ಮನೆಯ ಭದ್ರತೆಯ ದೃಷ್ಟಿಯಿಂದ ಟಾಟಾ ಪ್ಲೇ ಹೊಸ ಸಿಸಿ ಕ್ಯಾಮೆರಾವನ್ನು (CC Camera) ಭಾರತದ ಮಾರುಕಟ್ಟೆಗೆ ತಂದಿರುವ ವಿಚಾರ ಈಗಾಗ್ಲೇ ತಿಳಿದಿರುವಂತದ್ದು. ಕಂಟೆಂಟ್ ವಿತರಣಾ ವೇದಿಕೆ ಟಾಟಾ ಪ್ಲೇ, ಟಾಟಾ ಪ್ಲೇ ಸೆಕ್ಯೂರ್+ ಅನ್ನು ಬಿಡುಗಡೆ ಮಾಡಿದ್ದು, ಕಂಪನಿಯು (Company) ತನ್ನ ಚಂದಾದಾರರಿಗೆ (Google Nest) ಭದ್ರತಾ ಕ್ಯಾಮರಾವನ್ನು (Camera) ಪರಿಚಯಿಸಲು ಟೆಕ್ ದೈತ್ಯ ಗೂಗಲ್ ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ಟಾಟಾ ಪ್ಲೇ ಸೆಕ್ಯೂರ್ + (Tata Play Secure+) ಬಿಡುಗಡೆಯೊಂದಿಗೆ, ಕಂಪನಿಯು ತನ್ನ ಚಂದಾದಾರರಿಗೆ ಸುರಕ್ಷಿತ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ನೆರವಾಗಿದೆ. ಮಾರುಕಟ್ಟೆಯಲ್ಲಿ ಪರಿಚಯವಾದ ಟಾಟಾ ಪ್ಲೇ ಕಂಪನಿಯ ಹೊಸ ಉತ್ಪನ್ನವನ್ನು ಗ್ರಾಹಕರು ಈಗಾಗ್ಲೇ ಮೆಚ್ಚುಕೊಂಡಿದ್ದು, 4 ಸ್ಟಾರ್ ಪಾಯಿಂಟ್ ಗಳನ್ನು ನೀಡಿದ್ದಾರೆ. ಹಾಗಾದರೆ Google Nest ಭದ್ರತಾ ಹೇಗಿದೆ, ಗ್ರಾಹಕರು ಏನೆಂದಿದ್ದಾರೆ ನೋಡೋಣ.
ಜೋಡಣೆ ಸಖತ್ ಸುಲಭ
Google Nest ಕ್ಯಾಮರಾ ಬಹುಶಃ ಈಗ ಲಭ್ಯವಿರುವ ಅತ್ಯಂತ ಸುಲಭವಾದ ಆಫ್-ದಿ-ಶೆಲ್ಫ್ ಪರಿಹಾರವಾಗಿದೆ. ಗೂಗಲ್ ನೆಸ್ಟ್ ಕ್ಯಾಮೆರಾ ಜೋಡಣೆ, ಸ್ಥಾಪನೆ ಸೇರಿ ಎಲ್ಲರದರಲ್ಲೂ ಇತರೆ ಸಿಸಿ ಕ್ಯಾಮಾರಗಳಿಗಿಂತ ಉತ್ತಮವಾಗಿದೆ ಎನ್ನುತ್ತಾರೆ ಗ್ರಾಹಕರು. ಮೊದಲಿಗೆ ನೀವು ಕ್ಯಾಮೆರಾವನ್ನು ಅದರ ಮ್ಯಾಗ್ನೆಟಿಕ್ ಪರ್ಚ್‌ನಲ್ಲಿ ಇರಿಸುವ ಮುನ್ನ ಅದನ್ನು ಚಾರ್ಜ್ ಮಾಡಬೇಕು ಮತ್ತು ಹೊಂದಿಸಬೇಕು.ಹೊಂದಿಸುವಿಕೆಯು ಸುಲಭವಾಗಿದೆ ಮತ್ತು Google Home ಅಪ್ಲಿಕೇಶನ್ ಸಂಪೂರ್ಣವಾಗಿ ಇದಕ್ಕೆ ಸಹಾಯ ಮಾಡುತ್ತದೆ.
ಬೇಕಾದ ದಿಕ್ಕಿನಲ್ಲಿ ಲೆನ್ಸ್ ಹೊಂದಿಸಬಹುದು
iOS ಬಳಕೆದಾರರಿಗೆ ಸಹ ಸಂಪೂರ್ಣ ಪ್ರಕ್ರಿಯೆಯು ಸುಲಭವಾಗಿರುತ್ತದೆ. ಒಮ್ಮೆ ಸೆಟಪ್ ಮಾಡಿದ ನಂತರ, ನೀವು ಕ್ಯಾಮರಾವನ್ನು ಅದರ ಲೋಹೀಯ ಹೋಲ್ಡರ್‌ಗೆ ಅಂಟಿಸಬಹುದು ಮತ್ತು ಲೆನ್ಸ್ ಅನ್ನು ಸಹ ಹೊಂದಿಸಬಹುದು. ಕ್ಯಾಮರಾ ಮ್ಯಾಗ್ನೆಟಿಕ್ ಬೇಸ್ ಅನ್ನು ಬಳಸುವುದರಿಂದ ಕ್ಯಾಮೆರಾವನ್ನು ನಿಮಗೆ ಬೇಕಾದ ಯಾವುದೇ ದಿಕ್ಕಿನಲ್ಲಿ ಸರಿಹೊಂದಿಸಬಹುದು.
7 ದಿನ ಚಾರ್ಜ್ ಮೂಲಕ ಕೆಲಸ ಮಾಡುತ್ತದೆ ಬ್ಯಾಟರಿ
ಕ್ಯಾಮರಾ ಅಳವಡಿಸುವ ಜಾಗದಲ್ಲಿ ವಿದ್ಯುತ್ ಮೂಲ ಇಲ್ಲದಿದ್ದರೆ, ಈ ಮಾದರಿಯು ಬ್ಯಾಟರಿಯಲ್ಲಿ ಸಹ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಇಲ್ಲಿ ಗಮನಿಸಲೇಬೇಕು. ಪೂರ್ಣ ಚಾರ್ಜ್‌ನಲ್ಲಿ ಸುಮಾರು ಏಳು ದಿನಗಳವರೆಗೆ ಬ್ಯಾಟರಿ ಕೆಲಸ ಮಾಡುತ್ತದೆ. ಮತ್ತೆ ಸಂಪೂರ್ಣವಾಗಿ ಚಾರ್ಜ್ ಮಾಡಲು ಸುಮಾರು ಐದು ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಆದ್ದರಿಂದ ನೀವು ವಾರಕ್ಕೊಮ್ಮೆ ಕ್ಯಾಮರಾವನ್ನು ಚಾರ್ಜ್ ಮಾಡಲು ಹೋದರೆ, ನಿಮಗೆ ಸುಲಭವಾಗಿ ಸಿಗುವಂತಹ ಎತ್ತರದಲ್ಲಿ ಕ್ಯಾಮೆರಾವನ್ನು ಅಳವಡಿಸಿಕೊಳ್ಳುವುದು ಸೂಕ್ತವಾಗಿದೆ.
ಎಚ್ಚರಿಕೆ ಸಂದೇಶಗಳು
ಗೂಗಲ್ ನೆಸ್ಟ್ ಕ್ಯಾಮೆರಾವು ಗೂಗಲ್ ಹೋಮ್ ಆ್ಯಪ್‌ನೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಕ್ಯಾಮೆರಾವನ್ನು ಅದರ ಹೋಲ್ಡರ್‌ಗೆ ಫಿಕ್ಸ್ ಮಾಡುತ್ತಿರುವಾಗಲೂ ಸಹ ಆ್ಯಪ್‌ನಲ್ಲಿ ಮುಂಭಾಗದ ಬಾಗಿಲಿನ ಕ್ಯಾಮೆರಾದ ಮುಂದೆ 'ವ್ಯಕ್ತಿ ನೋಡಿದ್ದಾರೆ' ಎಂದು ಹೇಳುವ ಎಚ್ಚರಿಕೆಗಳು ಬರುತ್ತಿರುತ್ತವೆ. ನಾನು ಕಛೇರಿಯಲ್ಲಿ ಇಲ್ಲದಿರುವಾಗ ಅಥವಾ ಮನೆಯಲ್ಲಿ ಇಲ್ಲದಿರುವಾಗಲೂ ಸಂಪೂರ್ಣ ಪರಿಶೀಲನಾ ಅವಧಿಯವರೆಗೆ ಈ ಎಚ್ಚರಿಕೆಗಳು ಬರುತ್ತಲೇ ಇರುತ್ತವೆ ಎಂದಿದ್ದಾರೆ ಗ್ರಾಹಕರು.
ಈ ಮೂಲಕ ಒಂದು ಸೆಕೆಂಡಿನಲ್ಲಿ ಅಲರ್ಟ್ ಅನ್ನು ಟ್ಯಾಪ್ ಮಾಡಿ ಮತ್ತು ಬಾಗಿಲಲ್ಲಿ ಯಾರಿದ್ದಾರೆ ಎಂದು ನೋಡಲು ಅನುವು ಮಾಡಿಕೊಡುತ್ತದೆ ಈ ಗೂಗಲ್ ನೆಸ್ಟ್ ಕ್ಯಾಮೆರಾ.
ಇದನ್ನೂ ಓದಿ: Reliance Jio: ಜಿಯೋ ಬೆಳವಣಿಗೆಗೆ ಆಕಾಶ್ ಅಂಬಾನಿ ಕೊಡುಗೆ; ಜಾಗತಿಕವಾಗಿ ಇನ್ನಷ್ಟು ಬೆಳವಣಿಗೆ
ಎಚ್ಚರಿಕೆ ಸಂದೇಶಗಳಿಲ್ಲದಿದ್ದರೂ ಸಹ, ಗೂಗಲ್ ಹೋಮ್ ಅನ್ನು ತೆರೆಯಬಹುದು ಮತ್ತು ಕ್ಯಾಮರಾದಿಂದ ಲೈವ್ ಫೀಡ್ ಅನ್ನು ಪಡೆಯಬಹುದು. ಬಾಗಿಲಲ್ಲಿ ಯಾರಾದರೂ ಇದ್ದರೆ, ಸಾಧನವು ಸ್ಪೀಕರ್ ಮತ್ತು ಮೈಕ್ರೊಫೋನ್‌ನೊಂದಿಗೆ ಬರುವುದರಿಂದ ದೂರದಲ್ಲಿಯೂ ಉತ್ತಮವಾಗಿ ಕಾರ್ಯನಿರ್ವಹಿಸುವ ವ್ಯಕ್ತಿಯೊಂದಿಗೆ ಸಂಭಾಷಣೆ ನಡೆಸುವ ಸಾಮರ್ಥ್ಯವನ್ನು ಕ್ಯಾಮೆರಾ ನೀಡುತ್ತದೆ. ಅಪ್ಲಿಕೇಶನ್‌ನಲ್ಲಿ, ಇತಿಹಾಸವನ್ನು ಟ್ಯಾಪ್ ಮಾಡುವ ಆಯ್ಕೆಯೂ ಇದೆ ಮತ್ತು ಅದನ್ನು ಕಳೆದ ಕೆಲವು ಗಂಟೆಗಳ ಟೈಮ್‌ಲೈನ್‌ನಂತೆ ನೋಡಬಹುದಾಗಿದೆ.
ವೈ-ಫೈ ಇಲ್ಲದಿರುವಾಗ ಅಲರ್ಟ್ ಸಂದೇಶ ವಿಳಂಬ
ಮಾಹಿತಿಯ ಪ್ರಕಾರ ವೈ-ಫೈ ಸ್ಥಗಿತದ ಸಂದರ್ಭದಲ್ಲಿ ಕೆಲ ಸಮಸ್ಯೆ ಎದುರಾಗಿದೆಯಂತೆ. ವಿದ್ಯುತ್ ಇಲ್ಲದಿರುವಾಗಲೂ ಅಥವಾ ವೈ-ಫೈ ಸ್ಥಗಿತದ ಸಂದರ್ಭದಲ್ಲಿಯೂ ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದರು ಸಹ, ವೈ-ಫೈ ಇಲ್ಲದ ಸಂದರ್ಭದಲ್ಲಿ ಅಲರ್ಟ್ ಗಳು ತಡವಾಗಿ ಬರುತ್ತವೆ ಎನ್ನಲಾಗಿದೆ.
ಇದನ್ನೂ ಓದಿ: Electric Cycle Subsidy: ಎಲೆಕ್ಟ್ರಿಕ್ ಸೈಕಲ್ ಕೊಂಡುಕೊಳ್ಳಿ, ಜೊತೆಗೆ 7500 ಹಣ ಪಡೆಯಿರಿ! ನಿಜ ರೀ ಸುಳ್ಳಲ್ಲ
Google Nest ಕ್ಯಾಮರಾವು ರೂ. 11,999 ಆಫರ್ ಬೆಲೆಯಲ್ಲಿ ಬರುತ್ತದೆ, ಅದರ ಮೇಲೆ ನೀವು ಟಾಟಾ ಪ್ಲೇ ಸೆಕ್ಯೂರ್+ ನಿಂದ Nest Aware ಚಂದಾದಾರಿಕೆಗಾಗಿ ಕ್ಯಾಮರಾಗಳ ಸಂಖ್ಯೆಯನ್ನು ಅವಲಂಬಿಸಿ ವಾರ್ಷಿಕ ಶುಲ್ಕ 3000 ರೂ.ಗಳನ್ನು ಪಾವತಿಸಬೇಕಾಗುತ್ತದೆ. ಒಟ್ಟಾರೆ ಮನೆಯ ಸುರಕ್ಷತೆಯ ಬಗ್ಗೆ ಕಣ್ಣಿಡಲು ಹೂಡಿಕೆ ಮಾಡಬಹುದಾದ ಪರಿಪೂರ್ಣ ಸಾಧನವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ