News 18 Kannada: ನವ ಉದ್ಯಮಿಗಳಿಗೆ ನ್ಯೂಸ್ 18 ಬೆಂಬಲ, 19 ಸಾಧಕರಿಗೆ 2022ರ ಬಿಸಿನೆಸ್ ಲೀಡರ್ಸ್ ಮತ್ತು ಎಕ್ಸಲೆನ್ಸ್ ಅವಾರ್ಡ್ಸ್

ಆಗಸ್ಟ್​ 27ರಂದು ಬೆಂಗಳೂರಿನ ಐಟಿಸಿ ಗಾರ್ಡೇನಿಯಾದಲ್ಲಿ ನ್ಯೂಸ್​ 18 ಕನ್ನಡ ಬಿಸಿನೆಸ್ ಲೀಡರ್ಸ್ ಮತ್ತು ಎಕ್ಸಲೆನ್ಸ್ ಅವಾರ್ಡ್ಸ್ 2022 ಕಾರ್ಯಕ್ರಮ ಬಹಳ ಅದ್ಧೂರಿಯಾಗಿ ನಡೆದಿದೆ.

ನ್ಯೂಸ್​ 18 ಕನ್ನಡ

ನ್ಯೂಸ್​ 18 ಕನ್ನಡ

  • Share this:
News18 Kannada Business Leaders and Excellence Awards 2022: ಕೊರೋನಾ (Corona) ಬಂದು ಹೋದಮೇಲೆ ಯಾವುದೇ ಬ್ಯುಸಿನೆಸ್ (Business) ಮಾಡಿದರೂ ಲಾಸ್​ ಅನ್ನೋದು ಎಲ್ಲರ ತಲೆಯಲ್ಲಿ ಕೂತು ಬಿಟ್ಟಿದೆ. ಆದರೆ, ಭಾರತ (India) ದಲ್ಲಿ ನಿಧಾನಗತಿಯಲ್ಲಿ ಸ್ಟಾರ್ಟ್​ಅಪ್ (Startup) ​ಗಳು ಅಭಿವೃದ್ಧಿಯಾಗುತ್ತಿವೆ. ಗಾಳಿಗಿಂತ ವೇಗವಾಗಿ ಓಡುತ್ತಿರುವ ಈ ಪ್ರಪಂಚದಲ್ಲಿ ನೂರಾರು ರೀತಿಯ ಹೊಸ ಐಡಿಯಾಗಳಿಂದ ಸಾವಿರಾರು ಸ್ಟಾರ್ಟ್​ಅಪ್​ಗಳು ಅಭಿವೃದ್ಧಿಯಾಗುತ್ತಿದೆ. ಇದರ ಜೊತೆ ಕೊರೋನಾ ಹೊಡೆತಕ್ಕೂ ತಲೆಕಡೆಸಿಕೊಳ್ಳದ ದೊಡ್ಡ ದೊಡ್ಡ ಬ್ಯುಸಿನೆಸ್​ ಮ್ಯಾನ್​(Businessman)  ಗಳು ತಮ್ಮ ಉದ್ಯಮವನ್ನು ಇನ್ನೂ ಎತ್ತರಕ್ಕೆ ಕೊಂಡ್ಯೂಯುತ್ತಿದ್ದಾರೆ. ನಿಮ್ಮ ನ್ಯೂಸ್​ 18 ಕನ್ನಡ (News 18 Kannada) ಇಂಥಹ ಉದ್ಯಮಿಗಳನ್ನು ಗುರುತಿಸಿ ಅವರಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡುವ ಕೆಲಸವನ್ನು ಮಾಡುತ್ತಿದೆ. ನ್ಯೂಸ್ 18 ಕನ್ನಡ ಬಿಸಿನೆಸ್ ಲೀಡರ್ಸ್ ಮತ್ತು ಎಕ್ಸಲೆನ್ಸ್ ಅವಾರ್ಡ್ಸ್ 2022 (News18 Kannada Business Leaders and Excellence Awards 2022) ನಡೆದಿದೆ.

ಐಟಿಸಿ ಗಾರ್ಡೇನಿಯಾದಲ್ಲಿ ನಡೆದ ಕಾರ್ಯಕ್ರಮ!

ಆಗಸ್ಟ್​ 27ರಂದು ಬೆಂಗಳೂರಿನ ಐಟಿಸಿ ಗಾರ್ಡೇನಿಯಾದಲ್ಲಿ ನ್ಯೂಸ್​ 18 ಕನ್ನಡ ಬಿಸಿನೆಸ್ ಲೀಡರ್ಸ್ ಮತ್ತು ಎಕ್ಸಲೆನ್ಸ್ ಅವಾರ್ಡ್ಸ್ 2022 ಕಾರ್ಯಕ್ರಮ ಬಹಳ ಅದ್ಧೂರಿಯಾಗಿ ನಡೆದಿದೆ. ಕರ್ನಾಟಕದ ಉದ್ಯಮಿಗಳನ್ನು ಮತ್ತಷ್ಟು ಉತ್ತೇಜಿಸುವ ಕೆಲಸವನ್ನು ನಿಮ್ಮ ನ್ಯೂಸ್​ 18 ಕನ್ನಡ ಮಾಡಿದೆ.  ಕರ್ನಾಟಕದ ಆರ್ಥಿಕತೆಗೆ ಉದ್ಯಮಿಗಳ ಕೊಡುಗೆಗಳನ್ನು ಗುರುತಿಸುವುದು ಹಾಗೂ ಆ ಮೂಲಕ ಉದ್ಯೋಗಾವಕಾಶಗಳು ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಒದಗಿಸುವುದು ಈ  ನ್ಯೂಸ್​ 18 ಕನ್ನಡ ಬಿಸಿನೆಸ್ ಲೀಡರ್ಸ್ ಮತ್ತು ಎಕ್ಸಲೆನ್ಸ್ ಅವಾರ್ಡ್ಸ್ 2022 ಕಾರ್ಯಕ್ರಮದ ಉದ್ದೇಶವಾಗಿದೆ.

ನಾಮಿನೇಷನ್​ಗಾಗಿ ನಡೆದಿತ್ತು ಆಳವಾದ ಸಂಶೋಧನೆ!

ಕರ್ನಾಟಕದಲ್ಲಿ ಸಾಕಷ್ಟು ಮಂದಿ ಉದ್ಯಮಿಗಳಾಗಿದ್ದಾರೆ. ಮೊದಲು ಈ ಕಾರ್ಯಕ್ರಮ ಮಾಡಲು ನಿರ್ಧರಿಸಿದಾಗ, ರಾಜ್ಯದ ಎಲ್ಲ ಉದ್ಯಮಿಗಳ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಲಾಗಿತ್ತು. 18 ಕನ್ನಡದ ಸಂಪಾದಕೀಯ ತಂಡವು ಆಳವಾದ ಸಂಶೋಧನೆಯನ್ನು ಮಾಡಿತ್ತು. ಉದ್ಯಮಿಗಳ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿ ಅದರಲ್ಲಿ ದಿ ಬೆಸ್ಟ್​ ಉದ್ಯಮಿಗಳನ್ನು ಸಾರ್ಟ್​ ಲಿಸ್ಟ್​ ಮಾಡಲಾಯಿತು. ನಾಮನಿರ್ದೇಶಿತ ಪ್ರೊಫೈಲ್‌ಗಳನ್ನು ಅಂತಿಮವಾಗಿ ಗಾಲಾ ಸಮಾರಂಭದಲ್ಲಿ ಗೌರವಿಸಲು ಆಯ್ಕೆ ಮಾಡಲಾಗಿತ್ತು.

ಇದನ್ನೂ ಓದಿ: ದೀಪಾವಳಿಗೆ ಭಾರತೀಯರಿಗೆ ಬಂಪರ್! ಜಿಯೋ 5ಜಿ ಆರಂಭ

19 ಪ್ರಶಸ್ತಿ ನೀಡಿ ಗೌರವಿಸಿದ ನ್ಯೂಸ್ 18 ಕನ್ನಡ!

ಎಲ್ಲಾ 19 ಪ್ರಶಸ್ತಿಗಳಲ್ಲಿ ನಾಯಕತ್ವ ಮತ್ತು ವ್ಯವಹಾರದಲ್ಲಿ ಶ್ರೇಷ್ಠತೆಗಾಗಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಡಾ. ಸಿ ಎನ್ ಅಶ್ವಥ್ ನಾರಾಯಣ್ - ಐಟಿಬಿಟಿ ಮತ್ತು ಕರ್ನಾಟಕದ ಉನ್ನತ ಶಿಕ್ಷಣ ಸಚಿವ, ಶ್ರೀ. ಆರ್. ಅಶೋಕ್- ಕಂದಾಯ ಸಚಿವ, ಶ್ರೀ. ಕೆ ಗೋವಿಂದರಾಜ್ - MLC ಮತ್ತು ಭಾರತೀಯ ಒಲಿಂಪಿಕ್ ಸಂಸ್ಥೆಯ ಉಪಾಧ್ಯಕ್ಷ, ಶ್ರೀ. ಎನ್ ಎ ಹರಿಸ್ - ಶಾಸಕ, ಶಾಂತಿನಗರ, ಮತ್ತು ಸ್ಯಾಂಡಲ್​ವುಡ್ ಸೆಲೆಬ್ರಿಟಿಗಳಾದ ನಟ ರಮೇಶ್​ ಅರವಿಂದ್​, ನಟಿ ಮಾನ್ವಿತಾ ಮತ್ತು ಅರ್ಚನಾ ಜೋಯಿಸ್​ ಭಾಗಿಯಾಗಿದ್ದರು.

ಇದನ್ನೂ ಓದಿ: FMCG ವಿಭಾಗಕ್ಕೆ ಹೆಜ್ಜೆ ಇಡಲು ಸಜ್ಜಾದ ರಿಲಯನ್ಸ್​ ರಿಟೇಲ್​

ಲೆವಿಸ್ಟಾ ಇನ್​ಸ್ಟಂಟ್​ ಕಾಫಿ ಪಾನೀಯ, ಪಿ ಎನ್ ರಾವ್ ಸ್ಟೈಲಿಂಗ್, ಪರಿಮಳ ಮಂದಿರ, ಜೆಮೊಪೈ ಎಲೆಕ್ಟ್ರಿಕ್ ಮೊಬಿಲಿಟಿ ಪಾಲುದಾರರಾಗಿದ್ದರು.  ಮತ್ತು ಆಕ್ವಾ ಪ್ರೊ ಅಸೋಸಿಯೇಟ್ ಪ್ರಾಯೋಜಕತ್ವದಲ್ಲಿ ಈ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆಯಿತು. ಈ ಕಾರ್ಯಕ್ರಮವು ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯಿತು. ಎಲ್ಲಾ ಸರ್ಕಾರಗಳಿಂದ ಶ್ಲಾಘನೆಯನ್ನು ಪಡೆಯಿತು. ಕಾರ್ಯಕ್ರಮದ ಪ್ರಸಾರವನ್ನು ಆಗಸ್ಟ್ 31 ರಂದು ಸಂಜೆ 4 ಗಂಟೆಗೆ ನಿಗದಿಪಡಿಸಲಾಗಿದೆ. ಮತ್ತು ಸೆಪ್ಟೆಂಬರ್ 4 ರಂದು ಬೆಳಿಗ್ಗೆ 10 ಗಂಟೆಗೆ ಮರು ಪ್ರಸಾರವಾಗಲಿದೆ. ಮಿಸ್​ ಮಾಡದೇ ಈ ಕಾರ್ಯಕ್ರಮವನ್ನು ನೋಡಿ.
Published by:Vasudeva M
First published: