LPG Price: ಜೂನ್​ ತಿಂಗಳ ಮೊದಲ ದಿನವೇ ಗುಡ್​​ನ್ಯೂಸ್​! ಕಮರ್ಷಿಯಲ್​ ಸಿಲಿಂಡರ್​ ದರದಲ್ಲಿ ಭಾರಿ ಇಳಿಕೆ

19 ಕೆಜಿ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್‌ (LPG Cylinder) ಗಳ ಬೆಲೆ ಪ್ರತಿ ಸಿಲಿಂಡರ್‌ಗೆ 135 ರೂಪಾಯಿ ಇಳಿಕೆಯಾಗಿದೆ. ಈ ವಿಚಾರ ಹೋಟೆಲ್ (Hotel)​ ಮಾಲೀಕರು, ಹಾಸ್ಟೆಲ್​ ಮಾಲೀಕರು, ಸೇರಿ ಹಲವು ವ್ಯಾಪಾರೋದ್ಯಮಿಗಳಿಗೆ ಸಂತಸ ಮೂಡಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಜೂನ್ (June)​ ತಿಂಗಳ ಮೊದಲ ದಿನವೇ ಗುಡ್​ನ್ಯೂಸ್ (Good News)​ ಸಿಕ್ಕಿದೆ. ಅದೇನಪ್ಪಾ ಅಂದರೆ ಇಂದಿನಿಂದ ವಾಣಿಜ್ಯ ಬಳಕೆ ಸಿಲಿಂಡರ್ (Commercial Cylinders) ದರ ಇಳಿಕೆಯಾಗಿದೆ. 19 ಕೆಜಿ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್‌ (LPG Cylinder) ಗಳ ಬೆಲೆ ಪ್ರತಿ ಸಿಲಿಂಡರ್‌ಗೆ 135 ರೂಪಾಯಿ ಇಳಿಕೆಯಾಗಿದೆ. ಈ ವಿಚಾರ ಹೋಟೆಲ್ (Hotel)​ ಮಾಲೀಕರು, ಹಾಸ್ಟೆಲ್​ ಮಾಲೀಕರು, ಸೇರಿ ಹಲವು ವ್ಯಾಪಾರೋದ್ಯಮಿಗಳಿಗೆ ಸಂತಸ ಮೂಡಿಸಿದೆ. ದೆಹಲಿ (Delhi) ಯಲ್ಲಿ ಇನ್ನು ಮುಂದೆ ವಾಣಿಜ್ಯ ಬಳಕೆ ಸಿಲಿಂಡರ್ ಹೆಲೆ 2 ಸಾವಿರದ 219 ರೂಪಾಯಿ, ಕೋಲ್ಕತ್ತಾದಲ್ಲಿ 2 ಸಾವಿರದ 322 ರೂಪಾಯಿ, ಮುಂಬೈ (Mumbai) ನಲ್ಲಿ 2 ಸಾವಿರದ 171.50 ರೂಪಾಯಿ, ಚೆನ್ನೈ (Chennai) ನಲ್ಲಿ 2 ಸಾವಿರದ 373 ರೂಪಾಯಿಗಳಾಗಿದೆ. ಗೃಹ ಬಳಕೆ ಸಿಲಿಂಡರ್ (Non Commercial Cylinder) ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ, ಇಂದಿನಿಂದಲೇ ಹೊಸ ದರ ಜಾರಿಗೆ ಬರಲಿದೆ.

ನೂತನ ದರ ಇಂದಿನಿಂದ ಜಾರಿ

ತೈಲ ಮಾರ್ಕೆಟಿಂಗ್ ಕಂಪನಿಗಳು 1 ಜೂನ್ ರಂದು 19 ಕೆಜಿ ಕಮರ್ಷಿಯಲ್ ಸಿಲಿಂಡರ್‌ ಬೆಲೆಗಳನ್ನು ಕಡಿಮೆ ಮಾಡುವುದಾಗಿ ಘೋಷಿಸಿದೆ. ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ, ಇಂದಿನಿಂದಲೇ ಹೊಸ ದರ ಜಾರಿಗೆ ಬರಲಿದೆ. ಮೇ 19 ರಂದು ಭಾರತದಲ್ಲಿ ಗೃಹೋಪಯೋಗಿ ಮತ್ತು ಕಮರ್ಷಿಯಲ್ ಎಲ್‍ಪಿಜಿ ಸಿಲಿಂಡರ್‍ಗಳ ಬೆಲೆಯನ್ನು ಹೆಚ್ಚಿಸಲಾಗಿತು. ಇದರಿಂದ ಗ್ರಾಹಕರು, ಜನಸಾಮನ್ಯರು ಬೇಸರ ವ್ಯಕ್ತಪಡಿಸಿದ್ದರು. ಇನ್ನೂ ಗ್ಯಾಸ್​ ಬೆಲೆ ಅಷ್ಟೇ ಅಲ್ಲದೇ 2 ಬಾರಿ ಅಡುಗೆ ತೈಲದ ಬೆಲೆಯೂ ಹೆಚ್ಚಿಸಲಾಗಿತ್ತು.

ಜೂನ್​ ತಿಂಗಳ ಮೊದಲ ದಿನವೇ ಗುಡ್​ ನ್ಯೂಸ್​!

14 ಕೆಜಿ ಗೃಹಬಳಕೆಯ ಸಿಲಿಂಡರ್‍ನ ದರವನ್ನು 3.50 ರೂ. ಹೆಚ್ಚಿಸಲಾಗಿತ್ತು ಮತ್ತು 19 ಕೆಜಿಯ ವಾಣಿಜ್ಯ ಬಳಕೆಯ ಎಲ್‍ಪಿಜಿ ಸಿಲಿಂಡರ್ ಬೆಲೆಯನ್ನು 8 ರೂ. ಹೆಚ್ಚಿಸಲಾಗಿತ್ತು. ಎಲ್‌ಪಿಜಿ ಸಿಲಿಂಡರ್ ದರವನ್ನು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರತಿ ತಿಂಗಳೂ ಪರಿಷ್ಕರಿಸಲಾಗುತ್ತದೆ. ಈ ದರವು ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನವಾಗಿರುತ್ತದೆ.  ಇದೀಗ ಎಲ್ಲಾ ರಾಜ್ಯಗಳಲ್ಲೂ ಎಲ್​ಪಿಜಿ ಗ್ಯಾಸ್​ ಸಿಲಿಂಡರ್​ ದರ ಕಡಿಮೆಯಾಗಿದ್ದು, ವ್ಯಾಪರಸ್ಥರಿಗೆ ಸಂತಸ ಮೂಡಿಸಿದೆ.

ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಪೆಟ್ರೋಲ್ ಬೆಲೆ ಕೊಂಚ ಇಳಿಕೆ, ಇಂದಿನ ದರ ಹೀಗಿದೆ

ಬೆಲೆ ಏರಿಕೆ ವಿರುದ್ಧ ಕಿಡಿಕಾರಿದ್ದ ಕೇರಳ ಸಿಪಿಐ ಸರ್ಕಾರ

ಮೇ ತಿಂಗಳಲ್ಲಿ ಸರ್ಕಾರವು ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ರೂ 50 ರಷ್ಟು ಹೆಚ್ಚಿಸಿದಾಗ, ಕೇರಳದ ಆಡಳಿತಾರೂಢ ಸಿಪಿಐ(ಎಂ) ಎಲ್‌ಪಿಜಿ ಸಿಲಿಂಡರ್ ದರ ಹೆಚ್ಚಳದ ಬಗ್ಗೆ ಕೇಂದ್ರದ ಮೇಲೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಕೊನೆಗೊಳ್ಳುತ್ತದೆ ಎಂದು ಹೇಳಿತ್ತು..ದೇಶಾದ್ಯಂತ ಮನೆಯ ಅಡುಗೆ ಮನೆಗಳನ್ನು ಮುಚ್ಚಲಾಗುತ್ತಿದೆ ಎಂದು ಕಿಂಡಲ್​ ಮಾಡಿತ್ತು .ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿದ ಎಡಪಕ್ಷಗಳು ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸುವಂತೆ ಜನರನ್ನು ಒತ್ತಾಯಿಸಿದ್ದವು.

ಇದನ್ನೂ ಓದಿ: ಬಂಗಾರದ ಬೆಲೆ ನಿನ್ನೆ ಏರಿಕೆ, ಇಂದು ಇಳಿಕೆ; ಚಿನ್ನ ಖರೀದಿಗೂ ಮುನ್ನ ಇವತ್ತಿನ ದರ ತಿಳಿದುಕೊಳ್ಳಿ
ಇದೀಗ ಗ್ಯಾಸ್​ ಸಿಲಿಂಡರ್​ ಬೆಲೆ ಕಡಿಮೆಯಾಗಿರುವುದು ಹಲವರಿಗೆ ಸಂತಸ ಮೂಡಿಸಿದೆ. ಇನ್ನೂ ಬೆಲೆ ಏರಿಕೆ ಬಿಸಿಯಿಂದ ಕಂಗಾಲಾಗಿದ್ದ ವ್ಯಾಪಾರಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಕೂಡ ಸಿಲಿಂಡರ್​ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಇದೀಗ ಇಂದಿನಿಂದ ಕಮರ್ಷಿಯಲ್​ ಸಿಲಿಂಡರ್ ನೂತನ ಬೆಲೆ ಜಾರಿಯಾಗಲಿದೆ.
Published by:Vasudeva M
First published: