ಸುಂದರ್ ಪಿಚೈ (Sundar Pichai) ಅವರ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಅವರ ಬಗ್ಗೆ ಇಡೀ ಜಗತ್ತಿಗೇ ಗೊತ್ತಿದೆ. ಆಲ್ಫಾಬೆಟ್ (Alphabet) ಮತ್ತು ಅದರ ಅಂಗಸಂಸ್ಥೆ ಗೂಗಲ್‌ನ (Google) ಸಿಇಒ ಆಗಿರುವ ಸುಂದರ್ ಪಿಚ್ಚೈ ಅನೇಕರಿಗೆ ಮಾದರಿಯಾಗಿದ್ದಾರೆ. ಮೂಲತಃ ತಮಿಳುನಾಡಿನವರಾದ (Tamil Nadu) ಸುಂದರ್ ಪಿಚ್ಚೈ ಐಐಟಿ ಪದವೀಧರರು. ಸಾಮಾನ್ಯ ಕುಟುಂಬದಿಂದ ಬಂದು ವಿಶ್ವದ ಅಗ್ರ ಸಿಇಒಗಳಲ್ಲಿ ಒಬ್ಬರಾಗಲು ಬಹಳಷ್ಟು ಶ್ರಮಿಸಿದವರು. ಗೂಗಲ್ ಸಿಇಒ ಅಂದರೆ ಅವರ ವೇತನ, ಆಸ್ತಿ, ಜೀವನಶೈಲಿ, ಐಷಾರಾಮಿ ಜೀವನ ಹೇಗಿರಬಹುದು ಎಂಬ ಸಹಜ ಕುತೂಹಲ ಎಲ್ಲರಿಗೂ ಇರುತ್ತದೆ. ಹಾಗಿದ್ದರೆ ಅವರ ಬೆರಗುಗೊಳಿಸುವಂಥ ಐಷಾರಾಮಿ ಮನೆ ಹೇಗಿದೆ? ಎಷ್ಟು ದೊಡ್ಡ ಜಾಗದಲ್ಲಿದೆ? ಅಲ್ಲಿನ ಇಂಟೀರಿಯರ್ಸ್ ಹೇಗಿದೆ? ಯಾವೆಲ್ಲ ಸೌಲಭ್ಯಗಳಿವೆ? ಅನ್ನೋದನ್ನು ನೋಡೋಣ.
ಸುಂದರ್ ಪಿಚ್ಚೈ ನಿವಾಸದಲ್ಲಿರುವ ಐಷಾರಾಮದ ಬಗ್ಗೆ ತಿಳಿದುಕೊಂಡರೆ ನೀವು ಬೆರಗಾಗುವುದು ಖಂಡಿತ. ಇಲ್ಲಿರುವಂಥ ಇನ್ಫಿನಿಟಿ ಪೂಲ್, ರೂ. 49 ಕೋಟಿ ಇಂಟೀರಿಯರ್ ಡಿಸೈನ್ ಮುಂತಾದ ವೈಶಿಷ್ಟಗಳನ್ನು ಪರಿಚಯಿಸುತ್ತ ಹೋದಂತೆ ನೀವು ಬಾಯಿಯ ಮೇಲೆ ಬೆರಳಿಟ್ಟುಕೊಳ್ಳುತ್ತೀರಾ. ಹಾಗಿದ್ದರೆ ಸುಂದರ್ ಪಿಚೈ ಅವರ ಅದ್ದೂರಿ ನಿವಾಸ ಹೇಗಿದೆ... ಟೆಕ್ ಟೈಟಾನ್ ಶೈಲಿಯಲ್ಲಿ ಅವರು ಹೇಗೆ ವಾಸಿಸುತ್ತಾರೆ ಎಂಬುದನ್ನು ತಿಳಿಯೋಣ.
31 ಎಕರೆ ಜಾಗದಲ್ಲಿದೆ ಐಷಾರಾಮಿ ಬಂಗಲೆ
ಸುಂದರ್ ಪಿಚೈ ಅವರ ಬೆರಗುಗೊಳಿಸುವ ಕ್ಯಾಲಿಫೋರ್ನಿಯಾ ಮನೆ ಅವರ ಹಲವಾರು ಸಾಧನೆಗಳಲ್ಲಿ ಒಂದಾಗಿದೆ. ಕ್ಯಾಲಿಫೋರ್ನಿಯಾದ ಸಾಂಟಾ ಕ್ಲಾರಾ ಕೌಂಟಿಯಲ್ಲಿರುವ ಲಾಸ್ ಆಲ್ಟೋಸ್‌ನಲ್ಲಿರುವ ಬೆಟ್ಟದ ತುದಿಯಲ್ಲಿ 31.17 ಎಕರೆ ಜಾಗದಲ್ಲಿ ನಿರ್ಮಾಣಗೊಂಡಿದೆ ಅವರ ವಿಶಾಲವಾದ ಐಷಾರಾಮದ ನಿವಾಸ.
ಅದ್ದೂರಿ ಬಂಗಲೆಯಲ್ಲಿ ಏನುಂಟು ಏನಿಲ್ಲ!
ಸುಂದರ್ ಪಿಚ್ಚೈ ಅವರ ಬಂಗಲೆಯ ಒಳಗೆ ಅದ್ಭುತವಾದ ವಿನ್ಯಾಸಗಳನ್ನು ನೋಡಬಹುದು. ಈ ಅಲ್ಟ್ರಾ-ಎಕ್ಸ್‌ಕ್ಲೂಸಿವ್ ಮನೆಯು ಕೊಳ, ಇನ್ಫಿನಿಟಿ ಪೂಲ್, ಜಿಮ್, ಸ್ಪಾ, ವೈನ್ ಸೆಲ್ಲಾರ್, ಸೋಲಾರ್ ಪ್ಯಾನಲ್, ಲಿಫ್ಟ್‌ಗಳು ಮತ್ತು ನ್ಯಾನಿ ಕ್ವಾರ್ಟರ್‌ಗಳು ಸೇರಿದಂತೆ ವಿವಿಧ ಸಮಕಾಲೀನ ಮತ್ತು ವಿರಾಮ ವೈಶಿಷ್ಟ್ಯಗಳನ್ನು ಹೊಂದಿದೆ. ಇಂತಹ ಐಶ್ವರ್ಯ ಹೊಂದಲು ಹಲವಾರು ಕೋಟಿಗಳನ್ನು ಖರ್ಚು ಮಾಡುವುದರಲ್ಲಿ ಆಶ್ಚರ್ಯವೇನಿಲ್ಲ ಬಿಡಿ!
2015ರಲ್ಲಿ ಗೂಗಲ್ ಸಿಇಒ
ಸುಂದರ್ ಪಿಚೈ 2015 ರಲ್ಲಿ ಗೂಗಲ್‌ನ ಸಿಇಒ ಆಗಿ ನೇಮಕಗೊಂಡರು. 2019 ರಲ್ಲಿ ಅವರು ಆಲ್ಫಾಬೆಟ್ ಇಂಕ್‌ನ ಸಿಇಒ ಆದರು. ಅವರ ನಾಯಕತ್ವದಲ್ಲಿ, ಗೂಗಲ್ ತನ್ನ ಉತ್ಪನ್ನಗಳು ಮತ್ತು ಸೇವೆಗಳನ್ನು ವಿಸ್ತರಿಸುವುದನ್ನು ಮುಂದುವರೆಸಿದೆ. ಜೊತೆಗೆ ಕೃತಕ ಬುದ್ಧಿಮತ್ತೆ (AI) ಮತ್ತು ಕ್ಲೌಡ್ ಕಂಪ್ಯೂಟಿಂಗ್‌ನಲ್ಲಿ ಗಮನಾರ್ಹ ಹೂಡಿಕೆಗಳನ್ನು ಮಾಡಿದೆ.
ಇದನ್ನೂ ಓದಿ: Google News: ಗೂಗಲ್ನಿಂದ ಭಾರತೀಯರಿಗೆ ಗುಡ್ನ್ಯೂಸ್! ದೇಶದ ಒಳಿತಿಗಾಗಿ ಈ ನಿರ್ಧಾರ
ಇನ್ನು, ಮಾಧ್ಯಮದ ವರದಿಯ ಪ್ರಕಾರ, ವಿಶ್ವದ ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾದ ಸುಂದರ್ ಪಿಚೈ ಅವರು ಅಂದಾಜು $1310 ಮಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ