Sundar Pichai: ಸುಂದರ್‌ ಪಿಚೈ ಮನೆ ಮಾರಾಟ; ಆಸ್ತಿ ಪತ್ರ ನೀಡುವಾಗ ಭಾವುಕರಾದ ಗೂಗಲ್‌ ಸಿಇಒ ಪೋಷಕರು

ಗೂಗಲ್​​ ಸಿಇಓ ಸುಂದರ್ ಪಿಚೈ

ಗೂಗಲ್​​ ಸಿಇಓ ಸುಂದರ್ ಪಿಚೈ

ದಕ್ಷಿಣ ಭಾರತದ ತಮಿಳುನಾಡಿನ ಚೆನ್ನೈ ನಗರದಲ್ಲಿರುವ ಗೂಗಲ್ ಸಿಇಒ ಸುಂದರ್ ಪಿಚೈ ಅವರ ಪೂರ್ವಜರ ಮನೆಯನ್ನು ಮಾರಾಟ ಮಾಡಲಾಗಿದೆ ಎಂಬ ವರದಿಯಾಗಿದೆ.

  • Share this:

ಸರ್ಚ್ ಎಂಜಿನ್‌ ದೈತ್ಯ ಗೂಗಲ್‌ (Google) ಸಂಸ್ಥೆಯ ಸಿಇಒ ಸುಂದರ್‌ ಪಿಚೈ (CEO Sundar Pichai) ಅವರ ಚೆನ್ನೈನಲ್ಲಿದ್ದ ಪೂರ್ವಜರ ಮನೆ ಮಾರಾಟವಾಗಿದೆ. ಬಲ್ಲ ಮೂಲಗಳ ಪ್ರಕಾರ, ಚೆನ್ನೈನ ಅಶೋಕ್ ನಗರ ವಸತಿ ಪ್ರದೇಶದಲ್ಲಿದ್ದ ಈ ಮನೆಯನ್ನು ತಮಿಳು ನಟ ಮತ್ತು ಚಲನಚಿತ್ರ ನಿರ್ದೇಶಕ ಸಿ. ಮಣಿಕಂದನ್‌ ಪಿಚೈ ಅವರ ತಂದೆಯಿಂದ ಖರೀದಿ ಮಾಡಿದ್ದಾರೆ ಎನ್ನಲಾಗಿದೆ. ಪೂರ್ವಜರ ಮನೆಯ ಆಸ್ತಿಯನ್ನು ಸುಂದರ್‌ ಪಿಚೈ ಅವರ ತಂದೆಯು ಸಿ ಮಣಿಕಂದನ್ (C. Manikandan) ಅವರಿಗೆ ಮಾರಾಟ ಮಾಡಿದ್ದು, ಖರೀದಿ ಪ್ರಕ್ರಿಯೆಗಳು ಅಂತ್ಯಗೊಂಡಿವೆ. ನಟ ಮತ್ತು ನಿರ್ಮಾಪಕ ಸಿ. ಮಣಿಕಂದನ್ ಅವರು ಚೆನ್ನೈನಲ್ಲಿ ಆಸ್ತಿ ಖರೀದಿ ಹುಡುಕಾಟದಲ್ಲಿದ್ದಾಗ, ಇದೇ ವೇಳೆ ಸುಂದರ್‌ ಪಿಚೈ ತಂದೆ ಸಹ ಆಸ್ತಿ ಮಾರಾಟದ ಬಗ್ಗೆ ಜಾಹೀರಾತು ನೀಡಿದ್ದರು.


ಸುಂದರ್‌ ಪಿಚೈ ಹುಟ್ಟಿ ಬೆಳೆದ ಮನೆಯನ್ನು ಖರೀದಿಸಲು ಇಂಗಿತ ವ್ಯಕ್ತಪಡಿಸಿದ ಮಣಿಕಂದನ್‌ ಕೂಡಲೇ ಅವರ ತಂದೆಯನ್ನು ಸಂಪರ್ಕಿಸಿ ಮಾತುಕತೆ ನಡೆಸಿದರು.


"ಪಿಚೈ ಅವರ ಆಸ್ತಿ ಖರೀದಿಸಿದ್ದು ನನಗೆ ಹೆಮ್ಮೆಯ ವಿಚಾರ"


ಸುಂದರ್‌ ಪಿಚೈ ಅವರ ಪೂರ್ವಜರ ಮನೆಯನ್ನು ಖರೀದಿಸಿದ ತಮಿಳು ನಟ ಸಿ. ಮಣಿಕಂದನ್‌ ಪ್ರತಿಕ್ರಿಯಿಸಿದ್ದು, "ಸುಂದರ್ ಪಿಚೈ ಅವರು ನಮ್ಮ ದೇಶವನ್ನು ಹೆಮ್ಮೆ ಪಡುವಂತೆ ಮಾಡಿದ್ದಾರೆ, ಅವರು ವಾಸಿಸುತ್ತಿದ್ದ ಮನೆಯನ್ನು ಖರೀದಿಸುವುದು ನನ್ನ ಜೀವನದ ಹೆಮ್ಮೆಯ ಸಾಧನೆಯಾಗಿದೆ" ಎಂದು ಹೇಳಿದರು.


ಸುಂದರ್‌ ಪಿಚೈ ಅವರ ಮನೆ ಖರೀದಿ ಒಪ್ಪಂದವು ನಾಲ್ಕು ತಿಂಗಳ ಹಿಂದೆ ಪ್ರಾರಂಭವಾಯಿತು ಮತ್ತು ಈಗ ಅಂತಿಮಗೊಂಡಿದೆ. ಪಿಚೈ ಅವರ ತಂದೆ ಅಮೆರಿಕದಲ್ಲಿ ದೀರ್ಘಕಾಲ ಇದ್ದ ಕಾರಣ ಒಪ್ಪಂದಕ್ಕೆ ಸುಮಾರು ನಾಲ್ಕು ತಿಂಗಳ ಸಮಯ ಹಿಡಿಯಿತು.


ಇದನ್ನೂ ಓದಿ: ಇಂದು ಈ ರಾಶಿಯವರ ಬದುಕೇ ಬದಲಾಗುತ್ತೆ!


ಪಿಚೈ ಪೋಷಕರ ಸರಳತೆ ಬಗ್ಗೆ ಮಣಿಕಂದನ್‌ ಮೆಚ್ಚುಗೆ


ಸ್ವತಃ ರಿಯಲ್ ಎಸ್ಟೇಟ್ ಡೆವಲಪರ್ ಆಗಿರುವ ನಾನು ಸುಮಾರು 300 ಮನೆಗಳನ್ನು ನಿರ್ಮಿಸಿ ವಿತರಿಸಿದ್ದೇನೆ. ಆದರೆ ನನಗೆ ಸುಂದರ್‌ ಪಿಚೈ ಅವರ ಪೋಷಕರ ನಮ್ರತೆ ನನ್ನನ್ನು ಮಂತ್ರಮುಗ್ಧರನ್ನಾಗಿಸಿತು ಎಂದು ಮಣಿಕಂದನ್‌ ಹೇಳಿದರು. ಸುಂದರ್ ಅವರ ತಾಯಿ ಸ್ವತಃ ಫಿಲ್ಟರ್ ಕಾಫಿ ತಯಾರಿಸಿ ನೀಡಿದರು. ಒಪ್ಪಂದವನ್ನು ಮುಕ್ತಾಯಗೊಳಿಸುವ ಮೊದಲು, ಅವರು ಮನೆಗೆ ಸಂಬಂಧಿಸಿದ ಎಲ್ಲಾ ತೆರಿಗೆಗಳನ್ನು ಪಾವತಿಸಿದರು.


ವರ್ಗಾವಣೆ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಮಗನ ಹೆಸರನ್ನು ಅವರು ಎಲ್ಲೂ ಬಳಸಲಿಲ್ಲ. ನನ್ನನ್ನು ಕೂಡ ಮಗ ಸುಂದರ್ ಪಿಚೈ ಅವರ ಹೆಸರನ್ನು ಬಳಸದಂತೆ ಒತ್ತಾಯ ಪಡಿಸುತ್ತಿದ್ದರು. ಅಷ್ಟೇ ಅಲ್ಲದೇ ಮನೆಯ ದಾಖಲೆ ವರ್ಗಾವಣೆ ಪ್ರಕ್ರಿಯೆಯಲ್ಲಿ ತಹಸೀಲ್ದಾರರ ಕಚೇರಿಯಲ್ಲಿ ಗಂಟೆಗಟ್ಟಲೆ ಕಾದು ಕುಳಿತಿದ್ದರು ಎಂದು ಮಣಿಕಂದನ್‌ ಸುಂದರ್‌ ಪಿಚೈ ಅವರ ಪೋಷಕರ ಸರಳತೆಯ ಬಗ್ಗೆ ವಿವರಿಸಿದರು.


ಗೂಗಲ್​​ ಸಿಇಓ ಸುಂದರ್ ಪಿಚೈ


ಮನೆ ದಾಖಲೆಗಳನ್ನು ನೀಡುವಾಗ ಭಾವುಕರಾದ ಪೋಷಕರು


ಸುಂದರ್‌ ಪಿಚೈ ಅವರ ತಂದೆ ಈ ಮನೆಯ ದಾಖಲೆಗಳನ್ನು ನನಗೆ ಹಸ್ತಾಂತರಿಸುವಾಗ ತುಂಬಾ ಭಾವುಕರಾದರು ಎಂದು ಮಣಿಕಂದನ್ ಹೇಳಿದರು.




ಸುಂದರ್‌ ಪಿಚೈ ಹುಟ್ಟಿ ಬೆಳೆದ ಮನೆ


ಸ್ಟೆನೋಗ್ರಾಫರ್‌ ಲಕ್ಷ್ಮಿ ಮತ್ತು ಎಲೆಕ್ಟ್ರಿಕಲ್‌ ಎಂಜಿನಿಯರ್‌ ರಘುನಾಥ್‌ ಪಿಚೈ ದಂಪತಿಗೆ ಜನಿಸಿದ್ದ ಸುಂದರ್‌ ಪಿಚೈ, ಇದೇ ಮನೆಯಲ್ಲಿಯೇ ಹುಟ್ಟಿ ಬೆಳೆದವರು. ಸುಮಾರು 20 ವರ್ಷದವರೆಗೂ ಇದೇ ಮನೆಯಲ್ಲಿಯೇ ಇದ್ದ ಪಿಚೈ 1989 ರಲ್ಲಿ ಐಐಟಿ ಖರಗ್‌ಪುರದಲ್ಲಿ ಮೆಟಲರ್ಜಿಕಲ್ ಎಂಜಿನಿಯರಿಂಗ್ ಅಧ್ಯಯನ ಮಾಡಲು ನಗರವನ್ನು ಬದಲಾಯಿಸಿದರು.


ಗೂಗಲ್ ಸಿಇಒ ಚೆನ್ನೈಗೆ 2021ರ ಅಕ್ಟೋಬರ್‌ನಲ್ಲಿ ಕೊನೆಯ ಬಾರಿಗೆ ಬಂದಿದ್ದರು. ಈ ವೇಳೆ ಭದ್ರತಾ ಸಿಬ್ಬಂದಿಗೆ ನಗದು ಮತ್ತು ಕೆಲವು ಗೃಹೋಪಯೋಗಿ ವಸ್ತುಗಳನ್ನು ಪಿಚೈ ನೀಡಿದ್ದರು. ಹೀಗೆ ಪಿಚೈ ಆಡಿ-ಓಡಿ ಬೆಳೆದ ಮನೆ ಪೂರ್ವಿಕರ ಮನೆ ಬೇರೆಯವರ ಪಾಲಾಗಿದೆ.

top videos
    First published: