Karnataka: ರಾಜ್ಯದ ಮಹಿಳೆಯರಿಗೆ ಬಂಪರ್​ ಗಿಫ್ಟ್​, ಈ ಯೋಜನೆಯಡಿ ದೊರೆಯಲಿದೆ ಒಂದೂವರೆ ಲಕ್ಷ!

ಮಹಿಳೆಯರಿಗೆ ಇಲ್ಲಿದೆ ರಾಜ್ಯ ಸರ್ಕಾರದಿಂದ ಭರ್ಜರಿ ಉಡುಗೊರೆ. ರಾಜ್ಯ ಸರ್ಕಾರದ ನೂತನ ಯೋಜನೆ "ಸ್ತ್ರೀ ಸಾಮರ್ಥ್ಯ ಯೋಜನೆ"ಯಡಿ ಸರ್ಕಾರದಿಂದ 1.50 ಲಕ್ಷ ರೂಪಾಯಿ ದೊರೆಯಲಿದೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..

  • Share this:
ಮಹಿಳೆಯರಿಗೆ ಇಲ್ಲಿದೆ ರಾಜ್ಯ ಸರ್ಕಾರದಿಂದ ಭರ್ಜರಿ ಉಡುಗೊರೆ. ರಾಜ್ಯ ಸರ್ಕಾರದ ನೂತನ ಯೋಜನೆ "ಸ್ತ್ರೀ ಸಾಮರ್ಥ್ಯ ಯೋಜನೆ"ಯಡಿ ಸರ್ಕಾರದಿಂದ 1.50 ಲಕ್ಷ ರೂಪಾಯಿ ದೊರೆಯಲಿದೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..

ರಾಜ್ಯ ಸರ್ಕಾರದ ನೂತನ ಯೋಜನೆಯಾದ “ಸ್ತ್ರೀ ಸಾಮರ್ಥ್ಯ ಯೋಜನೆ”ಯನ್ನು ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಜಾರಿಗೆ ತರುವ ಸಲುವಾಗಿ ಯೋಜನೆಗೆ ಚಾಲನೆ ನೀಡಲಾಗಿದೆ.

ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈ “ಸ್ತ್ರೀ ಸಾಮರ್ಥ್ಯ ಯೋಜನೆ”ಗೆ ಚಾಲನೆ ನೀಡಿ ರಾಜ್ಯದ ಮಹಿಳೆಯರಿಗೆ ಸ್ವದ್ಯೋಗದ ಭರವಸೆಯನ್ನು ನೀಡಿದ್ದಾರೆ. ಈ ಯೋಜನೆಯನ್ನು ಎಂಡ್-ಟು -ಎಂಡ್ (End to End) ಮಾರ್ಗದಲ್ಲಿ ಕೈಗೊಳ್ಳಲಾಗುವುದು.

ಗ್ರಾಮೀಣ ಮಹಿಳೆಯರ ಸಬಲೀಕರಣದ ಸರ್ಕಾರದ ಈ ಪ್ರಯತ್ನದಲ್ಲಿ ಕೆನರಾ ಬ್ಯಾಂಕ್ ಹಾಗೂ ಮೀಶೋ ಸಂಸ್ಥೆಗಳು ಕೈಜೋಡಿಸಿರುವುದು ಸ್ವಾಗತಾರ್ಹ ಎಂದು ಸಿಎಂ ಹರ್ಷ ವ್ಯಕ್ತಪಡಿಸಿದರು.

ಸ್ವಯಂ ಉದ್ಯೋಗ ಕೈಗೊಳ್ಳಲು ಸಹಾಯ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಭಾರತ ಸರ್ಕಾರದ ಜೀವನೋಪಾಯ ಕಾರ್ಯಕ್ರಮಗಳ ನೆರವಿನೊಂದಿಗೆ ಹಾಗೂ ಎಲಿವೇಟ್ ಯೋಜನೆ ಅಡಿಯಲ್ಲಿಯೂ ಸ್ತ್ರೀ ಸ್ವಸಹಾಯ ಸಂಘಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ನೆರವು ಒದಗಿಸುತ್ತಿದೆ.

ಈ ಕಾರ್ಯಕ್ರಮಗಳನ್ನು ವೃದ್ಧಿಸಿ ಸೂಕ್ಷ್ಮ ಮಟ್ಟದಲ್ಲಿ ನಿರ್ವಹಣೆ ಮಾಡುವ ಅಗತ್ಯವಿದೆ ಎಂದು ಬೊಮ್ಮಾಯಿ ಅಭಿಪ್ರಾಯಪಟ್ಟರು. ಮಹಿಳೆಯರಿಗಾಗಿ 'ಸಾಮರ್ಥ್ಯ' ಯೋಜನೆ ರಾಜ್ಯದ ಸ್ವಸಹಾಯ ಗುಂಪುಗಳನ್ನು ಕೆನರಾ ಬ್ಯಾಂಕ್ ಯೋಜನೆಗೆ ಆಯ್ದುಕೊಂಡಿರುವುದು ಶ್ಲಾಘನೀಯ. ಮಹಿಳೆಯರು ಆರ್ಥಿಕ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು.

ಆರ್ಥಿಕತೆ ಎಂದರೆ ಹಣವಲ್ಲ. ಬದಲಾಗಿ ಅದು ಜನರ ಆರ್ಥಿಕ ಚಟುವಟಿಕೆಗಳು. ಮಹಿಳೆಯರಲ್ಲಿ ಅಪಾರ ಶಕ್ತಿ ಇದ್ದು, ಸದಾ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ. ಮಹಿಳಾ ಶಕ್ತಿಯಲ್ಲಿ ನನಗೆ ನಂಬಿಕೆ ಇದ್ದು, ಅದಕ್ಕಾಗಿಯೇ 'ಸಾಮರ್ಥ್ಯ' ಎಂಬ ಯೋಜನೆ ಜಾರಿಗೊಳಿಸಲು ತೀರ್ಮಾನಿಸಿದ್ದೇವೆ ಎಂದರು.

ಸ್ತ್ರೀಶಕ್ತಿ ಸಂಘಗಳು ಸ್ವಯಂ ಉದ್ಯೋಗ ಕೈಗೊಳ್ಳಲು ಉತ್ತೇಜನ ನೀಡುವ ನಿಟ್ಟಿನಲ್ಲಿ 1.50 ಲಕ್ಷ ರು. ನೀಡುವ ಜತೆಗೆ ಸುಲಭವಾಗಿ ಸಾಲಸೌಲಭ್ಯ ಒದಗಿಸಲು ಆ್ಯಂಕರ್‌ ಬ್ಯಾಂಕ್‌ ಜೋಡಣೆ, ತರಬೇತಿ, ಉತ್ಪನ್ನಗಳಿಗೆ ಮಾರುಕಟ್ಟೆಸೌಲಭ್ಯ ನೀಡುವ ಸ್ತ್ರೀ ಸಾಮರ್ಥ್ಯ ಯೋಜನೆಗೆ ಚಾಲನೆ ನೀಡಲಾಗಿದೆ.
Published by:Vasudeva M
First published: