Salary Hike: ಅಮೆಜಾನ್, ಗೂಗಲ್ ಉದ್ಯೋಗಿಗಳಿಗೆ ಸಿಹಿಸುದ್ದಿ; ವೇತನದಲ್ಲಿ ಭಾರಿ ಹೆಚ್ಚಳ!

ಅಮೆಜಾನ್, ಗೂಗಲ್ ಅಥವಾ ಮೈಕ್ರೋಸಾಫ್ಟ್ ನಂತಹ ದೊಡ್ಡ ಟೆಕ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರೆ, ನಿಮ್ಮ ಸಂಬಳದಲ್ಲಿ ನೀವು ಈಗಾಗಲೇ ದೊಡ್ಡ ಮಟ್ಟದಲ್ಲಿ ಹೆಚ್ಚಳವನ್ನು ಕಾಣುವ ಸಾಧ್ಯತೆಯಿರುತ್ತದೆ. ಏಕೆಂದರೆ ಅಮೆಜಾನ್, ಗೂಗಲ್, ಮೈಕ್ರೋಸಾಫ್ಟ್, ಇನ್ಫೋಸಿಸ್ ಸೇರಿದಂತೆ ಇತರ ಕಂಪನಿಗಳು ತಮ್ಮ ಎಲ್ಲಾ ಉದ್ಯೋಗಿಗಳ ವೇತನವನ್ನು ಹೆಚ್ಚಿಸಿವೆ ಎಂದು ವರದಿಯಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮೇ ತಿಂಗಳು ಮುಗಿತಾ ಬಂತು, ಜೂನ್ ತಿಂಗಳು ಶುರುವಾಯಿತು ಎಂದರೆ ಈ ದೊಡ್ಡ ದೊಡ್ಡ ಕಂಪನಿಗಳಲ್ಲಿ (Company) ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ (Employees) ಒಂದು ಹಬ್ಬದ ಸಂಭ್ರಮ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಏಕೆಂದರೆ ಇದು ಅವರಿಗೆ ‘ಅಪ್ರೈಸಲ್ ಟೈಮ್’ (Appraisal Time) ಎಂದರೆ ಅವರ ಒಂದು ವರ್ಷದ ಕೆಲಸವನ್ನು ನೋಡಿ ಅವರಿಗೆ ವೇತನದಲ್ಲಿ ಹೆಚ್ಚಳವನ್ನು ನೀಡುವ ಸಮಯ. ನೀವು ಅಮೆಜಾನ್ (Amazon), ಗೂಗಲ್ (Google) ಅಥವಾ ಮೈಕ್ರೋಸಾಫ್ಟ್ (Microsoft) ನಂತಹ ದೊಡ್ಡ ಟೆಕ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರೆ, ನಿಮ್ಮ ಸಂಬಳದಲ್ಲಿ ನೀವು ಈಗಾಗಲೇ ದೊಡ್ಡ ಮಟ್ಟದಲ್ಲಿ ಹೆಚ್ಚಳವನ್ನು ಕಾಣುವ ಸಾಧ್ಯತೆಯಿರುತ್ತದೆ. ಏಕೆಂದರೆ ಅಮೆಜಾನ್, ಗೂಗಲ್, ಮೈಕ್ರೋಸಾಫ್ಟ್, ಇನ್ಫೋಸಿಸ್ ಸೇರಿದಂತೆ ಇತರ ಕಂಪನಿಗಳು ತಮ್ಮ ಎಲ್ಲಾ ಉದ್ಯೋಗಿಗಳ ವೇತನವನ್ನು ಹೆಚ್ಚಿಸಿವೆ ಎಂದು ವರದಿಯಾಗಿದೆ.

ಕಳೆದ ಎರಡು ವರ್ಷಗಳಲ್ಲಿ, ಈ ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿಂದಾಗಿ ಮತ್ತು ಆರ್ಥಿಕ ಕುಸಿತದ ಕಾರಣದಿಂದಾಗಿ ವಿವಿಧ ಕಂಪನಿಗಳಲ್ಲಿನ ವೇತನ ಹೆಚ್ಚಳವನ್ನು ಮುಂದೂಡಲಾಗಿತ್ತು. ಆದಾಗ್ಯೂ, ಜನರು ಹೊಸ ಸಾಮಾನ್ಯತೆಗೆ ಒಗ್ಗಿಕೊಂಡಿದ್ದು, ಸಾಂಕ್ರಾಮಿಕ ರೋಗದ ಎರಡನೇ ವರ್ಷದಲ್ಲಿ ವ್ಯಾಪಾರವು ಹೆಚ್ಚಾಗಿದೆ.

ಪ್ರತಿಭಾವಂತ ಅಭ್ಯರ್ಥಿಗಳನ್ನು ಆಕರ್ಷಿಸಲು ಉದ್ಯೋಗಿಗಳಿಗೆ ವೇತನ ಹೆಚ್ಚಳ
ಈಗ ತನ್ನ ಉನ್ನತ ಪ್ರತಿಭೆಗಳನ್ನು ಉಳಿಸಿಕೊಳ್ಳಲು ಮತ್ತು ಪ್ರತಿಭಾವಂತ ಅಭ್ಯರ್ಥಿಗಳನ್ನು ಆಕರ್ಷಿಸಲು, ಕಂಪನಿಗಳು ಉದ್ಯೋಗಿಗಳಿಗೆ ಭಾರಿ ವೇತನ ಹೆಚ್ಚಳವನ್ನು ನೀಡುತ್ತಿವೆ. ಇದಕ್ಕೂ ಮೊದಲು 2021ರಲ್ಲಿ, ಅಕ್ಸೆಂಚರ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಮತ್ತು ಇತರ ಉನ್ನತ ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಉದ್ಯೋಗಿಗಳ ವೇತನವನ್ನು ಹೆಚ್ಚಿಸುವುದರೊಂದಿಗೆ ಅವರನ್ನು ಉತ್ತೇಜಿಸಿದವು.

ಈ ವರ್ಷ, ಅಮೆಜಾನ್, ಗೂಗಲ್ ಮತ್ತು ಮೈಕ್ರೋಸಾಫ್ಟ್ ನಂತಹ ದೊಡ್ಡ ಕಂಪನಿಗಳು ಇದನ್ನು ಅನುಸರಿಸಿವೆ ಎಂದು ಹೇಳಲಾಗುತ್ತಿದೆ.

ವೇತನ ಮಿತಿಯನ್ನು 1,60,000 ಡಾಲರ್ ನಿಂದ 3,50,000 ಡಾಲರ್ ಗೆ ಹೆಚ್ಚಿಸಿದ ಅಮೆಜಾನ್
ಫೆಬ್ರವರಿ 2022ರಲ್ಲಿ, ಅಮೆಜಾನ್ ಗರಿಷ್ಠ ಮೂಲ ವೇತನವನ್ನು 1,60,000 ಡಾಲರ್ ನಿಂದ 3,50,000 ಡಾಲರ್ ಗೆ ದ್ವಿಗುಣಗೊಳಿಸುವುದಾಗಿ ಘೋಷಿಸಿತು. "ಕಾರ್ಪೊರೇಟ್ ಮತ್ತು ಟೆಕ್ ಉದ್ಯೋಗಿಗಳಿಗೆ ಅಮೆಜಾನ್ ತನ್ನ ಗರಿಷ್ಠ ಮೂಲ ವೇತನವನ್ನು 1,60,000 ಡಾಲರ್ ನಿಂದ 3,50,000 ಡಾಲರ್ ಗೆ ಹೆಚ್ಚಿಸಲಿದೆ.

ಇದನ್ನೂ ಓದಿ: Money Spend: ಹೆಂಡತಿಯರಿಗೆ ಗಂಡನ ಹಣ ಖರ್ಚು ಮಾಡೋದೇ ಇಷ್ಟ! ಇತ್ತೀಚಿನ ಸಮೀಕ್ಷೆಯ ಸತ್ಯವಿದು

ಇದು ಉನ್ನತ ಪ್ರತಿಭೆಗಳನ್ನು ನೇಮಕ ಮಾಡಲು ಮತ್ತು ಅಸ್ತಿತ್ವದಲ್ಲಿರುವ ಉದ್ಯೋಗಿಗಳನ್ನು ಹಾಗೆಯೇ ಕಂಪನಿಯಲ್ಲಿಯೇ ಉಳಿಸಿಕೊಳ್ಳುವ ಉದ್ದೇಶದ ಭಾಗವಾಗಿದೆ" ಎಂದು ಉದ್ಯೋಗಿಗಳಿಗೆ ನೀಡಿದ ಮೆಮೊದಲ್ಲಿ ತಿಳಿಸಲಾಗಿತ್ತು. ಅಮೆಜಾನ್ ಜಾಗತಿಕವಾಗಿ ಹೆಚ್ಚಿನ ಉದ್ಯೋಗಗಳಿಗೆ ಒಟ್ಟಾರೆ ಪರಿಹಾರ ಶ್ರೇಣಿಗಳನ್ನು ಹೆಚ್ಚಿಸಿದೆ ಎಂದು ಹೇಳಿದೆ.

ಗೂಗಲ್ ಬರೀ ಉನ್ನತ ಹುದ್ದೆಯಲ್ಲಿರುವ ಉದ್ಯೋಗಿಗಳ ವೇತನ ಹೆಚ್ಚಳ
ಗೂಗಲ್ ಬರೀ ಉನ್ನತ ಹುದ್ದೆಯಲ್ಲಿರುವ ಉದ್ಯೋಗಿಗಳ ವೇತನ ಹೆಚ್ಚಿಸಿತ್ತು ಜನವರಿಯಲ್ಲಿ, ಗೂಗಲ್ ತನ್ನ ಉನ್ನತ ಹುದ್ದೆಯಲ್ಲಿರುವ ಉದ್ಯೋಗಿಗಳ ವೇತನವನ್ನು ಹೆಚ್ಚಿಸಿದೆ ಎಂದು ವರದಿಯಾಗಿತ್ತು. ವರದಿಗಳ ಪ್ರಕಾರ, ಗೂಗಲ್ ತನ್ನ ಕನಿಷ್ಠ ನಾಲ್ವರು ಹಿರಿಯ ಕಾರ್ಯನಿರ್ವಾಹಕರ ಮೂಲ ವೇತನವನ್ನು ಹೆಚ್ಚಿಸಿದೆ, ಮೂಲ ವೇತನವನ್ನು 6,50,000 ಡಾಲರ್ ನಿಂದ 1 ಮಿಲಿಯನ್ ಡಾಲರ್ ಗೆ ಹೆಚ್ಚಿಸಿದೆ.

ವೇತನವನ್ನು ಹೆಚ್ಚಿಸಿದ ಉನ್ನತ ಕಾರ್ಯನಿರ್ವಾಹಕರಲ್ಲಿ ಮುಖ್ಯ ಹಣಕಾಸು ಅಧಿಕಾರಿ ರುತ್ ಪೋರಟ್, ಹಿರಿಯ ಉಪಾಧ್ಯಕ್ಷ ಪ್ರಭಾಕರ್ ರಾಘವನ್, ಹಿರಿಯ ಉಪಾಧ್ಯಕ್ಷ ಮತ್ತು ಮುಖ್ಯ ವ್ಯವಹಾರ ಅಧಿಕಾರಿ ಫಿಲಿಪ್ ಷಿಂಡ್ಲರ್ ಮತ್ತು ಜಾಗತಿಕ ವ್ಯವಹಾರಗಳ ಅಧ್ಯಕ್ಷ ಮತ್ತು ಮುಖ್ಯ ಕಾನೂನು ಅಧಿಕಾರಿ ಕೆಂಟ್ ವಾಕರ್ ಸೇರಿದ್ದಾರೆ ಎಂದು ಹೇಳಲಾಗುತ್ತಿದೆ.

ತನ್ನ ಜಾಗತಿಕ ಮೆರಿಟ್ ಬಜೆಟ್ ಅನ್ನು ದ್ವಿಗುಣಗೊಳಿಸಿದ ಮೈಕ್ರೋಸಾಫ್ಟ್
ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಅವರು ತಮ್ಮ ಉದ್ಯೋಗಿಗಳಿಗೆ ಇಮೇಲ್ ಮೂಲಕ ಮೈಕ್ರೋಸಾಫ್ಟ್ "ಜಾಗತಿಕ ಮೆರಿಟ್ ಬಜೆಟ್ ಅನ್ನು ದ್ವಿಗುಣಗೊಳಿಸಿದೆ" ಮತ್ತು ಇದು ಅವರ ವೃತ್ತಿಜೀವನದ ಮಧ್ಯದಲ್ಲಿರುವ ಜನರಿಗೆ ಹೆಚ್ಚಿನ ಹಣವನ್ನು ಹಂಚಿಕೆ ಮಾಡುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Inflation: ಜೂನ್ ನಿಂದ ಬದಲಾಗ್ತಿವೆ ಈ 5 ನಿಯಮಗಳು; ಇದು ನಿಮ್ಮ ಜೇಬಿನ ಮೇಲೆ ಪರಿಣಾಮ ಬೀರುತ್ತೆ

"ನಮ್ಮ ಗ್ರಾಹಕರು ಮತ್ತು ಪಾಲುದಾರರನ್ನು ಸಶಕ್ತಗೊಳಿಸಲು ನೀವು ಮಾಡುವ ಅದ್ಭುತ ಕೆಲಸದಿಂದಾಗಿ, ನಮ್ಮ ಪ್ರತಿಭೆಗೆ ಹೆಚ್ಚಿನ ಬೇಡಿಕೆ ಇದೆ ಎಂದು ನಾವು ಮತ್ತೆ ಮತ್ತೆ ಹೇಳಲು ಬಯಸುತ್ತಿದ್ದೇವೆ” ಎಂದು ಹೇಳಿದ್ದಾರೆ.

“ನಾಯಕತ್ವದ ತಂಡದಲ್ಲಿ, ನಿಮ್ಮ ಪ್ರಭಾವವನ್ನು ಗುರುತಿಸಲಾಗಿದೆ ಮತ್ತು ಪ್ರಶಂಸಿಸಲಾಗಿದೆ ಮತ್ತು ಅದಕ್ಕಾಗಿ ನಾನು ನಿಮಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ಅದಕ್ಕಾಗಿಯೇ ನಾವು ನಿಮ್ಮಲ್ಲಿ ಪ್ರತಿಯೊಬ್ಬರಲ್ಲೂ ದೀರ್ಘಕಾಲೀನ ಹೂಡಿಕೆಗಳನ್ನು ಮಾಡುತ್ತಿದ್ದೇವೆ" ಎಂದು ನಾಡೆಲ್ಲಾ ತನ್ನ ಉದ್ಯೋಗಿಗಳಿಗೆ ಕಳುಹಿಸಿದ ಇ-ಮೇಲ್ ನಲ್ಲಿ ಬರೆದಿದ್ದಾರಂತೆ ಎಂದು ಹೇಳಲಾಗಿದೆ.
Published by:Ashwini Prabhu
First published: