Agriculture: ಸರ್ಟಿಫೈಡ್ ಭತ್ತದ ಬೀಜ ಉತ್ಪಾದನೆಯಲ್ಲಿ ಕ್ರಾಂತಿ, ಒಡಿಸ್ಸಾದ ರೈತನ ಸಾಧನೆ!

ರೈತ

ರೈತ

ಖೇತ್ರಮೋಹನ್‌ಗೆ ಬೆಂಬಲ ನೀಡಿದ್ದು ಕಟಕ್‌ನಲ್ಲಿರುವ ಸೆಂಟ್ರಲ್ ರೈಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಎಂಬ ಸಂಸ್ಥೆಯಾಗಿದೆ.

  • Share this:

ಒಡಿಸ್ಸಾದ ಜಗತ್‌ಸಿಂಗ್‌ಪುರ ಜಿಲ್ಲೆಯ ರಘುನಾಥಪುರ ಬ್ಲಾಕ್‌ನ ರೈತರು ಗುಣಮಟ್ಟದ ಭತ್ತದ ಬೀಜಗಳು ಹಾಗೂ ಕೃಷಿ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ದೊರೆಯದೇ ಕಷ್ಟಪಡುವುದು ದಶಕಗಳಿಂದ ಅವರನ್ನು ಕಂಗೆಡಿಸಿತ್ತು. ಆದರೆ ಇಂದು ಆ ಪರಿಸ್ಥಿತಿ ಬದಲಾಗಿದೆ ಏಕೆಂದರೆ ಬ್ಲಾಕ್‌ನ ಪ್ರತಿಯೊಬ್ಬರ ರೈತರು ಗುಣಮಟ್ಟದ ಭತ್ತದ ಬೀಜಗಳನ್ನು ಉತ್ಪಾದಿಸುವುದು ಮಾತ್ರವಲ್ಲದೆ ತಮ್ಮ ಉತ್ಪನ್ನಗಳಿಗೆ ಅತ್ಯುತ್ತಮ ಮಾರುಕಟ್ಟೆಯನ್ನು (Market) ಕಂಡುಕೊಂಡಿದ್ದಾರೆ. ಈ ಪರಿವರ್ತನೆಗೆ ಕಾರಣರಾದವರು ಪ್ರಗತಿಪರ ರೈತ ಖೇತ್ರಮೋಹನ್ ಬೆಹೆರಾ. ಹೌದು ರಘುನಾಥಪುರ ಬ್ಲಾಕ್‌ನ ರೆಧುವಾ ಗ್ರಾಮದವರಾದ ಖೇತ್ರಮೋಹನ್ ರೈತರಿಗೆ ಆಧುನಿಕ ಕೃಷಿ ಪದ್ಧತಿಯನ್ನು ಪರಿಚಯಿಸಿದ್ದು ಮಾತ್ರವಲ್ಲದೆ ಉತ್ಪನ್ನಗಳನ್ನು ಮಾರಾಟ ಮಾಡಲು ಸುಲಭ ದಾರಿಯನ್ನು ಒದಗಿಸಿಕೊಟ್ಟರು ಹಾಗೂ ಉತ್ತಮ ಗುಣಮಟ್ಟದ ಬೀಜಗಳನ್ನು ದೊರಕಿಸಿಕೊಡುವಲ್ಲಿ ಕೂಡ ಸಹಕಾರ ನೀಡಿದರು. ಖೇತ್ರಮೋಹನ್‌ಗೆ ಬೆಂಬಲ ನೀಡಿದ್ದು ಕಟಕ್‌ನಲ್ಲಿರುವ ಸೆಂಟ್ರಲ್ ರೈಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (CRRI) ಎಂಬ ಸಂಸ್ಥೆಯಾಗಿದೆ.


ರೈತರಿಗೆ ಸಹಕಾರ ನೀಡುವ ಲಿವ್ ಅಂಡ್ ಲೆಟ್ ಲಿವ್ ಸಂಸ್ಥೆ


ಜಗತ್‌ಸಿಂಗ್‌ಪುರ ಎರಡು ನೀರಾವರಿ ಕಾಲುವೆಗಳಾದ ಮಚಗಾಂವ್ ಮತ್ತು ತಲದಂಡವನ್ನು ಹೊಂದಿದ್ದು, ಇಲ್ಲಿನ 80% ದಷ್ಟು ಕುಟುಂಬಗಳಿಗೆ ಕೃಷಿಯೇ ಜೀವನಾಧಾರವಾಗಿದೆ. ಎರಡು ಕಾಲುವೆಗಳು ಪ್ರದೇಶದ 19 ಗ್ರಾಮ ಪಂಚಾಯಿತಿಗಳಲ್ಲಿ 16 ಕ್ಕೆ ನೀರಾವರಿ ಒದಗಿಸುತ್ತವೆ ಹಾಗೂ ಇಲ್ಲಿನ ರೈತರು ಹೆಚ್ಚಾಗಿ ಭತ್ತ ಮತ್ತು ದ್ವಿದಳ ಧಾನ್ಯಗಳನ್ನು ಬೆಳೆಸುತ್ತಾರೆ ಎಂದು ಬೆಹೆರಾ ಮಾಹಿತಿ ನೀಡುತ್ತಾರೆ. ಬೆಹೆರಾ 1994 ರಲ್ಲಿ ‘ಲಿವ್ ಅಂಡ್ ಲೆಟ್ ಲಿವ್' ಎಂಬ ಸಂಸ್ಥೆಯನ್ನು ಕೂಡ ಹುಟ್ಟುಹಾಕಿದ್ದು ಇದು ಪ್ರಾಥಮಿಕವಾಗಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಎಲ್ಲಾ ರೀತಿಯ ನೆರವನ್ನು ಒದಗಿಸುತ್ತಿದೆ.


ಇದನ್ನೂ ಓದಿ: ಸ್ಯಾಲರಿ ಹಣವನ್ನು ಡಬಲ್​ ಮಾಡೋದು ಹೇಗೆ ಗೊತ್ತಾ? ಹೀಗೆ ಮಾಡಿ ಆಮೇಲೆ ನೀವೇ ಇನ್ನೊಬ್ಬರಿಗೆ ಹೇಳ್ತೀರಾ!

ಭತ್ತದ ಉತ್ಪಾದನೆಯು ಯಾವಾಗಲೂ ಅಧಿಕವಾಗಿದ್ದರೂ, ರಘುನಾಥಪುರ ಬ್ಲಾಕ್‌ನ ರೆಧುವಾ, ರಾಧಂಗ, ಪುರುಣಬಸಂತ, ತಾನಾರಾ ಮತ್ತು ಅಧೀಕುಲ ಗ್ರಾಮ ಪಂಚಾಯಿತಿಗಳ ರೈತರಿಗೆ ದಾಸ್ತಾನು ಮಾರಾಟ ಮಾಡುವುದು ಕಷ್ಟಕರವಾಗಿತ್ತು. ಏಕೆಂದರೆ ಇಲ್ಲಿನ ರೈತರಿಗೆ ಗುಣಮಟ್ಟದ ಬೀಜ ದೊರೆಯುವುದು ಕಷ್ಟಕರವಾಗಿತ್ತು ಹೀಗಾಗಿಯೇ ತಾವು LALL ಮೂಲಕ ರೈತ ಉತ್ಪಾದಕ ಸಂಸ್ಥೆಯನ್ನು (FPO) ರಚಿಸಲು ನಿರ್ಧರಿಸಿದರು ಎಂದು ಬೆಹೆರಾ ತಿಳಿಸಿದ್ದಾರೆ.


ರೈತರಿಗೆ ತರಬೇತಿ ನೀಡಿದ ವಿಜ್ಞಾನಿಗಳು


ಅವರು 2013 ರಲ್ಲಿ ರೆಧುವಾ ಗ್ರಾಮದಲ್ಲಿ ಗೋರೇಖಾನಾಥ್ ಫಾರ್ಮರ್ಸ್ ಪ್ರೊಡ್ಯೂಸರ್ಸ್ ಕಂಪನಿ ಲಿಮಿಟೆಡ್ ಅನ್ನು ನೋಂದಾಯಿಸಿದರು ಮತ್ತು ಭತ್ತದ ಬೀಜಗಳ ಉತ್ಪಾದನೆ ಮತ್ತು ಮಾರುಕಟ್ಟೆಗೆ ರೈತರನ್ನು ತೊಡಗಿಸಿಕೊಂಡರು. FPO ಸಂಸ್ಥೆಯು ಸಿಆರ್‌ಆರ್‌ಐ, ಒಯುಎಟಿ ಮತ್ತು ಕೃಷಿ ಇಲಾಖೆಯೊಂದಿಗೆ ಸಹಯೋಗ ಹೊಂದಿದ್ದು, ವಿಜ್ಞಾನಿಗಳು ರೈತರಿಗೆ ವೈಜ್ಞಾನಿಕ ವಿಧಾನಗಳ ಬೀಜ ಉತ್ಪಾದನೆ, ಪ್ಯಾಚ್ ಕೃಷಿ, ಹಸಿರು ಗೊಬ್ಬರ, ಸಾಲಿನ ಕಸಿ, ಗೊಬ್ಬರ ಬಳಕೆ, ಸಸ್ಯ ಸಂರಕ್ಷಣೆ ಮತ್ತು ಕೊಯ್ಲು ನಂತರದ ವಿಧಾನಗಳ ಕುರಿತು ಕ್ಷೇತ್ರ ತರಬೇತಿಯನ್ನು ನೀಡಿದರು ಎಂದು ಬೆಹೆರಾ ತಿಳಿಸಿದ್ದಾರೆ.


ಇದನ್ನೂ ಓದಿ: ಅವಳಿ ಮಕ್ಕಳಿಗೆ ಜನ್ಮ ನೀಡಿದ 6 ತಿಂಗಳಲ್ಲೇ ಮತ್ತೆ ಗರ್ಭಿಣಿ, 'ಮೊಮೊ ಟ್ವಿನ್ಸ್' ಹೆತ್ತ ತಾಯಿ!

ರೈತರ ಸಾಧನೆ ಬಣ್ಣಸಿದ ಖೇತ್ರಮೋಹನ್


ಇಂದು, FPO ಒಟ್ಟು 1,559 ಷೇರುದಾರರನ್ನು ಹೊಂದಿದೆ. ಅವರಲ್ಲಿ, 152 ರೈತರು ಬೀಜ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದ್ದಾರೆ, 700 ಆರೊಮ್ಯಾಟಿಕ್ ಅಕ್ಕಿ ಉತ್ಪಾದನೆಯಲ್ಲಿ ಮತ್ತು ಉಳಿದವರು ಮಧುಮೇಹ ರೋಗಿಗಳಿಗಾಗಿ ಉತ್ಪಾದಿಸುವ ಅಕ್ಕಿ (ಕಡಿಮೆ ಗ್ಲೈಸೆಮಿಕ್ ಸೂಚ್ಯಂಕದೊಂದಿಗೆ) ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ರೈತರು ಈಗ ಭತ್ತದ ಕಾಳುಗಳನ್ನು ಕ್ವಿಂಟಲ್‌ಗೆ 500 ಎಂಎಸ್‌ಪಿ ದರದಲ್ಲಿ ಮಾರಾಟ ಮಾಡುತ್ತಾರೆ ಎಂದು ಬೆಹೆರಾ ತಿಳಿಸುತ್ತಾರೆ.


 


ಪ್ರಶಸ್ತಿಗಳ ಗೌರವ


ಗೋರೇಖಾನಾಥ್ ಫಾರ್ಮರ್ಸ್ ಪ್ರೊಡ್ಯೂಸರ್ಸ್ ಕಂಪನಿ ಲಿಮಿಟೆಡ್ ಗೆ 2020 ರಲ್ಲಿ ಬೀಜ ಉತ್ಪಾದನೆಗೆ ಉತ್ತಮ ರೈತ ಉತ್ಪಾದಕ ಕಂಪನಿ ಪ್ರಶಸ್ತಿಯನ್ನು ನೀಡಲಾಯಿತು. ಎರಡು ವರ್ಷಗಳ ಹಿಂದೆ, ಎಫ್‌ಪಿಒ 3,500 ಕ್ವಿಂಟಾಲ್ ಭತ್ತದ ಬೀಜಗಳನ್ನು ಉತ್ಪಾದಿಸಿ ಮಾರಾಟ ಮಾಡಿತು ಮತ್ತು ಈ ಉದ್ದೇಶಕ್ಕಾಗಿ ರಾಜ್ಯದಾದ್ಯಂತ 22 ಬೀಜ ವಿತರಕರನ್ನು ನೇಮಿಸಿತು.

First published: