ಒಂದು ಚಿಕ್ಕ ಕಂಪನಿ(Company)ಯನ್ನು ನಡೆಸಿಕೊಂಡು ಹೋಗುವುದು ಎಷ್ಟೊಂದು ಜವಾಬ್ದಾರಿಯುತ ಕೆಲಸ ಮತ್ತು ಎಷ್ಟೊಂದು ಒತ್ತಡ (Tension) ವಿರುತ್ತೆ ಎಂಬುದನ್ನು ನಾವು ಊಹಿಸಿಕೊಳ್ಳಬಹುದು. ಆದರೆ ಅಂತಹ ಜವಾಬ್ದಾರಿಯನ್ನು ನಿಭಾಯಿಸುವವರು ಹೇಗೆ ತಮ್ಮ ಬಿಡುವಿಲ್ಲದ ಮತ್ತು ಒತ್ತಡದ ಕೆಲಸ(Tension job)ವನ್ನು ತುಂಬಾನೇ ಕೂಲ್ ಆಗಿ ನಿಭಾಯಿಸುತ್ತಾರೆ ಎನ್ನುವುದು ಮಾತ್ರ ಬಹುತೇಕರಿಗೆ ತಿಳಿದಿರುವುದಿಲ್ಲ. ಅದರಲ್ಲೂ ಈ ಬಹು ದೊಡ್ಡ ಕಂಪನಿಗಳಾದ ಗೂಗಲ್ (Google), ಮೈಕ್ರೋಸಾಫ್ಟ್ (Microsoft) ಮತ್ತು ಇನ್ನಿತರೆ ಕಂಪನಿಗಳಲ್ಲಿ ದೊಡ್ಡ ಸ್ಥಾನದಲ್ಲಿರುವ ವ್ಯಕ್ತಿಗಳು ಹೇಗೆ ಕೆಲಸ ಮಾಡುತ್ತಾರೆ ಮತ್ತು ಅವರು ಈ ಒತ್ತಡವನ್ನು ಹೇಗೆ ಕಡಿಮೆ ಮಾಡಿಕೊಳ್ಳುತ್ತಾರೆ ಎಂದು ತಿಳಿದುಕೊಳ್ಳಲು ಜನರಿಗೆ ತುಂಬಾನೇ ಕುತೂಹಲ ಇರುತ್ತದೆ ಅಲ್ಲವೇ?
ಹೌದು, ಬನ್ನಿ ಹಾಗಾದರೆ ಗೂಗಲ್ ಕಂಪನಿಯ ಸಿಇಒ ಆಗಿ ಕೆಲಸ ಮಾಡುತ್ತಿರುವ ಸುಂದರ್ ಪಿಚೈ ಅವರು ತಮ್ಮ ಕೆಲಸದ ಒತ್ತಡವನ್ನು ಹೇಗೆ ನಿಭಾಯಿಸುತ್ತಾರೆ ಮತ್ತು ಹೇಗೆ ವಿಶ್ರಾಂತಿ ತೆಗೆದುಕೊಳ್ಳುತ್ತಾರೆ ತಿಳಿದುಕೊಳ್ಳೋಣ ಬನ್ನಿ.
ಸುಂದರ್ ಪಿಚೈ ರಿಲ್ಯಾಕ್ಸ್ ಹೇಗೆ ಮಾಡ್ತಾರೆ ಗೊತ್ತಾ?
ಬಹುತೇಕ ಕಂಪನಿಗಳ ಸಿಇಒಗಳು ಧ್ಯಾನ ಮಾಡುವ ಮೂಲಕ ವಿಶ್ರಾಂತಿ ಪಡೆದರೆ, ಗೂಗಲ್ ಸಿಇಒ ತುಂಬಾ ಕಡಿಮೆ ಜನರಿಗೆ ತಿಳಿದಿರುವ ಅಭ್ಯಾಸವನ್ನು ಬಳಸಿಕೊಂಡು ವಿಶ್ರಾಂತಿ ಪಡೆಯಲು ಇಷ್ಟಪಡುತ್ತಾರೆ. ಯಾವುದು ಆ ಅಭ್ಯಾಸ ಅಂತೀರಾ? ಈ ವಾರ ಒಂದು ಜರ್ನಲ್ಗೆ ನೀಡಿದ ಸಂದರ್ಶನದಲ್ಲಿ, ಸುಂದರ್ ಪಿಚೈ ಅವರು ಕೆಲವೊಮ್ಮೆ ನಿದ್ರೆಯಲ್ಲದ ಗಾಢವಾದ ವಿಶ್ರಾಂತಿ ಅಭ್ಯಾಸ ಮಾಡುತ್ತಾರೆ ಎಂದು ಹೇಳಿದ್ದಾರೆ. ಇದು ಸ್ಟ್ಯಾನ್ಫೋರ್ಡ್ ನರವಿಜ್ಞಾನ ಪ್ರೊಫೆಸರ್ ಆ್ಯಂಡ್ರ್ಯೂ ಹ್ಯೂಬರ್ಮನ್ ರಚಿಸಿದ 'ಎನ್ಎಸ್ಡಿಆರ್' (ನಾನ್ ಸ್ಲೀಪ್ ಡೀಪ್ ರೆಸ್ಟ್) ಎಂಬುದರ ಸಹಾಯದಿಂದ ವಿರಮಿಸುತ್ತಾರೆ ಎಂದರ್ಥ ಎಂದು ಹೇಳಿದರು.
ಎನ್ಎಸ್ಡಿಆರ್ ಮೂಲಕ ರಿಲ್ಯಾಕ್ಸ್ ಮಾಡ್ತಾರೆ ಸುಂದರ್!
ಇದು ಒಂದು ‘ಶಾಂತ ಸ್ಥಿತಿಯನ್ನು ಸ್ವಯಂ ಪ್ರಚೋದಿಸುವುದು’ ಮತ್ತು ‘ನಮ್ಮ ಗಮನವನ್ನು ಯಾವುದಾದರೂ ಒಂದು ಕಡೆಗೆ ನಿರ್ದೇಶಿಸುವುದು’ ಎಂದು ಪಿಚೈ ಅವರು ಹೇಳುತ್ತಾರೆ. ‘ನಿದ್ರೆಯಲ್ಲದ ಗಾಢವಾದ ವಿಶ್ರಾಂತಿಯನ್ನು ಎನ್ಎಸ್ಡಿಆರ್ಗಳ ಪಾಡ್ ಕಾಸ್ಟ್ಗಳನ್ನು ಕೇಳುತ್ತಾ ಅಭ್ಯಾಸ ಮಾಡುವುದನ್ನು ನಾನು ಕಲಿತುಕೊಂಡೆ’ ಎಂದು ಪಿಚೈ ಜರ್ನಲ್ಗೆ ತಿಳಿಸಿದರು. ‘ಧ್ಯಾನ ಮಾಡಲು ಕಷ್ಟವಾದರೆ, ಯೂಟ್ಯೂಬ್ಗೆ ಹೋಗಿ ಎನ್ಎಸ್ಡಿಆರ್ ವಿಡಿಯೋವನ್ನು ಹುಡುಕಬಹುದು. ಅವು 10, 20 ಅಥವಾ 30 ನಿಮಿಷಗಳದ್ದಾಗಿರುತ್ತವೆ. ನಾನು ಸಾಂದರ್ಭಿಕವಾಗಿ ಅದನ್ನೇ ಮಾಡುತ್ತೇನೆ’ ಎಂದು ಪಿಚೈ ಹೇಳಿದರು.
ಇದನ್ನೂ ಓದಿ: ತಿಂಗಳಿಗೆ 5,000 ರೂ. Pension ಕೊಡುತ್ತೆ ಈ ಯೋಜನೆ.. ಈವರೆಗೆ 3.75 ಕೋಟಿ ಜನ ಇದರ ಫಲಾನುಭವಿಗಳು!
ಒತ್ತಡ, ಆತಂಕ ಕಡಿಮೆ ಮಾಡಲು ಸೂಕ್ತ ಉಪಾಯ!
ಹ್ಯೂಬರ್ಮನ್ ಪ್ರಕಾರ, ಎನ್ಎಸ್ಡಿಆರ್ ಜನರಿಗೆ ವಿಶ್ರಾಂತಿ ಪಡೆಯಲು, ಹೆಚ್ಚು ಸುಲಭವಾಗಿ ನಿದ್ರೆಗೆ ಜಾರಲು, ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು, ನೋವನ್ನು ಕಡಿಮೆ ಮಾಡಲು ಮತ್ತು ಕಲಿಕೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ. ಇದನ್ನು ಸಾಮಾನ್ಯವಾಗಿ ಹ್ಯೂಬರ್ಮನ್ 'ಎನ್ಎಸ್ಡಿಆರ್ ಪ್ರೋಟೋಕಾಲ್ಸ್: ಯೋಗ ನಿದ್ರಾ ಮತ್ತು ಹಿಪ್ನೋಸಿಸ್' ಎಂದು ಸಹ ಕರೆಯುತ್ತಾರೆ.
ಇದನ್ನೂ ಓದಿ: Amazon, Netflix, Tesla ದಂತಹ ಅಮೆರಿಕಾದ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡೋದು ಹೇಗೆ?
ಮೊದಲನೆಯದು ನಿಮ್ಮ ಬೆನ್ನಿನ ಮೇಲೆ ನೆಲದ ಮೇಲೆ ಮಲಗಿ, ಸಾಮಾನ್ಯವಾಗಿ ನಿಮ್ಮ ಕಣ್ಣುಗಳನ್ನು ಮುಚ್ಚಿಕೊಂಡು ಮತ್ತು ಬೋಧಕರಿಂದ ಮಾರ್ಗದರ್ಶನವನ್ನು ಅನುಸರಿಸುವುದು. ವಾಸ್ತವವಾಗಿ ಅವರು ನಿಮ್ಮನ್ನು ಹಲವಾರು ಚಟುವಟಿಕೆಗಳ ಮೂಲಕ ಕರೆದೊಯ್ಯುತ್ತಾರೆ ಎಂದು ಯೋಗ ನಿದ್ರಾ ಬೋಧಕ ಟ್ರೇಸ್ ಸ್ಟಾನ್ಲಿ ಸುದ್ದಿ ಮಾಧ್ಯಮಕ್ಕೆ ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ