GDP: ಈ ವರ್ಷ ಜಿಡಿಪಿ ಬೆಳವಣಿಗೆ ಶೇ. 9.2 ಎಂದು ಸರ್ಕಾರದ ನಿರೀಕ್ಷೆ

Govt estimate of GDP: ಕೇಂದ್ರ ಸರ್ಕಾರ ಮಾಡಿರುವ ಅಂದಾಜು ಪ್ರಕಾರ ಈ ವರ್ಷ ರಿಯಲ್ ಜಿಡಿಪಿ ಶೇ. 9.2ರಷ್ಟು ವೃದ್ಧಿ ಆಗಬಹುದು. ಇದು ಶೇ. 9.5ರಷ್ಟು ಜಿಡಿಪಿ ವೃದ್ಧಿ ಆಗಬಹುದು ಎಂದು ಆರ್​ಬಿಐ ಮಾಡಿದ ಅಂದಾಜಿಗಿಂತ ತುಸು ಕಡಿಮೆ ಆಗಿದೆ.

ಜಿಡಿಪಿ

ಜಿಡಿಪಿ

  • News18
  • Last Updated :
  • Share this:
    ನವದೆಹಲಿ, ಜ. 7: ಈ ಹಣಕಾಸು ವರ್ಷದಲ್ಲಿ (2021-22) ಒಟ್ಟು ದೇಶೀಯ ಉತ್ಪನ್ನ (GDP- Gross Domestic Product) ಶೇ. 9.2ರಷ್ಟು ವೃದ್ಧಿ ಆಗಬಹುದು ಎಂದು ಕೇಂದ್ರ ಸರ್ಕಾರ ಅಂದಾಜು ಮಾಡಿದೆ. “2020-21ರಲ್ಲಿ ಶೇ. 7.3ರಷ್ಟು ಕುಸಿತ ಕಂಡಿದ್ದ ವಾಸ್ತವ ಜಿಡಿಪಿ (Real GDP) 2021-22ರ ಸಾಲಿನ ಹಣಕಾಸು ವರ್ಷದಲ್ಲಿ ಶೇ. 9.2ರಷ್ಟು ಬೆಳವಣಿಗೆ ಸಾಧಿಸುವ ನಿರೀಕ್ಷೆ ಇದೆ” ಎಂದು ಕೇಂದ್ರ ಅಂಕಿಅಂಶ ಮತ್ತು ಯೋಜನಾ ಜಾರಿ ಸಚಿವಾಲಯದ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

    ಆದರೆ, ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಜಿಡಿಪಿ ಬೆಳವಣಿಗೆ ಬಗ್ಗೆ ಮಾಡಿದ ಅಂದಾಜಿಗಿಂತ ಈಗ ಸರ್ಕಾರ ಮಾಡಿರುವ ಅಂದಾಜು ತುಸು ಕಡಿಮೆ ಇದೆ. 2022ರ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 9.5ರಷ್ಟು ಅಭಿವೃದ್ಧಿ ಹೊಂದಬಹುದು ಎಂದು ಆರ್​ಬಿಐ ಅಂದಾಜು ಮಾಡಿತ್ತು. ಈಗ ಕೇಂದ್ರ ಸರ್ಕಾರ ಜಿಡಿಪಿ ವೃದ್ಧಿ ದರ ಶೇ. 9.2 ಇರಬಹುದು ಎಂದು ಅಂದಾಜು ಮಾಡಿದೆ.

    ಸರ್ಕಾರ ಮಾಡಿರುವ ಶೇ. 9.2ರಷ್ಟು ಜಿಡಿಪಿ ವೃದ್ಧಿ ದರ ನಿಜವಾಗಿಯೂ ಆದಲ್ಲಿ ಕಳೆದ 17 ವರ್ಷಗಳಲ್ಲೇ ಗರಿಷ್ಠ ಬೆಳವಣಿಗೆಯ ದರ ಎನಿಸಲಿದೆ.

    ಇದು ರಿಯಲ್ ಜಿಡಿಪಿಯ ಅಂದಾಜು ಆಗಿದ್ದರೆ, ನಾಮಿನಲ್ ಜಿಡಿಪಿ (ಸ್ಥೂಲ ಜಿಡಿಪಿ) ಕಳೆದ ವರ್ಷ 197.456 ಲಕ್ಷ ಕೋಟಿ ಇತ್ತು. ಈ ವರ್ಷ ಅದು 232.15 ಲಕ್ಷ ಕೋಟಿಗೆ ಏರಿಕೆ ಆಗಬಹುದು ಎಂದು ಅಂದಾಜು ಮಾಡಲಾಗಿದೆ. ನಾಮಿನಲ್ ಲೆಕ್ಕಾಚಾರದಲ್ಲಿ ಜಿಡಿಪಿ 2022ರ ವರ್ಷದಲ್ಲಿ ಶೇ. 17.6ರಷ್ಟು ಬೆಳವಣಿಗೆ ಆಗಬಹುದು.

    ಇದನ್ನೂ ಓದಿ: Exchange Offer: ಈ ಚೀನೀ ಸ್ಮಾರ್ಟ್​ಫೋನ್ ಕೊಟ್ಟು ಫ್ರೀ ಆಗಿ ಹೊಚ್ಚಹೊಸ 5ಜಿ ಫೋನ್ ಪಡೆಯಿರಿ

    ಔದ್ಯಮಿಕ ಉತ್ಪಾದನೆ ಸೂಚಿ (IIP- Index of Industrial Production), ಷೇರುಪೇಟೆಯಲ್ಲಿನ ಖಾಸಗಿ ಕಂಪನಿಗಳ ಸಾಧನೆ, ಬೆಳೆ ಉತ್ಪಾದನೆ ಅಂದಾಜು ಇತ್ಯಾದಿ ಪ್ರಮುಖ ದಿಗ್ಸೂಚಿಗಳ (Benchmarck Indicators) ಆಧಾರದ ಮೇಲೆ ಆರ್ಥಿಕತೆಯ ಬೆಳವಣಿಗೆಯನ್ನ ಅಂದಾಜು ಮಾಡಲಾಗುತ್ತದೆ. ಈ ಅಂದಾಜು ವರದಿಯಲ್ಲಿನ ಅಂಶಗಳನ್ನ ಬಳಸಿಕೊಂಡು ಕೇಂದ್ರ ಸರ್ಕಾರ 2022ರ ಮುಂಗಡ ಪತ್ರ (Union Budget) ಸಿದ್ಧಗೊಳಿಸುತ್ತದೆ.

    ಇನ್ನು, 2021ರ ಮಾರ್ಚ್​ನಿಂದ ಆರಂಭವಾಗುವ ಹಣಕಾಸು ವರ್ಷದ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಭಾರತದ ಆರ್ಥಿಕತೆ ಶೇ. 8.4ರಷ್ಟು ಬೆಳವಣಿಗೆ ಸಾಧಿಸಿತ್ತು.

    “ಎರಡನೇ ಕೋವಿಡ್ ಅಲೆ ಮುಗಿದ ಬಳಿಕ ಭಾರತದ ಆರ್ಥಿಕತೆ ಗಮನಾರ್ಹ ರೀತಿಯಲ್ಲಿ ಪ್ರಗತಿ ಕಂಡಿದೆ. ಆರ್ಥಿಕತೆಯ ಅನೇಕ ಅಂಶಗಳು ಕೋವಿಡ್ ಮುಂಚಿನ ಮಟ್ಟಕ್ಕೆ ಹೋದವು. ಭೌತಿಕ ಸಂಪರ್ಕದ ಅಗತ್ಯ ಇರುವ ಪ್ರವಾಸೋದ್ಯಮ, ವಿಮಾನಯಾನ, ಹೋಟೆಲ್ ಇತ್ಯಾದಿ ವಲಯಗಳೂ ಕೂಡ ಚೇತರಿಸಿಕೊಂಡವು. ಈಗ ಓಮೈಕ್ರಾನ್ ರೂಪಾಂತರಿ ವೈರಸ್ ಹಾಗೂ ಮೂರನೇ ಕೋವಿಡ್ ಅಲೆ ವಿಶ್ವಾದ್ಯಂತ ಸಂಚಲನ ಸೃಷ್ಟಿಸಿರುವುದು ಹೌದು. ಆದರೆ, ಮೊದಲೆರಡು ಅಲೆಯಂತೆ ಉದ್ಯಮ ಜಗತ್ತು ಗಡಿಬಿಡಿಗೊಳ್ಳದೆ ಬಹಳ ಜಾಣತನದಿಂದ ಹೆಜ್ಜೆ ಇಡುತ್ತಿದೆ” ಎಂದು ನೈಟ್ ಫ್ರಾಂಕ್ ಇಂಡಿಯಾ ಕಂಪನಿಯ ಸಂಶೋಧನಾ ವಿಭಾಗದ ನಿರ್ದೇಶಕ ವಿವೇಕ್ ರಾಥಿ ಹೇಳುತ್ತಾರೆ.
    Published by:Vijayasarthy SN
    First published: