿನಕಾಯಿ:
ಪ್ರತಿನಿತ್ಯ ಅಡುಗೆ ಮನೆಯಲ್ಲಿ ಬಳಸಲಾಗುವ ಕೆಲವು ವಸ್ತುಗಳ ಪೈಕಿ ಹಸಿಮೆಣಸಿನಕಾಯಿ ಸಹ ಒಂದು. ಮೆಣಸಿಕಾಯಿಯ ಬೀಜಗಳನ್ನು ಸಾಮಾನ್ಯವಾಗಿ ಜನವರಿ ತಿಂಗಳಿನಲ್ಲಿ ಮಣ್ಣಿನಲ್ಲಿ ನೆಟ್ಟರೆ ಸುಮಾರು ಹತ್ತು ದಿನಗಳಿಂದ ಹಿಡಿದು ಐದು ವಾರಗಳ ಸಮಯದಲ್ಲಿ ನೀವು ನೆಟ್ಟ ಹಸಿಮೆಣಸಿನ ಬಗೆಯನುಸಾರ ಮೊಳಕೆಯೊಡೆಯುತ್ತವೆ.
ಹಸಿಮೆಣಸಿನ ಬೀಜಗಳನ್ನು ಸಾಕಷ್ಟು ಬೆಳಕು ಬರುವ ಪ್ರದೇಶದಲ್ಲಿ ಚಿಕ್ಕ ಚಿಕ್ಕ ಕುಂಡಗಳನ್ನು ಅಥವಾ ಟ್ರೇ ತೆಗೆದುಕೊಂಡು ಮಣ್ಣಿನ ಕೇವಲ ಐದು ಎಂಎಂ ಆಳದಲ್ಲಿ ನೆಟ್ಟು ಅದರ ಮೇಲೆ ಮಣ್ಣಿನ ಹೊದಿಕೆಯಿಂದ ಮುಚ್ಚಿದರೆ ಸಾಕು. ಕೆಲ ದಿನಗಳಲ್ಲೇ ಆ ಬೀಜಗಳು ಮೊಳಕೆಯೊಡೆದು ಹಸಿಮೆಣಸಿನ ಸಸ್ಯಗಳು ಹೊರಬರುತ್ತವೆ.
2. ಗ್ರೌಂಡ್ ಚೆರ್‍ರಿ
ಇದೊಂದು ಗಿಡ್ಡ ಜಾತಿಯ ಚೆರ್‍ರಿ ಹಣ್ಣಿನ ಸಸ್ಯವಾಗಿದ್ದು ಚಳಿಗಾಲದಾಂತ್ಯದಲ್ಲಿ ಬೆಳೆಯಬಹುದಾದ ಅದ್ಭುತ ಸಸ್ಯವಾಗಿದೆ. ಇವು ಸಾಮಾನ್ಯವಾಗಿ ಬೆಳೆಯುವಾಗ ತಾಪಮಾನ ಬಯಸುವ ಸಸ್ಯಗಳಾಗಿವೆ. ಇದರ ಬೀಜಗಳನ್ನು ಪ್ಲ್ಯಾಂಟಿಂಗ್ ಪಾಟ್ ಅಥವಾ ಟ್ರೇ ನಲ್ಲಿ ನೆಟ್ಟು ಪ್ಲ್ಯಾಂಟ್ ಮಿಕ್ಸ್ ಅನ್ನು ಹಾಕಬೇಕು. ಈ ಸಸ್ಯಗಳನ್ನು ಚೆನ್ನಾಗಿ ಬೆಳಕು ಹಾಗೂ ಗಾಳಿಯಾಡುವ ಪ್ರದೇಶಗಳಲ್ಲಿರಿಸದರೆ ಸಾಕು.
ಇದನ್ನೂ ಓದಿ: ಏನೂ ದಾಖಲೆ ಕೊಡದೇ 50 ಸಾವಿರ ಸಾಲ ತಗೋಳಿ, ಬೀದಿ ವ್ಯಾಪಾರಿಗಳಿಗೆ ಇದು ಉತ್ತಮ ಅವಕಾಶ!
ಸುಮಾರು 25 ಡಿಗ್ರಿ ಸೆಲ್ಶಿಯಸ್ ತಾಪಮಾನವು ಇದಕ್ಕೆ ಅನುಕೂಲಕರವಾಗಿದ್ದು ಎರಡ್ಮೂರು ವಾರಗಳಲ್ಲಿ ಇದು ಮೊಳಕೆಯೊಡೆಯಲಾರಂಭಿಸುತ್ತದೆ.
3. ಎಗ್ ಪ್ಲ್ಯಾಂಟ್ (ನೆಲಗುಳ್ಳ/ದೊಡ್ಡ ಬದನೆ)
ಇದೊಂದು ಜನಪ್ರೀಯ ತರಕಾರಿ. ಸಾಮಾನ್ಯವಾಗಿ ನೆಲಗುಳ್ಳ ಎಂದು ಕರೆಯಲಾಗುವ ಈ ಬದನೆಕಾಯಿಯನ್ನು ರುಚಿಕರವಾದ ಬದನೆ ಭರ್ತ ಮಾಡಲು ಬಳಸಲಾಗುತ್ತದೆ. ಈ ಬದನೆ ಬೆಳೆದು ನಿಮಗೆ ಫಲ ದೊರೆಯಲು ದೀರ್ಘ ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಇದರ ಬೀಜಗಳನ್ನು ಜನವರಿ ಅಂತ್ಯ ಅಥವಾ ಫೆಬ್ರುವರಿಯಲ್ಲಿ ನೆಟ್ಟರೆ ಅದು ಬೆಳೆದು ಬದನೆ ನಿಮ್ಮ ಕೈಗೆ ಸಿಗುವವರೆಗೆ ಜೂನ್ ಇಲ್ಲವೆ ಜುಲೈ ತಿಂಗಳು ಬಂದಿರುತ್ತದೆ.
ಇದರ ಬೀಜಗಳು ಮೊಳಕೆಯೊಡೆಯಲು ಸುಮಾರು 2-4 ವಾರಗಳಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ. ಒಂದು ಪಾಟಿನಲ್ಲಿ ಒಂದು ಬೀಜ ನೆಟ್ಟರೆ ಸಾಕು, 22-26 ಡಿಗ್ರಿ ತಾಪಮಾನದಲ್ಲಿ ಇದರ ಈಜಗಳು ಚೆನ್ನಾಗಿ ಮೊಳಕೆಯೊಡೆದು ಹೊರಬರುತ್ತವೆ. ತದನಂತರ ನಾಲ್ಕರಿಂದ ಆರು ವಾರಗಳ ಸಮಯದಲ್ಲಿ ಅದನ್ನು ನಾಟಿ ಮಾಡಬಹುದಾಗಿದೆ.
4. ಕ್ರಿಸ್ಮಸ್ ರೋಸ್
ಇದು ಸಹ ಒಂದು ಗುಲಾಬಿ ಹೂವೆಂದು ತಿಳಿಯಬೇಡಿ. ಇದರ ಹೆಸರು ರೋಸ್ ಎಂದಿದ್ದರೂ ಇದು ಗುಲಾಬಿ ಹೂವಿನ ಕುಟುಂಬಕ್ಕೆ ಸೇರಿಲ್ಲ. ಚಳಿಗಾದಲ್ಲಿ ಅದ್ಭುತವಾಗಿ ಒಡಮೂಡುವ ಸುಂದರ ಬೀಳಿ ಬಣ್ಣದ ಹೂವಿನ ಸಸ್ಯ ಇದಾಗಿದೆ. ಈ ಸಸ್ಯಗಳನ್ನು ಗುಂಪಿನಲ್ಲೂ ಅಥವಾ ಏಕವಾಗಿ ಬೆಳೆಯಬಹುದು. ಈ ಸಸ್ಯಗಳು ಸಾಮಾನ್ಯವಾಗಿ ದೊಡ್ಡ ಮರದ ಬುಡದಲ್ಲಿ ಅಥವಾ ನೆರಳಿನ ಪ್ರದೇಶದಲ್ಲಿ ಬೆಳೆಯಲು ಇಷ್ಟಪಡುತ್ತವೆ.
ಈ ಸಸ್ಯದ ಬೀಜಗಳನ್ನು ನೆಡುವಾಗ ಮಣ್ಣಿನ ತಾಪಮಾನ 22 ಡಿಗ್ರಿ ದಾಟದಂತೆ ನೋಡಿಕೊಳ್ಳಬೇಕು. ಬೀಜಗಳನ್ನು ನೆಟ್ಟಾಗ ಆ ಪ್ರದೇಶ ಯಾವಾಗಲೂ ಒದ್ದೆಯಾಗಿರುವಂತೆ ನೋಡಿಕೊಳ್ಳಬೇಕು. ತದನಂತರ ಬೀಜಗಳನ್ನು ನಾಲ್ಕು ಡಿಗ್ರಿಗಿಂತಲೂ ಕಡಿಮೆ ತಾಪಮಾನವಿರುವ ಮಣ್ಣಿನಲ್ಲಿ ವರ್ಗಾಯಿಸಬೇಕು. ಈ ಸಂದರ್ಭದಲ್ಲಿ ತಾಪಮಾನ ಏರಿಕೆಯಾಗದಂತೆ ಆರರಿಂದ ಎಂಟು ವಾರಗಳ ಕಾಲ ನಿಗಾವಹಿಸಬೇಕು. ತದನಂತರ ತಪಾಮಾನವನ್ನು ನಿಧಾನವಾಗಿ ಅವು ಮೊಳಕೆಯೊಡೆಯುವ ತನಕ ಏರಿಸಿದರೆ ಸಾಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ