Investment: ಭೂಮಿನಾ ಬಂಗಾರನಾ..? ಯಾವುದನ್ನು ಖರೀದಿಸಿದರೆ ಮುಂದೆ ಹೆಚ್ಚು ಲಾಭ ಸಿಗುತ್ತೆ?

Gold v/s Real Estate: ರಿಯಲ್ ಎಸ್ಟೇಟ್ ದೀರ್ಘಕಾಲಿನ ಹೂಡಿಕೆಗೆ ಅತ್ಯುತ್ತಮ ಆಯ್ಕೆಯಾಗಿದ್ದು, ಇದರಲ್ಲಿ ಸಮಯ ಕಳೆದಂತೆ ಆಸ್ತಿಯ ಮೌಲ್ಯ ಹೆಚ್ಚುತ್ತಲೇ ಹೋಗುತ್ತದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಚಿನ್ನ (Gold) ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ವರ್ಗಾಯಿಸಬಹುದಾದ ಅಮೂಲ್ಯ ವಸ್ತು. ಹಾಗಾಗಿ ಚಿನ್ನದ ಮೇಲೆ ಹೂಡಿಕೆ (Investment) ಮಾಡುವುದು ಭಾರತೀಯರಿಗೆ (Indians) ಯಾವಾಗಲೂ ಅಚ್ಚುಮೆಚ್ಚು. ಚಿನ್ನದ ಮೇಲಿನ ಹೂಡಿಗೆ ನಿರ್ದಿಷ್ಟ ಪ್ರಮಾಣವಿರುವುದಿಲ್ಲ, ನೀವು 1,000 ರೂ. ಗಳನ್ನು ಬೇಕಾದರೂ ಹೂಡಬಹುದು ಅಥವಾ 1 ಕೋಟಿಯನ್ನಾದರೂ ಹೂಡಬಹುದು. ಚಿನ್ನದಲ್ಲಿ ಹೂಡಿಕೆಯ ಭವಿಷ್ಯದಲ್ಲಿನ ಲಾಭದ ಬಗ್ಗೆ ಯಾವುದೇ ಸಂಶಯವಿರುವುದಿಲ್ಲ. ಇದೇ ರೀತಿ ರಿಯಲ್ ಎಸ್ಟೇಟ್ (Real Estate) ಕೂಡ ಅತ್ಯಧಿಕ ಲಾಭ ತರುವಂತದ್ದು. ಆದರೆ, ಚಿನ್ನಕ್ಕೆ ಹೋಲಿಸಿದರೆ, ರಿಯಲ್ ಎಸ್ಟೇಟ್ (ಸೈಟ್​, ಮನೆ, ಪ್ಲಾಟ್​​, ಜಮೀನು) ಹೂಡಿಕೆಯಲ್ಲಿ ಹೆಚ್ಚು ಹಣಕಾಸಿನ ಅಗತ್ಯ ಇರುತ್ತದೆ ಮತ್ತು ಖರೀದಿದಾರರು ದೀರ್ಘ ಹಿಡುವಳಿ ಶಕ್ತಿಯನ್ನು ಹೊಂದಿರಬೇಕಾಗುತ್ತದೆ. ಅದೇನೇ ಇದ್ದರೂ, ರಿಯಲ್ ಎಸ್ಟೇಟ್ ದೀರ್ಘಕಾಲಿನ ಹೂಡಿಕೆಗೆ ಅತ್ಯುತ್ತಮ ಆಯ್ಕೆಯಾಗಿದ್ದು, ಅದರಲ್ಲಿ ಸಮಯ ಕಳೆದಂತೆ ಆಸ್ತಿಯ ಮೌಲ್ಯ ಹೆಚ್ಚುತ್ತಲೇ ಹೋಗುತ್ತದೆ. ಸೂಕ್ತ ರೀತಿಯಲ್ಲಿ ರಿಯಲ್ ಎಸ್ಟೇಟ್‍ನಲ್ಲಿ ಹೂಡಿಕೆ ಮಾಡಿದಿರಿ ಎಂದಾದಲ್ಲಿ ಅದು ನಿಮಗೆ ಹಲವಾರು ಲಾಭಗಳನ್ನು ನೀಡುತ್ತದೆ.

  ಇದನ್ನೂ ಓದಿ: Bankಗಳು ಬೇರೆಯವರ ಆಸ್ತಿಯನ್ನು ಹರಾಜು ಹಾಕಿದಾಗ ಖರೀದಿಸುವುದು ಜಾಣತನವೇ? ಸರಿಯಾದ ಮಾಹಿತಿ ಇಲ್ಲಿದೆ

  ಚಿನ್ನ ಮತ್ತು ಭೂಮಿ ಎರಡೂ ಕೂಡ, ಭಾರತೀಯ ಹೂಡಿಕೆದಾರರಲ್ಲಿ ಭಾವನಾತ್ಮಕ ಮೌಲ್ಯವನ್ನು ಹೊಂದಿರುತ್ತದೆ. ನಿಮ್ಮಲ್ಲಿ ಗಣನೀಯ ಮೊತ್ತ ಇದ್ದಲ್ಲಿ, ಈ ಎರಡರಲ್ಲಿ ನೀವು ಹೂಡಿಕೆಗೆ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀರಿ? ರಿಯಲ್ ಎಸ್ಟೇಟ್ ಮೇಲೆ ಹೂಡಿಕೆ ಮಾಡುವುದು ಹೆಚ್ಚು ಲಾಭದಾಯಕ ಎನ್ನಬಹುದು. ಯಾಕಂತೀರಾ..? ಈ ಕೆಳಗಿನ ಕಾರಣಗಳನ್ನು ಗಮನಿಸಿ.

  ಜಡ ಆದಾಯ
  ರಿಯಲ್ ಎಸ್ಟೇಟ್ ಹೆಚ್ಚುವರಿ ತೆರಿಗೆ ಲಾಭಗಳ ಜೊತೆಗೆ ನಿಯಮಿತ ಆದಾಯವನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದೆ. ವಸತಿ ಅಥವಾ ವಾಣಿಜ್ಯ ಯಾವುದೇ ಆಗಿರಲಿ, ರಿಯಲ್ ಎಸ್ಟೇಟ್ ಹೂಡಿಕೆದಾರರಿಗೆ ಮಾಸಿಕ ಬಾಡಿಗೆಗಳ ರೂಪದಲ್ಲಿ ಆದಾಯವನ್ನು ನೀಡುವ ಸಾಮರ್ಥ್ಯ ಹೊಂದಿದೆ. ಚಿನ್ನದ ಹೂಡಿಕೆಯಲ್ಲಿ ಇದು ಸಾಧ್ಯವಿಲ್ಲ.

  ಆದಾಯ ಪ್ರತಿಫಲ ದರ
  ಬಾಡಿಗೆ ದರಗಳು ಹೆಚ್ಚುತ್ತಲೇ ಇವೆ. ರಿಯಲ್ ಎಸ್ಟೇಟ್ ಇತಿಹಾಸವನ್ನು ಗಮನಿಸಿದರೆ, ಅದು ವಾರ್ಷಿಕ ಆದಾಯದ ಶೇಕಡಾ 15 ರಷ್ಟು ಪ್ರತಿಫಲವನ್ನು ನೀಡಬಲ್ಲದು ಎಂಬುದನ್ನು ತಿಳಿಯಬಹುದು. ಆಸ್ತಿಯ ಮೌಲ್ಯ ಮಾರುಕಟ್ಟೆ ಮತ್ತು ಆರ್ಥಿಕತೆಯ ಜೊತೆಗೆ ಸುಧಾರಣೆಗೊಳ್ಳುತ್ತಾ ಹೋಗುತ್ತದೆ. ಆದರೆ ಚಿನ್ನದಿಂದ ಬರುವ ಆದಾಯವು ಹಣದುಬ್ಬರಕ್ಕೆ ಅನುಗುಣವಾಗಿರುತ್ತದೆ.

  ಚಂಚಲತೆ ಮತ್ತು ಅಪಾಯ
  ರಿಯಲ್ ಎಸ್ಟೇಟ್ ಕಡಿಮೆ ಅಪಾಯಗಳಿರುವ , ಹೆಚ್ಚು ಸ್ಥಿರವಾದ ಹೂಡಿಕೆಯಾಗಿದೆ. ಭವಿಷ್ಯ ಭದ್ರವಾಗುವ ಕಾರಣ, ಅದರಿಂದ ಮಾನಸಿಕ ನೆಮ್ಮದಿ ಕೂಡ ಸಿಗುತ್ತದೆ. ಆದರೆ, ಚಿನ್ನವು ಒಂದು ಸರಕಾಗಿದ್ದು, ಷೇರುಗಳಲ್ಲಿ ಮಾರಾಟ ಮಾಡಲ್ಪಡುತ್ತದೆ. ಅದರ ಮೌಲ್ಯದಲ್ಲಿ ತ್ವರಿತ ಬದಲಾವಣೆಯ ಭಯ ಮತ್ತು ಕಳ್ಳತನಕ್ಕೆ ಒಳಗಾಗುವ ಅಪಾಯ ಕೂಡ ಇರುತ್ತದೆ.

  ವೆಚ್ಚಗಳು ಮೌಲ್ಯವನ್ನು ಏರಿಸುತ್ತವೆ
  ಚಿನ್ನವನ್ನು ಬೇಕಾದಂತೆ ಬದಲಾಯಿಸಬಹುದು. ಆದರೆ ಆಸ್ತಿಗೆ , ನಿರ್ವಹಣೆ ಮತ್ತು ನವೀಕರಣ ವೆಚ್ಚವನ್ನು ಭರಿಸಬೇಕಾಗುತ್ತದೆ ಎಂದು ಇತರರು ವಾದಿಸಬಹುದು. ಅದೇನೇ ಇದ್ದರೂ, ಆ ವೆಚ್ಚ ನಿಮ್ಮ ಆಸ್ತಿಗೆ ಪ್ರಶಂಸನೀಯ, ಜೊತೆಗೆ ತೆರಿಗೆ ಪ್ರಯೋಜನಗಳನ್ನು ಕೂಡ ನೀವು ಅದರಿಂದ ಪಡೆಯಬಹುದು.

  ಇದನ್ನೂ ಓದಿ: ಯಾವಾಗಲು ಕೈಯಲ್ಲಿ ದುಡ್ಡಿರಬೇಕು.. ಖರ್ಚು ಮಾಡಲು freedom ಇರಬೇಕು ಎಂದರೆ ಇದನ್ನು ಮಾಡಿ

  ದೀರ್ಘ ಅವಧಿಯ ಮೌಲ್ಯ ಸೃಷ್ಟಿ
  ಜನ ಸಂಖ್ಯೆ ಹೆಚ್ಚಾದಂತೆ ಭೂಮಿಗೆ ಬೇಡಿಕೆಯೂ ಹೆಚ್ಚಾಗುತ್ತದೆ. ಚಿನ್ನವನ್ನು ಕೂಡ ಡಿಜಿಟಲ್ ರೂಪದಲ್ಲಿ ಖರೀದಿಸಿ, ಕಳ್ಳತನದ ಭಯದಿಂದ ಮುಕ್ತಿ ಪಡೆಯಬಹುದು. ಆದರೂ ಕೂಡ, ಡಿಜಿಟಲ್ ಚಿನ್ನ ಅಮೂರ್ತ ಸ್ವತ್ತು ಎಂದೆನಿಸಿಕೊಳ್ಳುತ್ತದೆ.

  ಆರ್ಥಿಕತೆಗೆ ಸಹಕಾರಿ
  ರಿಯಲ್ ಎಸ್ಟೇಟ್‍ಗೆ ದೊಡ್ಡ ಮೊತ್ತದ ಹಣ ಬೇಕಾಗುತ್ತದೆ ನಿಜ, ಆದರೆ ಬಹಳಷ್ಟು ಕ್ಷೇತ್ರಗಳ ಭವಿಷ್ಯ ಅದನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ, ಸಾಲ ಸೇವೆ, ಸಿಮೆಂಟ್, ವಸತಿ ಹಣಕಾಸು, ಕಟ್ಟಡ ಸಾಮಾಗ್ರಿಗಳು ಇತ್ಯಾದಿ. ಅದು ದೊಡ್ಡ ಪ್ರಮಾಣದಲ್ಲಿ ಅನೌಪಚಾರಿಕ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ಕೂಡ ಸೃಷ್ಟಿಸುವ ಮೂಲಕ ಆರ್ಥಿಕತೆಗೆ ತನ್ನ ಕೊಡುಗೆ ನೀಡುತ್ತದೆ.

  ತೆರಿಗೆ ಲಾಭಗಳು
  ರಿಯಲ್ ಎಸ್ಟೇಟ್ ಹೂಡಿಕೆಯಲ್ಲಿ ಹಲವಾರು ತೆರಿಗೆ ಸಂಬಂಧಿ ಲಾಭಗಳಿವೆ. ರಿಯಲ್ ಎಸ್ಟೇಟ್ ಹೂಡಿಕೆ ಸುರಕ್ಷಿತ ಮಾತ್ರವಲ್ಲ, ನೀವು ಅದನ್ನು ಬಾಡಿಗೆ ಆಸ್ತಿಯನ್ನಾಗಿ ಬಳಸಿದಾಗ, ನಿಯಮಿತ ಆದಾಯವನ್ನು ಕೂಡ ಪಡೆಯಬಹುದು.
  Published by:Kavya V
  First published: