LIC: ಷೇರು ಮಾರುಕಟ್ಟೆಯಲ್ಲಿ ಮುಗ್ಗರಿಸಿದ ಎಲ್​ಐಸಿ, ಖಾಸಗಿ ವಲಯದಿಂದ ಕಾರ್ಯನಿರ್ವಾಹಕರ ಆಯ್ಕೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಭಾರತದ ಅತಿದೊಡ್ಡ ವಿಮಾ ಕಂಪನಿಯಾಗಿರುವ ಭಾರತೀಯ ಜೀವ ವಿಮೆಯನ್ನು ಮುನ್ನಡೆಸಲು ಖಾಸಗಿ ವಲಯದಿಂದ ನೇಮಕ ಮಾಡುವುದು 66 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲನೆಯದು ಎಂಬುದಾಗಿ ತಿಳಿದುಬಂದಿದೆ.

  • Trending Desk
  • 3-MIN READ
  • Last Updated :
  • Share this:

ಸ್ಟಾಕ್ ಮಾರುಕಟ್ಟೆ (Stock Market) ಯಲ್ಲಿ ನಿರಾಶದಾಯಕ ಪ್ರಥಮ ಪ್ರವೇಶವನ್ನು ಮಾಡಿದ ನಂತರ ಇದೀಗ ಭಾರತದ ಅತಿದೊಡ್ಡ ವಿಮಾ ಸಂಸ್ಥೆಯಾದ ಭಾರತೀಯ ಜೀವ ವಿಮಾ (LIC) ನಿಗಮವನ್ನು ಆಧುನೀಕರಿಸುವ ಪ್ರಯತ್ನದಲ್ಲಿ ಸರಕಾರ ಮಹತ್ತರ ಕ್ರಮ ತೆಗೆದುಕೊಂಡಿದೆ. ನಿಗಮದ ಮೊದಲ ಕಾರ್ಯನಿರ್ವಹಕರಾಗಿ ಖಾಸಗಿ ವಲಯದ ವೃತ್ತಿಪರರನ್ನು ನೇಮಿಸುವ ಗುರಿಯನ್ನು ದೇಶ ಹೊಂದಿದೆ ಎಂದು ಸರಕಾರಿ ಅಧಿಕಾರಿ ವಲಯ ತಿಳಿಸಿದೆ. 41 ಟ್ರಿಲಿಯನ್ ರೂಪಾಯಿಗಳ ($500.69 ಶತಕೋಟಿ) ಸ್ವತ್ತನ್ನು ನಿರ್ವಹಿಸುವ ಭಾರತದ ಅತಿದೊಡ್ಡ ವಿಮಾ ಕಂಪನಿಯಾಗಿರುವ ಭಾರತೀಯ ಜೀವ ವಿಮೆಯನ್ನು ಮುನ್ನಡೆಸಲು ಖಾಸಗಿ ವಲಯದಿಂದ ನೇಮಕ ಮಾಡುವುದು 66 ವರ್ಷಗಳ ಇತಿಹಾಸ (History) ದಲ್ಲಿ ಇದೇ ಮೊದಲನೆಯದು ಎಂಬುದಾಗಿ ತಿಳಿದುಬಂದಿದೆ.


66 ವರ್ಷಗಳ ಇತಿಹಾಸದಲ್ಲಿ ಇಂತಹ ನಿರ್ಧಾರ ಇದೇ ಮೊದಲು


ಎಲ್‌ಐಸಿ ಸಿಇಒ ನೇಮಕಾತಿಗಾಗಿ ಅರ್ಹತಾ ಮಾನದಂಡಗಳನ್ನು ವಿಸ್ತರಿಸಲು ಸರಕಾರ ಯೋಜಿಸುತ್ತಿದ್ದು ಇದರಿಂದ ಖಾಸಗಿ ವಲಯದ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು ಎಂದು ಹೆಸರು ಹೇಳಲು ಇಚ್ಛಿಸದ ಸರಕಾರಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಈ ಕುರಿತು ಎಲ್‌ಐಸಿ ಸಂಸ್ಥೆಯನ್ನು ನಿರ್ವಹಿಸುವ ಹಣಕಾಸು ಸಚಿವಾಲಯವನ್ನು ಸಂಪರ್ಕಿಸಿದಾಗ ಸಚಿವಾಲಯವು ಹೆಚ್ಚಿನ ಮಾಹಿತಿ ನೀಡಲಿಲ್ಲ ಹಾಗೂ ಇಮೇಲ್‌ಗೆ ಪ್ರತಿಕ್ರಿಯೆ ನೀಡಲಿಲ್ಲ ಎಂದು ವರದಿಯಾಗಿದೆ.


ಖಾಸಗಿ ವಲಯದಿಂದ ಮುಖ್ಯ ಕಾರ್ಯನಿರ್ವಾಹಕರ ನೇಮಕಾತಿ


ವಿಮಾಸಂಸ್ಥೆಯನ್ನು ಇದೀಗ ಅಧ್ಯಕ್ಷರು ನಿರ್ವಹಿಸುತ್ತಿದ್ದು ಪ್ರಸ್ತುತ ಅಧಿಕಾರದಲ್ಲಿರುವ ಅಧಿಕಾರಾವಧಿಯು ಮಾರ್ಚ್‌ನಲ್ಲಿ ಕೊನೆಗೊಂಡ ನಂತರ ಆ ಹುದ್ದೆಯನ್ನು ರದ್ದುಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ನಂತರ ಸರಕಾರವು ಖಾಸಗಿ ವಲಯದಿಂದ ಮುಖ್ಯ ಕಾರ್ಯನಿರ್ವಾಹಕರನ್ನು ನೇಮಿಸುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಕ್ರಮವನ್ನು ಜಾರಿಗೆ ತರಲು ಕಳೆದ ವರ್ಷ ಎಲ್‌ಐಸಿಯನ್ನು ನಿಯಂತ್ರಿಸುವ ಕಾನೂನಿಗೆ ಬದಲಾವಣೆಗಳನ್ನು ಮಾಡಲಾಗಿದೆ. ಈ ಕ್ರಮವು ಹೆಚ್ಚಿನ ಆಯ್ಕೆಗಳಿಗೆ ಕಾರಣವಾಗಿದೆ ಹಾಗೂ ಷೇರುದಾರರಿಗೆ ಉತ್ತಮ ಹೂಡಿಕೆಗೆ ಅವಕಾಶ ನೀಡುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.


ಇದನ್ನೂ ಓದಿ: ಇದೊಂದು ಹೊಸ ಬ್ಯುಸಿನೆಸ್​ ಐಡಿಯಾ, ತಿಂಗಳಿಗೆ 1 ಲಕ್ಷ ಆದಾಯ ಮಿಸ್ಸೇ ಇಲ್ಲ!


ಷೇರು ಮಾರುಕಟ್ಟೆಯಲ್ಲಿ ನಷ್ಟ


ಇನ್ನು ಸಂಸ್ಥೆಗೆ ನೇಮಕಗೊಳ್ಳುವವರು ಯಾವ ಕ್ಷೇತ್ರದಿಂದ ಆಯ್ಕೆಗೊಳ್ಳಬಹುದು ಎಂಬುದು ಬಹಿರಂಗಗೊಂಡಿಲ್ಲ. ಕಳೆದ ವರ್ಷ ಮೇ ತಿಂಗಳಿನಲ್ಲಿ ಲಿಸ್ಟಿಂಗ್ ಮಾಡಿದ ನಂತರ ವಿಮಾದಾರರ ಷೇರಿನ ಬೆಲೆಯು ತೀವ್ರ ನಷ್ಟಕ್ಕೆ ಗುರಿಯಾಯಿತು ಹಾಗೂ ಷೇರುಗಳು ವಿತರಿಸಿದ ಬೆಲೆಗಿಂತ 30% ಕಡಿಮೆ ವಹಿವಾಟು ನಡೆಸಿತು. ಹೀಗಾಗಿ ಈ ನಷ್ಟವು ಹೂಡಿಕೆದಾರರ ಸಂಪತ್ತಿನಲ್ಲಿ ಸುಮಾರು 2 ಟ್ರಿಲಿಯನ್ ರೂಪಾಯಿಗಳ ನಷ್ಟಕ್ಕೆ ಕಾರಣವಾಗಿದೆ.


ವೇತನದ ಕುರಿತು ಮಾತುಕತೆಗಳು ಪ್ರಕ್ರಿಯೆಯಲ್ಲಿದೆ


ನುರಿತ ವೃತ್ತಿಪರರು ವಿಮಾ ಸಂಸ್ಥೆಯನ್ನು ಮುನ್ನಡೆಸುವ ಅವಶ್ಯಕತೆ ಇದ್ದು ರಾಜ್ಯ ಚಾಲಿತ ಸಂಸ್ಥೆಗಳನ್ನು ಮೀರಿ ವಿಸ್ತರಿಸುವ ಕಲ್ಪನೆಯನ್ನು ಮಾಜಿ ಹಣಕಾಸು ಕಾರ್ಯದರ್ಶಿ, ಸುಭಾಷ್ ಚಂದ್ರ ಗಾರ್ಗ್ ಅಂಗೀಕರಿಸಿದ್ದಾರೆ.


ಇದರಿಂದ ಯಾವುದೇ ಹಾನಿಯಿಲ್ಲ ಎಂದು ತಿಳಿಸಿರುವ ಸುಭಾಷ್ ಚಂದ್ರ ಗಾರ್ಗ್, ಇದೊಂದು ಅರ್ಥಪೂರ್ಣ ಕ್ರಮವಾಗಿದೆ ಎಂದು ತಿಳಿಸಿದ್ದಾರೆ. ಖಾಸಗಿ ವಲಯದಿಂದ ಕಾರ್ಯನಿರ್ವಾಹಕರನ್ನು ಆಯ್ಕೆಮಾಡುವ ಕುರಿತು ಒಟ್ಟಾಗಿ ನಿರ್ಧಾರ ತೆಗೆದುಕೊಳ್ಳಲಾಗಿದೆ.


ಹಾಗಾಗಿ ಕಾನೂನಿಗೆ ಮತ್ತಷ್ಟು ಬದಲಾವಣೆಗಳನ್ನು ಮಾಡಬೇಕಾಗಿದೆಯೇ ಹಾಗೂ ಸರಕಾರವು ಖಾಸಗಿ ವಲಯಕ್ಕೆ ಅನುಗುಣವಾಗಿ ವೇತನವನ್ನು ನೀಡಬಹುದೇ ಎಂಬುದನ್ನು ಸಮಾಲೋಚಿಸಲಾಗುತ್ತಿದೆ ಎಂದು ತಿಳಿದುಬಂದಿದೆ.


ಬ್ಯಾಂಕ್‌ಗಳಿಗೆ ಖಾಸಗಿ ವಲಯದಿಂದ ಆಯ್ಕೆ ನಡೆದಿತ್ತು


ಸಾರ್ವಜನಿಕ ವಲಯಕ್ಕಿಂತ ಖಾಸಗಿ ಸಂಸ್ಥೆಗಳು ಹೆಚ್ಚು ಪಾವತಿಸುವುದರಿಂದ ಈ ದಿಸೆಯಲ್ಲಿ ವೇತನವನ್ನು ನಿರ್ಧರಿಸಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆ ಖಾಸಗಿ ವಲಯಗಳಿಂದ ಬ್ಯಾಂಕ್‌ಗಳಂತಹ ಇತರ ಸರಕಾರಿ ಸಂಸ್ಥೆಗಳಿಗೆ ನೇಮಕಾತಿಗಳನ್ನು ಸರಕಾರ ಮಾಡಿರುವುದರಿಂದ ಇದೀಗ ಜೀವ ವಿಮಾ ನಿಗಮ ಘಟಕ್ಕೆ ಖಾಸಗಿ ವಲಯದಿಂದ ಕಾರ್ಯನಿರ್ವಾಹಕರನ್ನು ಆಯ್ಕೆಮಾಡುವುದು ಅಷ್ಟೊಂದು ಸವಾಲಿನದಾಗಿರುವುದಿಲ್ಲ ಎಂಬುದು ಸರಕಾರಿ ಅಧಿಕಾರಿಯೊಬ್ಬರ ಹೇಳಿಕೆಯಾಗಿದೆ.


ಇದನ್ನೂ ಓದಿ: ಇಬ್ಬರೂ ಸೇರಿ ಸೇವಿಂಗ್ಸ್ ಮಾಡ್ತಿರೋ ದಂಪತಿಗಳೇ ಹೆಚ್ಚು ಖುಷಿಯಾಗಿರೋದಂತೆ!


ಅದಾಗ್ಯೂ ಈ ಆಯ್ಕೆಯನ್ನು ಮಾಡುವಾಗ ವಿಮಾದಾರರ ಕ್ಷೇಯೋಭಿವೃದ್ಧಿಯನ್ನು ಮುಂದಿರಿಸಿಕೊಂಡು ಮುಖ್ಯ ಕಾರ್ಯನಿರ್ವಾಹಕರ ಆಯ್ಕೆಯನ್ನು ಮಾಡಬೇಕಾಗುತ್ತದೆ ಎಂದು ಅಧಿಕಾರಿ ಸೂಚನೆ ನೀಡಿದ್ದಾರೆ.

Published by:ವಾಸುದೇವ್ ಎಂ
First published: