ನೀವು ಪಿಪಿಎಫ್ (PPF) , ರಾಷ್ಟ್ರೀಯ ಉಳಿತಾಯ ಯೋಜನೆ (National Pension Scheme) , ಎಂಐಎಸ್ (MIS) , ಸುಕನ್ಯಾ ಸಮೃದ್ಧಿ (Sukanya Sammriddhi) ಯೋಜನೆಗಳಲ್ಲಿ ಹೂಡಿಕೆ (Invest) ಮಾಡಿದ್ದೀರಾ? ಹಾಗಾದರೆ ನೀವು ಈ ಸುದ್ದಿಯನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಈ ಯೋಜನೆಗಳ ಮೇಲಿನ ಬಡ್ಡಿದರದಲ್ಲಿ ಶೇ 1 ರಷ್ಟು ಹೆಚ್ಚಳವನ್ನು ಸರ್ಕಾರ (Government) ಘೋಷಿಸಿದೆ. ಹಣಕಾಸು ಸಚಿವಾಲಯದ ಅಧಿಸೂಚನೆಯ ಪ್ರಕಾರ, ಜನವರಿ 2023 ರ ಮೊದಲ ತ್ರೈಮಾಸಿಕಕ್ಕೆ ಅಂದರೆ ಜನವರಿಯಿಂದ ಮಾರ್ಚ್ವರೆಗೆ ಸಣ್ಣ ಉಳಿತಾಯ ಯೋಜನೆಯ ಬಡ್ಡಿ ದರವನ್ನು 0.20 ರಿಂದ 1.10 ರಷ್ಟು ಹೆಚ್ಚಿಸಲಾಗಿದೆ. ಈ ಕಾರಣದಿಂದಾಗಿ, ಸಣ್ಣ ಉಳಿತಾಯ ಯೋಜನೆಯಲ್ಲಿ ಬಡ್ಡಿದರವು ಇನ್ನು ಮುಂದೆ ಶೇಕಡಾ 4.0 ಮತ್ತು 7.6 ರ ನಡುವೆ ಇರುತ್ತದೆ.
ಯಾವ ಯೋಜನೆಯಲ್ಲಿ ಎಷ್ಟು ಬಡ್ಡಿ ಲಭ್ಯ?
ಸರ್ಕಾರವು 1 ವರ್ಷ, 2 ವರ್ಷ, 3 ವರ್ಷ, 5 ವರ್ಷಗಳ ಠೇವಣಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ. ಇದಲ್ಲದೇ ಹಿರಿಯ ನಾಗರಿಕರ ಉಳಿತಾಯ ಯೋಜನೆ, ಮಾಸಿಕ ಆದಾಯ ಯೋಜನೆಯ ಬಡ್ಡಿ ದರವನ್ನೂ ಹೆಚ್ಚಿಸಲಾಗಿದೆ. ಆದರೆ, ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿ ದರವನ್ನು ನಿಗದಿಪಡಿಸಲಾಗಿದೆ. ಈ ಯೋಜನೆಯ ಬಡ್ಡಿ ದರವನ್ನು ಬದಲಾಯಿಸಲಾಗಿಲ್ಲ. ಒಂದು ವರ್ಷದ ಅವಧಿಯ ಠೇವಣಿ ದರವನ್ನು ಶೇ.6.6ಕ್ಕೆ ಹೆಚ್ಚಿಸಲಾಗಿದೆ. 2 ವರ್ಷಗಳ ಕಾಲ ಠೇವಣಿ ಮೊತ್ತವನ್ನು ಶೇ.6.8ಕ್ಕೆ ಹೆಚ್ಚಿಸಲಾಗಿದೆ.
3 ವರ್ಷದ ಅವಧಿಯ ಠೇವಣಿ ದರವನ್ನು ಶೇ 6.9ಕ್ಕೆ ಹೆಚ್ಚಿಸಲಾಗಿದೆ. 5 ವರ್ಷಗಳ ಅವಧಿಯ ಠೇವಣಿ ಶೇಕಡಾ 7 ಕ್ಕೆ ಏರಿಕೆಯಾಗಿದೆ ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಬಡ್ಡಿ ದರವನ್ನು ಶೇ 8ಕ್ಕೆ ಹೆಚ್ಚಿಸಲಾಗಿದೆ. ಮಾಸಿಕ ಆದಾಯ ಯೋಜನೆಯ ಬಡ್ಡಿ ದರವನ್ನು ಶೇ.7.1ಕ್ಕೆ ಹೆಚ್ಚಿಸಲಾಗಿದೆ. ಕಿಸಾನ್ ಬಿಕಾಶ್ ಪತ್ರದ ಮೇಲಿನ ಬಡ್ಡಿ ದರವನ್ನು ಶೇ.7.2ಕ್ಕೆ ಹೆಚ್ಚಿಸಲಾಗಿದೆ. ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರದ ಮೇಲಿನ ಬಡ್ಡಿ ದರವನ್ನು ಶೇ.7ಕ್ಕೆ ಹೆಚ್ಚಿಸಲಾಗಿದೆ.
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೆಚ್ಚಿನ ಬಡ್ಡಿ!
ಎನ್ಎಸ್ಸಿಯನ್ನು ಶೇ 7ರ ಬಡ್ಡಿದರದಂತೆ 20 ಮೂಲ ಅಂಶಗಳನ್ನು ಹೆಚ್ಚಿಸಲಾಗಿದೆ. ಹೆಣ್ಣುಮಕ್ಕಳಿಗಾಗಿ ಇರುವ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿನ ಶೇ 7.6ರ ಬಡ್ಡಿದರವನ್ನು ಉಳಿಸಿಕೊಳ್ಳಲಾಗಿದೆ. ಉಳಿತಾಯ ಠೇವಣಿಯು ವಾರ್ಷಿಕ ಶೇ 4ರಷ್ಟು ಬಡ್ಡಿದರವನ್ನು ಉಳಿಸಿಕೊಂಡಿದೆ.
ಇದನ್ನೂ ಓದಿ: ಮಕ್ಕಳ PPF ಖಾತೆಗೆ ತಂದೆ-ತಾಯಿ ಹಣ ಡೆಪಾಸಿಟ್ ಮಾಡ್ಬಹುದಾ? ಏನ್ ಹೇಳುತ್ತೆ ರೂಲ್ಸ್ ನೀವೇ ನೋಡಿ
ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಪಬ್ಲಿಕ್ ಪ್ರಾವಿಡೆಂಡ್ ಫಂಡ್ ಒಂದಕ್ಕಿಂತ ಹೆಚ್ಚು ಖಾತೆಗಳನ್ನು ತೆರೆಯಲಾಗುವುದಿಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕು. ಪಬ್ಲಿಕ್ ಪ್ರಾವಿಡೆಂಡ್ ಫಂಡ್ ಯೋಜನೆ, 2019 ರ ಅಡಿಯಲ್ಲಿ ಅಪ್ರಾಪ್ತ ಮಗುವಿನ PPF ಖಾತೆಗೆ ಯಾವುದೇ ಪೋಷಕರು ಅಥವಾ ಪೋಷಕರಿಬ್ಬರೂ ಕೊಡುಗೆ ನೀಡುವುದಕ್ಕೆ ಯಾವುದೇ ನಿರ್ಬಂಧವಿಲ್ಲ.
ಒಂದು ಲಕ್ಷದ ಐವತ್ತು ಸಾವಿರಕ್ಕಿಂತ ಹೆಚ್ಚಿನದನ್ನು ನೀಡಬಾರದು!
ಯೋಜನೆಯು ತಿಳಿಸುವಂತೆ ಒಬ್ಬ ವ್ಯಕ್ತಿಯು ತನ್ನ ಖಾತೆಗೆ ಮತ್ತು ಅಪ್ರಾಪ್ತ ವಯಸ್ಕರ ಖಾತೆಗೆ ಒಂದು ಲಕ್ಷದ ಐವತ್ತು ಸಾವಿರಕ್ಕಿಂತ ಹೆಚ್ಚಿನದನ್ನು ನೀಡಬಾರದು. ಆದ್ದರಿಂದ ನಿಮ್ಮ ಸ್ವಂತ ಖಾತೆಗೆ ಹಣೆ ಜಮೆ ಮಾಡುವಾಗ, ನೀವು ನಿಮ್ಮ ಮಗಳ ಪಿಪಿಎಫ್ ಖಾತೆಗೆ ಸಹ ಕೊಡುಗೆ ನೀಡಬಹುದು.ಅಪ್ರಾಪ್ತ ವಯಸ್ಕರ ಪರವಾಗಿ ನಿವಾಸಿ ಭಾರತೀಯ ವ್ಯಕ್ತಿಗಳು ಮತ್ತು ವ್ಯಕ್ತಿಗಳು ಸಾರ್ವಜನಿಕ ಭವಿಷ್ಯ ನಿಧಿ (PPF) ಖಾತೆಯನ್ನು ತೆರೆಯಬಹುದು.
ಇದನ್ನೂ ಓದಿ: ಈ ಯೋಜನೆಗಳಲ್ಲಿ ಹೂಡಿಕೆ ಮಾಡಿ, ಆಮೇಲೆ ಟ್ಯಾಕ್ಸ್ ಕಟ್ಟೋ ಟೆನ್ಶನ್ ಇರಲ್ಲ!
ಅಪ್ರಾಪ್ತರ ಪರವಾಗಿ ತೆರೆಯಲಾದ ಖಾತೆಯನ್ನು ಹೊರತುಪಡಿಸಿ, ಒಬ್ಬ ವ್ಯಕ್ತಿಯಿಂದ ಕೇವಲ ಒಂದು ಸಾರ್ವಜನಿಕ ಭವಿಷ್ಯ ನಿಧಿ (PPF) ಖಾತೆಯನ್ನು ಮಾತ್ರ ನಿರ್ವಹಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ