Pan-Adhaar ನಂಬರ್ ಲಿಂಕ್‌, ಮತ್ತೆ ಡೆಡ್‌ಲೈನ್‌ ವಿಸ್ತರಣೆ ಸಾಧ್ಯತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆದಾಯ ತೆರಿಗೆ ಕಾಯ್ದೆ 139 ಎಎ ಪ್ರಕಾರ ಪಾನ್‌ ಕಾರ್ಡ್‌ಗೆ ಆಧಾರ್ ಕಾರ್ಡ್‌ ಲಿಂಕ್ ಮಾಡೋದು ಕಡ್ಡಾಯವಾಗಿದ್ದು, ಮಾರ್ಚ್‌ 31ರೊಳಗೆ ಪ್ಯಾನ್‌ - ಆಧಾರ್‌ ನಂಬರ್‌ಗಳನ್ನು ಜೋಡಣೆ ಮಾಡಲು ಡೆಡ್‌ಲೈನ್‌ ಕೂಡ ನೀಡಲಾಗಿತ್ತು.

  • Share this:
  • published by :

ಎಲ್ಲರ ಬಾಯಲ್ಲೂ ಇದೇ ಮಾತು, ನೀವು ಪಾನ್‌ ಕಾರ್ಡ್ (Pan Card)‌ ಜೊತೆ ಆಧಾರ್‌ ಲಿಂಕ್ (Adhar Link)‌ ಮಾಡಿದ್ರಾ ಅಂತಾ. ಆದರೆ ಇನ್ನು ಕೆಲವರು ಮಾತ್ರ ಡೆಡ್‌ಲೈನ್‌ ವಿಸ್ತರಣೆ ಆಗಬಹುದಾ ಅಂತಾ ಪ್ರಶ್ನೆ ಕೇಳುತ್ತಲೇ ಡೆಡ್‌ಲೈನ್ (Deadline)‌ ಬಂದರೂ ಸಮಯ ದೂಡುತ್ತಿದ್ದಾರೆ. ಹೌದು ಸರ್ಕಾರದ ಆದೇಶಗಳಿಗೆ ಕ್ಯಾರೆ ಅನ್ನದೇ ಬಹುತೇಕರು ಈ ಕಾರ್ಯವನ್ನು ಇನ್ನೂ ಮುಗಿಸಿಲ್ಲ ಮತ್ತು ಮತ್ತೊಂದು ಗಡುವು ವಿಸ್ತರಣೆಗೆ ಕಾಯುತ್ತಿದ್ದಾರೆ. ಇಂಥವರಿಗಾಗಿಯೇ ಇಲ್ಲೊಂದು ಖುಷಿ ಸುದ್ದಿ ಇದೆ ನೋಡಿ. ಆದಾಯ ತೆರಿಗೆ ಕಾಯ್ದೆ 139 ಎಎ ಪ್ರಕಾರ ಪಾನ್‌ ಕಾರ್ಡ್‌ಗೆ ಆಧಾರ್ ಕಾರ್ಡ್‌ ಲಿಂಕ್ ಮಾಡೋದು ಕಡ್ಡಾಯವಾಗಿದ್ದು, ಮಾರ್ಚ್‌ (March) 31ರೊಳಗೆ ಪ್ಯಾನ್‌ - ಆಧಾರ್‌ ನಂಬರ್‌ಗಳನ್ನು ಜೋಡಣೆ ಮಾಡಲು ಡೆಡ್‌ಲೈನ್‌ ಕೂಡ ನೀಡಲಾಗಿತ್ತು.


ಸರ್ಕಾರ ನಿಗದಿಪಡಿಸಿದ ಸಮಯದ ಒಳಗೆ ಪಾನ್‌ ಅನ್ನು ಆಧಾರ್ ಜೊತೆ ಲಿಂಕ್ ಮಾಡದಿದ್ದರೆ ಅದು ನಿಷ್ಕ್ರೀಯವಾಗುತ್ತದೆ ಎಂದು ಮೂಲಗಳು ಎಚ್ಚರಿಸಿದ್ದವು. ಈ ಸೂಚನೆ ಮೇರೆಗೆ ಜನಸಾಮಾನ್ಯರು ಎದ್ದು ಬಿದ್ದು ಪಾನ್‌ ಕಾರ್ಡ್‌ ಅನ್ನು ಆಧಾರ್‌ ಜೊತೆ ಲಿಂಕ್‌ ಮಾಡಲು ಹರಸಾಹಸ ಪಡುತ್ತಿದ್ದಾರೆ. ಆದರೆ ಮೇಲೆ ಹೇಳಿದಂತೆ ಹಲವು ಬಳಕೆದಾರರು ಇನ್ನೂ ಸಹ ಈ ಲಿಂಕ್‌ ಮಾಡುವ ಗೋಜಿಗೆ ಹೋಗಿಯೇ ಇಲ್ಲ.


ಮತ್ತೆ ಡೆಡ್‌ಲೈನ್‌ ವಿಸ್ತರಣೆ ಸಾಧ್ಯತೆ


ಪಾನ್ - ಆಧಾರ್‌ ನಂಬರ್‌ಗಳನ್ನು ಜೋಡಣೆ ಮಾಡುವ ಗಡುವು ಮಾರ್ಚ್‌ 31ಕ್ಕೆ ಅಂತ್ಯವಾಗುತ್ತದೆ ಎಂದು ಈ ಹಿಂದೆ ಸರ್ಕಾರದ ಮೂಲಗಳು ತಿಳಿಸಿದ್ದವು. ಆದರೆ ಹೊಸ ಮಾಹಿತಿಯ ಪ್ರಕಾರ ಪಾನ್‌ ಮತ್ತು ಆಧಾರ್‌ ನಂಬರ್‌ಗಳನ್ನು ಲಿಂಕ್‌ ಮಾಡುವ ಗಡುವನ್ನು ಸರ್ಕಾರ ಇನ್ನೂ ಎರಡು-ಮೂರು ತಿಂಗಳು ವಿಸ್ತರಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಶೀಘ್ರದಲ್ಲೇ ಹೊರಬೀಳಲಿದೆ ಅಧಿಸೂಚನೆ


ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು ಶೀಘ್ರದಲ್ಲೇ ಈ ಕುರಿತು ಅಧಿಸೂಚನೆಯನ್ನು ಹೊರಡಿಸಬಹುದು ಎಂದು ಸರ್ಕಾರಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಆದರೆ ದಂಡ ಮಾತ್ರ ಮೊದಲಿನಂತೆ ಇರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸರ್ಕಾರ ನಿಗದಿಪಡಿಸಿದ ಗಡುವಿನ ಒಳಗೆ ಒಬ್ಬ ವ್ಯಕ್ತಿ ಪಾನ್‌ ಲಿಂಕ್‌ ಮಾಡದಿದ್ದರೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 234ಎಚ್‌ ಪ್ರಕಾರ ಆ ವ್ಯಕ್ತಿಗೆ ಶುಲ್ಕ ವಿಧಿಸಲಾಗುತ್ತದೆ.


ಇದನ್ನೂ ಓದಿ: ದೇಶದಲ್ಲಿ ಮತ್ತೆ ಕೋವಿಡ್ XBB 1.16 ರೂಪಾಂತರದ ಆರ್ಭಟ; ಭಾರತದಲ್ಲಿ 610 ಪ್ರಕರಣಗಳು ದಾಖಲು


ಹೀಗಾಗಿ 31 ಮಾರ್ಚ್‌ 2022ರ ವರೆಗೆ ಇದ್ದ ಅವಧಿಯನ್ನು ಈ ವರ್ಷದ ಮಾರ್ಚ್‌ವರೆಗೆ ವಿಸ್ತರಿಸಿತ್ತು. ಪ್ರಸ್ತುತ ಇನ್ನೂ ಎರಡು-ಮೂರು ತಿಂಗಳು ಈ ಡೆಡ್‌ಲೈನ್‌ ವಿಸ್ತರಿಸಿದರು ಕೂಡ ಶುಲ್ಕ ಎಲ್ಲರಿಗೂ ಅನ್ವಯವಾಗುತ್ತದೆ. ದಂಡ ಶುಲ್ಕ ಮೊದಲಿನಂತೆ 500 ರಿಂದ 1000 ರೂಪಾಯಿ ತನಕ ಬೀಳಲಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.


ನಾಲ್ಕು ಬಾರಿ ಡೆಡ್‌ಲೈನ್‌ ವಿಸ್ತರಿಸಿದ ಸರ್ಕಾರ


ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಈ ಹಿಂದೆಯೂ ಹಲವಾರು ಬಾರಿ ಪಾನ್‌ ಕಾರ್ಡ್‌ ಮತ್ತು ಆಧಾರ್‌ ಕಾರ್ಡ್‌ನ ಲಿಂಕ್‌ಗೆ ಗಡುವನ್ನು ವಿಸ್ತರಿಸಿದೆ. ಇಲ್ಲಿಯವರೆಗೆ ಈಗಾಗಲೇ ನಾಲ್ಕು ಬಾರಿ ಗಡುವನ್ನು ವಿಸ್ತರಿಸಿದೆ. ಇಷ್ಟೆಲ್ಲಾ ಸಮಯ ವಿಸ್ತರಿಸಿದರೂ ಸಹ ಜನಸಾಮಾನ್ಯರು ಇನ್ನೂ ಗಡುವಿನ ವಿಸ್ತರಣೆಯ ಬಗ್ಗೆ ಆಲೋಚಿಸುತ್ತಲೇ ಇದ್ದಾರೆ.


ದಂಡ, ಪರಿಣಾಮಗಳನ್ನು ತಪ್ಪಿಸಲು ಇಂದೇ ಲಿಂಕ್‌ ಮಾಡಿ


ನಿಗದಿತ ಗಡುವಿನವರೆಗೂ ನೀವು ಲಿಂಕ್ ಮಾಡಲು ಸಾಧ್ಯವಾಗದಿದ್ದರೆ, ವ್ಯಕ್ತಿಗಳ ಪಾನ್ ನಿಷ್ಕ್ರಿಯಗೊಳ್ಳುತ್ತದೆ ಎಂದು ಇಲಾಖೆ ಎಚ್ಚರಿಸಿದೆ. ಮಾರ್ಚ್ 31 ರೊಳಗೆ ಲಿಂಕ್ ಮಾಡದಿದ್ದರೆ, ಅಸ್ತಿತ್ವದಲ್ಲಿರುವ ಪಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ.


ಇದನ್ನೂ ಓದಿ: ರಾಹುಲ್ ಗಾಂಧಿ ಅನರ್ಹಗೊಂಡ ಬೆನ್ನಲ್ಲೇ ಬಹಿರಂಗವಾಗಿ ಕ್ಷಮೆಯಾಚಿಸಿದ ಮತ್ತೋರ್ವ ‘ಕೈ’ ಮುಖಂಡ! ಯಾಕೆ ಗೊತ್ತಾ?


ಆ ನಂತರವೂ ಅದನ್ನು ಬಳಸಲು ಯತ್ನಿಸಿದರೆ ದಂಡ ವಿಧಿಸಲಾಗುತ್ತದೆ. ಇಂತಹ ತಪ್ಪು ಪುನರಾವರ್ತಿತವಾದ್ರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ.


top videos    ಇದರ ಜೊತೆಗೆ ಬ್ಯಾಂಕ್‌ ಹಣ, ಹೊಸ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಪಡೆಯಲು, ತೆರಿಗೆ ಪ್ರಯೋಜನ, ವಹಿವಾಟು ಹೀಗೆ ಹಲವು ಕ್ಷೇತ್ರಗಳಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ.

    First published: