• Home
  • »
  • News
  • »
  • business
  • »
  • Gratuity: ಒಂದೇ ಕಂಪನಿಯಲ್ಲಿ ಎಷ್ಟು ವರ್ಷ ಕೆಲ್ಸ ಮಾಡಿದ್ರೆ ಸಿಗುತ್ತೆ ಗ್ರಾಚ್ಯುಟಿ? ಕಂಪ್ಲೀಟ್ ಮಾಹಿತಿ ಇಲ್ಲಿದೆ

Gratuity: ಒಂದೇ ಕಂಪನಿಯಲ್ಲಿ ಎಷ್ಟು ವರ್ಷ ಕೆಲ್ಸ ಮಾಡಿದ್ರೆ ಸಿಗುತ್ತೆ ಗ್ರಾಚ್ಯುಟಿ? ಕಂಪ್ಲೀಟ್ ಮಾಹಿತಿ ಇಲ್ಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಾಮಾನ್ಯವಾಗಿ ಜನರು 5 ವರ್ಷ ಪೂರ್ಣಗೊಂಡ ನಂತರವೇ ಗ್ರಾಚ್ಯುಟಿ ಪಡೆಯುತ್ತಾರೆ ಎಂದು ನಂಬುತ್ತಾರೆ. ಇದು ತಪ್ಪು. ನೀವು 5 ವರ್ಷ ಕೆಲಸ ಮಾಡಿದರಷ್ಟೇ ಗ್ರಾಚುಟಿ ಸಿಗುತ್ತೆ ಅಂತಲ್ಲ. 

  • Share this:

ಒಂದು ಕಂಪನಿ (Company) ಯಲ್ಲಿ ಯಾರಾದರೂ ಕೆಲಸ (Job) ಬಿಟ್ರೆ, ಆ ಉದ್ಯೋಗಿ (Employee) ಯನ್ನು ಉಳಿದವರೆಲ್ಲಾ ಕೇಳುವುದು ಒಂದೇ ಮಾತು ಗ್ರಾಚ್ಯೂಟಿ (Gratuity) ಬಂತಾ? ಎಷ್ಟು ಬಂತು? ಅಂತ. ಹೌದು,  ಉದ್ಯೋಗಿ 5 ವರ್ಷಕ್ಕಿಂತ ಹೆಚ್ಚು ಕಾಲ ಕಂಪನಿಯಲ್ಲಿದ್ದರೆ ಗ್ರಾಚ್ಯುಟಿ ಸಿಗುತ್ತದೆ ಎಂಬ ಮಾತು ಕಚೇರಿಯ ಸುತ್ತ ಕೇಳುತ್ತಿರುತ್ತೇವೆ. ಗ್ರಾಚ್ಯುಟಿ ಸಿಗುವವರೆಗೆ ಕೆಲಸ ಮಾಡಬೇಕು, ಬೇಗ ಕೆಲಸ ಬಿಡಬಾರದು ಎಂದು ಕೆಲವರು ಹೇಳುತ್ತಾರೆ. ಹಾಗಾದರೆ ಕೆಲಸ ಬೇಗ ಬಿಟ್ಟರೆ ನಷ್ಟವೇ ಎಂಬುದು ನಿಜವಾದ ಪ್ರಶ್ನೆ? ಗ್ರಾಚ್ಯುಟಿಯನ್ನು ಹೇಗೆ ಪಡೆಯಲಾಗುತ್ತದೆ? ಎಷ್ಟು ಮೊತ್ತವನ್ನು ಪಡೆಯಲಾಗುತ್ತದೆ?. ಈ  ಗ್ರಾಚ್ಯೂಟಿಯನ್ನು ಹೇಗೆ ಲೆಕ್ಕ ಮಾಡಿ ನೀಡಲಾಗುತ್ತೆ? ಈ ಬಗ್ಗೆ ವಿವರವಾದ ಮಾಹಿತಿಯನ್ನು ಸರಳ ಪದಗಳಲ್ಲಿ ತಿಳಿಯೋಣ.


ಗ್ರಾಚ್ಯುಟಿ ಹಣ ಯಾವಾಗ ಸಿಗುತ್ತೆ!


ಸಾಮಾನ್ಯವಾಗಿ ಜನರು 5 ವರ್ಷ ಪೂರ್ಣಗೊಂಡ ನಂತರವೇ ಗ್ರಾಚ್ಯುಟಿ ಪಡೆಯುತ್ತಾರೆ ಎಂದು ನಂಬುತ್ತಾರೆ. ಇದು ತಪ್ಪು. ನೀವು 5 ವರ್ಷ ಕೆಲಸ ಮಾಡಿದರಷ್ಟೇ ಗ್ರಾಚುಟಿ ಸಿಗುತ್ತೆ ಅಂತಲ್ಲ. ನೀವು ಕಂಪನಿಯಲ್ಲಿ 4 ವರ್ಷ 240 ದಿನ ಕೆಲಸ ಮಾಡಿದ್ದರೆ ನೀವು ಗ್ರಾಚ್ಯುಟಿಗೆ ಅರ್ಹರಾಗಿರುತ್ತೀರಿ. ಕಲ್ಲಿದ್ದಲು ಅಥವಾ ಇತರ ಗಣಿಗಳಲ್ಲಿ ಅಥವಾ ಹಲವು ಯೋಜನೆಗಳಲ್ಲಿ ಕೆಲಸ ಮಾಡುವವರಿಗೆ, 4 ವರ್ಷ 190 ದಿನಗಳು ಪೂರ್ಣಗೊಂಡ ನಂತರವೇ 5 ವರ್ಷಗಳ ಗ್ರಾಚ್ಯುಟಿ ಪಡೆಯುತ್ತಾರೆ.


4 ವರ್ಷ 190 ಕೆಲಸ ಮಾಡಬೇಕು!


ಈ ಅವಧಿಯ ನಂತರ ಒಬ್ಬರು ಕಂಪನಿಯನ್ನು ತೊರೆದರೆ ಅಥವಾ ನಿವೃತ್ತಿಯಾದರೆ, ಗ್ರಾಚ್ಯುಟಿ ನೀಡಲೇಬೇಕು. ಕಂಪನಿಯು ಅದನ್ನು ನಿರಾಕರಿಸುವಂತಿಲ್ಲ. ಉದ್ಯೋಗಿಯು ಉದ್ಯೋಗದ ಸಮಯದಲ್ಲಿ ಮರಣಹೊಂದಿದರೆ, ಅವರು ಕಂಪನಿಯಲ್ಲಿ ಎಷ್ಟು ದಿನ ಕೆಲಸ ಮಾಡಿದರೂ ಪೂರ್ಣ ಗ್ರಾಚ್ಯುಟಿಗೆ ಅರ್ಹನಾಗಿರುತ್ತಾನೆ.


ಕಂಪನಿಯಲ್ಲಿ 10ಕ್ಕಿಂತ ಹೆಚ್ಚು ಉದ್ಯೋಗಿಗಳಿರಬೇಕು!


10 ಕ್ಕಿಂತ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುತ್ತಿರುವ  ಕಂಪನಿಯಲ್ಲಿ ನೀವು ಗ್ರಾಚ್ಯುಟಿ ಪಡೆಯುತ್ತೀರಿ ಎಂಬುದನ್ನು ನೆನಪಿಡಿ. ಇದು ಗ್ರಾಚ್ಯುಟಿ ಆಕ್ಟ್ 1972 ರ ಪಾವತಿಯ ಅಡಿಯಲ್ಲಿ ವಿವರಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಜನರು ಅನೇಕ ಕಾರಣಗಳಿಂದ ಬೇಗನೆ ಉದ್ಯೋಗವನ್ನು ಬದಲಾಯಿಸುತ್ತಾರೆ.


ಇದನ್ನೂ ಓದಿ: ಓದಿದ್ದು Mtech-ಕೈ ಹಿಡಿದಿದ್ದು ಮಾತ್ರ ಕೃಷಿ, ಇನ್​ಸ್ಟಾಗ್ರಾಮ್​ನಲ್ಲಿ ಪಾಠ ಮಾಡೋ ಯುವಕ!


4 ವರ್ಷದ ನಂತ್ರ ಕೆಲಸ  ಬಿಡಬೇಡಿ!


ಅನೇಕರು ಕೆಲಸದ ವಾತಾವರಣದಿಂದ ಅತೃಪ್ತರಾಗಿದ್ದರೆ, ಅನೇಕರು ಉತ್ತಮ ಅವಕಾಶಗಳಿಗಾಗಿ ಮತ್ತು ಸಂಬಳಕ್ಕಾಗಿ ಕಂಪನಿಯನ್ನು ತೊರೆಯುತ್ತಾರೆ. ಮೊದಲ 1-2 ವರ್ಷಗಳಲ್ಲಿ ನೀವು ಇದನ್ನು ಮಾಡಿದರೂ, ನಿಮಗೆ ಹೆಚ್ಚು ತೊಂದರೆಯಾಗುವುದಿಲ್ಲ. ನಾಲ್ಕನೇ ವರ್ಷದ ನಂತರ ನೀವು ಕಂಪನಿಯನ್ನು ತೊರೆಯುತ್ತಿದ್ದರೆ, ನೀವು ದೊಡ್ಡ ನಷ್ಟಕ್ಕೆ ಒಳಗಾಗುತ್ತೀರಿ.


ಕಂಪನಿಯು ನಿಮ್ಮ ಸಂಬಳದಿಂದ ಗ್ರಾಚ್ಯುಟಿಯ ಭಾಗವನ್ನು ಕಡಿತಗೊಳಿಸುತ್ತದೆ. ಇದರರ್ಥ ನೀವು ಕಷ್ಟಪಟ್ಟು ಸಂಪಾದಿಸಿದ ಹಣದ ಒಂದು ಭಾಗವನ್ನು 4 ವರ್ಷಗಳವರೆಗೆ ಠೇವಣಿ ಇಡಲಾಗುತ್ತದೆ. ನೀವು ಇದ್ದಕ್ಕಿದ್ದಂತೆ ಈ ಮೊತ್ತವನ್ನು ಬಿಟ್ಟು ಬೇರೆಡೆಗೆ ಹೋದರೆ, ನೀವು ದೊಡ್ಡ ನಷ್ಟವನ್ನು ಅನುಭವಿಸಬಹುದು.


ಇದನ್ನೂ ಓದಿ: ತಮ್ಮ ಉದ್ಯೋಗಿಯ ಮಗ ಬರೆದ ಪತ್ರ ನೋಡಿ ಅನಿಲ್​ ಅಗರ್ವಾಲ್ ಭಾವುಕ​, ಫೋಟೋ ವೈರಲ್!


ಗ್ರಾಚ್ಯುಟಿಯ ಹಣವನ್ನು ಹೇಗೆ ಲೆಕ್ಕ ಮಾಡಲಾಗುತ್ತೆ?


ಗ್ರಾಚ್ಯುಟಿ ಮೊತ್ತವನ್ನು ನಿಮ್ಮ ಒಟ್ಟು ಸಂಬಳದ ಮೂಲಕ ನಿರ್ಧರಿಸಲಾಗುತ್ತದೆ x (15/26) x ನೀವು ಕಂಪನಿಯಲ್ಲಿ ಎಷ್ಟು ವರ್ಷ ಕೆಲಸ ಮಾಡಿದ್ದೀರಿ ಎಂಬುದನ್ನು ಸೇರಿಸಿ ಗ್ರಾಚ್ಯೂಟಿ ಲೆಕ್ಕ ಹಾಕಲಾಗುತ್ತದೆ.


ನೀವು 20 ವರ್ಷಗಳ ಕಾಲ ಕಂಪನಿಯಲ್ಲಿ ಕೆಲಸ ಮಾಡಿದ್ದೀರಿ. ನಿಮ್ಮ ಸಂಬಳ ತಿಂಗಳಿಗೆ 50 ಸಾವಿರ ರೂಪಾಯಿ. ಗ್ರಾಚ್ಯುಟಿಯನ್ನು ಲೆಕ್ಕಾಚಾರ ಮಾಡುವಾಗ ತಿಂಗಳಲ್ಲಿ 26 ದಿನಗಳನ್ನು ಮಾತ್ರ ಲೆಕ್ಕ ಮಾಡಲಾಗುತ್ತೆ. 4 ದಿನ ರಜೆ ಇರುವುದರಿಂದ ಆ ದಿನಗಳು ಸಿಕ್ಕಿಲ್ಲ. ಆದ್ದರಿಂದ 15 ಎಂದರೆ ನೀವು ವರ್ಷದಲ್ಲಿ 15 ದಿನಗಳವರೆಗೆ ಗ್ರಾಚ್ಯುಟಿಯನ್ನು ಪಡೆಯುತ್ತೀರಿ. ಈಗ ನೀವು (50,000) x (15/26) x (20) = 5, 76,923 ಗ್ರಾಚ್ಯುಟಿಯನ್ನು ಪಡೆಯುತ್ತೀರಿ

Published by:ವಾಸುದೇವ್ ಎಂ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು