Google CEO ಸುಂದರ್​ ಪಿಚೈಗಿಂದು ಜನ್ಮದಿನ, ಕಲ್ಲು-ಮುಳ್ಳು ಹಾದಿಯಲ್ಲೇ ನಡೆದು ಸುಪತ್ತಿಗೆ ಏರಿದ ಛಲಗಾರ!

ಸುಂದರ್ ಪಿಚೈ ಅವರು ಗೂಗಲ್​ ಸಿಇಒ ಎಂದು ಎಲ್ಲರಿಗೂ ಗೊತ್ತೇ ಇದೆ. ಆದರೆ, ಅವರು ಈ ಸ್ಥಾನದಲ್ಲಿ ಬಂದು ಕೂರಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಈಗ ಇಷ್ಟು ಉನ್ನತ ಹುದ್ದೆಯಲ್ಲಿರುವಾಗ ಅವರ ಬದುಕಿನಲ್ಲಿ ಸಾಕಷ್ಟು ಹೋರಾಟ ನಡೆದಿರುವುದು ಸಹಜ. 

ಸುಂದರ್​ ಪಿಚೈ

ಸುಂದರ್​ ಪಿಚೈ

  • Share this:
ಇಂದು ಗೂಗಲ್​ ಸಿಇಒ ಸುಂದರ್​ ಪಿಚೈ ಅವರ ಹುಟ್ಟುಹಬ್ಬ. 50ನೇ ವಸಂತಕ್ಕೆ ಕಾಲಿಟ್ಟಿದ್ದಾರೆ  ಸುಂದರ್​ ಪಿಚೈ. ತಮ್ಮ ಜೀವನದಲ್ಲಿ ಹಾಫ್​ ಸೆಂಚುರಿ ಬಾರಿಸಿದ್ದಾರೆ. ಸುಂದರ್ ಪಿಚೈ ಅವರು ಗೂಗಲ್​ ಸಿಇಒ ಎಂದು ಎಲ್ಲರಿಗೂ ಗೊತ್ತೇ ಇದೆ. ಆದರೆ, ಅವರು ಈ ಸ್ಥಾನದಲ್ಲಿ ಬಂದು ಕೂರಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಈಗ ಇಷ್ಟು ಉನ್ನತ ಹುದ್ದೆಯಲ್ಲಿರುವಾಗ ಅವರ ಬದುಕಿನಲ್ಲಿ ಸಾಕಷ್ಟು ಹೋರಾಟ ನಡೆದಿರುವುದು ಸಹಜ. ಆದರೆ ಅವರ ಜೀವನ ಸಿನಿಮಾ ನಾಯಕನಿಗಿಂತ ಕಡಿಮೆಯಿಲ್ಲ ಎಂಬುದು ಕೆಲವೇ ಜನರಿಗೆ ಗೊತ್ತು. ನಾಯಕನು ಬಡತನದಲ್ಲಿ ಬದುಕುತ್ತಾನೆ, ಕಷ್ಟಪಡುತ್ತಾನೆ ಮತ್ತು ತನ್ನ ಸ್ಥಾನವನ್ನು ಗಳಿಸುವುದನ್ನು ಚಲನಚಿತ್ರಗಳು ತೋರಿಸುತ್ತವೆ. ಗೂಗಲ್ ಸಿಇಒ ಸುಂದರ್ ಪಿಚೈ ವಿಷಯದಲ್ಲೂ ಇದೇ ಆಗಿದೆ.

ಅಂದು ಅವರ ಮನೇಲಿ ಟಿವಿನೇ ಇರ್ಲಿಲ್ಲ!

ಸುಂದರ್​ ಪಿಚೈ ಅವರ ಜೀವನವೂ ಕೂಡ ಹಲವು ಹೋರಾಟಗಳಿಂದ ಕೂಡಿತ್ತು. ಸುಂದರ್ ಪಿಚೈ ಅವರ ಮನೆಯಲ್ಲಿ ಟಿವಿ ಇರಲಿಲ್ಲ. ಆದರೆ ಇಂದು ಸರ್ಚ್ ಇಂಜಿನ್ ಗೂಗಲ್ ಉದ್ಯೋಗಿಗಳು ಸುಂದರ್ ಪಿಚೈ ಅವರ ಆರ್ಡರ್ ಇಲ್ಲದೇ ಯಾವುದೇ ಕೆಲಸಗಳನ್ನು ಮಾಡುವುದಿಲ್ಲ. ಇದೇ ಅಲ್ವಾ? ಸಕ್ಸಸ್ ಅಂದರೆ. ಓದುವಾಗ ಅವರ ಬಳಿ ಹಣವಿರಲಿಲ್ಲ. ಹಳೆಯ ಬಟ್ಟೆಗಳನ್ನು ಬಳಸುತ್ತಿದ್ದರು. ಮನೆಯಲ್ಲೂ ಹೇಳಿಕೊಳ್ಳುವಂತಹ ಶ್ರೀಮಂತರೇನು ಅಲ್ಲ. ಸ್ನೇಹಿತರ ಜೊತೆ ಹೊರಗೆ ಹೋದರೆ ಹಣ ಖರ್ಚಾಗುತ್ತೆ ಅಂತ ಸುಂದರ್​ ಅವರು ಎಲ್ಲಿಯೂ ಹೋಗುತ್ತಿರಲಿಲ್ಲ.

ಸುಂದರ್​​ ಪಿಚೈ ತಾಯಿ ಸ್ಟೆನೋಗ್ರಾಫರ್ ಆಗಿದ್ದರು!

ಸುಂದರ್​ ಅವರ ತಾಯಿ ಸ್ಟೆನೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದರು. ಅವರ ತಂದೆ ಭಾರತದಲ್ಲಿ EC ನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿದ್ದರು. ಎರಡು ರೂಂನ ಸಣ್ಣ ಅಪಾರ್ಟ್​ಮೆಂಟ್​​ನಲ್ಲಿ ಕುಟುಂಬಸ್ಥರೊಂದಿಗೆ ಸುಂದರ್​ ಪಿಚೈ ವಾಸಿಸುತ್ತಿದ್ದರು. ಮನೆಯಲ್ಲಿ ಟಿವಿ, ಫ್ರಿಡ್ಜ್, ಟೆಲಿಫೋನ್ ಯಾವುದೂ ಇರಲಿಲ್ಲ. ಮಿಳುನಾಡಿನ ಮಧುರೈನಲ್ಲಿ ಜನಿಸಿದ ಸುಂದರ್ ಪಿಚೈ ಕಠಿಣ ಪರಿಶ್ರಮದ ಬಲದಿಂದ ಐಐಟಿ ಖರಗ್‌ಪುರದಲ್ಲಿ ಪ್ರವೇಶ ಪಡೆದರು. ಎಂಜಿನಿಯರಿಂಗ್ ನಂತರ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಸ್ಕಾಲರ್​ಶಿಪ್​ ಪಡೆದರು.

ಇದನ್ನೂ ಓದಿ: UAN Number ಜನರೇಟ್​ ಮಾಡ್ಕೋಬೇಕಾ? ಅಥವಾ ಆ್ಯಕ್ಟಿವೇಟ್​ ಮಾಡ್ಬೇಕಾ? ಹೀಗ್​ ಮಾಡಿ ಆಗುತ್ತೆ

ಸಾಲ ಮಾಡಿ ಫ್ಲೈಟ್ ಟಿಕೆಟ್​ ಖರೀದಿಸಿದ್ದ ಸುಂದರ್​ ತಂದೆ

ಮಾಧ್ಯಮ ವರದಿಗಳ ಪ್ರಕಾರ, ಆ ಸಮಯದಲ್ಲಿ ಅವರ ಮನೆಯ ಸ್ಥಿತಿ ತುಂಬಾ ಕೆಟ್ಟದಾಗಿದೆ. ಸ್ಕಾಲರ್​ಶಿಪ್​ ಪಡೆದ ಸುಂದರ್​ ಪಿಚೈ ಅಮೆರಿಕಾಗೆ ತೆರಳಬೇಕಿತ್ತು. ಆದರೆ, ಕೈಯಲ್ಲಿ ಹಣವಿರಲಿಲ್ಲ. ಅವರ ತಂದೆ ವಿಮಾನದ ಟಿಕೆಟ್​ ಖರೀದಿಸಲು ಸತತ ಒಂದು ವರ್ಷ ತಮ್ಮ ಸಂಬಳವನ್ನು ಕೂಡಿಟ್ಟದರು. ಅದರಲ್ಲೂ ಟಿಕೆಟ್​ ಖರೀದಿಸಲು ಹಣ ಸಾಲುತ್ತಿರಲಿಲ್ಲ. ಆಗ ಅವರ ತಂದೆ ಸಾಲ ಮಾಡಿ ಮಗನನ್ನು ಅಮೆರಿಕಾಗೆ ಕಳುಹುಸಿದ್ದರು.

ಹಳೆಯ ವಸ್ತುಗಳನ್ನೇ ಬಳಸ್ತಿದ್ದ ಪಿಚೈ!

ಸುಂದರ್ ಪಿಚೈ ಅವರು ತಮ್ಮ ಪದವಿಯಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. US ನಲ್ಲಿ, ಸುಂದರ್ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ MS ಮತ್ತು ವಾರ್ಟನ್ ವಿಶ್ವವಿದ್ಯಾಲಯದಿಂದ MBA ಮಾಡಿದರು. ಪಿಚೈ ಅವರನ್ನು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಸಿಬೆಲ್ ವಿದ್ವಾಂಸ ಎಂದು ಕರೆಯಲಾಗುತ್ತಿತ್ತು. ಸುಂದರ್ ಪಿಚೈ ಅವರು 1995 ರಲ್ಲಿ ಹಣಕಾಸಿನ ಅಡಚಣೆಯಿಂದಾಗಿ ಸ್ಟ್ಯಾನ್‌ಫೋರ್ಡ್‌ನಲ್ಲಿ ಪೇಯಿಂಗ್ ಗೆಸ್ಟ್ ಆಗಿ ವಾಸಿಸುತ್ತಿದ್ದರು. ಹಣವನ್ನು ಉಳಿಸಲು, ಅವರು ಹಳೆಯ ವಸ್ತುಗಳನ್ನು ಬಳಸಿದರು. ಪಿಚೈ 1995 ರಲ್ಲಿ ತಮ್ಮ ಮೊದಲ ಫೋನ್ ಖರೀದಿಸಿದರು. ಮೊದಲ ಮಲ್ಟಿಮೀಡಿಯಾ ಫೋನ್ ಅನ್ನು 2006 ರಲ್ಲಿ ಖರೀದಿ ಮಾಡಿದ್ದರು.

ಪಿಎಚ್‌ಡಿ ಮಾಡಲು ಬಯಸಿದ್ದ ಸುಂದರ್​ ಪಿಚೈ!

ಸುಂದರ್​ ಪಿಚೈ ಪಿಎಚ್‌ಡಿ ಮಾಡಲು ಬಯಸಿದ್ದರು ಆದರೆ ಕೆಲ ಕಾರಣಗಳಿಂದ  ಅಪ್ಲೈಡ್ ಮೆಟೀರಿಯಲ್ಸ್ ಇಂಕ್‌ನಲ್ಲಿ ಉತ್ಪನ್ನ ನಿರ್ವಾಹಕರಾಗಿ ಕೆಲಸಕ್ಕೆ ಸೇರಿಕೊಂಡಿದ್ದರು. ಕಾರಣವಾಯಿತು. ಸುಂದರ್ ಪಿಚೈ ಅವರು 2004 ರಲ್ಲಿ Google ಗೆ ಸೇರಿದರು. ಅವರು ಆ ಸಮಯದಲ್ಲಿ ಉತ್ಪನ್ನ ಮತ್ತು ನಾವೀನ್ಯತೆ ಅಧಿಕಾರಿಯಾಗಿದ್ದರು. ಸುಂದರ್ ಅವರು ಹಿರಿಯ ಉಪಾಧ್ಯಕ್ಷರಾಗಿದ್ದರು (ಆಂಡ್ರಾಯ್ಡ್, ಕ್ರೋಮ್ ಮತ್ತು ಆಪ್ಸ್ ವಿಭಾಗ). ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅವರನ್ನು ಗೂಗಲ್‌ನ ಹಿರಿಯ ವಿಪಿ (ಉತ್ಪನ್ನ ಮುಖ್ಯಸ್ಥ) ಎಂದು ಹೆಸರಿಸಲಾಯಿತು. 2008 ರಲ್ಲಿ ಬಿಡುಗಡೆಯಾದ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಮತ್ತು ಗೂಗಲ್ ಕ್ರೋಮ್ ಅಭಿವೃದ್ಧಿಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.

ಇದನ್ನೂ ಓದಿ: ಗ್ರಾಹಕರೇ, ಈ ಮೂರು ದಿನ ಬ್ಯಾಂಕ್​ ಇರಲ್ಲ! ಬೇಗ ಬೇಗ ನಿಮ್​ ಕೆಲಸ ಮುಗಿಸಿಕೊಳ್ಳಿ

ಒಂದು ಆಲೋಚನೆ ಜಗತ್ತನ್ನು ಬದಲಾಯಿಸಿತು

ಸುಂದರ್ ಗೂಗಲ್‌ಗೆ ಸೇರಿದಾಗ, ಉತ್ಪನ್ನ ನಿರ್ವಹಣೆ ಮತ್ತು ನಾವೀನ್ಯತೆ ವಿಭಾಗದಲ್ಲಿ ಗೂಗಲ್‌ನ ಹುಡುಕಾಟ ಟೂಲ್‌ಬಾರ್ ಅನ್ನು ಸುಧಾರಿಸುವುದು ಅವರ ಮೊದಲ ಯೋಜನೆಯಾಗಿತ್ತು. ಇದರಿಂದಾಗಿ ಟ್ರಾಫಿಕ್ ಅನ್ನು ಇತರ ಬ್ರೌಸರ್‌ಗಳಿಂದ Google ಹೆಚ್ಚಾಗಿ ಪಡೆಯುವಂತೆ ಮಾಡಿದರು. ಈ ಸಮಯದಲ್ಲಿ ಅವರು ಗೂಗಲ್ ತನ್ನದೇ ಆದ ಬ್ರೌಸರ್ ಅನ್ನು ಪ್ರಾರಂಭಿಸಬೇಕು ಎಂದು ಸಲಹೆ ನೀಡಿದರು. ಈ ಆಲೋಚನೆಯೊಂದಿಗೆ ಅವರು ಗೂಗಲ್ ಸಂಸ್ಥಾಪಕ ಲ್ಯಾರಿ ಪೇಜ್ ಅವರ ಗಮನಕ್ಕೆ ಬಂದರು. 2008 ರಿಂದ 2013 ರವರೆಗೆ, ಸುಂದರ್ ಪಿಚೈ ಅವರು ಕ್ರೋಮ್ ಆಪರೇಟಿಂಗ್ ಸಿಸ್ಟಂನ ಯಶಸ್ವಿ ಉಡಾವಣೆಯ ನೇತೃತ್ವ ವಹಿಸಿದ್ದರು.
Published by:Vasudeva M
First published: