ಆಲ್ಫಾಬೆಟ್ ಇಂಕ್ (Alphabet Ink) ತನ್ನ ಇತ್ತೀಚಿನ ಚಾಟ್‌ಬಾಟ್ (Chatbot) ಪ್ರಚಾರ ವಿಡಿಯೋದಲ್ಲಿ ತಪ್ಪಾದ ಮಾಹಿತಿಯನ್ನು ಹಂಚಿಕೊಂಡ ಕಾರಣ $100 ಶತಕೋಟಿ ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಂಡಿದೆ ಹಾಗೂ ಬಳಕೆದಾರರ ಆಕರ್ಷಣೆಯನ್ನು ಗಿಟ್ಟಿಸುವಲ್ಲಿ ವಿಫಲವಾಗಿದೆ ಎಂದು ವರದಿಯಾಗಿದೆ. ಇದರಿಂದ ಗೂಗಲ್‌ನ ಪೇರೆಂಟ್ ಕಂಪನಿ ತನ್ನ ಪ್ರತಿಸ್ಪರ್ಧಿ ಮೈಕ್ರೋಸಾಫ್ಟ್ (Microsoft0 ಮುಂದೆ ಮಂಡಿಯೂರಲಿದೆಯೇ ಎಂಬ ಅನುಮಾನವನ್ನು ಈ ಸನ್ನಿವೇಶ ಹುಟ್ಟುಹಾಕಿದೆ.
ಕಳೆದ ವರ್ಷ 40% ಷೇರು ನಷ್ಟ
ಆಲ್ಫಾಬೆಟ್ ಷೇರುಗಳು ನಿಯಮಿತ ವಹಿವಾಟಿನ ಸಮಯದಲ್ಲಿ ಮೂರು ಪಟ್ಟು ಹೆಚ್ಚು ಹಿನ್ನಡೆಯನ್ನು ಕಂಡುಕೊಂಡಿದ್ದು 9%ದಷ್ಟು ಇಳಿಕೆ ಕಂಡಿದೆ. ಸಂಸ್ಥೆಯು ಗಂಟೆಗಳವರೆಗೆ ಅದೇ ಬೆಳವಣಿಗೆಯಲ್ಲಿದ್ದು ನಂತರ ತಟಸ್ಥಗೊಂಡಿತು. ಕಳೆದ ವರ್ಷ ಸ್ಟಾಕ್ ತನ್ನ ಮೌಲ್ಯದ 40% ಪಾಲನ್ನು ಕಳೆದುಕೊಂಡಿತು ಹಾಗೂ ಈ ನಷ್ಟವನ್ನು ಹೊರತುಪಡಿಸಿ 15% ಏರಿಕೆಯನ್ನು ದಾಖಲಿಸಿರುವುದು ಮಹತ್ವದ ಅಂಶವಾಗಿದೆ.
ಯಾವ ಉಪಗ್ರಹವು ಭೂಮಿಯ ಸೌರವ್ಯೂಹದ ಹೊರಗಿನ ಗ್ರಹದ ಚಿತ್ರಗಳನ್ನು ತೆಗೆದುಕೊಂಡಿತು ಎಂಬ ಚಾಟ್‌ಬೋಟ್ ಬಾರ್ಡ್‌ನ ಜಾಹೀರಾತಿನಲ್ಲಿದ್ದ ಪ್ರಶ್ನೆಯಲ್ಲಿ ದೋಷವನ್ನು ರಾಯಿಟರ್ಸ್ ಮೊದಲು ವರದಿ ಮಾಡಿದೆ.
ಗೂಗಲ್‌ಗೆ ಸ್ಪರ್ಧೆಯನ್ನೊಡ್ಡಿರುವ ಮೈಕ್ರೋಸಾಫ್ಟ್
ಗೂಗಲ್ ತನ್ನ ಓಪನ್ ಕೃತಕ ಬುದ್ಧಿಮತ್ತೆಯನ್ನು ಇನ್ನಷ್ಟು ಪ್ರಖರಗೊಳಿಸುವತ್ತ ಗಮನ ಹರಿಸಿದ್ದು, ಸರಳ ಪ್ರಶ್ನೆಗಳಿಗೆ ನಿಖರ ಉತ್ತರವನ್ನು ನೀಡುವ ಮೂಲಕ ಗ್ರಾಹಕರನ್ನು ಬೆರಗುಗೊಳಿಸಿದೆ ಹಾಗೂ ಇದೇ ಯೋಜನೆಯನ್ನು ಆರಂಭಿಸಿರುವ ಮೈಕ್ರೋಸಾಫ್ಟ್ ಸರಿಸುಮಾರು $10 ಬಿಲಿಯನ್ ಹೂಡಿಕೆ ಕೂಡ ಮಾಡಿದೆ ಎಂಬುದಾಗಿ ವರದಿಯಾಗಿದೆ.
ಚಾಟ್‌ಜಿಪಿಟಿ ಯೋಜನೆಯಲ್ಲಿ ಮುಂದಿರುವ ಮೈಕ್ರೋಸಾಫ್ಟ್
Google ನ ಲೈವ್-ಸ್ಟ್ರೀಮ್ ಪ್ರಸ್ತುತಿಯು ಬಾರ್ಡ್ ಬಗ್ಗೆ ವಿವರವಾದ ಮಾಹಿತಿಗಳು ದಾಖಲಾಗಿಲ್ಲ ಎಂದು ವರದಿಯಾಗಿದೆ. ಹುಡುಕಾಟ ಕಾರ್ಯದಲ್ಲಿ ಹೇಗೆ ಮತ್ತು ಯಾವಾಗ ಸಂಯೋಜಿಸುತ್ತದೆ ಎಂಬುದರ ಕುರಿತು ವಿವರಗಳನ್ನು ಒಳಗೊಂಡಿಲ್ಲ ಎಂದು ತಿಳಿಸಲಾಗಿದೆ. ಇದಕ್ಕೂ ಮುನ್ನ ಮೈಕ್ರೋಸಾಫ್ಟ್ ಈವೆಂಟ್ ಒಂದರಲ್ಲಿ ಚಾಟ್‌ಜಿಪಿಟಿ ಫಂಕ್ಶನ್‌ಗಳೊಂದಿಗೆ ಬಿಂಗ್ ಸರ್ಚ್ ಅನ್ನು ಸಂಯೋಜಿಸಿ ಸಾರ್ವಜನಿಕವಾಗಿ ಬಿಡುಗಡೆ ಮಾಡಿದೆ ಎಂದು ಹೇಳಿಕೆ ನೀಡಿದೆ.
ಮೈಕ್ರೋಸಾಫ್ಟ್ ಷೇರುಗಳು 3% ದಷ್ಟು ಏರಿಕೆ
ಮೌಂಟೇನ್ ವ್ಯೂ, ಕ್ಯಾಲಿಫೋರ್ನಿಯಾದಲ್ಲಿ ಗೂಗಲ್ ಪ್ರಸ್ತುತಿಯ ಮೊದಲು ಬಾರ್ಡ್ ದೋಷವನ್ನು ಕಂಡುಹಿಡಿಯಲಾಯಿತು. ಕಳೆದ ಹಲವಾರು ವರ್ಷಗಳಿಂದ AI ಆವಿಷ್ಕಾರದಲ್ಲಿ Google ಮುಂಚೂಣಿಯಲ್ಲಿದ್ದರೂ, ಈ ತಂತ್ರಜ್ಞಾನವನ್ನು ತಮ್ಮ ಹುಡುಕಾಟ ಉತ್ಪನ್ನದಲ್ಲಿ ಅಳವಡಿಸುವಲ್ಲಿ ನಿಧಾನರಾಗಿದ್ದಾರೆ ಎಂದು ಹಿರಿಯ ಸಾಫ್ಟ್‌ವೇರ್ ವಿಶ್ಲೇಷಕ ಗಿಲ್ ಲೂರಿಯಾ ತಿಳಿಸಿದ್ದಾರೆ.
ಇದೇ ಸಮಯದಲ್ಲಿ ಮೈಕ್ರೋಸಾಫ್ಟ್ ಷೇರುಗಳು 3% ದಷ್ಟು ಏರಿಕೆಯಾಗಿದ್ದು ಪೋಸ್ಟ್ ಮಾರ್ಕೆಟ್ ಟ್ರೇಡ್‌ನಲ್ಲಿ ಸಮಸ್ಥಿತಿಯಲ್ಲಿದೆ. ಆಲ್ಫಾಬೆಟ್ ಟ್ವಿಟರ್ ಮೂಲಕ ಬಾರ್ಡ್‌ನ ಸಣ್ಣ GIF ವೀಡಿಯೊವನ್ನು ಪೋಸ್ಟ್ ಮಾಡಿದ್ದು ಈ ವಿಧಾನವು ಸಂಕೀರ್ಣ ವಿಷಯಗಳನ್ನು ಸರಳಗೊಳಿಸಲು ಸಹಾಯ ಮಾಡುತ್ತದೆ ಎಂಬ ಭರವಸೆ ನೀಡಿದೆ ಆದರೆ ತಪ್ಪು ಉತ್ತರವನ್ನು ನೀಡಿ ಮುಜುಗರವನ್ನುಂಟು ಮಾಡಿದೆ.
ಅಸಾಧಾರಣ ಸ್ಪರ್ಧಿ
ಜಾಹೀರಾತುದಾರರು ಖರ್ಚನ್ನು ಕಡಿತಗೊಳಿಸಿರುವುದರಿಂದ ಆಲ್ಫಾಬೆಟ್ ನಾಲ್ಕನೇ ತ್ರೈಮಾಸಿಕದಲ್ಲಿ ನಿರಾಶೆಯನ್ನು ಅನುಭವಿಸಿದೆ. ಹುಡುಕಾಟ ಮತ್ತು ಜಾಹೀರಾತು ದೈತ್ಯ OpenAI ಮತ್ತು ಪ್ರತಿಸ್ಪರ್ಧಿಗಳೊಂದಿಗೆ ಸ್ಪರ್ಧೆಯಲ್ಲಿದ್ದು ಸಂಸ್ಥಾಪಕರಾದ ಸೆರ್ಗೆ ಬ್ರಿನ್ ಮತ್ತು ಲ್ಯಾರಿ ಪೇಜ್ ಅವರನ್ನು ಮರಳಿ ಕರೆತರುತ್ತದೆ ಎಂದು ವರದಿಯಾಗಿದೆ.
ಗೂಗಲ್‌ಗೆ ಕಠಿಣ ಪೈಪೋಟಿಯನ್ನೊಡ್ಡಲು ಮೈಕ್ರೋಸಾಫ್ಟ್ ಹೇಗೆ ಸಜ್ಜಾಗಿದೆ ಮತ್ತು ನಿಜವಾಗಿಯೂ ಇದು ಪ್ರತಿಸ್ಪರ್ಧಿಯಾಗಲಿದೆಯೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ ಎಂದು ಆಲ್ಫಾಬೆಟ್ ಮತ್ತು ಮೈಕ್ರೋಸಾಫ್ಟ್ ಷೇರುಗಳನ್ನು ಹೊಂದಿರುವ ಬೇಕರ್ ಅವೆನ್ಯೂ ವೆಲ್ತ್ ಮ್ಯಾನೇಜ್‌ಮೆಂಟ್‌ನ ಮುಖ್ಯ ತಂತ್ರಜ್ಞ ಕಿಂಗ್ ಲಿಪ್ ತಿಳಿಸಿದ್ದಾರೆ.
ಹೊಸ ಚಾಟ್‌ಜಿಪಿಟಿ ಸಾಫ್ಟ್‌ವೇರ್ ಇತ್ತೀಚಿನ ವಾರಗಳಲ್ಲಿ ಹತ್ತಾರು ಉದ್ಯೋಗ ಕಡಿತಗಳ ನಂತರ ತಂತ್ರಜ್ಞಾನ ಸಂಸ್ಥೆಗಳಿಗೆ ಉತ್ಸಾಹವನ್ನು ತುಂಬಿದೆ ಎಂಬುದಾಗಿ ರಾಯಿಟರ್ಸ್ ವರದಿ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ