Pension Scheme: ವಿವಾಹಿತರಿಗೆ ಪ್ರತಿ 5 ಸಾವಿರ ರೂ. ಯೋಜನೆ ಬಗ್ಗೆ ನಿಮಗೆ ಗೊತ್ತಾ?

ಮದುವೆಯಾದ ನಂತರ ನಿಮಗೆ ಪ್ರತಿ ತಿಂಗಳು 5 ಸಾವಿರ ರೂಪಾಯಿ ಸಿಗುತ್ತದೆ ಎಂದು ನಾವು ಹೇಳಿದರೆ ನೀವು ನಂಬಲೇಬೇಕು. ಇಂದು ನಾವು ನಿಮಗೆ ಸರ್ಕಾರದ ಈ ಅತ್ಯುತ್ತಮ ಯೋಜನೆಯ  (Government Scheme) ಬಗ್ಗೆ ಹೇಳಲಿದ್ದೇವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮದುವೆ (Marriage) ಅನ್ನೋದು ಒಂದು ಜೀವನದ ಪ್ರಮುಖ ಘಟ್ಟ, ಇದು ಕೇವಲ ಇಬ್ಬರು ಬಂಧನಕ್ಕೊಳಗಾಗೋದು ಅಲ್ಲ, ಬದಲಾಗಿ ಎರಡು ಕುಟುಂಬಗಳ ಸಮ್ಮಿಲನ. ಇಂದಿನ ಕಾಲದಲ್ಲಿ ಮದುವೆ ಆಗುವ ಮುಂಚೆ ಹುಡುಗ ಅಥವಾ ಹುಡುಗಿ ಆರ್ಥಿಕವಾಗಿ ಸಬಲರಾಗಬೇಕೆಂದು (Finance Status) ದುಡಿಯುತ್ತಾರೆ, ಆರ್ಥಿಕ ಪರಿಸ್ಥಿತಿ ಒಂದು ಹಂತಕ್ಕೆ ತಲುಪಿದಾಗ ಮದುವೆ ಬಂಧನಕ್ಕೆ ಒಳಗಾಗುತ್ತಾರೆ, ಮದುವೆಯಾದ ನಂತರ ನಿಮಗೆ ಪ್ರತಿ ತಿಂಗಳು 5 ಸಾವಿರ ರೂಪಾಯಿ ಸಿಗುತ್ತದೆ ಎಂದು ನಾವು ಹೇಳಿದರೆ ನೀವು ನಂಬಲೇಬೇಕು. ಇಂದು ನಾವು ನಿಮಗೆ ಸರ್ಕಾರದ ಈ ಅತ್ಯುತ್ತಮ ಯೋಜನೆಯ  (Government Scheme) ಬಗ್ಗೆ ಹೇಳಲಿದ್ದೇವೆ, ಇದರ ಅಡಿಯಲ್ಲಿ ಪ್ರತಿ ವಿವಾಹಿತ ವ್ಯಕ್ತಿಗೆ ಪ್ರತಿ ತಿಂಗಳು 5 ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ.

ಪ್ರತಿಯೊಬ್ಬರೂ ತಮ್ಮ ಭವಿಷ್ಯ ಮತ್ತು ವೃದ್ಧಾಪ್ಯದ ಬಗ್ಗೆ ತುಂಬಾ ಚಿಂತಿತರಾಗಿದ್ದರೆ. ಆದ್ದರಿಂದ ನೀವು ಈ ಯೋಜನೆಯ ಲಾಭವನ್ನು ಪಡೆಯಬಹುದು. ಅಲ್ಲದೆ ಈ ಯೋಜನೆಯು ಬಹಳಷ್ಟು ಪ್ರಯೋಜನಗಳನ್ನು ನೀಡಬಹುದು.

ವಿವಾಹಿತರು ಸರ್ಕಾರದ ಈ ಯೋಜನೆಯ ಲಾಭವನ್ನು ಪಡೆಯಬಹುದು. ಈ ಯೋಜನೆಯನ್ನು ಅಟಲ್ ಪಿಂಚಣಿ ಯೋಜನೆ ಎಂದು ಕರೆಯಲಾಗುತ್ತದೆ. ಈ ಯೋಜನೆಯಡಿ ವಿವಾಹಿತರಿಗೆ ಪ್ರತಿ ತಿಂಗಳು ಒಂದು ಸಾವಿರ, ಎರಡು ಸಾವಿರ, ಮೂರು ಸಾವಿರ, ನಾಲ್ಕು ಸಾವಿರ ಮತ್ತು ಗರಿಷ್ಠ 5 ಸಾವಿರ ರೂಪಾಯಿಗಳ ಆರ್ಥಿಕ ಪಿಂಚಣಿ ನೀಡಲಾಗುತ್ತದೆ.

ಇದನ್ನೂ ಓದಿ:  PM Awas yojana: ಪಿಎಂ ಆವಾಸ್ ಯೋಜನೆ ಲಾಭ ನಿಮಗೆ ಸಿಕ್ಕಿದೆಯಾ? ಈ ನಿಯಮಗಳನ್ನು ತಿಳಿದುಕೊಳ್ಳಿ

ಇದು ಅತ್ಯಂತ ಸುರಕ್ಷಿತ ಹೂಡಿಕೆಯ ವಿಧವಾಗಿದೆ. ಇದರ ಅಡಿಯಲ್ಲಿ ಪತಿ ಮತ್ತು ಪತ್ನಿ ಇಬ್ಬರೂ ಇದರ ಲಾಭವನ್ನು ಪಡೆಯಬಹುದು. ಇದಕ್ಕಾಗಿ ನೀವು ಉಳಿತಾಯ ಖಾತೆಯನ್ನು ಹೊಂದಿರಬೇಕು. ಜೊತೆಗೆ ಆಧಾರ್ ಕಾರ್ಡ್ ಮತ್ತು ಫೋನ್ ಸಂಖ್ಯೆಯನ್ನು ಹೊಂದಿರಬೇಕು.

ಈ ಯೋಜನೆಯ ಲಾಭ ಪಡೆಯುವುದು ಹೇಗೆ?

ಈ ಪಿಂಚಣಿ ಯೋಜನೆಯ ಲಾಭ ಪಡೆಯಲು ನೀವು ಬ್ಯಾಂಕ್‌ನಲ್ಲಿ ಖಾತೆಯನ್ನು ತೆರೆಯಬೇಕು. ಅಲ್ಲದೆ ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡುವ ಮೂಲಕ ನೀವು ಈ ಯೋಜನೆಗಾಗಿ ಫಾರ್ಮ್ ಅನ್ನು ಭರ್ತಿ ಮಾಡಬಹುದು. 18 ರಿಂದ 40 ವರ್ಷ ವಯಸ್ಸಿನವರು ಈ ಯೋಜನೆಯ ಲಾಭ ಪಡೆಯಬಹುದು. ಅದರಲ್ಲಿ ಹೂಡಿಕೆ ಮಾಡಿದ ನಂತರ, ನೀವು 60 ವರ್ಷಗಳ ನಂತರ ಅದರ ಪ್ರಯೋಜನಗಳನ್ನು ಪಡೆಯುತ್ತೀರಿ.

ಸಾವಿನ ನಂತರವೂ ಪ್ರಯೋಜನ ದೊರೆಯುತ್ತದೆ

ಈ ಯೋಜನೆಗೆ ಸೇರಿದ ನಂತರ ನೀವು ಸಾವನ್ನಪ್ಪಿದ್ರೆ ನಿಮ್ಮ ಕುಟುಂಬ ಸದಸ್ಯರು ಇದರ ಪ್ರಯೋಜನವನ್ನು ಪಡೆಯುತ್ತಾರೆ. ನಿಮ್ಮ ಪತ್ನಿ ಈ ಪಿಂಚಣಿಯ ಎಲ್ಲಾ ಪ್ರಯೋಜನಗಳನ್ನು ಪಡೆಯುತ್ತಾರೆ. ಹಾಗೆಯೇ ನಿಮ್ಮ ಹೆಂಡತಿಯೂ ಸಾವನ್ನಪ್ಪಿದ್ರೆ ಅದರ ಸಂಪೂರ್ಣ ಲಾಭ ನಿಮ್ಮ ಮಕ್ಕಳಿಗೆ ಸಿಗುತ್ತದೆ.

ಇದನ್ನೂ ಓದಿ:  Business Idea: 25 ಸಾವಿರ ರೂ. ಹೂಡಿಕೆ ಮಾಡಿ, ತಿಂಗಳಿಗೆ 50 ಸಾವಿರ ರೂ.ಗಳಿಸುವ ವ್ಯವಹಾರದ ಮಾಹಿತಿ

ತೆರಿಗೆಯಲ್ಲೂ ಲಾಭ ಪಡೆಯಿರಿ

ಈ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಿದ ನಂತರ, ನೀವು ತೆರಿಗೆ ಪ್ರಯೋಜನಗಳನ್ನು ಸಹ ಪಡೆಯುತ್ತೀರಿ. ಈ ಯೋಜನೆಯಡಿಯಲ್ಲಿ, ನೀವು ವಾರ್ಷಿಕವಾಗಿ ರೂ 1.5 ಲಕ್ಷದವರೆಗೆ ತೆರಿಗೆ ಪ್ರಯೋಜನವನ್ನು ಪಡೆಯುತ್ತೀರಿ. ಆದ್ದರಿಂದ ಈ ಯೋಜನೆಯು ನಿಮಗೆ ಉತ್ತಮ ಆಯ್ಕೆಯಾಗಿದೆ.

ಸರ್ಕಾರಿ ಉದ್ಯೋಗಿಗಳಿಗೆ (Govt Employees) ನಿವೃತ್ತಿ (Retirement) ಬಳಿಕವೂ ಪಿಂಚಣಿ ಸಿಗುತ್ತದೆ. ಅಸಂಘಟಿತ ವಲಯದ ನೌಕರರು (Unorganized Sector Workers) ತಮ್ಮ ನಿವೃತ್ತಿ ಜೀವನದ (Retirement Life) ಬಗ್ಗೆ ಹೆಚ್ಚು ಚಿಂತಿತರಾಗಿರುತ್ತಾರೆ. ಖಾಸಗಿ ಉದ್ಯೋಗ ಅಥವಾ ಸಣ್ಣ ವ್ಯಾಪಾರ ಹೊಂದಿರುವವರು ವೃದ್ಧಾಪ್ಯದ ಖರ್ಚುಗಳ ಬಗ್ಗೆ ಚಿಂತಿತರಾಗಿದ್ದಾರೆ. ನೀವು ಸಹ ಇದೇ ನಿವೃತ್ತಿಯ ನಂತರ ಪಿಂಚಣಿ (Pension) ಬಗ್ಗೆ ಯೋಚಿಸುತ್ತಿದ್ದರೆ, ಭಾರತ ಸರ್ಕಾರ ಇಂತಹ ಹಲವು ಯೋಜನೆಗಳನ್ನು ತಂದಿದೆ. ಅದರಲ್ಲಿ  ಅಟಲ್ ಪಿಂಚಣಿ ಯೋಜನೆ (Atal Pension Yojana) ನಿಮಗೆ ಉತ್ತಮ ಆಯ್ಕೆಯಾಗುತ್ತದೆ.
Published by:Mahmadrafik K
First published: