• Home
  • »
  • News
  • »
  • business
  • »
  • Startup: ಮಹಿಳಾ ನೇತೃತ್ವದ 20 ಸ್ಟಾರ್ಟಪ್‌ಗಳ ಹೆಸರು ಪ್ರಕಟಿಸಿದ ಗೂಗಲ್ ಇಂಡಿಯಾ, ಹೆಣ್ಮಕ್ಕಳೇ ಸ್ಟ್ರಾಂಗು ಗುರೂ!

Startup: ಮಹಿಳಾ ನೇತೃತ್ವದ 20 ಸ್ಟಾರ್ಟಪ್‌ಗಳ ಹೆಸರು ಪ್ರಕಟಿಸಿದ ಗೂಗಲ್ ಇಂಡಿಯಾ, ಹೆಣ್ಮಕ್ಕಳೇ ಸ್ಟ್ರಾಂಗು ಗುರೂ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಜೂನ್‌ (June) ನಲ್ಲಿ ಮೊದಲು ಘೋಷಣೆಗೊಂಡ, ಗೂಗಲ್ ಇಂಡಿಯಾ (Google India) ದ ಎಕ್ಲರೇಟರ್ ಪ್ರೋಗ್ರಾಮ್ ಮಹಿಳಾ ನೇತೃತ್ವದ ಸ್ಟಾರ್ಟಪ್‌ (A Women-led Startup) ಗಳ 20 ಆಯ್ದ ಸಂಸ್ಥೆಗಳ ಹೆಸರನ್ನು ಬಹಿರಂಗಗೊಳಿಸಿದೆ.

  • Share this:

ಜೂನ್‌ (June) ನಲ್ಲಿ ಮೊದಲು ಘೋಷಣೆಗೊಂಡ, ಗೂಗಲ್ ಇಂಡಿಯಾ (Google India) ದ ಎಕ್ಲರೇಟರ್ ಪ್ರೋಗ್ರಾಮ್ ಮಹಿಳಾ ನೇತೃತ್ವದ ಸ್ಟಾರ್ಟಪ್‌ (A Women-led Startup) ಗಳ 20 ಆಯ್ದ ಸಂಸ್ಥೆಗಳ ಹೆಸರನ್ನು ಬಹಿರಂಗಗೊಳಿಸಿದೆ. ಗೂಗಲ್ ಇಂಡಿಯಾದ ಎಕ್ಲರೇಟರ್ ಪ್ರೋಗ್ರಾಮ್ ಮಹಿಳಾ ಸ್ಟಾರ್ಟಪ್ ಸ್ಥಾಪಕರ ಅನನ್ಯ ಅಗತ್ಯಗಳಿಗೆ ಅನುಗುಣವಾಗಿ ವಿಷಯ ಮತ್ತು ಮಾರ್ಗದರ್ಶನವನ್ನು ನೀಡುವ ವಿವರಗಳೊಂದಿಗೆ, ಜಾಗತಿಕ ಸಮುದಾಯ ( Global Community) ದೊಂದಿಗೆ ನೆಟ್‌ವರ್ಕ್ (Network) ಮಾಡುವ ಅವಕಾಶಗಳನ್ನು ಒದಗಿಸುತ್ತದೆ. 400 ಅಪ್ಲಿಕೇಶನ್‌ಗಳಿಂದ ಈ 20 ಆಯ್ದ ಸ್ಟಾರ್ಟಪ್‌ಗಳನ್ನು ಆಯ್ಕೆಮಾಡಲಾಗಿದೆ.


ಗೂಗಲ್ ಈ ಪ್ರೋಗ್ರಾಮ್ ಅನ್ನು ನಿರ್ದಿಷ್ಟವಾಗಿ ಮಹಿಳಾ ಸಂಸ್ಥಾಪಕರಿಗಾಗಿಯೇ ವಿನ್ಯಾಸಗೊಳಿಸಿದ್ದು, ಮಹಿಳೆಯರಿಗೆ ಪಾಲ್ಗೊಳ್ಳಲು ಕಷ್ಟಕರವೆಂದೆನಿಸಿರುವ ನೆಟ್‌ವರ್ಕ್‌ಗಳನ್ನು ಬಳಸಲು ಸಹಕಾರ ನೀಡುವುದು, ಬಂಡವಾಳ ಒದಗಿಸುವುದು, ನೇಮಕಾತಿ ಸವಾಲುಗಳನ್ನು ನಿವಾರಿಸುವುದು ಹೀಗೆ ಸಾಮಾಜಿಕ ಪಕ್ಷಪಾತ ಹಾಗೂ ಪ್ರಸ್ತುತಿಗಳ ಕೊರತೆಯನ್ನು ಎದುರಿಸುತ್ತಿರುವ ಮಹಿಳೆಯರಿಗೆ ಬೆಂಬಲವನ್ನೊದಗಿಸುವ ಗುರಿಯನ್ನು ಹೊಂದಿದೆ.


ಯುಎಕ್ಸ್, ಆ್ಯಂಡ್ರಾಯ್ಡ್, ಕ್ಲೌಡ್, ವೆಬ್, ಉತ್ಪನ್ನ ತಂತ್ರ, ಬೆಳವಣಿಗೆಯ ವಿಷಯಗಳ ಕುರಿತು ಮಹಿಳೆಯರಿಗೆ ಕಾರ್ಯಾಗಾರಗಳನ್ನು ಈ ಪೋಗ್ರಾಮ್ ಒಳಗೊಂಡಿರುತ್ತದೆ ಎಂಬುದು ಸುದ್ದಿಮೂಲಗಳು ತಿಳಿಸಿವೆ. ಸ್ಟಾರ್ಟಪ್‌ಗಳ ಪೂರ್ಣ ಪಟ್ಟಿಯು ಮಹಿಳೆಯರನ್ನು ಬೆಂಬಲಿಸುವ ಆಶಯಗಳನ್ನು ಹೊಂದಿರುವ ಸಂಸ್ಥೆಗಳ ವಿವರಗಳನ್ನು ಒಳಗೊಂಡಿದೆ.


1) ಏಸ್ಪೈರ್ ಹರ್: ಸ್ಟಾರ್ಟಪ್ ಸಂಸ್ಥೆಯು , ಸಮುದಾಯಗಳು ಮತ್ತು ನೆಟ್‌ವರ್ಕ್‌ಗಳ ಶಕ್ತಿಯನ್ನು ಬಳಸಿಕೊಂಡು 2025 ರ ವೇಳೆಗೆ ಒಂದು ಮಿಲಿಯನ್ ಉದ್ಯೋಗಿಗಳನ್ನು ಒಟ್ಟಾಗಿಸುವ ಧ್ಯೇಯವನ್ನು ಹೊಂದಿದೆ.


2) ಬ್ರೌನ್ ಲಿವಿಂಗ್ ಸಂಸ್ಥೆಯು ಪರಿಸರ ಸ್ನೇಹಿ ವಾತಾವರಣವನ್ನು ಒದಗಿಸುವ ಮೂಲಕ ಸುಲಭ ಹಾಗೂ ಹೆಚ್ಚು ಸಮರ್ಥನೀಯ ಜೀವನವನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ.


ಇದನ್ನೂ ಓದಿ: ಕರ್ನಾಟಕದೆಲ್ಲೆಡೆ ಖರ್ಜೂರದ ಸಿಹಿ ಹಂಚುತ್ತಿರುವ ಆದರ್ಶ ರೈತನ ಯಶಸ್ಸಿನ ಕಥೆಯಿದು!


3) ಕೊಲರ್ನ್ ಎಜ್ಯುಕೇಶನ್ ಸಮುದಾಯ ವೇದಿಕೆಯನ್ನು ನಿರ್ಮಿಸುವ ಮೂಲಕ ವೃತ್ತಿಜೀವನವನ್ನು ಸುಧಾರಣೆಯತ್ತ ಕೊಂಡೊಯ್ಯುವವರಿಗೆ ಸಹಕಾರ ನೀಡುತ್ತದೆ.


4) ಕಮ್ಯುಡಲ್ ಸಂಸ್ಥೆಯು ಡೆವಲಪರ್ ಪ್ರೋಗ್ರಾಮ್‌ಗಳಿಗೆ ಸಮುದಾಯ ಪ್ಲ್ಯಾಟ್‌ಫಾರ್ಮ್‌ಗಳನ್ನು ನಿರ್ಮಿಸುತ್ತದೆ


5) ಡಬ್‌ವರ್ಸ್ ಸ್ಟಾರ್ಟಪ್ ಸಂಸ್ಥೆಯು ವಿಡಿಯೋ ಡಬ್ಬಿಂಗ್ ತಂತ್ರಜ್ಞಾನವನ್ನು ಬಳಸಿಕೊಂಡು 30 ಕ್ಕಿಂತ ಹೆಚ್ಚಿನ ಭಾಷೆಗಳನ್ನು ಸುಧಾರಿಸುವ ಕೌಶಲ್ಯವನ್ನು ಹೊಂದಿದೆ.


6) ಎಲ್ಟಾ ಹೆಲ್ತ್ ಸಂಸ್ಥೆಯು ಮಹಿಳೆಯರ ಆರೋಗ್ಯಕಾಳಜಿಯ ಗುರಿ ಹೊಂದಿದೆ ಹಾಗೂ


7) ಫಿಟ್‌ಬೋಟ್ಸ್ ಕಾರ್ಯನಿರ್ವಾಹಕರು ತಮ್ಮ ತಂಡಗಳೊಂದಿಗೆ ಉದ್ದೇಶ ಹಾಗೂ ಪ್ರಮುಖ ಫಲಿತಾಂಶಗಳನ್ನು ನಿರ್ಮಿಸಲು ಮತ್ತು ಜೋಡಿಸಲು ಸಹಾಯ ಮಾಡುತ್ತದೆ.


8) ಫ್ರಿಸ್ಟ್ಯಾಂಡ್ ಬಿ2ಬಿ ಮಾರ್ಕೆಟ್‌ಪ್ಲೇಸ್ ಆಗಿದ್ದು ಗ್ರಾಹಕರಿಗೆ ಸರಕುಗಳನ್ನು ವೇಗವಾಗಿ ತಲುಪಿಸುವ ವಿಧಾನಗಳತ್ತ ದೃಷ್ಟಿ ನೆಟ್ಟಿರುವ ಸಂಸ್ಥೆಯಾಗಿದೆ.


9) ಜಂಪಿಂಗ್ ಮೈಂಡ್ಸ್ ಆನ್‌ಲೈನ್ ಸಮುದಾಯ ಸಂಸ್ಥೆಯಾಗಿದ್ದು ಒತ್ತಡವನ್ನು ನಿವಾರಿಸುವ ಆಶಯವನ್ನು ಹೊಂದಿದೆ.


10) ಎಲ್‌ಎಕ್ಸ್‌ಮಿ (LXME) ಭಾರತದ ಪ್ರಥಮ ನಿಯೋಬ್ಯಾಂಕ್ ಆಗಿದ್ದು ಮಹಿಳೆಯರಿಗೆ ಗುರಿಗಳ ಕಡೆಗೆ ಸ್ವತಂತ್ರ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವರಿಗೆ ಅಧಿಕಾರ ನೀಡುವ ಧ್ಯೇಯ ಹೊಂದಿದೆ.


ಇದನ್ನೂ ಓದಿ: ಹೂಡಿಕೆ ಕಮ್ಮಿ-ಲಾಭ ಹೆವ್ವಿ! ಜನಸಾಮಾನ್ಯರಿಗೆ ಹೇಳಿ ಮಾಡಿಸಿದ ಬ್ಯುಸಿನೆಸ್​ ಇದು


11) ಮಿಮೆರಕಿ ಎಂಬ ಸಂಸ್ಥೆಯು ಗ್ರಾಮೀಣ ಕುಶಲಕರ್ಮಿಗಳಿಗೆ ಡಿಜಿಟಲ್ ಸೃಷ್ಟಿಕರ್ತರಾಗಲು ವೇದಿಕೆಯನ್ನೊದಗಿಸುತ್ತದೆ.


12) ಮಿಶ್ರಿ ಆನ್‌ಲೈನ್ ಮೂಲಕ ಉತ್ಪನ್ನ ವಿಮರ್ಶೆಯನ್ನು ಒದಗಿಸುತ್ತದೆ.


13) ಓಪೆಡ್ ಆಡಿಯೋ ಭಾಷಾ ಆಡಿಯೋ ಅಪ್ಲಿಕೇಶನ್ ಆಗಿದ್ದು ಸುದ್ದಿ ಹಾಗೂ ಪ್ರಚಲಿತ ವಿದ್ಯಮಾನಗಳ ವಿವರಗಳನ್ನು 30 ಸೆಕೆಂಡ್‌ಗಳಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಒದಗಿಸುತ್ತದೆ.


14) ಪಿಕ್‌ಮೈವರ್ಕ್ ಪ್ರತಿ ಪಾವತಿ ಸ್ವಾಧೀನ ಮಾದರಿಯ ಮೂಲಕ ಕಂಪನಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಕಂಪನಿಗಳಿಗೆ ಸಹಾಯ ಮಾಡುತ್ತದೆ.


15) ರಂಗ್‌ದೇ ಎಂಬುದು ಪಿ2ಪಿ ಸಾಮಾಜಿಕ ಹೂಡಿಕೆದಾರರನ್ನು ಸಂಪರ್ಕಿಸುವ ಸಾಲ ವೇದಿಕೆಯಾಗಿದೆ.


16) ಸ್ಯಾವೇಜ್ ಸ್ಟಾರ್ಟಪ್ ಸಂಸ್ಥೆಯು ವೈದ್ಯರು ವಿನ್ಯಾಸಗೊಳಿಸಿದ, ಪಿಸಿಓಎಸ್, ಹಾರ್ಮೋನ್ ಅಸಮತೋಲನ, ಥೈರಾಯ್ಡ್, ಋತುಬಂಧ, ತೂಕ ಮತ್ತು ಕರುಳಿನ ಆರೋಗ್ಯಕ್ಕಾಗಿ ಸಂಪೂರ್ಣ ಆರೈಕೆ ಕಾರ್ಯಕ್ರಮಗಳನ್ನು ಒದಗಿಸುತ್ತದೆ.


17) ಸ್ಪ್ರಿಂಟ್ ಸ್ಟುಡಿಯೋ ಬ್ರ್ಯಾಂಡ್ ಸಂಶೋಧಕರಿಂದ ಗ್ರಾಹಕರಿಗೆ ವೇದಿಕೆಯನ್ನು ನಿರ್ಮಿಸುತ್ತದೆ.


18) ದ ಬ್ರಿಡ್ಜ್ ಸಂಸ್ಥೆಯು ಕ್ರಿಕೆಟ್ ಅಲ್ಲದೆ ಇತರ ಭಾರತೀಯ ಕ್ರೀಡೆಗಳಿಗೆ ಮಾಧ್ಯಮ ಕವರೇಜ್ ಅನ್ನು ಒದಗಿಸುತ್ತದೆ.


19) ಟ್ರ್ಯಾಕ್ ನೌ ಶಿಕ್ಷಣ, ಸಿಬ್ಬಂದಿ, ಲಾಜಿಸ್ಟಿಕ್ಸ್ ಹಾಗೂ ಸಪ್ಲೈ ಚೈನ್ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸುತ್ತದೆ.


20) ಟ್ರೇಡಿಲ್ ಪ್ರಪಂಚದಾದ್ಯಂತದ ಆನ್‌ಲೈನ್ ವ್ಯವಹಾರಗಳಿಗೆ ಭಾರತದಿಂದ ಸಣ್ಣ ಪ್ರಮಾಣದಲ್ಲಿ ವ್ಯಾಪಾರ ಮೂಲಾಧಾರಗಳನ್ನು ಪಡೆಯಲು ಡಿಜಿಟಲ್ ವೇದಿಕೆಯನ್ನು ನಿರ್ಮಿಸುತ್ತಿದೆ.

Published by:ವಾಸುದೇವ್ ಎಂ
First published: