• Home
  • »
  • News
  • »
  • business
  • »
  • Income Tax: ಗುಡ್ ​​ನ್ಯೂಸ್​, 5 ಲಕ್ಷದವರೆಗೆ ತೆರಿಗೆ ವಿನಾಯಿತಿ ಮಿತಿ ಹೆಚ್ಚಿಸಲು ಬಜೆಟ್‌ನಲ್ಲಿ ಪ್ರಸ್ತಾವನೆ!

Income Tax: ಗುಡ್ ​​ನ್ಯೂಸ್​, 5 ಲಕ್ಷದವರೆಗೆ ತೆರಿಗೆ ವಿನಾಯಿತಿ ಮಿತಿ ಹೆಚ್ಚಿಸಲು ಬಜೆಟ್‌ನಲ್ಲಿ ಪ್ರಸ್ತಾವನೆ!

ಸಾಂದರ್ಭಿಕ  ಚಿತ್ರ

ಸಾಂದರ್ಭಿಕ ಚಿತ್ರ

ಮುಂದಿನ ಬಜೆಟ್‌ನಲ್ಲಿ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ದ್ವಿಗುಣಗೊಳಿಸುವಂತೆ ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಆಫ್ ಇಂಡಿಯಾ (ASSOCHAM) ಸರಕಾರವನ್ನು ಒತ್ತಾಯಿಸಿದೆ.

  • Share this:

ತೆರಿಗೆ ನಿಯಮ (Tax Rules) ಗಳ ಪ್ರಕಾರ ಆದಾಯ ತೆರಿಗೆಯ ಮೇಲೆ ನೀಡಲಾಗುವ ವಿನಾಯಿತಿಗಳು (Income tax exemption limit) ಗಳಿಕೆಯ ಮೇಲೆ ಹೆಚ್ಚು ಉಳಿಸಲು ಪ್ರಯತ್ನಿಸುವ ಮಾರ್ಗಗಳಾಗಿವೆ. ಈ ನಿಬಂಧನೆಗಳು ಜನರಿಗೆ ಉಳಿತಾಯದ ಅಭ್ಯಾಸವನ್ನು ಬೆಳೆಸಲು ಅವಕಾಶ ಮಾಡಿಕೊಡುತ್ತವೆ, ಹಾಗೆಯೇ ಭಾರತದ ಹಣಕಾಸು ಸಂಸ್ಥೆ (Financial Institution) ಗಳಿಗೆ ಸಹಾಯ ಮಾಡುತ್ತವೆ ಮತ್ತು ಉತ್ತಮ ಆರ್ಥಿಕ ಭವಿಷ್ಯವನ್ನು ರೂಪಿಸುತ್ತವೆ. ಹೆಚ್ಚಿನ ಉದ್ಯೋಗಗಳ ಸೃಷ್ಟಿಗೆ ಆದಾಯ ತೆರಿಗೆಯಿಂದ ಸಹಾಯವಾಗುತ್ತದೆ ಆದಾಯ ತೆರಿಗೆಯು ರಾಷ್ಟ್ರದ ಆರ್ಥಿಕತೆಯ ನಿರ್ಣಾಯಕ ಅಂಶವಾಗಿದೆ.


ಆದಾಯ ತೆರಿಗೆಯನ್ನು ಪಾವತಿಸುವುದರಿಂದ ರಾಷ್ಟ್ರದ ಒಟ್ಟಾರೆ ಯೋಗಕ್ಷೇಮಕ್ಕೆ ಅದರ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡುವ ಮೂಲಕ ಮತ್ತು ಮತ್ತಷ್ಟು ಅಭಿವೃದ್ಧಿಯನ್ನು ಮಾಡುವ ರೀತಿಯಲ್ಲಿ ಕೊಡುಗೆ ನೀಡಲು ಅವಕಾಶ ನೀಡುತ್ತದೆ. ಜೊತೆಗೆ, ಆದಾಯ ತೆರಿಗೆಯು ಉದ್ಯಮಗಳಿಗೆ ಹೆಚ್ಚಿನ ಹಣವನ್ನು ಒದಗಿಸುವ ಮೂಲಕ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.


ತೆರಿಗೆ ವಿನಾಯಿತಿ ಮಿತಿ ದ್ವಿಗುಣಗೊಳಿಸಲು ಒತ್ತಾಯ


ಮುಂದಿನ ಬಜೆಟ್‌ನಲ್ಲಿ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ದ್ವಿಗುಣಗೊಳಿಸುವಂತೆ ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಆಫ್ ಇಂಡಿಯಾ (ASSOCHAM) ಸರಕಾರವನ್ನು ಒತ್ತಾಯಿಸಿದೆ. ತೆರಿಗೆ ಪಾವತಿ ಪ್ರಕ್ರಿಯೆ ಹಾಗೂ ಐಟಿಆರ್ ಸಲ್ಲಿಕೆಯಿಂದ ಬಹುಶಃ ಜನರಿಗೆ ವಿನಾಯಿತಿ ನೀಡುವುದನ್ನು ಸರಕಾರ ಬಯಸದೇ ಇರುವುದರಿಂದ ತೆರಿಗೆ ಮಿತಿಯ ಮೂಲ ಮಿತಿಯಾದ ರೂ 2.5 ಲಕ್ಷವನ್ನು ಇದುವರೆಗೆ ಬದಲಾಯಿಸಿಲ್ಲ.


ತೆರಿಗೆ ವಿನಾಯಿತಿ ಮಿತಿ ಹೆಚ್ಚಿಸಿದರೆ ಉಂಟಾಗುವ ಪ್ರಯೋಜನಗಳೇನು?


ಪ್ರಸ್ತುತ ರೂ 2.5 ಲಕ್ಷದಿಂದ ರೂ 5 ಲಕ್ಷಕ್ಕೆ ತೆರಿಗೆ ವಿನಾಯಿತಿಯನ್ನು ಹೆಚ್ಚಿಸಿದರೆ ಬೇಡಿಕೆ ಹೆಚ್ಚಲಿದೆ ಎಂದು ಉದ್ಯಮ ಸಂಸ್ಥೆ ತಿಳಿಸಿದೆ. ಆರ್ಥಿಕತೆಯಲ್ಲಿ ಈ ಪ್ರಕ್ರಿಯೆಯು ಬಳಕೆಯನ್ನು ವರ್ಧಿಸಲಿದೆ.


ಇದನ್ನೂ ಓದಿ: ನಿಮ್ಮ ಮಗಳ ಹೆಸ್ರಲ್ಲಿ ಈ ಖಾತೆ ತೆರೆಯರಿ! ಇಂದಿನಿಂದಲೇ ಶಿಕ್ಷಣ, ಮದುವೆಗಾಗಿ ಹಣ ಸೇರಿಸಿ!


ಪ್ರಸ್ತುತ ಸಾಮಾನ್ಯ ನಾಗರಿಕರಿಗೆ 2.5 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಇಲ್ಲ. ಈ ಮಿತಿಯು ಹಿರಿಯ ನಾಗರಿಕರಿಗೆ ರೂ 3 ಲಕ್ಷವಾಗಿದ್ದು 80 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯರಿಗೆ ತೆರಿಗೆ ಮಿತಿಯು ರೂ 5 ಲಕ್ಷವಾಗಿದೆ.


ಸಾಮರ್ಥ್ಯ ವರ್ಧನೆಗೆ ಒತ್ತಡ ಹೇರುತ್ತಿರುವ ಕಂಪನಿಗಳು


ಉಕ್ಕು ಮತ್ತು ಸಿಮೆಂಟ್‌ನಂತಹ ವಲಯಗಳ ಕಂಪನಿಗಳು ಈಗ ಸಾಮರ್ಥ್ಯವನ್ನು ಹೆಚ್ಚಿಸಲು ಯೋಜಿಸುತ್ತಿವೆ ಎಂದು ಅಸೋಚಾಮ್ ಅಧ್ಯಕ್ಷ ಸುಮಂತ್ ಸಿನ್ಹಾ ತಿಳಿಸಿದ್ದಾರೆ. ಇದರಿಂದ ಉಂಟಾಗುವ ಅಪಾಯದ ಕುರಿತು ಮಾತನಾಡುತ್ತಾ ಸಿನ್ಹಾ ಜಾಗತಿಕ ಆರ್ಥಿಕ ಹಿಂಜರಿತ ಉಂಟಾಗಬಹುದು ಮತ್ತು ಇದು ವಿದೇಶಿ ವ್ಯಾಪಾರದ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಭಾರತದ ಜಿಡಿಪಿ ಮೇಲೂ ಪರಿಣಾಮ ಬೀರಬಹುದು ಎಂದು ಅಭಿಪ್ರಾಯ ತಿಳಿಸಿದ್ದಾರೆ.


ಗ್ರಾಹಕರು ಹೆಚ್ಚಿನ ಹಣವನ್ನು ವ್ಯಯಿಸುವಂತೆ ಮಾಡಲು ಸರಕಾರವು ತೆರಿಗೆ ಮಿತಿಯನ್ನು ರೂ. 5 ಲಕ್ಷಕ್ಕೆ ಏರಿಸಬೇಕೆಂದು ಅಸೋಚಾಮ್ ತನ್ನ ಬಜೆಟ್ ಪೂರ್ವ ಶಿಫಾರಸುಗಳಲ್ಲಿ ತಿಳಿಸಿದೆ. ಇದರಿಂದ ಆರ್ಥಿಕ ಬೆಳವಣಿಗೆಗೆ ಉತ್ತಮ ವೇದಿಕೆ ದೊರೆಯಲಿದ್ದು ದೇಶದ ಪ್ರಗತಿ ಸಾಧ್ಯವಿದೆ ಎಂದು ತಿಳಿಸಿದ್ದಾರೆ.


ಆರ್ಥಿಕ ಬಳಕೆಗೆ ಉತ್ತೇಜನ ದೊರೆಯಲಿದೆ


ನೇರ ಮತ್ತು ಪರೋಕ್ಷ ತೆರಿಗೆಗಳ ಹೆಚ್ಚಳದಿಂದಾಗಿ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸಲು ಸರಕಾರಕ್ಕೆ ಸಾಕಷ್ಟು ಅವಕಾಶವಿದೆ ಎಂದು ಸಿನ್ಹಾ ತಿಳಿಸಿದ್ದಾರೆ.


ಇದನ್ನೂ ಓದಿ: ಖರೀದಿದಾರರಿಗೆ ಶುಭ ಸುದ್ದಿ, ಆ ವಸ್ತುಗಳ ಮೇಲೆ ಶೂನ್ಯ GST!


ಗ್ರಾಹಕರ ಕೈಗೆ ಹೆಚ್ಚು ಹಣ ದೊರೆತರೆ ಅದನ್ನು ಬಳಸಲು ಅವರಿಗೆ ಉತ್ತೇಜನ ದೊರೆಯುತ್ತದೆ. ತೆರಿಗೆ ವಿನಾಯಿತಿಯ ಮಿತಿಯನ್ನು ಹೆಚ್ಚಿಸುವುದು ಹಣ ವ್ಯಯಿಸುವ ಮಾರ್ಗಕ್ಕೆ ದಾರಿಯಾಗುತ್ತದೆ ಇದರಿಂದ ಆರ್ಥಿಕ ಬೆಳವಣಿಗೆಯ ಮೇಲೆ ಸಕಾರಾತ್ಮಕ ಪರಿಣಾಮ ಉಂಟಾಗುತ್ತದೆ ಎಂದು ಅಸೋಚಾಂ ಪ್ರಧಾನ ಕಾರ್ಯದರ್ಶಿ ದೀಪಕ್ ಸೂದ್ ತಿಳಿಸಿದ್ದಾರೆ.

Published by:ವಾಸುದೇವ್ ಎಂ
First published: